ಉಡುಪಿ: ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ ಪುತ್ತಿಗೆ ಶ್ರೀಗಳು

ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಚತುರ್ಥ ಪರ್ಯಾಯ ಆರಂಭಿಸಿದ್ದಾರೆ. ಪರ್ಯಾಯ ಪೂಜಾಧಿಕಾರ ಹಸ್ತಾಂತರ ಮಾಡಬೇಕಿದ್ದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರ ಅನುಪಸ್ಥಿತಿಯಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ಸರ್ವಜ್ಞ ಪೀಠಾರೋಹಣದ ವಿಧಿ ವಿಧಾನಗಳನ್ನು ನೆರವೇರಿಸಿದರು. ಪರ್ಯಾಯ ಮೆರವಣಿಗೆಯ … Continued

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆ : ಜ.22ರಂದು ದೇಶಾದ್ಯಂತ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ನವದೆಹಲಿ: ಜನವರಿ 22 ರಂದು ನಿಗದಿಯಾಗಿರುವ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಆ ದಿನ ಕೇಂದ್ರ ಸರ್ಕಾರ ‘ಅರ್ಧ ದಿನ’ ರಜೆ ಘೋಷಿಸಿದೆ. ” ನೌಕರರು ಆಚರಣೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಲು, ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ … Continued

ಅಯೋಧ್ಯೆ ರಾಮ ಮಂದಿರ ಕುರಿತ ಆರು ಅಂಚೆಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ಅಯೋಧ್ಯೆ : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಜನವರಿ 18) ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ವಿಶ್ವದಾದ್ಯಂತ ವಿವಿಧ ದೇಶಗಳು ಬಿಡುಗಡೆ ಮಾಡಿರುವ ಭಗವಾನ್ ರಾಮನಿಗೆ ಸಮರ್ಪಿತ ಅಂಚೆಚೀಟಿಗಳ ಪುಸ್ತಕವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಬಿಡುಗಡೆ ಮಾಡಿದರು. ಅಂಚೆಚೀಟಿಗಳ ವಿನ್ಯಾಸದ ಅಂಶಗಳಲ್ಲಿ ರಾಮ ಮಂದಿರ, … Continued

ಯಾವ ಕ್ಷಣದಲ್ಲೂ ನಿಗಮ‌ ಮಂಡಳಿ ನೇಮಕಾತಿ ಪಟ್ಟಿ ಬಿಡುಗಡೆಯಾಗಬಹುದು : 39 ಕಾರ್ಯಕರ್ತರಿಗೆ, 36 ಶಾಸಕರಿಗೆ ಅವಕಾಶ ; ಡಿಸಿಎಂ ಶಿವಕುಮಾರ

ಬೆಂಗಳೂರು: ನಿಗಮ ಮಂಡಳಿ ನೇಮಕಾತಿ ಪಟ್ಟಿ ಈಗಾಗಲೇ ಅಂತಿಮಗೊಂಡಿದ್ದು, ಯಾವುದೇ ಕ್ಷಣದಲ್ಲಿ ಪ್ರಕಟವಾಗಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ವಿಧಾನಸೌಧದ ಬಳಿ ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, 39 ಮಂದಿ ಕಾರ್ಯಕರ್ತರಿಗೆ ಹಾಗೂ 36 ಶಾಸಕರನ್ನು ಮೊದಲ ಪಟ್ಟಿಯಲ್ಲಿ ನೇಮಕಾತಿ ಮಾಡಲಾಗುತ್ತದೆ. ಪಟ್ಟಿ ಯಾವುದೇ ಕ್ಷಣದಲ್ಲಾದರೂ ಪಟ್ಟಿ ಬಿಡುಗಡೆ ಆಗಬಹುದು ಎಂದರು. ಕಾರ್ಯಕರ್ತರು … Continued

ಗೋವಾದ ಸರ್ವಿಸ್ ಅಪಾರ್ಟಮೆಂಟ್ ನಲ್ಲಿ ಮಗುವಿನ ಮೃತದೇಹದ ಜೊತೆ 19 ಗಂಟೆ ಕಳೆದಿದ್ದ ಸಿಇಒ ಸುಚನಾ ಸೇಠ್‌

ಪಣಜಿ: ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪಿ, ಬೆಂಗಳೂರಿನ ಸ್ಟಾರ್ಟ್‌ ಕಂಪನಿಯ ಸಿಇಒ ಸುಚನಾ ಸೇಠ್ ಘಟನೆ ನಡೆಯುವ ಮೂರು ದಿನಗಳ ಮೊದಲು ಗೋವಾಕ್ಕೆ ತೆರಳಿದ್ದಳು. ಪೊಲೀಸ್ ಮೂಲಗಳ ಪ್ರಕಾರ, ಸುಚನಾ ಸೇಠ್ ದಕ್ಷಿಣ ಗೋವಾದಲ್ಲಿ – ಡಿಸೆಂಬರ್ 31 ರಿಂದ ಜನವರಿ 4ರ ವರೆಗೆ ಸರ್ವೀಸ್ ಅಪಾರ್ಟ್ಮೆಂಟ್‌ನಲ್ಲಿ ಐದು … Continued

ಅಯೋಧ್ಯೆ: ಶ್ರೀರಾಮಲಲ್ಲಾ ವಿಗ್ರಹ ಗರ್ಭಗುಡಿಯೊಳಗೆ ಪ್ರವೇಶ

ಅಯೋಧ್ಯಾ: ಜನವರಿ 22 ರಂದು ನಡೆಯುವ ರಾಮ ಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮಗಳು ನಡೆಯುತ್ತಿವೆ, ಬುಧವಾರ ಸಾಯಂಕಾಲ 51 ಇಂಚು ಎತ್ತರದ ರಾಮಲಲ್ಲಾನ ಹೊಸ ವಿಗ್ರಹವನ್ನು ರಾಮಮಂದಿರ ಆವರಣಕ್ಕೆ ತರಲಾಯಿತು. ಮೈಸೂರು ಮೂಲದ ಶಿಲ್ಪಿ ಅರುಣ ಯೋಗಿರಾಜ ಕೆತ್ತಿರುವ ನೂತನ ವಿಗ್ರಹವನ್ನು ಗುರುವಾರ ದೇವಾಲಯದ ಗರ್ಭಗೃಹದಲ್ಲಿ ಇರಿಸಲಾಗುವುದು ಎಂದು ಶ್ರೀ ರಾಮಮಂದಿರ ನಿರ್ಮಾಣ ಸಮಿತಿ … Continued

ಇರಾನ್ ವಿರುದ್ಧ ಪಾಕಿಸ್ತಾನದ ಪ್ರತೀಕಾರದ ದಾಳಿಯಲ್ಲಿ 4 ಮಕ್ಕಳು, 3 ಮಹಿಳೆಯರು ಸಾವು : ವರದಿ

ಪಾಕಿಸ್ತಾನದ ಭೂಪ್ರದೇಶದಲ್ಲಿರುವ ಬಲೂಚಿ ಭಯೋತ್ಪಾದಕ ಗುಂಪಿನ ಜೈಶ್‌ ಅಲ್‌-ಅದ್ಲ್‌ನ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿದ್ದಕ್ಕಾಗಿ ಇರಾನಿಗೆ “ಗಂಭೀರ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ ಪಾಕಿಸ್ತಾನವು ಇರಾನ್‌ನಲ್ಲಿನ “ಭಯೋತ್ಪಾದಕರ ಅಡಗುತಾಣಗಳ” ಮೇಲೆ ಗುರುವಾರ ಪ್ರತಿ ದಾಳಿ ನಡೆಸಿದೆ. “ಮಾರ್ಗ್ ಬಾರ್ ಸರ್ಮಾಚಾರ್” ಎಂಬ ಗುಪ್ತಚರ-ಆಧಾರಿತ ಕಾರ್ಯಾಚರಣೆಯಲ್ಲಿ “ಹಲವಾರು ಭಯೋತ್ಪಾದಕರು” ಕೊಲ್ಲಲ್ಪಟ್ಟರು ಎಂದು … Continued

ವಿಮಾನ ನಿಲ್ದಾಣದ ಟಾರ್‌ ಮೇಲೆ ಕುಳಿತು ಪ್ರಯಾಣಿಕರಿಂದ ಆಹಾರ ಸೇವನೆ : ಇಂಡಿಗೋಗೆ ₹ 1.20 ಕೋಟಿ, ಮುಂಬೈ ವಿಮಾನ ನಿಲ್ದಾಣಕ್ಕೆ ₹ 90 ಲಕ್ಷ ದಂಡ

ನವದೆಹಲಿ: ಮುಂಬೈ ವಿಮಾನ ನಿಲ್ದಾಣದ ಟಾರ್‌ಮ್ಯಾಕ್‌ನಲ್ಲಿ ಪ್ರಯಾಣಿಕರು ಆಹಾರ ಸೇವಿಸುವ ವೈರಲ್ ವೀಡಿಯೊಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಮತ್ತು ಮುಂಬೈ ವಿಮಾನ ನಿಲ್ದಾಣದ ಮೇಲೆ ಚಾಟಿ ಬೀಸಿದೆ ಮತ್ತು ಅವರಿಗೆ ಭಾರಿ ದಂಡವನ್ನು ವಿಧಿಸಿದೆ. ಮುಂಬೈ ವಿಮಾನ ನಿಲ್ದಾಣಕ್ಕೆ ₹ 90 ಲಕ್ಷ ದಂಡ ವಿಧಿಸಲಾಗಿದ್ದರೆ, ಇಂಡಿಗೋಕ್ಕೆ ₹ 1.20 ಕೋಟಿ ದಂಡ … Continued

ಅಯೋಧ್ಯಾ ರಾಮ ಮಂದಿರ : ಜನವರಿ 22 ರಂದು ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮಕ್ಕೆ ತಡೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ

ಪ್ರಯಾಗರಾಜ್‌ : ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22 ರಂದು ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಿಷೇಧಿಸುವಂತೆ ಕೋರಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ಭೋಲಾ ದಾಸ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. … Continued

ರಾಜ್ಯದ 2 ಮಹಿಳಾ ಐಎಎಸ್ ಅಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗದ ವಿಶೇಷ ಪ್ರಶಸ್ತಿ ಘೋಷಣೆ

ಬೆಂಗಳೂರು : ಕೇಂದ್ರ ಚುನಾವಣಾ ಆಯೋಗವು ನೀಡುವ ವಿಶೇಷ ಪ್ರಶಸ್ತಿಗೆ ಕರ್ನಾಟಕದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಸಾಮಾನ್ಯ ವರ್ಗದಡಿಯಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರಿಗೆ ಮತ್ತು ಅತ್ಯುತ್ತಮ ಕಾರ್ಯನಿರ್ವಹಿಸಿದ ಇಲಾಖೆ ವರ್ಗದಡಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಅವರಿಗೆ ಪ್ರಶಸ್ತಿ ನೀಡಲಾಗಿದೆ. 4 ವರ್ಗಗಳಲ್ಲಿ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರೀಯ … Continued