ವೀಡಿಯೊ…| ಚಿಕ್ಕಮಗಳೂರು : ಕರ್ತವ್ಯ ನಿರತ ವೈದ್ಯರ ಮೇಲೆ ಚಪ್ಪಲಿ ಎಸೆದ ಮಹಿಳೆ…!

ಚಿಕ್ಕಮಗಳೂರು: ಚಿಕ್ಕಮಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆ ನಡೆದಿದ್ದು,  ಭಾರೀ ಆಕ್ರೋಶ ವ್ಯಕ್ತವಾಗಿದೆ. ಕರ್ತವ್ಯದಲ್ಲಿದ್ದ ವೈದ್ಯರೊಬ್ಬರ ಮೇಲೆ ಮಹಿಳೆಯೊಬ್ಬಳು ಮೊದಲು ಚಪ್ಪಲಿ ಎಸೆದಿದ್ದಾಳೆ. ನಂತರ ಮಹಿಳೆಯೊಂದಿಗಿನ ಗುಂಪೊಂದು ವೈದ್ಯರನ್ನು ಕರ್ತವ್ಯ ನಿರ್ವಹಿಸಲು ತೊಂದರೆ ಪಡಿಸಿ ಅವರ ಅಂಗಿಯ ಕಾಲರ್‌ ಅನ್ನು ಹಿಡುದು ಎಳೆದಾಡಿದೆ ಎಂದು ವರದಿಯಾಗಿದೆ. ಈ ವೀಡಿಯೊ ವೈರಲ್‌ ಆಗಿದ್ದು, … Continued

ವೀಡಿಯೊ..| ಕ್ರುಗರ್ ರಾಷ್ಟ್ರೀಯ ಉದ್ಯಾನದಲ್ಲಿ ಮಾಂಸಕ್ಕಾಗಿ ಹದ್ದು Vs ಮೊಸಳೆ ಶೋ ಡೌನ್‌….

ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹದ್ದು ಮತ್ತು ಮೊಸಳೆ ನಡುವೆ ಒಂದೇ ಬೇಟೆಗಾಗಿ ಹಕ್ಕು ಸಾಧಿಸುವ ರೋಚಕ ಮುಖಾಮುಖಿ ವನ್ಯಜೀವಿ ಉತ್ಸಾಹಿಗಳನ್ನು ದಿಗ್ಭ್ರಮೆಗೊಳಿಸಿದೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಗೇವಿನ್ ಎಲ್ಲಾರ್ಡ್ ಅವರು ಕ್ಯಾಮೆರಾದಲ್ಲಿ ಈ ತೀವ್ರತೆಯ ಕ್ಷಣವನ್ನು ಸೆರೆಹಿಡಿದಿದ್ದಾರೆ, ನಂತರ ಅದನ್ನು ಯೂಟ್ಯೂಬ್‌ನಲ್ಲಿ ‘ಲೇಟೆಸ್ಟ್ ಸೈಟಿಂಗ್ಸ್’ ಹಂಚಿಕೊಂಡಿದೆ. ಎಲ್ಲಾರ್ಡ್ ಮತ್ತು ಅವರ … Continued

ವೀಡಿಯೊ : ಮಗಳ ತಲೆಗೆ ಸಿಸಿಟಿವಿ ಅಳವಡಿಸಿದ ತಂದೆ : ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ….!

ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲವನ್ನೂ ಹುಡುಕಲು ಇಂಟರ್ನೆಟ್ ಒಂದು ಕೇಂದ್ರವಾಗಿದೆ. ಇತ್ತೀಚೆಗೆ, ಅಂತರ್ಜಾಲದಲ್ಲಿ ವಿಭಿನ್ನ ವೀಡಿಯೊ ಕಾಣಿಸಿಕೊಂಡಿದೆ. ಈ ವೀಡಿಯೊ ಹುಡುಗಿಯ ತಲೆಯ ಮೇಲೆ ಸಿಸಿಟಿವಿ ಅಳವಡಿಸಿರುವುದನ್ನು ತೋರಿಸುತ್ತದೆ. ಸಂದರ್ಶಕರ ಪ್ರಶ್ನೆಗಳಿಗೆ ಹುಡುಗಿ ಸಾಂದರ್ಭಿಕವಾಗಿ ಉತ್ತರಿಸಿದ್ದಾಳೆ ಮತ್ತು ತನ್ನ ತಂದೆ ತನ್ನ ತಲೆಯ ಮೇಲೆ ಸಿಸಿಟಿವಿ ಅಳವಡಿಸಿದ್ದನ್ನು ಆಕೆ ಬಹಿರಂಗಪಡಿಸಿದ್ದಾಳೆ. ಈಕೆಯ ತಲೆ ಮೇಲೆ ಕಿರೀಟದಂತೆ ಸಿಸಿಟಿವಿಯನ್ನು … Continued

ವೀಡಿಯೊ..| ಖ್ಯಾತಿ ಪಡೆಯಲು ಜೀವಂತ ನಾಗರ ಹಾವಿನ ತಲೆ ಬಾಯಿಯೊಳಗೆ ಇಟ್ಟು ವೀಡಿಯೊ ಮಾಡಿದ ವ್ಯಕ್ತಿಯ ಪ್ರಾಣವೇ ಹೋಯ್ತು…!

ವೀಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಖ್ಯಾತಿಗಳಿಸಲು ನಾಗರ ಹಾವಿನ ತಲೆಯನ್ನು ಬಾಯಿಗೆ ಹಾಕಿಕೊಂಡ ವ್ಯಕ್ತಿಯೊಬ್ಬ ಈ ದುಸ್ಸಾಹಸದ ವೇಳೆ ಸಾವಿಗೀಡಾಗಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು 20 ವರ್ಷದ ಶಿವರಾಜ ಎಂದು ಗುರುತಿಸಲಾಗಿದೆ. ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಿವರಾಜ ರಸ್ತೆಯ ಮಧ್ಯದಲ್ಲಿ ನಿಂತು ನಾಗರಹಾವನ್ನು ಬಾಯಿಗೆ … Continued

ವೀಡಿಯೊ…| ಊಟ ಇಲ್ಲ ಅಂದಿದ್ದಕ್ಕೆ ಕೋಪಗೊಂಡು ಹೊಟೇಲಿಗೆ ಟ್ರಕ್ ಡಿಕ್ಕಿ ಹೊಡೆಸಿದ ಪಾನಮತ್ತ ಚಾಲಕ…!

ಆಘಾತಕಾರಿ ಘಟನೆಯೊಂದರಲ್ಲಿ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನಲ್ಲಿ ಪಾನಮತ್ತ ಚಾಲಕನೊಬ್ಬ ತನಗೆ ಊಟ ನಿರಾಕರಿಸಿದ ಕಾರಣಕ್ಕೆ ತನ್ನ ಟ್ರಕ್ ಅನ್ನು ಹೊಟೇಲಿಗೆ ಡಿಕ್ಕಿ ಹೊಡೆಸಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಪುಣೆ-ಸೋಲಾಪುರ ಹೆದ್ದಾರಿಯಲ್ಲಿರುವ ರಸ್ತೆ ಬದಿಯ ಹೊಟೇಲ್‌ ಗೋಕುಲದಲ್ಲಿ ಈ ಘಟನೆ ನಡೆದಿದೆ. ಹಿಂಗಂಗಾವ್‌ನ ಹೋಟೆಲ್ ಗೋಕುಲ ಬಳಿ … Continued

ವೀಡಿಯೊ…| ಸಂಗೀತ ಕಾರ್ಯಕ್ರಮದ ವೇಳೆ ಶೆಡ್ ಕುಸಿದು ಅವಘಡ ; 100ಕ್ಕೂ ಹೆಚ್ಚು ಮಂದಿಗೆ ಗಾಯ

ಛಾಪ್ರಾ : ಬಿಹಾರದ ಸರನ್ ಜಿಲ್ಲೆಯ ಛಪ್ರಾದಲ್ಲಿ ಶೆಡ್ ಕುಸಿದು 100 ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಈ ಪ್ರದೇಶದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಜನರ ಭಾರ ತಾಳಲಾರದೆ ಶೆಡ್ ಕುಸಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಇಶಾವಪುರ ಬ್ಲಾಕ್‌ನ ಮಹಾವೀರ ಅಖಾಡ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಮೆರವಣಿಗೆಯಲ್ಲಿ … Continued

ಅಪರೂಪದ ವೀಡಿಯೊ..| ರಾಮ ಭಜನೆ ಹಾಡುತ್ತಿದ್ದ ಮಹಿಳೆಯನ್ನು ತಬ್ಬಿಕೊಂಡ ಕೋತಿ…!

ರಾಮ ಭಜನೆ ಮತ್ತು ಹರೇ ರಾಮ ಪಠಣಗಳನ್ನು ಕೇಳಿದ ನಂತರ ಕೋತಿಯೊಂದು ಮಹಿಳೆಯನ್ನು ತಬ್ಬಿಕೊಂಡ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೆಸ್ಟೊರೆಂಟ್‌ನಲ್ಲಿ ಮಹಿಳೆಯೊಬ್ಬರು ಕುಳಿತಿದ್ದು, ಕೋತಿ ಆರಂಭದಲ್ಲಿ ಮಹಿಳೆಯ ತೊಡೆಯ ಮೇಲೆ ಕುಳಿತು ಮಹಿಳೆ ರಾಮ ಭಜನೆ ಹಾಡುವುದನ್ನು ಕೇಳುತ್ತಿತ್ತು. ಆ ಮಹಿಳೆಯು ಭಗವಾನ್ ರಾಮನ ಸ್ತೋತ್ರಗಳನ್ನು ಪಠಿಸಲು ಪ್ರಾರಂಭಿಸಿದಾಗ ಕೋತಿಯು ಶ್ರದ್ಧೆಯಿಂದ … Continued

ವೀಡಿಯೊ..| ಎಂ.ಎಸ್. ಧೋನಿಯನ್ನು ನಾನು ಎಂದಿಗೂ ಕ್ಷಮಿಸಲ್ಲ ; ಕ್ರಿಕೆಟರ್‌ ಯುವರಾಜ ಸಿಂಗ್ ತಂದೆ ಹೀಗೆ ಹೇಳಿದ್ಯಾಕೆ…?

ನವದೆಹಲಿ : ಭಾರತದ ಮಾಜಿ ಬ್ಯಾಟರ್ ಯುವರಾಜ ಸಿಂಗ್ ಅವರ ತಂದೆ ಯೋಗರಾಜ ಸಿಂಗ್ ಅವರು ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಜೀ ಸ್ವಿಚ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಯೋಗರಾಜ ಸಿಂಗ್ ಅವರು ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. … Continued

ವೀಡಿಯೊ..| ಪಾಕಿಸ್ತಾನದಲ್ಲಿ ಉದ್ಘಾಟನೆಯಾದ ದಿನವೇ ಬೃಹತ್ ಮಾಲ್ ಸಂಪೂರ್ಣ ಲೂಟಿ-ಧ್ವಂಸ : ಅರ್ಧತಾಸಿನಲ್ಲೇ ಎಲ್ಲ ವಸ್ತುಗಳು ಮಾಯ…!

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಡ್ರೀಮ್ ಬಜಾರ್‌ನ ಉದ್ಘಾಟನೆಯು ಅದ್ಧೂರಿಯಾಗಿ ನಡೆಯಬೇಕಿತ್ತು, ಆದರೆ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನದಲ್ಲಿ ಮಹತ್ವಾಕಾಂಕ್ಷೆಯೊಂದಿಗೆ ಉದ್ಘಾಟನೆಯಾಗಬೇಕಿದ್ದ ಡ್ರೀಮ್ ಬಜಾರ್‌ (Dream Bazaar) ಮಾಲ್ ಗೆ ಆಘಾತ ಎದುರಾಗಿದ್ದು, ಇಡೀ ಮಾಲ್ ಅನ್ನು ಪಾಕಿಸ್ತಾನಿಯರು ಅರ್ಧ ಗಂಟೆಗಳಲ್ಲಿ ಲೂಟಿ ಮಾಡಿದ್ದಾರೆ. ಎಲ್ಲ ವಸ್ತುಗಳಿಗೂ ರಿಯಾಯಿತಿ ಘೋಷಿಸಿ ಭರವಸೆಯೊಂದಿಗೆ ಪ್ರಾರಂಭವಾದ ಮಾಲ್‌ ಲೂಟಿಗೆ … Continued

ವೀಡಿಯೊ..| ಚಿರತೆಯನ್ನೇ ಬೇಟೆಯಾಡಿದ ನಾಯಿಗಳು…!

ಚಿರತೆ ನಾಯಿಯನ್ನು ಬೇಟೆ ಮಾಡುವುದನ್ನು ನೋಡಿರಬೇಕು. ಆದರೆ ನಾಯಿಗಳು ಚಿರತೆಯನ್ನು ಬೇಟೆಯಾಡುವುದನ್ನು ನೋಡುವುದು ಬಹಳ ಅಪರೂಪ. ಇದನ್ನು ನೋಡಿಲ್ಲದಿದ್ದರೆ ನಾಯಿಗಳ ಗುಂಪು ಚಿರತೆಯೊಂದನ್ನು ಬೇಟೆಯಾಡಿದ ವೀಡಿಯೊವೊಂದು ವೈರಲ್‌ ಆಗಿದೆ. ಈ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ ನಾಯಿಗಳ ಗುಂಪು ಚಿರತೆ ಮೇಲೆ ಎರಗಿ ಕಚ್ಚಿ ಎಳೆಯುತ್ತಿರುದನ್ನು ತೋರಿಸುತ್ತದೆ. ಚಿರತೆ ತನ್ನನ್ನು ತಾನು ಉಳಿಸಿಕೊಳ್ಳಲು ತನ್ನ ಶಕ್ತಿಮೀರಿ ಪ್ರಯತ್ನಿಸುತ್ತದೆ … Continued