ಶೃಂಗೇರಿ ಮಠಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ : ಅಪ್ಪನೊಂದಿಗೆ ಬಂದಿದ್ದೆ ಎಂದು ನೆನಪಿಸಿಕೊಂಡ ಇಂದಿರಾ ಗಾಂಧಿ ಮೊಮ್ಮಗಳು

ಚಿಕ್ಕಮಗಳೂರು: ಇಂದಿರಾಗಾಂಧಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಶೃಂಗೇರಿ ಮಠಕ್ಕೆ ಬುಧವಾರ ಭೇಟಿ ನೀಡಿದ್ದಾರೆ. ಮಠಕ್ಕೆ ಭೇಟಿ ನೀಡಿ ಶಾರದಾಂಬೆ ಹಾಗೂ ಗುರುಗಳ ದರ್ಶನ ಪಡೆದಿರುವ ಅವರು ನರಸಿಂಹವನದಲ್ಲಿರುವ ಕಿರಿಯ ಶ್ರೀಗಳಾದ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಶ್ರೀಗಳು ಪ್ರಿಯಾಂಕಾ ಅವರಿಗೆ ಶಾರದಾಂಬೆಯ ಮೂರ್ತಿ ನೀಡಿ ಶುಭ ಹಾರೈಸಿದ್ದಾರೆ. ಶ್ರೀಗಳಿಂದ ಆಶೀರ್ವಾದ … Continued

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿನಿಂದ ಮತ್ತೊಂದು ಮೈಲಿಗಲ್ಲು..: ಸೌರವ್ಯೂಹದ ಹೊರಗೆ ಹೊಸ ಗ್ರಹ ಕಂಡುಹಿಡಿದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌….!

ಕೃತಕ ಬುದ್ಧಿಮತ್ತೆಯ ವಿಚಾರದಲ್ಲಿ ಪ್ರಮುಖ ಉತ್ತೇಜನಕಾರಿಯಾಗಿ, ಖಗೋಳಶಾಸ್ತ್ರಜ್ಞರು ಹೊಸ ಗ್ರಹವನ್ನು ಕಂಡುಹಿಡಿಯಲುಕೃತಕ ಬುದ್ಧಿಮತ್ತೆಯನ್ನು ಬಳಸಿ ಯಶಸ್ವಿಯಾಗಿದ್ದಾರೆ. ಜಾರ್ಜಿಯಾ ವಿಶ್ವವಿದ್ಯಾಲಯದ ಸಂಶೋಧಕರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಸೌರವ್ಯೂಹದ ಹೊರಗೆ ಈ ಹಿಂದೆ ತಿಳಿದಿಲ್ಲದ ಗ್ರಹದ ಇರುವುದನ್ನು ದೃಢಪಡಿಸಿದ್ದಾರೆ. ಇದು ಖಗೋಳಶಾಸ್ತ್ರ ಮತ್ತು ಗ್ರಹ-ಹುಡುಕುವ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence)ಬಳಸಿ ಪತ್ತೆ ಮಾಡುವ ಆರಂಭಿಕ … Continued

ಶಾಕಿಂಗ್‌ ವೀಡಿಯೊ : ರೈಡರ್ ತನ್ನನ್ನು ಹಿಡಿದುಕೊಳ್ಳಲು ಯತ್ನಿಸಿದ ನಂತರ ಚಲಿಸುತ್ತಿದ್ದ ರಾಪಿಡೋ ಬೈಕ್‌ನಿಂದ ಜಿಗಿದ ಬೆಂಗಳೂರಿನ ಮಹಿಳೆ…!

ಬೆಂಗಳೂರು: ಚಾಲಕನಿಂದ ರಕ್ಷಿಸಿಕೊಳ್ಳಲು 30 ವರ್ಷದ ಮಹಿಳೆಯೊಬ್ಬರು ಚಲಿಸುತ್ತಿದ್ದ ರಾಪಿಡೋ ಬೈಕ್‌ನಿಂದ ಜಿಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಾಲಕ ತನ್ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಫೋನ್ ಕಸಿದುಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಘಟನೆ ಏಪ್ರಿಲ್ 21 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ವರದಿಯ ಪ್ರಕಾರ, ಮಹಿಳೆ … Continued

ಛತ್ತೀಸ್‌ಗಢದ ದಾಂತೇವಾಡದಲ್ಲಿ ಮಾವೋವಾದಿಗಳಿಂದ ವಾಹನ ಸ್ಫೋಟ : 10 ಪೊಲೀಸರು, ಚಾಲಕ ಸಾವು

ರಾಯ್ಪುರ: ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನದಿಂದ (ಐಇಡಿ) ವಾಹನವನ್ನು ಸ್ಫೋಟಿಸಿದ ಪರಿಣಾಮ ಹತ್ತು ಪೊಲೀಸರು ಮತ್ತು ಚಾಲಕ ಬುಧವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಚರ ಮಾಹಿತಿಯ ನಂತರ ಪ್ರಾರಂಭವಾದ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಂತರ ಪೊಲೀಸರು ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಂತೇವಾಡದ ಅರ್ನಾಪುರ ಪ್ರದೇಶದಲ್ಲಿ ನಕ್ಸಲೀಯರು ಇದ್ದಾರೆ … Continued

ಆಪರೇಶನ್‌ ಕಾವೇರಿ : ಯುದ್ಧಪೀಡಿತ ಸುಡಾನ್‌ನಿಂದ ಈವರೆಗೆ 530 ಭಾರತೀಯರ ಸ್ಥಳಾಂತರ

ನವದೆಹಲಿ: ಆಂತರಿಕ ಯುದ್ಧ ಪೀಡಿತ ಸುಡಾನ್‌ನಿಂದ ಈವರೆಗೆ 530 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿ’ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಹಾಗೂ ಇದಕ್ಕಾಗಿ ನೌಕಾ ಪಡೆಯ ಐಎನ್‌ಎಸ್‌ ಸುಮೇಧಾ ಹಡಗಿ ಹಾಗೂ ವಾಯುಸೇನಯ ವಿಮಾನಗಳನ್ನು ನಿಯೋಜಿಸಲಾಗಿತ್ತು. ಈಗ ಸುಡಾನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಕರೆತರಲು … Continued

15000 ಪದವೀಧರ ಶಾಲಾ ಶಿಕ್ಷಕರ ನೇಮಕಾತಿ : ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ

ಬೆಂಗಳೂರು: 15,000 ಪದವೀಧರ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ನಂತರ 1:1 ಪ್ರಕಾರ ಈಗಾಗಲೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈಗ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಪದವೀಧರ ಪ್ರಾಥಮಿಕ ಶಿಕ್ಷಕ-2022ರ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಮೂಲ ದಾಖಲೆಗಳ ನೈಜತ್ವ ಪರಿಶೀಲನೆ ಕಾರ್ಯಕ್ಕೆ ಕ್ರಮ ಕೈಗೊಳ್ಳುವ ಕುರಿತು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. … Continued

ದೇಶದಲ್ಲಿ ಹೊಸದಾಗಿ 9,629 ಸೋಂಕು ಪತ್ತೆ, 29 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 9,629 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ 62,293ಕ್ಕೆ ತಲುಪಿದೆ. ಕೇರಳದಲ್ಲಿ 9, ದೆಹಲಿಯಲ್ಲಿ 6, ಮಹಾರಾಷ್ಟ್ರ … Continued

ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಭಯಕ್ಕೆ ಕಾರಣವಾಗುತ್ತದೆ”: ಐಎಎಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅಪರಾಧಿ-ಗ್ಯಾಂಗ್‌ಸ್ಟರ್‌ ಬಿಡುಗಡೆಗೆ ಐಎಎಸ್ ಸಂಘ

ನವದೆಹಲಿ: ದಲಿತ ಐಎಎಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್‌ಸ್ಟರ್‌-ರಾಜಕಾರಣಿ ಆನಂದ್‌ ಮೋಹನ್‌ ಸಿಂಗ್‌ ಬಿಡುಗಡೆಗೆ ಅನುಕೂಲವಾಗಲಿರುವ ಬಿಹಾರದ ನಿಯಮಗಳ ಬದಲಾವಣೆಯ ವಿರುದ್ಧ ದೇಶದ ಉನ್ನತಾಧಿಕಾರಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. “ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಧಾರವು ನಿರ್ಭಯಕ್ಕೆ ಕಾರಣವಾಗುತ್ತದೆ, ಸಾರ್ವಜನಿಕ ಸೇವಕರ ನೈತಿಕತೆ ಕುಗ್ಗಿಸುತ್ತದೆ, ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯದ ಆಡಳಿತವನ್ನು … Continued

ಪಂಜಾಬ್ ಮಾಜಿ ಸಿಎಂ-ಅಕಾಲಿದಳದ ಮುಖ್ಯಸ್ಥ ಪ್ರಕಾಶ ಸಿಂಗ್ ಬಾದಲ್ ನಿಧನ

ನವದೆಹಲಿ: ಪಂಜಾಬಿನ ಮಾಜಿ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಮಾಜಿ ಮುಖ್ಯಸ್ಥ ಪ್ರಕಾಶ ಸಿಂಗ್ ಬಾದಲ್ (95) ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾತ್ರಿ 8 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದರು. ವರದಿಗಳ ಪ್ರಕಾರ, ಬಾದಲ್ ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಉಸಿರಾಟದ ತೊಂದರೆಯಿಂದ … Continued