ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್-ಎಲ್‌ಇಟಿ ಸಂಸ್ಥಾಪಕ ಸದಸ್ಯ ಹಫೀಜ್ ಅಬ್ದುಲ್ ಸಲಾಂ ಭುಟ್ಟವಿ ಸಾವು ದೃಢ : ವಿಶ್ವಸಂಸ್ಥೆ

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಎ-ತಯ್ಯಿಬಾ (ಎಲ್‌ಇಟಿ) ಸಂಸ್ಥಾಪಕ ಸದಸ್ಯ ಹಫೀಜ್ ಅಬ್ದುಲ್ ಸಲಾಂ ಭುಟ್ಟವಿ ‘ಮೃತಪಟ್ಟಿರುವುದು’ ದೃಢಪಟ್ಟಿದೆ. ಭುಟ್ಟವಿ ಎಲ್‌ಇಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಮತ್ತು ಹಫೀಜ್ ಸಯೀದ್‌ಗೆ ಹತ್ತಿರವಾಗಿದ್ದ. ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಸೈಟ್‌ನಲ್ಲಿ ನವೀಕರಿಸಿದ ಮಾಹಿತಿಯ ಪ್ರಕಾರ, ಭುಟ್ಟವಿ 29 ಮೇ 2023 ರಂದು ಪಂಜಾಬ್ ಪ್ರಾಂತ್ಯದ ಮುರಿಡ್ಕೆಯಲ್ಲಿ ಪಾಕಿಸ್ತಾನ … Continued

ಫೆಬ್ರವರಿ 1 ರಂದು ಕೇಂದ್ರದ ಬಜೆಟ್‌ ಮಂಡನೆ

ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನವು ಜನವರಿ 31 ರಂದು ಪ್ರಾರಂಭವಾಗಲಿದ್ದು, ಫೆಬ್ರವರಿ 9 ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2024-25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಜನವರಿ 31 ರಂದು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಜೆಟ್ ಅಧಿವೇಶನವನ್ನು ಉದ್ಘಾಟಿಸುವುದರೊಂದಿಗೆ … Continued

ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ: ಸಿಎಂಗೆ ಪತ್ರ ಬರೆದ ಕಾಂಗ್ರೆಸ್‌ ಶಾಸಕ ರಘುಮೂರ್ತಿ

ಚಿತ್ರದುರ್ಗ: ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಪರಿಗಣಿಸುವುದು ಬೇಡ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ನಿಗಮ ಮಂಡಳಿ ನೇಮಕಾತಿ ಪಟ್ಟಿ ಸಿದ್ಧಗೊಂಡಿದ್ದು, ಇದೇ ಜನವರಿ ತಿಂಗಳಲ್ಲೇ ಪ್ರಕಟವಾಗಲಿದೆ ಎಂಬ ವರದಿಯ ಬೆನ್ನಲ್ಲೇ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕಾಂಗ್ರೆಸ್‌ ಶಾಸಕ … Continued

ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ ಇರುವ ದೇಶಗಳು : ಮೊದಲನೇ ಶ್ರೇಯಾಂಕದಲ್ಲಿ 6 ದೇಶಗಳು, ಭಾರತದ ಶ್ರೇಯಾಂಕ ಯಾವುದು…?

ನವದೆಹಲಿ: ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ್ ಮತ್ತು ಸ್ಪೇನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳುಳ್ಳ ದೇಶಗಳಾಗಿವೆ. ಇತ್ತೀಚಿನ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಈ ದೇಶಗಳು 194 ಜಾಗತಿಕ ತಾಣಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಅನುಮತಿಸುತ್ತವೆ. ಶ್ರೇಯಾಂಕವು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ​​(IATA) ದ ಡೇಟಾವನ್ನು ಆಧರಿಸಿದೆ. ಕಳೆದ ಐದು ವರ್ಷಗಳಿಂದ ಜಪಾನ್ … Continued

4 ವರ್ಷದ ಮಗನ ಹತ್ಯೆ ಪ್ರಕರಣ : ಪೊಲೀಸರಿಗೆ ಸುಳಿವು ನೀಡಿದ ಗೋವಾ ಅಪಾರ್ಟ್‌ಮೆಂಟಿನಲ್ಲಿ ಬೆಂಗಳೂರು ಸಿಇಒ ಬಿಟ್ಟು ಹೋದ ಚಾಕು, ಟವೆಲ್, ದಿಂಬು

ಬೆಂಗಳೂರು: ಬೆಂಗಳೂರಿನ ಸ್ಟಾರ್ಟ್‌ಅಪ್‌ನ ಸಿಇಒ ಮಹಿಳೆ ತನ್ನ ಮಗನನ್ನು ಕೊಂದ ಆರೋಪ ಹೊತ್ತಿದ್ದು, ಈ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಚಾಕು, ಟವೆಲ್ ಮತ್ತು ದಿಂಬು ಸಹಾಯ ಮಾಡಿವೆ. ಆಕೆ ಗೋವಾದಲ್ಲಿ ತಂಗಿದ್ದ ಸರ್ವಿಸ್ ಅಪಾರ್ಟ್‌ಮೆಂಟ್‌ನಿಂದ ಪೊಲೀಸರು ಮೂರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸುಚನಾ ಸೇಠ್ ಜನವರಿ 6 ರಂದು ಕ್ಯಾಂಡೋಲಿಮ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗೆ ಬಂದು ಜನವರಿ 8 … Continued

‘ಅನ್ನಪೂರಣಿ’ ಸಿನೆಮಾದಲ್ಲಿ ‘ರಾಮನಿಗೆ ಅಗೌರವʼ ತೋರಿದ ಆರೋಪ : ನಟಿ ನಯನತಾರಾ, ನಿರ್ದೇಶಕ, ನಿರ್ಮಾಪಕ ವಿರುದ್ಧ ಪ್ರಕರಣ ದಾಖಲು

ಭೋಪಾಲ್: ತಮಿಳಿನ ‘‘ಅನ್ನಪೂರಣಿ’  ಸಿನಿಮಾದ ಬಗ್ಗೆ ಆಕ್ರೋಶದ ನಡುವೆಯೇ, ಈಗ ನಟಿ ನಯನತಾರಾ, ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಹೆಡ್ ಮೋನಿಕಾ ಶೆರ್ಗಿಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಬಲಪಂಥೀಯ ಸಂಘಟನೆಯೊಂದು ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ಆರೋಪಿಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ರಾಮನನ್ನು ಅಗೌರವಿಸಿದ್ದಾರೆ … Continued

ಕ್ಷೀರಭಾಗ್ಯ ಹಾಲಿಗೆ ಬಿದ್ದ ಹಲ್ಲಿ : ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳು

ಸಂಕೇಶ್ವರ : ಕ್ಷೀರಭಾಗ್ಯ ಯೋಜನೆಯ ಹಾಲಿನಲ್ಲಿ ಹಲ್ಲಿ ಬಿದ್ದ ಪರಿಣಾಮ ಶಾಲಾ ಬಾಲಕರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯ ಹಾಲು ನೀಡಲಾಗಿತ್ತು. ಆದರೆ ಹಾಲಿನಲ್ಲಿ ಹಲ್ಲಿ ಬಿದ್ದಿರುವ ವಿಷಯ ಮಕ್ಕಳು … Continued

ಮಾರಣಾಂತಿಕ ಹಾವಿನ ವಿರುದ್ಧ ಹೋರಾಡಿ ಹಾವಿನ ಬಾಯಿಂದ ತನ್ನ ಮರಿಯನ್ನು ರಕ್ಷಿಸಿದ ಧೈರ್ಯಶಾಲಿ ತಾಯಿ ಇಲಿ | ವೀಕ್ಷಿಸಿ

ತಾಯಿಯ ಪ್ರವೃತ್ತಿಯ ಹೃದಯಸ್ಪರ್ಶಿ ಮತ್ತು ಧೈರ್ಯದ ಪ್ರದರ್ಶನದಲ್ಲಿ, ನಿರ್ಭೀತ ತಾಯಿ ಇಲಿ ತನ್ನ ಅಸಹಾಯಕ ಮರಿ ಇಲಿಯನ್ನು ರಕ್ಷಿಸಲು ಹಾವಿನ ವಿರುದ್ಧ ನಡೆಸಿದ ಹೋರಾಟವನ್ನು ಸೆರೆಹಿಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಹಾವಿನ ಮಾರಣಾಂತಿಕ ಹಿಡಿತದಲ್ಲಿ ಪುಟ್ಟ ಇಲಿ ಮರಿಯೊಂದು ಸಿಕ್ಕಿಹಾಕಿಕೊಂಡ ನಾಟಕೀಯ ದೃಶ್ಯವನ್ನು ವೀಡಿಯೊ ಚಿತ್ರಿಸುತ್ತದೆ. ಇಂತಹ ಅಪಾಯದ ಸ್ಥಿತಿಯಲ್ಲಿಯೂ ಎದೆಗುಂದದ ತಾಯಿ ಇಲಿ … Continued

ಅಮೆರಿಕದ ಸೇನಾ ನೆಲೆಯ ಮೇಲೆ ʼಜೆಲ್ಲಿಫಿಶ್ʼ ತರಹದ ಗುರುತಿಸಲಾಗದ ಹಾರುವ ವಸ್ತು (UFO)ವಿನ ವಿಲಕ್ಷಣ ವೀಡಿಯೊ ಭಾರೀ ವೈರಲ್‌ | ವೀಕ್ಷಿಸಿ

ಅಚ್ಚರಿಪಡುವ ಬಹಿರಂಗಪಡಿಸುವಿಕೆಯಲ್ಲಿ, ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಸುಳಿದಾಡುತ್ತಿರುವ ಗುರುತಿಸಲಾಗದ ಹಾರುವ ವಸ್ತು (UFO)ವನ್ನು ಸೆರೆಹಿಡಿಯಲಾಗಿದೆ ಎಂದು ಹೇಳಿಕೊಳ್ಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಅಬ್ಬರಿಸಿದೆ. ಆರಂಭದಲ್ಲಿ ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕ ಜೆರೆಮಿ ಕಾರ್ಬೆಲ್ ಅವರು ಇನ್ಸ್ಟಾಗ್ರಾಂ(Instagram) ನಲ್ಲಿ ಹಂಚಿಕೊಂಡ ತುಣುಕನ್ನು X ಸೇರಿದಂತೆ ವಿವಿಧ ವೇದಿಕೆಗಳಲ್ಲಿ ತ್ವರಿತವಾಗಿ ಹರಡಿತು. ವಿಚಿತ್ರವಾದ ಕಪ್ಪು ಮತ್ತು ಬಿಳಿ … Continued

ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ತಾರೆ ಬಿಜೆಪಿ ಹಿರಿಯ ನಾಯಕ ಎಲ್.​ಕೆ. ಅಡ್ವಾಣಿ

ನವದೆಹಲಿ: ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರಿಷ್ಠಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರೊಬ್ಬರು ತಿಳಿಸಿದ್ದಾರೆ. 96ರ ಹರೆಯದ ಎಲ್‌ಕೆ ಅಡ್ವಾಣಿ ಅವರು ರಾಮ ಜನ್ಮಭೂಮಿ ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕರಲ್ಲಿ ಅಗ್ರಗಣ್ಯರಾಗಿರುವ ಕಾರಣ ರಾಮಮಂದಿರ … Continued