ವಿಶ್ವ ಚೆಸ್ ಚಾಂಪಿಯನ್‌ ಶಿಪ್ ಪ್ರಶಸ್ತಿ ಗೆದ್ದ ಗುಕೇಶಗೆ 5 ಕೋಟಿ ರೂ.ಬಹುಮಾನ ಘೋಷಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ಭಾರತದ ಈ ಯುವ ಗ್ರ್ಯಾಂಡ್ ಮಾಸ್ಟರ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ ಗುಕೇಶ ಅವರು ಅತ್ಯಂತ ಕಿರಿಯ ವಯಸ್ಸಿನ ಚೆಸ್‌ ವಿಶ್ವ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಐತಿಹಾಸಿಕ ಸಾಧನೆಗೆ ತಮಿಳುನಾಡು ಸರ್ಕಾರ ಗುಕೇಶ ಅವರಿಗೆ 5 … Continued

ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ; ಮಗು ಸೇರಿ 7 ಮಂದಿ ಸಾವು

ಚೆನ್ನೈ : ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಪ್ರಮುಖ ಮೂಳೆಚಿಕಿತ್ಸೆಯ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ ಏಳು ರೋಗಿಗಳು ಸಾವಿಗೀಡಾಗಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. ಮೊದಲು ನೆಲ ಅಂತಸ್ತಿನ ರಿಸೆಪ್ಶನ್‌ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. … Continued

ಭಾರಿ ಮಳೆ ಮುನ್ಸೂಚನೆ; ತಮಿಳುನಾಡಿನ 11 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ

ಚೆನ್ನೈ: ಭಾರಿ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ತಮಿಳುನಾಡಿನ ಇತರ 10 ಜಿಲ್ಲೆಗಳಲ್ಲಿ ಇಂದು, ಗುರುವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೈಋತ್ಯ ಬಂಗಾಳ ಕೊಲ್ಲಿಯಲ್ಲಿ “ವಾಯುಭಾರ ಕುಸಿತ” ದಿಂದಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಭಾರಿ ಮಳೆಯಾಗಲಿದೆ ಎಂದು‌ ಎಚ್ಚರಿಕೆಯನ್ನು ನೀಡಿದೆ. ಚೆನ್ನೈ, ವಿಲ್ಲುಪುರಂ, ತಂಜಾವೂರು, ಮೈಲಾಡುತುರೈ, ಪುದುಕ್ಕೊಟ್ಟೈ, … Continued

ವೀಡಿಯೊ..| ಚಂಡಮಾರುತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ತಮಿಳುನಾಡು ಸಚಿವರ ಮೇಲೆ ಕೆಸರು ಎರಚಿದ ಜನರು…!

ಚೆನ್ನೈ: ಫೆಂಗಲ್ ಚಂಡಮಾರುತದ ನಂತರ “ಅಸಮರ್ಪಕ” ಪರಿಹಾರ ಕ್ರಮಗಳ ವಿರುದ್ಧ ಪ್ರತಿಭಟಿಸಿದ ಜನರು ವಿಲ್ಲುಪುರಂ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ತಮಿಳುನಾಡು ಕ್ಯಾಬಿನೆಟ್ ಸಚಿವ ಕೆ. ಪೊನ್ಮುಡಿ ಅವರ ಮೇಲೆ ಕೆಸರು ಎರಚಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ತಿರುಚಿರಾಪಳ್ಳಿ-ಚೆನ್ನೈ ರಸ್ತೆಯ ಇರುವೇಲ್ಪಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೋಪಗೊಂಡ … Continued

ವೀಡಿಯೊಗಳು..| ಫೆಂಗಲ್‌ ಚಂಡಮಾರುತಕ್ಕೆ ತಿರುವಣ್ಣಾಮಲೈನಲ್ಲಿ ಭೂ ಕುಸಿತ ; ಮನೆಗಳ ಮಧ್ಯೆಯೇ ಕೆಸರಿನ ಪ್ರವಾಹ: ಸಿಕ್ಕಿದ್ದನ್ನು ಕೊಚ್ಚೊಯ್ದ ಮಳೆ ನೀರು

ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿ ಫೆಂಗಲ್ ಚಂಡಮಾರುತದ ನಂತರ ಮಣ್ಣು ಕುಸಿದಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ವೀಡಿಯೊದಲ್ಲಿ ಕೆಸರು, ನೀರು ಮತ್ತು ಅವಶೇಷಗಳ ಮಿಶ್ರಣವು ಮೆಟ್ಟಿಲುಗಳ ಕೆಳಗೆ ಹರಿಯುವುದು ಮತ್ತು ಜನರ ಮನೆಗಳಿಗೆ ಪ್ರವೇಶಿಸುವುದು ಕಂಡುಬಂದಿದೆ. ಕೆಸರು ನೀರಿನ ಪ್ರವಾಹ ದುರ್ಬಲಗೊಳ್ಳುವ ವರೆಗೂ ಅದು ತನ್ನ ದಾರಿಯಲ್ಲಿ ಬರುವ ಪ್ರತಿಯೊಂದು ವಸ್ತುವನ್ನು ತನ್ನೊಂದಿಗೆ ಎಳೆದೊಯ್ಯುವುದನ್ನು ಕಾಣಬಹುದು. … Continued

ವೀಡಿಯೊಗಳು…| ಫೆಂಗಲ್ ಚಂಡಮಾರುತ : ತಮಿಳುನಾಡಿನಲ್ಲಿ ಭಾರಿ ಮಳೆಯಿಂದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ಬಸ್ಸುಗಳು…!

ಚೆನ್ನೈ/ ಪುದುಚೇರಿ : ತಮಿಳುನಾಡು ಮತ್ತು ಪುದುಚೇರಿ ಬಳಿ ಭೂಕುಸಿತ ಮಾಡಿದ ಫೆಂಗಲ್ ಚಂಡಮಾರುತವು ಭಾನುವಾರ ದುರ್ಬಲಗೊಂಡಿತು, ಆದರೆ ಭಾರೀ ಮಳೆ ಮತ್ತು ಪ್ರವಾಹಗಳು ತಮಿಳುನಾಡು ಮತ್ತು ಪುದುಚೇರಿಯ ಹಲವಾರು ಭಾಗಗಳನ್ನು ಅಪ್ಪಳಿಸುತ್ತಲೇ ಇವೆ. ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯು ಹೆಚ್ಚು ಹಾನಿಗೊಳಗಾಗಿದ್ದು, ನೀರು ರಸ್ತೆ ಮೇಲೆ ನಿಲ್ಲಿಸಿದ್ದ ಹಲವಾರು … Continued

ಚಂಡಮಾರುತ ಫೆಂಗಲ್ ಎಚ್ಚರಿಕೆ: ತಮಿಳುನಾಡು, ಪುದುಚೇರಿಗೆ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ (ನವೆಂಬರ್ 26) ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ತೀವ್ರವಾದ ವಾಯುಭಾರ ಕುಸಿತವು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ಫೆಂಗಲ್ ಎಂದು ಹೆಸರಿಸುವ ಸಾಧ್ಯತೆಯಿದೆ. ಇದು ಈ ವಾರದ ಕೊನೆಯಲ್ಲಿ ತಮಿಳುನಾಡು ಕರಾವಳಿಯನ್ನು ಸಮೀಪಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ-ವಾಯುವ್ಯವಾಗಿ ಗಂಟೆಗೆ … Continued

ವೀಡಿಯೊ..| ವೈದ್ಯರಿಗೆ ಅನೇಕ ಬಾರಿ ಇರಿದ ನಂತರ ಚಾಕು ಎಸೆದು ಏನೂ ನಡೆದೇ ಇಲ್ಲ ಎಂಬಂತೆ ನಡೆದುಕೊಂಡು ಹೋದ ಆರೋಪಿ ; ಥಳಿಸಿದ ಸಿಬ್ಬಂದಿ

ಚೆನ್ನೈ: ಚೆನ್ನೈನ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರಿಗೆ ವ್ಯಕ್ತಿಯೊಬ್ಬ ಅನೇಕ ಬಾರಿ ಚಾಕುವಿನಿಂದ ಇರಿದಿದ್ದು, ನಂತರ ಆತ ಯಾವುದೇ ಅಂಜಿಕೆಯಿಲ್ಲದೆ ಜನರ ಮುಂದೆಯೇ ಚಾಕುವನ್ನು ಎಸೆದು ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಜನರು ಎಚ್ಚರಿಸಿದ ನಂತರ ಭದ್ರತಾ ಸಿಬ್ಬಂದಿ ಹಿಡಿದಿದ್ದಾರೆ, ನಂತರ ಆಸ್ಪತ್ರೆಯ ಸಿಬ್ಬಂದಿ ಥಳಿಸಿದ್ದಾರೆ. ವೈದ್ಯರಿಗೆ ಚಾಕುವಿನಿಂದ ಇರಿದು ಆರೋಪಿ ಆರಾಮವಾಗಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಹೊರಬಿದ್ದಿದ್ದು, ಆರೋಪಿಯನ್ನು … Continued

ಭಾರಿ ಮಳೆ ; ಚೆನ್ನೈ, ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಚೆನ್ನೈ: ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು, ಮಂಗಳವಾರ (ನವೆಂಬರ್‌ 12) ಚೆನ್ನೈನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪಕ್ಕದ ತಿರುವಳ್ಳೂರು ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಶಾಲೆಗಳಿಗೆ ಮಳೆ ರಜೆ ಘೋಷಿಸಲಾಗಿದೆ. ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಿರುವರೂರ್, ತಂಜಾವೂರು ಮತ್ತು ವಿಲ್ಲುಪುರಂ ಸೇರಿದಂತೆ ಆರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ … Continued

ಗೂಡ್ಸ್‌ ರೈಲಿಗೆ ಮೈಸೂರು – ದರ್ಭಾಂಗ ಬಾಗ್ಮತಿ ಎಕ್ಸ್‌ಪ್ರೆಸ್ ಡಿಕ್ಕಿ ; 19 ಮಂದಿಗೆ ಗಾಯ

ಚೆನ್ನೈ: ತಮಿಳುನಾಡಿನಲ್ಲಿ ಶುಕ್ರವಾರ ರಾತ್ರಿ ಪ್ಯಾಸೆಂಜರ್ ರೈಲೊಂದು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ(Train Accident) ಹೊಡೆದಿದ್ದು, 19 ಮಂದಿ ಗಾಯಗೊಂಡಿದ್ದಾರೆ. ರೈಲು ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ಪ್ರವೇಶಿಸಿದ ಪರಿಣಾಮ ಕನಿಷ್ಠ 12 ಬೋಗಿಗಳು ಹಳಿತಪ್ಪಿದವು, ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಶುಕ್ರವಾರ ರಾತ್ರಿ 8:30ರ … Continued