ಆ ಹೆಣ್ಣು ಮಗಳು ಯಾರದ್ದೋ ಕುತಂತ್ರಕ್ಕೆ ಸಿಲುಕಿದ್ದಾಳೆ: ಎಚ್‌ಡಿಕೆ

ಬಸವ ಕಲ್ಯಾಣ: ಯುವತಿ ಯಾರದ್ದೋ ಕುತಂತ್ರಕ್ಕೆ ಸಿಲುಕಿ ಬಲವಂತವಾಗಿ ವಿಡಿಯೋ ಬಿಡುಗಡೆ ಮಾಡುತ್ತಿದ್ದಾಳೆ. ನೀವು ಯಾರದೋ ಬಲವಂತಕ್ಕೆ ಒಳಗಾಗಿ ಗುಪ್ತವಾಗಿ ವಿಡಿಯೋ ಮಾಡಿ ಹೇಳಿಕೆಗಳನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ಹೊರ ಬನ್ನಿ ಎಂದು ನಾನು ಆ ಹೆಣ್ಣು ಮಗಳಿಗೆ ಮನವಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಸವ ಕಲ್ಯಾಣದಲ್ಲಿ ಸಿಡಿ … Continued

ಇಂಥ ಹತ್ತು ಸಿಡಿ ಬಿಡುಗಡೆ ಮಾಡಿದರೂ ಎದುರಿಸಲು ಸಿದ್ಧ:ರಮೇಶ ಜಾರಕಿಹೊಳಿ

ಬೆಂಗಳೂರು: ಒಂದಲ್ಲ ಇನ್ನೂ ಇಂಥ ಹತ್ತು ಸಿಡಿ ಬಿಡುಗಡೆ ಮಾಡಿದರೂ ಎದುರಿಸಲು ಸಿದ್ಧ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಷಡ್ಯಂತ್ರದ ಆರೋಪದಿಂದ ಮುಕ್ತನಾಗಿ ಹೊರಗೆ ಬರುತ್ತೇನೆ ಎಂಬ ವಿಶ್ವಾಸವಿದೆ  ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಳಿಯೂ ಮಹತ್ವದ ಸಾಕ್ಷ್ಯಗಳಿವೆ. ಅದನ್ನು ಬಿಡುಗಡೆ ಮಾಡಿದರೆ ಎಲ್ಲರೂ ಶಾಕ್ … Continued

ಸಿಡಿ ಹಗರಣ: ಈಗ ಮತ್ತೊಂದು ಸಿಡಿ ಬಿಡುಗಡೆ ಮಾಡಿದ ಯುವತಿ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಯದ್ದು ಎನ್ನಲಾದ ಮತ್ತೊಂದು ವಿಡಿಯೋ ಹೊರಗೆ ಬಂದಿದೆ. ನನ್ನ ತಂದೆ-ತಾಯಿ ಸ್ವ ಇಚ್ಛೆಯಿಂದ ಪೊಲೀಸ್ ದೂರು ನೀಡಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ಅವರಿಗೆ ಗೊತ್ತಿದೆ. ಹಾಗಾಗಿ ಅವರು ಸ್ವಇಚ್ಛೆಯಿಂದ ದೂರು ನೀಡಲು ಸಾಧ್ಯವೇ ಇಲ್ಲ ಎಂದು ಅವಳಿ ಈ ವಿಡೊಯೋದಲ್ಲಿ ಹೇಳಿದ್ದಾಳೆ. … Continued

20 ವರ್ಷದ ಯುವತಿ ಹೊಟ್ಟೆಯಲ್ಲಿ 16 ಕೆಜಿ ತೂಕದ ಗಡ್ಡೆ…!

ಭೋಪಾಲ್: ಭೋಪಾಲ್‌ನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಭಾನುವಾರ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರ 20 ವರ್ಷದ ಮಹಿಳೆಯ ಹೊಟ್ಟೆಯಿಂದ 16 ಕಿಲೋಗ್ರಾಂ ಗೆಡ್ಡೆ ಹೊರ ತೆಗೆದಿದ್ದಾರೆ. ಆಸ್ಪತ್ರೆಯ ವ್ಯವಸ್ಥಾಪಕ ದೇವೇಂದ್ರ ಚಂದೋಲಿಯಾ ಅವರು, ಇದು ಅಂಡಾಶಯದ ಗೆಡ್ಡೆಯಾಗಿದ್ದು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಮಹಿಳೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. “ಎರಡು ದಿನಗಳ ಹಿಂದೆ, … Continued

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್, ಮ್ಯಾನ್ಮಾರ್‌ ಮಹಿಳೆಯರ ಮದುವೆಯಾಗುವವರಿಗೆ ಸೌದಿಯಲ್ಲಿ ಬಿಗಿ ನಿಯಮ: ವರದಿ

ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್ ಮತ್ತು ಮ್ಯಾನ್ಮಾರ್‌ ಮಹಿಳೆಯರನ್ನು ಮದುವೆಯಾಗುವುದನ್ನು ಸೌದಿ ಅರೇಬಿಯಾ ನಿಷೇಧಿಸಿದೆ ಎಂದು ಸೌದಿ ಮಾಧ್ಯಮದಲ್ಲಿ ವರದಿ ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ. ಅನಧಿಕೃತ ಅಂಕಿಅಂಶಗಳ ಪ್ರಕಾರ, ಈ ನಾಲ್ಕು ದೇಶಗಳಿಂದ ಸುಮಾರು 5,00,000 ಮಹಿಳೆಯರು ಪ್ರಸ್ತುತ ಸೌದಿಯಲ್ಲಿ ವಾಸಿಸುತ್ತಿದ್ದಾರೆ. ವಿದೇಶಿಯರನ್ನು ಮದುವೆಯಾಗಲು ಇಚ್ಛಿಸುವ ಸೌದಿ ಪುರುಷರು ಈಗ ಕಠಿಣ ನಿಯಮಗಳನ್ನು ಎದುರಿಸುತ್ತಿದ್ದಾರೆ … Continued

ಸಿಡಿ ಯುವತಿ ಮನೆಯಲ್ಲಿ ಸಿಕ್ಕ ಲಕ್ಷಾಂತರ ಹಣ ಎಲ್ಲಿಂದ ಬಂತು?: ಎಸ್‌ಐಟಿ ತನಿಖೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಯುವತಿಯ ಆರ್‌.ಟಿ ನಗರ ನಿವಾಸದಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ನಡೆಸಿದ್ದು, ಈ ವೇಳೆ ಕೆಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಯುವತಿಯ ಮನೆಯಲ್ಲಿ 23 ಲಕ್ಷ ರೂ. ನಗದು ಹಣ ಸಿಕ್ಕಿದೆ ಎನ್ನಲಾಗಿದ್ದು, ಕೆಲಸ ಕೊಡಿಸುವುದಾಗಿ ರಮೇಶ ಜಾರಕಿಹೊಳಿ ಮೋಸ ಮಾಡಿದ್ದಾರೆ … Continued

ಸಿಡಿ ಯುವತಿ ಮನೆ ಮೇಲೆ ಎಸ್ಐಟಿ ದಾಳಿ: 23 ಲಕ್ಷ ರೂ. ಪತ್ತೆ ?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ಆರ್​ಟಿ ನಗರದ ಮನೆ ಮೇಲೆ ಬುಧವಾರ ಎಸ್‌ಐಟಿ ತಂಡ ದಾಳಿ ಮಾಡಿ ರಾತ್ರಿ 10 ಗಂಟೆಯ ವರೆಗೂ ಮನೆ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ. ದಾಳಿ ವೇಳೆ ಯುವತಿ ಮನೆಯಲ್ಲಿ 23 ಲಕ್ಷ ರೂ. ಹಣ ಪತ್ತೆಯಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕಟ್ಟಡದ ಮಾಲೀಕರನ್ನು … Continued

ಹಲ್ಲೆ ಪ್ರಕರಣ: ಡೆಲಿವರಿ ಬಾಯ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಮಹಿಳೆ ನಾಪತ್ತೆ

ಬೆಂಗಳೂರು: ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಆರೋಪ ಮಾಡಿದ್ದ ಮಹಿಳೆ ಬೆಂಗಳೂರಿನಲ್ಲಿ ಇಲ್ಲ. ಆಹಾರ ಡೆಲಿವರಿ ವಿಳಂಬ ಪ್ರಶ್ನಿಸಿದ್ದ ಯುವತಿ ಹಿತೇಶಾ ಚಂದ್ರಾನಿ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದರು. ದೂರು ಹಿನ್ನೆಲೆಯಲ್ಲಿ ಪೊಲೀಸರು … Continued

ಸಿಡಿ ಪ್ರಕರಣ: ಯುವತಿ ಸಂಬಂಧಿಕರ ಮನೆಗೆ ನೊಟೀಸ್‌ ಅಂಟಿಸಿದ ಪೊಲೀಸರು

ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಸಂತ್ರಸ್ತೆಯ ಅಜ್ಜಿಮನೆ ವಿಜಯಪುರ  ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಇರುವುದನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ.  ಈ ಮನೆಗೆ ಬೆಂಗಳೂರು ಕಬ್ಬನ್‌ಪಾರ್ಕ್‌ ಪೊಲೀಸರು ನೊಟೀಸ್‌ ಅಂಟಿಸಿದ್ದಾರೆ. ಮನೆಗೆ ಬೀಗ ಹಾಕಿರುವುವದರಿಂದ ಮನೆಯ ಬಾಗಿಲಿಗೆ ನೊಟೀಸ್‌ ಅಂಟಿಸಲಾಗಿದೆ. ಠಾಣೆಯ ಇಬ್ಬರು ಅಧಿಕಾರಿಗಳು ನೊಟೀಸ್‌ ಅಂಟಿಸಿದ್ದು, ನೊಟೀಸ್‌ ಮುಟ್ಟಿದ … Continued

ಸಿಡಿ ಪ್ರಕರಣದ ಯುವತಿಗೆ ನೋಟಿಸ್ ಜಾರಿ ಮಾಡಿದ ಪೊಲೀಸರು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸಿಡಿ ಪ್ರಕರಣದ ಬಗ್ಗೆ ರಮೇಶ್ ಜಾರಕಿಹೊಳಿ ಶನಿವಾರ (ಮಾ.೧೩) ದೂರು ದಾಖಲಿಸಿದ ಬೆನ್ನಲ್ಲೇ ಯುವತಿ ವಿಡಿಯೋ ಬಿಡುಗಡೆ ಮಾಡಿ ಹೇಳಿಕೆ ನೀಡಿದ್ದಳು. ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವ … Continued