ಶಿರಸಿ: ಆನ್​ಲೈನ್​​ ಗೇಮ್​​ನಲ್ಲಿ ಸುಮಾರು 65 ಲಕ್ಷ ರೂ. ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

ಶಿರಸಿ: ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಶಿರಸಿ ತಾಲೂಕಿನ ಬಾಳೆತೋಟ ನಿವಾಸಿ ವಿಜೇತ ಶಾಂತಾರಾಮ ಹೆಗಡೆ (37) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈತ ಆನ್ … Continued

ಕಾರವಾರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ಕಾರವಾರ: ತಾಲೂಕಿನ ಗೋಪಶಿಟ್ಟಾದ ಮೂಲದ ಉದ್ಯಮಿಯೊಬ್ಬರ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮೂಲತಃ ಗೋಪಶಿಟ್ಟಾದ ನಿವಾಸಿ ಹಾಗೂ ಹಾಲಿ ಗೋವಾದಲ್ಲಿ ವಾಸವಾಗಿದ್ದ ಶ್ಯಾಮ ಪಾಟೀಲ(45), ಅವರ ಪತ್ನಿ ಜ್ಯೋತಿ ಪಾಟೀಲ(38) ಹಾಗೂ ಮಗ ದಕ್ಷ (12) ಎಂದು ಗುರುತಿಸಲಾಗಿದೆ. ಜ್ಯೋತಿ ಹಾಗೂ ದಕ್ಷ ಅವರ ಮೃತದೇಹ ಕಾರವಾರದ ದೇವಭಾಗ … Continued

ಕುಮಟಾ: ತಂಡ್ರಕುಳಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಗುಡ್ಡ ಕುಸಿತ: ಮನೆಗೆ ಹಾನಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ 10 ಕಿಮೀ ದೂರದ ತಂಡ್ರಕುಳೀಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಹೆದ್ದಾರಿ ಪಕ್ಕದ ಗುಡ್ಡ ಕುಸಿದಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಗುಡ್ಡ ಕುಸಿದು ಬೃಹತ್‌ ಬಂಡೆಗಲ್ಲು ರಾಷ್ಟ್ರೀಯ ಹೆದ್ದಾರಿಯ ಕೆಳಗೇ ಇರುವ ಗಣೇಶ ತುಳಸು ಅಂಬಿಗ ಎಂಬವರ ಮನೆಗೆ … Continued

ಹೊನ್ನಾವರ : ಆಟೊರಿಕ್ಷಾ ಮೇಲೆ ಬಿದ್ದ ಬೃಹತ್ ಮರ, ಕೂದಲೆಳೆ ಅಂತರದಲ್ಲಿ ಚಾಲಕ ಪಾರು

ಹೊನ್ನಾವರ : ಹೋಗುತ್ತಿದ್ದ ಆಟೊ ರಿಕ್ಷಾ ಮೇಲೆ ಬೃಹತ್‌ ಮರವೊಂದು ಬಿದ್ದಿದ್ದು ಅದೃಷ್ಟವಶಾತ್‌ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯತದ ವ್ಯಾಪ್ತಿಯ ಕಣ್ಣಿಮನೆಯ ಸಮೀಪದ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹಳಗೇರಿಯ ಶ್ರೀನಾಥ ಗೌಡ ಎಂಬವರು ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಈ ಘಟನೆ … Continued

ಹೊನ್ನಾವರ: ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆತಂದ ವ್ಯಕ್ತಿ ವಿಷ ಕುಡಿದು ಸಾವು

ಹೊನ್ನಾವರ: ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆ ತಂದ ವೇಳೆ ವ್ಯಕ್ತಿಯೊಬ್ಬ  ವಿಷ ಸೇವಿಸಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ವಿಷ ಸೇವಿಸಿಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಿಹಾರ ಮೂಲದ ದಿಲೀಪ ಎಂದು ಗುರುತಿಸಲಾಗಿದೆ. ಈತ ಹೊನ್ನಾವರದ ಮನೆಯೊಂದರಲ್ಲಿ ಬಂಗಾರ ತೊಳದುಕೊಡುತ್ತೇನೆಂದು ವಂಚನೆ ನಡೆಸಿದ್ದಾನೆಂಬ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ … Continued

ಅಂಕೋಲಾ: ಸಂಶಯಕ್ಕೆ ಕಾರಣವಾದ ಗೋಡೆಗೆ ಅಂಟಿಸಿದ ಚಿತ್ರ-ವಿಚಿತ್ರ ಬರಹದ ಪೋಸ್ಟರುಗಳು…!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಗೆ ಮೂರು ಪೋಸ್ಟರಗಳನ್ನು ಅಂಟಿಸಲಾಗಿದೆ. ಬೆಳಿಗ್ಗೆ ಹಲವರು ಇದನ್ನು ಗಮನಿಸಿದ್ದಾರೆ ಬಿಳಿ ಗಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಈ ಬರಹಗಳನ್ನು ಬರೆಯಲಾಗಿದೆ. ಈ ಬರಹಗಳನ್ನು ಯಾರು ಬರೆದು ಅಂಟಿಸಿದ್ದಾರೆಂಬುದು ಗೊತ್ತಾಗಿಲ್ಲ. ಇಂಗ್ಲಿಷ್ ನಲ್ಲಿ … Continued

ಹೊನ್ನಾವರ: ಡಿಕೆ ಶಿವಕುಮಾರ ಹೆಲಿಕಾಪ್ಟರ್ ಲ್ಯಾಂಡ್‌ ಆದ ಹೆಲಿಪ್ಯಾಡ್‌ ಸಮೀಪವೇ ಹೊತ್ತಿಕೊಂಡ ಬೆಂಕಿ: ಅಪಾಯದಿಂದ ಪಾರು

ಹೊನ್ನಾವರ: ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹೆಲಿಕ್ಯಾಪ್ಟರ್ ಇಳಿದ ಪಟ್ಟಣದ ರಾಮತೀರ್ಥದ ಹೆಲಿಪ್ಯಾಡಿನ ಸಮೀಪದಲ್ಲಿ ಸ್ಮೋಕ್ ಕ್ಯಾಂಡಲ್ ಬೆಂಕಿ ಒಣಹುಲ್ಲಿಗೆ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಡಿ.ಕೆ. ಶಿವಕುಮಾರ ಅವರು ಹ್ಯಾಲಿಕ್ಯಾಪ್ಟರ್ ನಿಂದ ಇಳಿದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಗಾಳಿ ಇತ್ತು. ಹೆಲಿಕ್ಯಾಪ್ಟರ್‌ … Continued

ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರಿದ ಶಿವಾನಂದ ಹೆಗಡೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ನಡೆದ ಬೃಹತ್‌ ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಕಡತೋಕಾ ಅವರು ಸೋಮವಾರ ಸಹಸ್ರಾರು ಅಭಿಮಾನಿಗಳೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೇವಲ ಹಣವನ್ನು ನೋಡಿ, ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಹೊಸಬರನ್ನು ತಂದು ಕುಮಟಾ-ಹೊನ್ನಾವರ … Continued

ಸಿದ್ದಾಪುರ: ಹೊಳೆಯ ಗುಂಡಿಗೆ ಬಿದ್ದು ಇಬ್ಬರು ಸಾವು

ಸಿದ್ದಾಪುರ: ಜಮೀನಿನ ಪಕ್ಕದಲ್ಲಿರುವ ಹೊಳೆಯ ಗುಂಡಿಯ ಬದಿಯಲ್ಲಿನ ಗಿಡಗಂಟಿಗಳನ್ನು ಸವರುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಇಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಸಮೀಪದ ಇರಾಸೆಯಲ್ಲಿ ಶನಿವಾರ ಸಂಜೆ ನಡೆದ ವರದಿಯಾಗಿದೆ. ಮೃತರನ್ನು ಹಾರ್ಸಿಕಟ್ಟಾ ಕಂಚಿಮನೆಯ ದೇವಾನಂದ ಧರ್ಮ ಮಡಿವಾಳ(೩೫) ಹಾಗೂ ಮಾಬ್ಲೇಶ್ವರ ಮಂಜ ಮಡಿವಾಳ(೪೮) ಎಂದು ಗುರುತಿಸಲಾಗಿದೆ. ಇರಾಸೆಯ ಮಂಜುನಾಥ … Continued

ಶಿರಸಿ : ಸ್ವರ್ಣವಲ್ಲೀ ಕೃಷಿ ಪ್ರಶಸ್ತಿ, ಕುಶಲಕರ್ಮಿ, ಕೂಡು ಕುಟುಂಬ ಪ್ರಶಸ್ತಿಗಳು ಪ್ರಕಟ

ಶಿರಸಿ: ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನವು ಪ್ರತೀ ವರ್ಷ ನೀಡುವ ಅತ್ಯುತ್ತಮ ಕೃಷಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದು , ಮೇ 4ರಂದು ಸ್ವರ್ಣವಲ್ಲೀಯಲ್ಲಿ‌ ನಡೆಯಲಿರುವ ಕೃಷಿ ಜಯಂತಿಯ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಧಕ ಕೃಷಿಕ ಕೃಷಿ ಕಂಠೀರವ ಪ್ರಶಸ್ತಿಗೆ ವಾನಳ್ಳಿ ಕಣ್ಣಿಮನೆಯ ಗಣಪತಿ ಕೃಷ್ಣ ಭಟ್ಟ ಆಯ್ಕೆಯಾಗಿದ್ದಾರೆ. ಸಾಧಕ ಕೃಷಿ ಮಹಿಳೆ ಪ್ರಶಸ್ತಿ-ಜೋಯಿಡಾ ಶಿರೋಳದ … Continued