ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್-19 ಸೋಂಕು ಮತ್ತೆ ಹೆಚ್ಚಳ ; JN.1 ರೂಪಾಂತರ ಎಷ್ಟು ಅಪಾಯಕಾರಿ..?

ನವದೆಹಲಿ: ಕೋವಿಡ್-19 ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಏಷ್ಯಾದ ಕೆಲವು ಭಾಗಗಳಲ್ಲಿ ಕೋವಿಡ್‌-19 (COVID-19) ಸಾಂಕ್ರಾಮಿಕದ ಹೊಸ ಅಲೆ ಕಾಣಿಸಿಕೊಂಡಿದ್ದು, ಇದು ವಿಶ್ವದಾದ್ಯಂತ ಎಚ್ಚರಿಕೆ ನೀಡಿದೆ. ಹಾಂಗ್ ಕಾಂಗ್‌ನಲ್ಲಿ, 10 ವಾರಗಳಲ್ಲಿ ಸಾಪ್ತಾಹಿಕ ಪ್ರಕರಣಗಳು 30 ಪಟ್ಟು ಹೆಚ್ಚಾಗಿದೆ. ಸಿಂಗಾಪುರದಲ್ಲಿ ಒಂದು ವಾರದಲ್ಲಿ ಪ್ರಕರಣಗಳು ಸುಮಾರು ಶೇ. 30 ರಷ್ಟು ಹೆಚ್ಚಾಗಿದೆ. ಚೀನಾ ಮತ್ತು ಥೈಲ್ಯಾಂಡ್‌ನಲ್ಲಿಯೂ ಗಮನಾರ್ಹ ಏರಿಕೆಯ … Continued

ಮ್ಯಾನ್ಮಾರ್ ಭೂಕಂಪದ ಶಕ್ತಿ 334 ʼಪರಮಾಣು ಬಾಂಬ್‌ʼಗಳ’ ಶಕ್ತಿ ಬಿಡುಗಡೆಗೆ ಸಮ ಎಂದ ವಿಜ್ಞಾನಿಗಳು…!

ನವದೆಹಲಿ: ಶುಕ್ರವಾರ (ಮಾರ್ಚ್ 29) ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ರಿಕ್ಟರ್‌ ಮಾಪಕದಲ್ಲಿ 7.7ರ ಪ್ರಬಲ ಭೂಕಂಪವು 300 ಕ್ಕೂ ಹೆಚ್ಚು ಪರಮಾಣು ಬಾಂಬ್‌ಗಳಿಗೆ ಸರಿಸಮವಾದ ಶಕ್ತಿಯನ್ನು ಬಿಡುಗಡೆ ಮಾಡಿತು ಎಂದು ಭೂವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ನಂತರದ ಆಘಾತಗಳ ಬಗ್ಗೆ ಎಚ್ಚರಿಸಿದ್ದಾರೆ. “ಅಂತಹ ಭೂಕಂಪದಿಂದ ಬಿಡುಗಡೆಯಾದ ಶಕ್ತಿಯು ಸುಮಾರು 334 ಪರಮಾಣು ಬಾಂಬ್‌ಗಳಿಗೆ ಸಮಾನವಾಗಿದೆ” ಎಂದು … Continued

ಮ್ಯಾನ್ಮಾರ್‌ ಭೂಕಂಪ : 1600 ಕ್ಕೂ ಹೆಚ್ಚು ಜನರು ಸಾವು, 3,400 ಮಂದಿಗೆ ಗಾಯ

ನವದೆಹಲಿ: ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನ ಕೆಲವು ಭಾಗಗಳಲ್ಲಿ ಸಂಭವಿಸಿದ ಭಾರಿ ಭೂಕಂಪದಲ್ಲಿ ದಿನಕಳೆದಂತೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಶನಿವಾರ ಸಂಜೆ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಾವಿನ ಸಂಖ್ಯೆ 1,600 ಅನ್ನು ದಾಟಿದೆ, ಮ್ಯಾನ್ಮಾರ್ ಒಂದರಲ್ಲೇ 1,644 ಮಂದಿ ಸಾವಿಗೀಡಾಗಿದ್ದಾರೆ. 7.7 ತೀವ್ರತೆಯ ಭೂಕಂಪವು ಶುಕ್ರವಾರ ಮಧ್ಯಾಹ್ನ 12:50 ಕ್ಕೆ (0650 GMT) ಮ್ಯಾನ್ಮಾರ್‌ನ ಸಾಗಯಿಂಗ್‌ನ … Continued

ಭೀಕರ ದೃಶ್ಯಗಳ ವೀಡಿಯೊಗಳು | ಮ್ಯಾನ್ಮಾರ್‌, ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ ; ಸಾವಿನ ಸಂಖ್ಯೆ 144ಕ್ಕೆ ಏರಿಕೆ,

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪ ಹಾಗೂ 6.4 ತೀವ್ರತೆಯ ನಂತರದ ಆಘಾತ ಶುಕ್ರವಾರ ಸಂಭವಿಸಿದ್ದು, ಕನಿಷ್ಠ 144 ಜನರು ಸಾವಿಗೀಡಾಗಿದ್ದಾರೆ. ಕಟ್ಟಡಗಳು ಉರುಳಿದವು, ಸೇತುವೆಗಳು ಕುಸಿದವು. ಮತ್ತು ಐತಿಹಾಸಿಕ ರಚನೆಗಳಿಗೆ ಹಾನಿಯಾಗಿದೆ. ನೆರೆಯ ಥಾಯ್ಲೆಂಡ್‌ನಲ್ಲೂ ನಡುಕ ಸಂಭವಿಸಿದೆ, ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 117 ಮಂದಿ ಸಿಲುಕಿದ್ದು, ಎಂಟು ಮಂದಿ ಸಾವಿಗೀಡಾಗಿದ್ದಾರೆ. … Continued

ವೀಡಿಯೊಗಳು..| ಮ್ಯಾನ್ಮಾರ್‌ ನಲ್ಲಿ 7.7 ತೀವ್ರತೆಯ ಭೂಕಂಪ ; ಬ್ಯಾಂಕಾಕಿನಲ್ಲಿ ಪ್ರಬಲ ಕಂಪನ : 20 ಸಾವು, ಹಲವರಿಗೆ ಗಾಯ

ಶುಕ್ರವಾರ ಮಧ್ಯಾಹ್ನ 12:50ಕ್ಕೆ (ಸ್ಥಳೀಯ ಕಾಲಮಾನ) ಮಧ್ಯ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಮತ್ತು 6.8ರ  ಭೂಕಂಪದ ನಂತರದ ಆಘಾತ ಸಂಭವಿಸಿದ ನಂತರ ಸುಮಾರು ಲಭ್ಯವಿರುವ ಮಾಹಿತಿ ಪ್ರಕಾರ, 20 ಜನ ಸಾವಿಗೀಡಾಗಿದ್ದಾರೆ ಹಾಗೂ 90ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಸಾಗಯಿಂಗ್ ನಗರದ ವಾಯುವ್ಯಕ್ಕೆ 16 ಕಿಮೀ ಮತ್ತು 10 … Continued

ಅಪರೂಪಕ್ಕೆ ಕಾಣಿಸಿಕೊಂಡ ಬಹಳ ʼಅಪರೂಪದ ಬಿಳಿ ತಿಮಿಂಗಿಲʼ | ವೀಕ್ಷಿಸಿ

ಗಮನಾರ್ಹವಾದ ಮುಖಾಮುಖಿಯಲ್ಲಿ ಥೈಲ್ಯಾಂಡಿನ ಫುಕೆಟ್ ಕರಾವಳಿಯ ಪ್ರವಾಸಿಗರು ಇತ್ತೀಚೆಗೆ ಅತ್ಯಂತ ಅಪರೂಪದ ಬಿಳಿ ತಿಮಿಂಗಿಲವನ್ನು ನೋಡಿದ್ದಾರೆ. ಹೊಸ ವರ್ಷದ ಮೊದಲ ದಿನವೇ ಈ ಅಸಾಧಾರಣ ಹಾಗೂ ಅತ್ಯಂತ ಅಪರೂಪದ ಬಿಳಿ ತಿಮಿಂಗಿಲ ಕಾಣಿಸಿಕೊಂಡಿದೆ. ‘ಹ್ಯಾಪಿ ಅವರ್’ ಎಂಬ ಬೋಟ್‌ನಲ್ಲಿದ್ದ ಪ್ರಯಾಣಿಕರು ಮತ್ತೊಂದು ತಿಮಿಂಗಿಲದ ಜೊತೆಯಲ್ಲಿ ಈಜುತ್ತಿದ್ದ ಈ ಸಂಪೂರ್ಣ ಬಿಳಿ ಬಣ್ಣದ ತಿಮಿಂಗಿಲವನ್ನು ಅವರು ತಮ್ಮ … Continued

ತನಗೆ ಚಿಕಿತ್ಸೆ ನೀಡಿದ ವೈದ್ಯನ 12 ವರ್ಷಗಳ ನಂತರ ಗುರುತಿಸಿ ಕೃತಜ್ಞತೆ ಸಲ್ಲಿಸಿದ ಕಾಡಾನೆ…!

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಗುರುತು ಹಿಡಿದ ಥಾಯ್ಲೆಂಡ್‌ನ ಕಾಡಾನೆಯೊಂದರ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಥಾಯ್ಲೆಂಡಿನ ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ ಅವರನ್ನು ೧೨ ವರ್ಷಗಳ ಬಳಿಕ 31 ವರ್ಷದ ಈ ಆನೆ ಗುರುತು ಹಿಡಿದಿದೆ. ತನ್ನ ಸೊಂಡಿಲಿನಿಂದ … Continued