‘ನಮ್ಮ ಸ್ನೇಹಿತನನ್ನು ನೋಡಲು ಸಂತೋಷವಾಗುತ್ತದೆ’ : ಪ್ರಧಾನಿ ಮೋದಿಯನ್ನು ರಷ್ಯಾಕ್ಕೆ ಆಹ್ವಾನಿಸಿದ ಅಧ್ಯಕ್ಷ ಪುತಿನ್

ಮಾಸ್ಕೊ : ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ಕ್ರೆಮ್ಲಿನ್‌ನಲ್ಲಿ ರಷ್ಯಾದ ನಾಯಕರನ್ನು ಭೇಟಿ ಮಾಡಿದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಮುಂದಿನ ವರ್ಷ ರಷ್ಯಾಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಆಹ್ವಾನಿಸಿದ್ದಾರೆ. “ನಮ್ಮ ಸ್ನೇಹಿತ ಪ್ರಧಾನಿ ಮೋದಿ ಅವರನ್ನು ರಷ್ಯಾದಲ್ಲಿ ನೋಡಲು ನಾವು ಸಂತೋಷಪಡುತ್ತೇವೆ” ಎಂದು ಪುತಿನ್ … Continued

ವೀಡಿಯೊ..| “ಮೋದಿಗೆ ಯಾರಾದ್ರೂ ಬೆದರಿಕೆ ಹಾಕಬಹುದೆಂದು ಊಹಿಸಲು ಸಾಧ್ಯವಿಲ್ಲ…”: ಪ್ರಧಾನಿ ಮೋದಿ ಕಠಿಣ ನಿರ್ಧಾರಗಳು ನನಗೆ ʼಅಚ್ಚರಿʼ ತಂದಿದೆ ಎಂದ ರಷ್ಯಾದ ಪುತಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಳ್ಳುತ್ತಿರುವ “ಕಠಿಣ” ನಿರ್ಧಾರವನ್ನು ಶ್ಲಾಘಿಸುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರ ಕುತೂಹಲ ಕೆರಳಿಸಿದೆ. ಅವರ ಭಾಷಣಕ್ಕೆ ಹಿಂದಿಯಲ್ಲಿ ಧ್ವನಿ ನೀಡಲಾಗಿದ್ದು, ರಷ್ಯಾದ ನಾಯಕ ಭಾರತ ಹಾಗೂ ರಷ್ಯಾ ನಡುವೆ ನಿರಂತರವಾಗಿ ಬೆಳೆಯುತ್ತಿರುವ ಸಂಬಂಧಗಳ ಬಗ್ಗೆ ಸುದೀರ್ಘವಾಗಿ ಮಾತನಾಡುವುದನ್ನು ವೀಡಿಯೊ ತೋರಿಸುತ್ತದೆ. “ರಷ್ಯಾ ಮತ್ತು … Continued

ಮೆಟಾದ ವಕ್ತಾರರನ್ನು ವಾಂಟೆಡ್ ಪಟ್ಟಿಗೆ ಸೇರಿಸಿದ ರಷ್ಯಾ : ಅಪರಾಧ ತನಿಖೆ ಆರಂಭ

ರಷ್ಯಾವು ಮೆಟಾ ಪ್ಲಾಟ್‌ಫಾರ್ಮ್‌ಗಳ ವಕ್ತಾರ ಆಂಡಿ ಸ್ಟೋನ್‌ ಅವರನ್ನು ಅನಿರ್ದಿಷ್ಟ ಆರೋಪಗಳ ಮೇಲೆ ವಾಂಟೆಡ್ ಪಟ್ಟಿಗೆ ಸೇರಿಸಿದೆ ಎಂದು ಸರ್ಕಾರಿ ಮಾಧ್ಯಮವನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ. ರಷ್ಯಾದ ಆಂತರಿಕ ಸಚಿವಾಲಯವು ಆಂಡಿ ಸ್ಟೋನ್ ವಿರುದ್ಧ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದೆ. ಆದರೆ ತನಿಖೆಯ ವಿವರಗಳನ್ನು ಅಥವಾ ಅವರ ವಿರುದ್ಧದ ಆರೋಪಗಳನ್ನು ಬಹಿರಂಗಪಡಿಸಲಿಲ್ಲ. … Continued

‘ಅವರು ಬಹಳ ಬುದ್ಧಿವಂತ ವ್ಯಕ್ತಿ’: ಪ್ರಧಾನಿ ಮೋದಿ ನಾಯಕತ್ವ ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ ಹಾಗೂ ಪ್ರಧಾನಿ ಮೋದಿ ಅವರನ್ನು “ಅತ್ಯಂತ ಬುದ್ಧಿವಂತ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ರಷ್ಯಾದ ಸುದ್ದಿ ಪ್ಲಾಟ್‌ಫಾರ್ಮ್, ಆರ್‌ಟಿ ನ್ಯೂಸ್ ಹಂಚಿಕೊಂಡ ವೀಡಿಯೊದಲ್ಲಿ, ಪ್ರಧಾನಿ ಮೋದಿಯವರ “ಮಾರ್ಗದರ್ಶನ” ಅಡಿಯಲ್ಲಿ ಭಾರತವು ಮಾಡಿದ ಮಹತ್ವದ ಪ್ರಗತಿಯ ಬಗ್ಗೆ ಪುತಿನ್ ಮಾತನಾಡಿದ್ದಾರೆ. ಸೋಚಿಯಲ್ಲಿ … Continued

ಪ್ರಧಾನಿ ಮೋದಿಗೆ  80%ರಷ್ಟು ಭಾರತೀಯರ ಜೈಕಾರ, ಭಾರತವು ಈಗ ಜಾಗತಿಕವಾಗಿ ಪ್ರಬಲ ಎಂದು ನಂಬಿಕೆ : ಪ್ಯೂ ಸಮೀಕ್ಷೆ

ನವದೆಹಲಿ : ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ, ಸುಮಾರು 80%ರಷ್ಟು ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರ ಪರ ಅಭಿಪ್ರಾಯವನ್ನು ಹೊಂದಿದ್ದಾರೆ ಎಂಬುದು ಕಂಡುಬಂದಿದೆ, ಅವರಲ್ಲಿ ಹೆಚ್ಚಿನವರು ಅಂತಾರಾಷ್ಟ್ರೀಯವಾಗಿ ಪ್ರಭಾವ ಬೀರುವಲ್ಲಿ ಇತ್ತೀಚಿಗೆ ಭಾರತದ ಸ್ಪಷ್ಟವಾದ ವರ್ಧನೆಯನ್ನು ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ಫೆಬ್ರವರಿಯಿಂದ ಮೇ ತಿಂಗಳ ವರೆಗೆ ವ್ಯಾಪಿಸಿರುವ ಈ ಅಧ್ಯಯನವು ಭಾರತದಾದ್ಯಂತ ಮತ್ತು 23 … Continued

ದಕ್ಷಿಣ ರಷ್ಯಾದ ಪೆಟ್ರೋಲ್ ಬಂಕ್‌ನಲ್ಲಿ ಭಾರೀ ಸ್ಫೋಟ: ಕನಿಷ್ಠ 35 ಮಂದಿ ಸಾವು, 80 ಮಂದಿಗೆ ಗಾಯ

ದಾಗೆಸ್ತಾನ್‌ (ರಷ್ಯಾ) :  ಮಂಗಳವಾರ ರಷ್ಯಾದ ಕಾಕಸಸ್ ಗಣರಾಜ್ಯವಾದ ದಾಗೆಸ್ತಾನ್‌ನಲ್ಲಿರುವ ಪೆಟ್ರೋಲ್‌ ಬಂಕ್‌ ನಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 35 ಜನರು ಸಾವಿಗೀಡಾಗಿದ್ದಾರೆ ಹಾಗೂ 80 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತುರ್ತು ಸಚಿವಾಲಯವು ವಿತರಿಸಿದ ಚಿತ್ರಗಳು ಭಾರೀ ಪ್ರಮಾಣದ ಬೆಂಕಿಯಿಂದ ಸುಟ್ಟುಹೋದ ಕಾರುಗಳು ಮತ್ತು ರಕ್ಷಣಾ ಕಾರ್ಯಕರ್ತರು ಬೆಂಕಿಯನ್ನು ನಂದಿಸಲು ಮತ್ತು ಅವಶೇಷಗಳನ್ನು … Continued

ಮಂಜುಗಡ್ಡೆಯಲ್ಲಿ ಹೂಳಿದ್ದ 48,500 ವರ್ಷಗಳಷ್ಟು ಪುರಾತನ ‘ಜೊಂಬಿ ವೈರಸ್ʼ ಪುನರುಜ್ಜೀವನಗೊಳಿಸಿದ ವಿಜ್ಞಾನಿಗಳು…!

ಹೆಚ್ಚಿದ ಜಾಗತಿಕ ತಾಪಮಾನವು ಉತ್ತರ ಗೋಳಾರ್ಧದ ಕಾಲುಭಾಗವನ್ನು ಆವರಿಸಿರುವ ಪ್ರಾಚೀನ ಪರ್ಮಾಫ್ರಾಸ್ಟ್ (ಶಾಶ್ವತವಾಗಿ ಹೆಪ್ಪುಗಟ್ಟಿದ ನೆಲ) ಕರಗುವಿಕೆಗೆ ಕಾರಣವಾಗಿದೆ. ಹೀಗಾಗಿ ಇಲ್ಲಿಯವರೆಗೆ ಮಂಜುಗಡ್ಡೆಯ ಕೆಳಗೆ ಲಾಕ್ ಆಗಿದ್ದ 48,000 ವರ್ಷಗಳಷ್ಟು ಹಳೆಯದಾದ ಜೊಂಬಿ ವೈರಸ್ ಅನ್ನು ವಿಜ್ಞಾನಿಗಳು ಪುನರುಜ್ಜೀವನಗೊಳಿಸಿದ್ದಾರೆ. ಇದು ಐವತ್ತು ಸಾವಿರ ವರ್ಷಗಳಿಂದ ರಷ್ಯಾದ ಹೆಪ್ಪುಗಟ್ಟಿದ ಸರೋವರದ ಅಡಿಯಲ್ಲಿ ಸಿಕ್ಕಿಬಿದ್ದಿದ್ದ ‘ಜೊಂಬಿ ವೈರಸ್’ ಪುನರುತ್ಥಾನಗೊಂಡ … Continued

ಅಫ್ಘಾನಿಸ್ತಾನದ ನಿರ್ಬಂಧಿತ ಸ್ವತ್ತುಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕವನ್ನು ಕೇಳಿದ ಭಾರತ, ಇತರ 13 ದೇಶಗಳು

ನವದೆಹಲಿ: ಕಳೆದ ವರ್ಷ ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಕುಸಿದಿರುವ ತನ್ನ ಆರ್ಥಿಕತೆಗೆ ಸಹಾಯ ಮಾಡುವ ಸಲುವಾಗಿ ಫ್ರೀಜ್‌ ಮಾಡಿದ ಅಫ್ಘಾನಿಸ್ತಾನದ ಆಸ್ತಿಯನ್ನು ಬಿಡುಗಡೆ ಮಾಡುವಂತೆ ಭಾರತ ಮತ್ತು ಇತರ 13 ದೇಶಗಳು ಅಮೆರಿಕವನ್ನು ಕೇಳಿಕೊಂಡಿವೆ. ಬುಧವಾರ ರಷ್ಯಾ ನೇತೃತ್ವದ ‘ಮಾಸ್ಕೋ ಫಾರ್ಮೆಟ್‌’ ಮಾತುಕತೆಯ ನಾಲ್ಕನೇ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ.ಆದಾಗ್ಯೂ, ಅಮೆರಿಕ ಮಾತುಕತೆಯಲ್ಲಿ … Continued

ಭೀಕರ ಯುದ್ಧದ ಮಧ್ಯೆಯೇ ರಷ್ಯಾ-ಉಕ್ರೇನ್ ನಡುವೆ ನಾಳೆ ಎರಡನೇ ಸುತ್ತಿನ ಮಾತುಕತೆ

ಕೀವ್: ಉಕ್ರೇನ್​ ಮೇಲೆ ರಷ್ಯನ್ನರ ದಾಳಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಷ್ಯಾ ಮತ್ತು ಉಕ್ರೇನ್ ನಡುವೆ ಎರಡನೇ ಸುತ್ತಿನ ಮಾತುಕತೆ ಮಾರ್ಚ್ 2ರಂದು ನಡೆಯಲಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ. ಉಭಯ ರಾಷ್ಟ್ರಗಳ ನಡುವೆ ಸೋಮವಾರ ನಡೆದ ಮೊದಲ ಸುತ್ತಿನ ಮಾತುಕತೆಗಳು ಯಾವುದೇ ಸ್ಪಷ್ಟವಾದ ಫಲಿತಾಂಶಗಳನ್ನು ನೀಡದ ಕಾರಣ ರಷ್ಯಾ ಮತ್ತು ಉಕ್ರೇನ್ ಮತ್ತೊಮ್ಮೆ ಭೇಟಿಯಾಗಿ … Continued

ಅಫ್ಘಾನ್ ನೆಲ ಭಯೋತ್ಪಾದನೆಯ ತಾಣವಾಗದಂತೆ ತಡೆಯಲು ಭಾರತದ ನೇತೃತ್ವದ ನಿರ್ಧಾರ

ನವದೆಹಲಿ: ಅಫ್ಘಾನಿಸ್ತಾನ ನೆಲವು ಜಾಗತಿಕ ಭಯೋತ್ಪಾದನೆಗೆ ಪ್ರಶಸ್ತ ಸ್ಥಳವಾಗಲು ಅವಕಾಶ ನೀಡದಂತೆ ಕೆಲಸ ಮಾಡುವುದಕ್ಕೆ ಭಾರತ, ರಷ್ಯಾ, ಇರಾನ್ ಹಾಗೂ ಮಧ್ಯಪ್ರಾಚ್ಯದ ಐದು ರಾಷ್ಟ್ರಗಳು ದೆಹಲಿಯಲ್ಲಿ ನಡೆದ ಸಂವಾದದಲ್ಲಿ ನಿರ್ಧರಿಸಿವೆ. ಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಆಯೋಜಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಈ ಸಂವಾದದಲ್ಲಿ ಮುಕ್ತ ಹಾಗೂ ನೈಜ ದೃಷ್ಟಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ಅಲ್ಲಿ … Continued