ರಾಹುಲ್ ಗಾಂಧಿ ‘ಭಾರತ ಜೋಡೋ ನ್ಯಾಯ ಯಾತ್ರೆ’ ವಿರುದ್ಧ ಎಫ್‌ಐಆರ್ ದಾಖಲು

ಗುವಾಹತಿ : ಗುರುವಾರ ಜೋರ್ಹತ್ ಪಟ್ಟಣದಲ್ಲಿ ಅನುಮತಿಸಲಾದ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ತೆರಳಿದ ಆರೋಪದ ಮೇಲೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಅದರ ಮುಖ್ಯ ಸಂಘಟಕ ಕೆ.ಬಿ. ಬೈಜು ಅವರ ನೇತೃತ್ವದ ‘ಭಾರತ ಜೋಡೋ ನ್ಯಾಯ ಯಾತ್ರೆ’ ವಿರುದ್ಧ ಅಸ್ಸಾಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಾಂಗ್ರೆಸ್‌ನ ಭಾರತ ಜೋಡೋ ನ್ಯಾಯ ಯಾತ್ರೆ ಗುರುವಾರ … Continued

ಕಲ್ಲಡ್ಕ ಪ್ರಭಾಕರ ಭಟ್‌ಗೆ ಜಾಮೀನು ಕೊಡಿಸಿದ ವಕೀಲ ಕಾಂಗ್ರೆಸ್‌ನಿಂದ ಉಚ್ಚಾಟನೆ

ಮಂಡ್ಯ: ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕ‌ರ ಭಟ್‌ ಅವರಿಗೆ ನಿರೀಕ್ಷಣಾ ಜಾಮೀನು ಕೊಡಿಸಲು ವಾದಿಸಿದ್ದ ವಕೀಲರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟಿಸಲಾಗಿದೆ. ಶ್ರೀರಂಗಪಟ್ಟಣ ತಾಲೂಕು‌ ಕಾಂಗ್ರೆಸ್‌ ಕಾನೂನು ಘಟಕದ ಅಧ್ಯಕ್ಷ ಡಿ.ಚಂದ್ರೇಗೌಡ ಅವರನ್ನು ಪಕ್ಷದ ಕಾನೂನು ಘಟಕದ ಜಿಲ್ಲಾಧ್ಯಕ್ಷ ಗೌರಿಶಂಕರ ಅವರು ಪಕ್ಷದಿಂದ ವಜಾಗೊಳಿಸಿ ಆದೇಶಿಸಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ಪಕ್ಷದ ತಾಲೂಕು ಘಟಕದ ಕಾನೂನು ಮತ್ತು ಮಾನವ … Continued

ಆನ್‌ಲೈನ್ ಗೇಮ್‌ ಪಾಸ್‌ವರ್ಡ್ ಕೊಟ್ಟಿಲ್ಲವೆಂದು 10ನೇ ತರಗತಿ ವಿದ್ಯಾರ್ಥಿಯನ್ನು ಕೊಂದು ಆತನ ದೇಹ ಸುಟ್ಟುಹಾಕಿದ ಸ್ನೇಹಿತರು…!

ಕೋಲ್ಕತ್ತಾ: ಆನ್‌ಲೈನ್ ಮೊಬೈಲ್ ಗೇಮ್‌ನ ಪಾಸ್‌ವರ್ಡ್ ಹಂಚಿಕೊಳ್ಳುವ ವಿವಾದವು ಹದಿಹರೆಯದ ಹುಡುಗನನ್ನು ಆತನ ನಾಲ್ವರು ಸ್ನೇಹಿತರೇ ಕೊಲೆ ಮಾಡುವುದಕ್ಕೆ ಕಾರಣವಾದ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 8 ರಿಂದ ನಾಪತ್ತೆಯಾಗಿದ್ದ 18 ವರ್ಷದ ಹುಡುಗ ಪಾಪೈ ದಾಸ್ ಶವ ಫರಕ್ಕಾದ ಫೀಡರ್ ಕಾಲುವೆಯ ನಿಶೀಂದ್ರ ಘಾಟ್ … Continued

ʼಅನ್ನಪೂರಣಿ’ ಚಲನಚಿತ್ರ ವಿವಾದ ; ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಕ್ಕೆ ನಟಿ ನಯನತಾರಾ ಕ್ಷಮೆಯಾಚನೆ

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ತಮ್ಮ ‘ಅನ್ನಪೂರಣಿ’ ಚಿತ್ರದ ವಿವಾದಕ್ಕೆ ಕ್ಷಮೆಯಾಚಿಸಿದ್ದಾರೆ, ನಾನು ಮತ್ತು ತನ್ನ ತಂಡವು ಯಾರ ಭಾವನೆಗಳಿಗೂ ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ. ನಯನತಾರಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ‘ಜೈ ಶ್ರೀ ರಾಮ’ ಮತ್ತು ಹಿಂದೂ ಧಾರ್ಮಿಕ ಚಿಹ್ನೆ ‘ಓಂ’ ಅನ್ನು ಮಾಸ್ಟ್‌ಹೆಡ್‌ನಲ್ಲಿ ಬರೆದಿದ್ದಾರೆ. ತಮ್ಮ … Continued

ಕೋಚಿಂಗ್ ಸೆಂಟರ್‌ಗಳು 16 ವರ್ಷದೊಳಗಿನ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವಂತಿಲ್ಲ : ಕೇಂದ್ರ ಸರ್ಕಾರದಿಂದ ನೂತನ ಮಾರ್ಗಸೂಚಿ

ನವದೆಹಲಿ : ಕೋಚಿಂಗ್ ಸೆಂಟರ್‌ಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ದಾಖಲಿಸುವಂತಿಲ್ಲ ಮತ್ತು ಮಾಧ್ಯಮಿಕ ಶಾಲಾ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವೇ ಪ್ರವೇಶ ಪ್ರಕ್ರಿಯೆಯನ್ನು ಅನುಮತಿಸಲಾಗುವುದು ಎಂದು ಶಿಕ್ಷಣ ಸಚಿವಾಲಯವು ಪ್ರಕಟಿಸಿದ ಹೊಸ ಮಾರ್ಗಸೂಚಿಗಳು ಹೇಳಿವೆ. ಕೋಚಿಂಗ್ ಸಂಸ್ಥೆಗಳಿಗೆ ದಾರಿತಪ್ಪಿಸುವ ಭರವಸೆಗಳನ್ನು ನೀಡುವಂತಿಲ್ಲ ಮತ್ತು ರ್ಯಾಂಕ್‌ ಅಥವಾ ಉತ್ತಮ ಅಂಕಗಳ ಗ್ಯಾರಂಟಿ ನೀಡುವಂತಿಲ್ಲ ಎಂಬ … Continued

ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯೊಳಗಿನ ರಾಮಲಲ್ಲಾ ವಿಗ್ರಹದ ಮೊದಲನೇ ಫೋಟೋ

ಅಯೋಧ್ಯೆ : ಜನವರಿ 22 ರಂದು ಮಹಾ ಪ್ರತಿಷ್ಠಾಪನೆ ಸಮಾರಂಭದ ದಿನಗಳ ಮೊದಲು ಅಯೋಧ್ಯೆಯ ರಾಮ ಮಂದಿರದೊಳಗೆ ಗುರುವಾರ ಮಧ್ಯಾಹ್ನ ನೂತನ ರಾಮನ ವಿಗ್ರಹವನ್ನು ಇರಿಸಲಾಯಿತು. ಕಪ್ಪು ಕಲ್ಲಿನಲ್ಲಿ ಕೆತ್ತಲಾದ ವಿಗ್ರಹದ ಮೊದಲ ಫೋಟೋ ಬಿಡುಗಡೆಯಾಗಿದೆ. ಇದು ನಿಂತಿರುವ ಭಂಗಿಯಲ್ಲಿ ಐದು ವರ್ಷ ವಯಸ್ಸಿನ ಭಗವಾನ್‌ ರಾಮನನ್ನು ಚಿತ್ರಿಸುತ್ತದೆ. 51 ಇಂಚಿನ ವಿಗ್ರಹವನ್ನು ಮೈಸೂರು ಮೂಲದ … Continued

ರಾಮ ಮಂದಿರ ಪ್ರಾಣ ಪ್ರತಿಷ್ಠೆ : 11 ದಿನಗಳ ಕಠಿಣ ನಿಯಮ ಪಾಲಿಸುತ್ತಿರುವ ಪ್ರಧಾನಿ ಮೋದಿ, ಬರೀ ನೆಲದ ಮೇಲೆ ಮಲಗುತ್ತಾರೆ, ಎಳೆ ನೀರು ಮಾತ್ರ ಸೇವಿಸ್ತಾರೆ….

ನವದೆಹಲಿ: ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ನಿಯಮಗಳು ಮತ್ತು ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಪ್ರಧಾನಿ ಮೋದಿ ವ್ರತಾಚರಣೆಗಳಿಗಾಗಿ “ಯಮ-ನಿಯಮಗಳನ್ನು” ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಜನವರಿ 12 ರಂದು ಮೋದಿ ವ್ರತಾಚರಣೆ ಆರಂಭಿಸಿದ್ದು, ಪ್ರಾಣ ಪ್ರತಿಷ್ಠೆಯ “ಐತಿಹಾಸಿಕ” … Continued

ವಡೋದರ ಹರಣಿ ಸರೋವರದಲ್ಲಿ ದೋಣಿ ಮುಳುಗಿ 14 ಮಕ್ಕಳು, ಇಬ್ಬರು ಶಿಕ್ಷಕರು ಸಾವು

ವಡೋದರ : ಗುಜರಾತಿನ ವಡೋದರದ ಹರಣಿ ಸರೋವರದಲ್ಲಿ ಗುರುವಾರ ದೋಣಿ ಮುಳುಗಿ 14 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ ಕನಿಷ್ಠ 16 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಘಟನೆ ನಡೆದಾಗ ದೋಣಿಯಲ್ಲಿ 23 ಮಕ್ಕಳು ಮತ್ತು ನಾಲ್ವರು ಶಿಕ್ಷಕರು ಇದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ರಕ್ಷಣಾ ತಂಡವು ಕೆರೆಯಿಂದ ಐದು ಮಕ್ಕಳನ್ನು … Continued

ಫೆ.16ಕ್ಕೆ ರಾಜ್ಯ ಬಜೆಟ್ ಮಂಡನೆ

ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನ ಫೆಬ್ರವರಿ 12ರಿಂದ ಆರಂಭವಾಗಲಿದ್ದು, ಫೆಬ್ರವರಿ 23ರವರೆಗೆ ನಡೆಯಲಿದೆ. ಫೆಬ್ರವರಿ 16ರಂದು ರಾಜ್ಯ ಬಜೆಟ್​ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಮಂಡಲ ಅಧಿವೇಶನದ ಮೊದಲ ದಿನ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಈ ಕುರಿತು ಗುರುವಾರ ನಡೆದ ಸಚಿವ ಸಂಪುಟಲ್ಲಿ ಚರ್ಚೆ ಮಾಡಿ ತೀರ್ಮಾನಿಸಲಾಗಿದೆ. ಹಣಕಾಸು ಖಾತೆಯನ್ನೂ ಹೊಂದಿರುವ … Continued

ಕರ್ನಾಟಕದ ‌ಸಾಂಸ್ಕೃತಿಕ ನಾಯಕರಾಗಿ ಬಸವಣ್ಣ ಹೆಸರು ಘೋಷಣೆ : ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಮುಖ್ಯಮಂತ್ರಿ  ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಬಸವಣ್ಣನವರ ಹೆಸರು ಘೋಷಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಜಾತಿ ರಹಿತ ಸಮಾಜ ನಿರ್ಮಾಣದ ಕನಸು‌ ಕಂಡವರು ಬಸವಣ್ಣ. ಸಮಾಜದಲ್ಲಿ ಸಾಮರಸ್ಯ ತರಲು ಅವರ ತತ್ವಗಳು … Continued