ಕೊಲೆ ಪ್ರಕರಣದಲ್ಲಿ ಬಿಎಸ್​​ಪಿ ಸಂಸದನಿಗೆ 4 ವರ್ಷ ಜೈಲು ಶಿಕ್ಷೆ; ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳ್ಳುವ ಭೀತಿ

ನವದೆಹಲಿ: ಉತ್ತರ ಪ್ರದೇಶದ ಜನಪ್ರತಿನಿಧಿಗಳ ನ್ಯಾಯಾಲಯವು ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿ ಅವರನ್ನು ಅಪರಾಧಿ ಎಂದು ಘೋಷಿಸಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳ ನಂತರ, ಅವರ ಸಹೋದರ, ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಕೂಡ ದೋಷಿ ಎಂದು ಸಾಬೀತಾಗಿದೆ. ಸಂಸದ ಅಫ್ಜಲ್ ಅನ್ಸಾರಿಗೂ ಅದೇ … Continued

ಕಾಂಗ್ರೆಸ್ ನನ್ನನ್ನು 91 ಬಾರಿ ನಿಂದಿಸಿದೆ, ಆದರೆ ನಾನು… : ಮೋದಿ ವಿಷದ ಹಾವಿದ್ದಂತೆ ಎಂಬ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

ಬೀದರ: ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ‘ವಿಷಪೂರಿತ ಹಾವು ಇದ್ದಂತೆ’ ಎಂದು ಗೇಲಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿರುಗೇಟು ನೀಡಿದ್ದಾರೆ. ಬೀದರಿನ ಹುಮನಾಬಾದ್‌ನಲ್ಲಿ ಶನಿವಾರ ಬೆಳಿಗ್ಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ತಮ್ಮ ವಿರುದ್ಧ ನೀಡಿದ್ದ ‘ವಿಷಪೂರಿತ ಹಾವು’ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ … Continued

ಫೆಮಾ ಉಲ್ಲಂಘನೆ ಆರೋಪ: ಬೈಜು ಕಚೇರಿಗಳ ಮೇಲೆ ಇ.ಡಿ. ದಾಳಿ, ಹಲವಾರು ದಾಖಲೆಗಳು ವಶಕ್ಕೆ

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ನಿಬಂಧನೆಗಳ ಅಡಿಯಲ್ಲಿ ರವೀಂದ್ರನ್ ಬೈಜು ಮತ್ತು ಅವರ ಕಂಪನಿ ‘ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕರ್ನಾಟಕದ ಬೆಂಗಳೂರಿನ ಮೂರು ನಿವೇಶನಗಳಲ್ಲಿ ಶೋಧ ನಡೆಸಿದೆ. ಕಂಪನಿಯು ಬೈಜುʼಸ್ ಹೆಸರಿನಲ್ಲಿ ಜನಪ್ರಿಯ ಆನ್‌ಲೈನ್ ಶಿಕ್ಷಣ ಪೋರ್ಟಲ್ ಅನ್ನು ನಡೆಸುತ್ತಿದೆ. … Continued

ಜನರತ್ತ ಕೈ ಬಿಸಿ ಕಾರು ಹತ್ತುವ ವೇಳೆ ಕುಸಿದ ಸಿದ್ದರಾಮಯ್ಯ: ತಕ್ಷಣ ವೈದ್ಯರಿಂದ ಉಪಚಾರ

ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಶ್ರೀನಿವಾಸ ಅವರ ಪರವಾಗಿ ಶನಿವಾರ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ಏರುವಾಗ ಕುಸಿದ ಘಟನೆ ನಡೆದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರಚಾರದ ಹೊಣೆ ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರು ಇಂದು,ಶನಿವಾರ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ … Continued

ರಾಜ್ಯ ವಿಧಾನಸಭೆ ಚುನಾವಣೆ: ಇಂದಿನಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಆರಂಭ

ಬೆಂಗಳೂರು: ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇಂದಿನಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಆರಂಭವಾಗಲಿದೆ. ಬ್ಯಾಲೆಟ್ ಪೇಪರ್ ವೋಟಿಂಗ್ ನಲ್ಲಿ 80 ವರ್ಷ ಮೇಲ್ಪಟ್ಟ ವೃದ್ಧರು, ವಿಕಲ ಚೇತನರಿಗೆ ಹಾಗೂ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿರುವ ಪೊಲೀಸ್, ಚುನಾವಣೆ ಸಿಬ್ಬಂದಿಗೆ ಇಂದಿನಿಂದ ಮತದಾನ ಮಾಡಲು ಅವಕಾಶ ನೀಡಲಾಗಿದ್ದು, ಇಂದಿನಿಂದ ಆರಂಭವಾಗಲಿಎ. ಹಾಗೂ ಮೇ 6ರ … Continued

ಮೇ 1ರಿಂದ ಮೊಬೈಲ್‌ ಬಳಕೆದಾರರಿಗೆ ತಪ್ಪಲಿದೆ ಕಿರಕಿರಿ; ನಕಲಿ ಕರೆ, ಎಸ್ಸೆಮ್ಮೆಸ್‌ ಹಾವಳಿಗೆ ಬೀಳಲಿದೆ ಬ್ರೇಕ್‌

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮೇ 1, 2023 ರಿಂದ ಗ್ರಾಹಕರಿಗೆ ನಕಲಿ ಕಾಲ್‌ಗಳು, ಪ್ರಚಾರದ ಕಾಲ್‌ಗಳು ಮತ್ತು ಎಸ್‌ಎಂಎಸ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುವುದಾಗಿ ಹೇಳಿದೆ. ಇಂತಹ ಕರೆಗಳು ಮತ್ತು ಎಸ್‌ಎಂಎಸ್‌ಗಳನ್ನು ತಡೆಯಲು ಟ್ರಾಯ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಫಿಲ್ಟರ್ ಅನ್ನು ಹೊಂದಿಸಲಿದೆ. ದಿನನಿತ್ಯದ ಅಪೇಕ್ಷಿಸದ ಸ್ಪ್ಯಾಮ್ ಕರೆಗಳು ಮತ್ತು ಎಸ್‌ಎಂಎಸ್‌ಗಳಿಂದ ಟೆಲಿಕಾಂ … Continued

ಎಲ್‌ಐಸಿ ಅಧ್ಯಕ್ಷರಾಗಿ ಸಿದ್ಧಾರ್ಥ ಮೊಹಂತಿ ನೇಮಕ

ನವದೆಹಲಿ:  ಕೇಂದ್ರ ಸರ್ಕಾರವು ಸಿದ್ಧಾರ್ಥ ಮೊಹಾಂತಿ ಅವರನ್ನು ಶುಕ್ರವಾರ ಎರಡು ವರ್ಷಗಳ ಅವಧಿಗೆ ಭಾರತೀಯ ಜೀವ ವಿಮಾ ನಿಗಮದ (LIFI.NS) ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಅವರು ಜೂನ್ 2025 ರವರೆಗೆ ಎಲ್ಐಸಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ(ಎಂಡಿ)ರಾಗಿರುತ್ತಾರೆ. ಎಲ್‌ಐಸಿಯ ನಾಲ್ವರು ವ್ಯವಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾದ ಮೊಹಂತಿ ಅವರನ್ನು ಈಗಾಗಲೇ ಮೂರು ತಿಂಗಳ ಅವಧಿಗೆ ಮಾರ್ಚ್‌ನಲ್ಲಿ ಅಧ್ಯಕ್ಷರನ್ನಾಗಿ … Continued

ಸುಡಾನ್ ಏರ್‌ಸ್ಟ್ರಿಪ್‌ನಲ್ಲಿ ಬೆಳಕಿಲ್ಲ : ವಿಮಾನ ಲ್ಯಾಂಡಿಂಗಿಗೆ ರಾತ್ರಿ ದೃಷ್ಟಿ ಗಾಗಲ್‌ ಬಳಸಿ 121 ಭಾರತೀಯರ ರಕ್ಷಣೆ ಮಾಡಿದ ಐಎಎಫ್‌ ಪೈಲಟ್‌ಗಳು..!

ನವದೆಹಲಿ: ಕಳೆದ ರಾತ್ರಿ ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿನ ಸಣ್ಣ ಏರ್‌ಸ್ಟ್ರಿಪ್‌ನಿಂದ 121 ಸಿಬ್ಬಂದಿಯನ್ನು ರಕ್ಷಿಸಲು ಭಾರತೀಯ ವಾಯುಪಡೆಯು ಕತ್ತಲೆಯಲ್ಲಿ ಯಾವುದೇ ಸೌಲಭ್ಯವಿಲ್ಲದ ರನ್‌ವೇಗೆ ಇಳಿಯುವ ಮೂಲಕ ಅತ್ಯಂತ ರಿಸ್ಕ್‌ ಇರುವ ಧೈರ್ಯಶಾಲಿ ರಾತ್ರಿ ಕಾರ್ಯಾಚರಣೆ ನಡೆಸಿತು. ಭಾರತೀಯ ವಾಯುಪಡೆಯು ತನ್ನ C-130J ಹರ್ಕ್ಯುಲಸ್ ಸಾರಿಗೆ ವಿಮಾನವನ್ನು ಯಾವುದೇ ಇಂಧನ ಮತ್ತು ಲ್ಯಾಂಡಿಂಗ್ ಲೈಟ್‌ಗಳಿಲ್ಲದೆ ಹದಗೆಟ್ಟ ಸ್ಥಿತಿಯಲ್ಲಿದ್ದ … Continued

ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಕುಸ್ತಿ ಸಂಸ್ಥೆಯ ಮುಖ್ಯಸ್ಥರ ವಿರುದ್ಧ 2 ಪ್ರಕರಣಗಳು ದಾಖಲು

ನವದೆಹಲಿ: ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ ನಂತರ ದೆಹಲಿ ಪೊಲೀಸರು ಅವರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಕುಸ್ತಿಪಟುಗಳ ಪ್ರತಿಭಟನೆಯ ನಡುವೆ, … Continued

ದ್ವೇಷ ಭಾಷಣಗಳ ವಿರುದ್ಧ ದೂರು ನೀಡದಿದ್ದರೂ ಪ್ರಕರಣ ದಾಖಲಿಸಿ; ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ನವದೆಹಲಿ: ದ್ವೇಷ ಭಾಷಣ ಮಾಡುವವರ ವಿರುದ್ಧ ಯಾವುದೇ ದೂರು ಸಲ್ಲಿಕೆಯಾಗದಿದ್ದರೂ ಪ್ರಕರಣ ದಾಖಲಿಸಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ. ದ್ವೇಷ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ, ದೆಹಲಿ ಹಾಗೂ ಉತ್ತರಾಖಂಡ ರಾಜ್ಯಗಳಿಗೆ ಕಳೆದ ವರ್ಷ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿ ಆದೇಶಿಸಿತ್ತು. ಈಗ, … Continued