ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ತೆಗೆಸದಂತೆ ಸಚಿವ ಸೋಮಣ್ಣ ಸೂಚನೆ

ಮಂಗಳೂರು: ರೈಲ್ವೆ ನೇಮಕಾತಿ ಮಂಡಳಿಯ (Railway Recruitment Board) ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ (RRB Exam) ಹಾಜರಾಗುವ ಅಭ್ಯರ್ಥಿಗಳ ಜನಿವಾರ ಮತ್ತು ಮಂಗಳಸೂತ್ರ ತೆಗೆಸಬಾರದು ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರೈಲ್ವೆ ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು (Mangalsutra) ತೆಗೆದು ಬರಬೇಕು ಎಂದು ಪ್ರವೇಶ ಪತ್ರದಲ್ಲಿ … Continued

ವೀಡಿಯೊ | ಟಿಕೆಟಿಗೆ “ಹಣವಿಲ್ಲ” ; ರೈಲಿನ ಕೆಳಗೆ ಚಕ್ರಗಳ ನಡುವೆ ಅಡಗಿಕೊಂಡು 250 ಕಿಮೀ ಪ್ರಯಾಣಿಸಿದ ವ್ಯಕ್ತಿ…!

ಭೋಪಾಲ: ಮಧ್ಯಪ್ರದೇಶದ ಜಬಲಪುರ ನಿಲ್ದಾಣದಲ್ಲಿ ರೈಲಿನ ರೋಲಿಂಗ್ ಸ್ಟಾಕ್ ಮತ್ತು ಅಂಡರ್‌ ಕ್ಯಾರೇಜ್‌ನ ದಿನನಿತ್ಯದ ತಪಾಸಣೆ ನಡೆಸುತ್ತಿದ್ದ ರೈಲ್ವೆ ಸಿಬ್ಬಂದಿ ಶುಕ್ರವಾರ ಬೋಗಿಯೊಂದರ ಕೆಳಗೆ ಚಕ್ರಗಳ ಮೇಲಿನ ಸಣ್ಣ ಜಾಗದಲ್ಲಿ ವ್ಯಕ್ತಿಯೊಬ್ಬ ಅಡಗಿಕೊಂಡಿರುವುದನ್ನು ಗಮನಿಸಿ ಆಘಾತಕ್ಕೊಳಗಾದರು. ಆ ವ್ಯಕ್ತಿ ಇಟಾರ್ಸಿಯಿಂದ ತಾನು ಇದೇ ಸ್ಥಿತಿಯಲ್ಲಿ 250 ಕಿಮೀ ಪ್ರಯಾಣಿಸಿದ್ದಾಗಿ ಆತ ಹೇಳಿದಾಗ ಅವರಿಗೆ ಅಚ್ಚರಿ ಹಾಗೂ … Continued

ವೀಡಿಯೊ..| ಹೃದಯಾಘಾತದಿಂದ ರೈಲಿನಲ್ಲಿ ಪ್ರಜ್ಞೆ ಕಳೆದುಕೊಂಡ ವಯಸ್ಸಾದ ವ್ಯಕ್ತಿ ; ಸಿಪಿಆರ್‌ ಮಾಡಿ ಜೀವ ಉಳಿಸಿದ ಟಿಕೆಟ್ ಪರೀಕ್ಷಕ…!

ರೈಲು ಪ್ರಯಾಣದ ವೇಳೆ ಪ್ರಯಾಣಿಕ ಹೃದಯಾಘಾತಕ್ಕೆ ಒಳಗಾದ ನಂತರ ಟಿಕೆಟ್ ಪರೀಕ್ಷಕರೊಬ್ಬರು ಸುಮಾರು 15 ನಿಮಿಷಗಳ ಕಾಲ ವಯಸ್ಸಾದ ವ್ಯಕ್ತಿಗೆ ಸಿಪಿಆರ್ ಮಾಡಿ ಆತನ ಜೀವ ಉಳಿಸಿದ್ದಾರೆ. ಬಿ.ಪಿ. ಕರ್ಣ ಮತ್ತು ಅವರ ಸಹೋದರ ಬಿಹಾರದ ದರ್ಬಂಗಾದಿಂದ ಉತ್ತರ ಪ್ರದೇಶದ ವಾರಣಾಸಿಗೆ ಪವನ್ ಎಕ್ಸ್‌ಪ್ರೆಸ್‌ನ ಪ್ರಥಮ ದರ್ಜೆ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ಣ ಅವರಿಗೆ ಎದೆನೋವು ಕಾಣಿಸಿಕೊಂಡು … Continued

ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ; ನಾಲ್ವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಗುರುವಾರ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ನ ಹಲವು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಹಾಗೂ ೨೦ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ದಿಬ್ರುಗಢಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಕೆಲವು ಬೋಗಿಗಳು ಮೋತಿಗಂಜ್ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ಹಳಿತಪ್ಪಿದವು. ಹಿರಿಯ ರೈಲ್ವೇ ಮತ್ತು ಸ್ಥಳೀಯ … Continued

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನೂತನ ರೈಲು ಮಾರ್ಗದ ಅಂತಿಮ ಸ್ಥಳ ಸರ್ವೆ (FLS) ನಡೆಸಲು ಮಂಜೂರಿ ನೀಡಿದ ರೈಲ್ವೆ ಸಚಿವಾಲಯ

ಶಿರಸಿ: 3.95 ಕೋಟಿ ರೂ ವೆಚ್ಚದಲ್ಲಿ 158 ಕಿ.ಮೀ ಉದ್ದದ ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆ (Final Location Survey (FLS)) ನಡೆಸಲು ರೈಲ್ವೆ ಸಚಿವಾಲಯ ಮಂಜೂರಾತಿ ನೀಡಿದೆ. ಈ ಕುರಿತು ನವದೆಹಲಿಯ ಗತಿಶಕ್ತಿ ಭವನದಲ್ಲಿರುವ ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕರಾದ ಅಭಿಷೇಕ ಎಂಬವರು ಹುಬ್ಬಳ್ಳಿಯ ನೈಋತ್ವ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ … Continued

ಚಾಲಕ “ಫೋನ್‌ನಲ್ಲಿ ಕ್ರಿಕೆಟ್ ನೋಡುತ್ತಿದ್ದ…: 14 ಜನರ ಸಾವಿಗೆ ಕಾರಣವಾದ 2023ರ ಆಂಧ್ರ ರೈಲು ಅಪಘಾತದ ಬಗ್ಗೆ ಸಚಿವ ಅಶ್ವಿನಿ ವೈಷ್ಣವ

ನವದೆಹಲಿ: ಅಕ್ಟೋಬರ್ 29, 2023 ರಂದು ಅಪಘಾತದಿಂದಾಗಿ 14 ಪ್ರಯಾಣಿಕರ ಸಾವಿಗೆ ಕಾರಣವಾದ ಎರಡು ಪ್ಯಾಸೆಂಜರ್ ರೈಲುಗಳು ಡಿಕ್ಕಿಯಾದ ಘಟನೆಯಲ್ಲಿ ಒಂದು ರೈಲಿನ ಚಾಲಕ ಮತ್ತು ಸಹಾಯಕ ಚಾಲಕ ಆ ವೇಳೆ ಫೋನ್‌ನಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಕಂಟಕಪಲ್ಲಿಯಲ್ಲಿ ಹೌರಾ-ಚೆನ್ನೈ ಮಾರ್ಗದಲ್ಲಿ … Continued

ವೀಡಿಯೊ ..: ದೂಧ್‌ ಸಾಗರ ಜಲಪಾತ ನೋಡಲು ತೆರಳಿದವರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ | ವೀಕ್ಷಿಸಿ

ಬೆಳಗಾವಿ : ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿ ಭಾಗದಲ್ಲಿ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಇರುವ ಮನಮೋಹಕ ದೂಧ್‌ ಸಾಗರ ಜಲಪಾತ ನೋಡಲು ಭಾನುವಾರ ತೆರಳಿದ ಪ್ರವಾಸಿಗರಿಗೆ ಗೋವಾ ಪೊಲೀಸರು ಶಾಕ್‌ ನೀಡಿದ್ದಾರೆ. ಪ್ರವಾಸಿಗರಿಗೆ ಬಸ್ಕಿ ಹೊಡೆಸಿ ಶಿಕ್ಷೆ ನೀಡಿ ಕಳುಹಿಸಿದ್ದಾರೆ. ಈ ಕುರಿತ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ … Continued

ಏಪ್ರಿಲ್‌ ೧೬ರಿಂದ ರಾತ್ರಿ ವೇಳೆ ರೈಲುಗಳಲ್ಲಿ ಮೊಬೈಲ್‌, ಲ್ಯಾಪ್‌ಟಾಪ್‌ ಚಾರ್ಜಿಂಗ್‌ ನಿಷೇಧ

ನವದೆಹಲಿ: ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್​ಟಾಪ್​ಗಳನ್ನು ಚಾರ್ಜ್​ ಮಾಡುವುದನ್ನು ನಿಷೇಧಿಸಿ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ. ರೈಲುಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ತಪ್ಪಿಸಲು ರಾತ್ರಿಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಬಳಕೆಯನ್ನು ಭಾರತೀಯ ರೈಲ್ವೆ ನಿರ್ಬಂಧಿಸಿದೆ. ಇದರಿಂದ ರೈಲ್ವೆ ಪ್ರಯಾಣಿಕರಿಗೆ ಈಗ ರಾತ್ರಿ ಸಮಯದಲ್ಲಿ ರೈಲು ಬೋಗಿಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಮೊಬೈಲ್ ಫೋನ್ … Continued

ರೈಲ್ವೆ ಖಾಸಗೀಕರಣವಿಲ್ಲ: ಪಿಯುಷ್‌ ಗೋಯಲ್‌ ಪುನರುಚ್ಚಾರ

ನವ ದೆಹಲಿ: ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಷ್‌ ಗೋಯಲ್‌ ಪುನರುಚ್ಚರಿಸಿದ್ದಾರೆ. ಅವರು ಸಂಸತ್ತಿನಲ್ಲಿ ಮಾತನಾಡಿ, ಭಾರತೀಯ ರೈಲ್ವೆ ಪ್ರತಿಯೊಬ್ಬ ಭಾರತೀಯನ ಸ್ವತ್ತು. ಯಾವುದೇ ಕಾರಣಕ್ಕೂ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ. ಅದು ಸರಕಾರಿ ಒಡೆತನದಲ್ಲಿಯೇ ಇರಲಿದೆ ಎಂದರು. ೨೦೨೧-೨೨ನೇ ಆಯವ್ಯಯದಲ್ಲಿ ರೈಲ್ವೆಗೆ ೨.೧೫ ಲಕ್ಷ ಕೋಟಿ ರೂ. ಅನುದಾನ ತೆಗೆದಿಡಲಾಗಿದೆ. ಪ್ರಯಾಣಿಕರ … Continued

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ರೈಲಿನಲ್ಲಿಯೇ ಸಿನಿಮಾ, ನ್ಯೂಸ್

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ ಅನುಸಾರ ಚಲನಚಿತ್ರ, ಸುದ್ದಿ, ವಿಡಿಯೋಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸಲು ಚಿಂತನೆ ನಡೆದಿದೆ. ಸಂಗೀತ, ಸಿನಿಮಾ, ಸಾಮಾನ್ಯ ಮನರಂಜನೆ, ಸುದ್ದಿ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋಗಳನ್ನು ರೈಲುಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಮೀಡಿಯಾ ಸರ್ವರ್ ಗಳನ್ನು ಬೋಗಿಗಳ ಒಳಗೆ ಇರಿಸಲಾಗುವುದು ಎಂದು … Continued