ಪಾಕಿಸ್ತಾನ ಐಎಸ್‌ಐಗೆ ಭಾರತದ ಸೇನೆ ಬಗ್ಗೆ ಮಾಹಿತಿ ನೀಡುತ್ತಿದ್ದ ಭಾರತದ ರಾಯಭಾರಿ ಕಚೇರಿ ಕೆಲಸಗಾರನ ಬಂಧನ

ನವದೆಹಲಿ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಉತ್ತರ ಪ್ರದೇಶ ಎಟಿಎಸ್)ವು ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಪಾಕಿಸ್ತಾನಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆಂಟ್‌ನನ್ನು ಬಂಧಿಸಿದೆ. ಸತ್ಯೇಂದ್ರ ಸಿವಾಲ್ ಎಂಬವರನ್ನು 2021 ರಿಂದ ರಾಯಭಾರ ಕಚೇರಿಯಲ್ಲಿ ಪೋಸ್ಟ್ ಮಾಡಲಾಗಿತ್ತು. ಹಾಪುರ ಮೂಲದ ಆತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ(ಮಲ್ಟಿ-ಟಾಸ್ಕಿಂಗ್ ಸ್ಟಾಫ್ ( MTS) ಆಗಿ ಕೆಲಸ … Continued

ಫೆಬ್ರವರಿ 5 ರಿಂದ ಡಿಡಿಯಲ್ಲಿ ರಮಾನಂದ ಸಾಗರ ‘ರಾಮಾಯಣʼ ಧಾರವಾಹಿ ಮತ್ತೆ ಪ್ರಸಾರ

ನವದೆಹಲಿ: 1987 ರಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ ಅವರ ಪೌರಾಣಿಕ ಧಾರವಾಹಿ ʼರಾಮಾಯಣʼವು ಮತ್ತೆ ದೂರದರ್ಶನ (ಡಿಡಿ) ನ್ಯಾಷನಲ್‌ನಲ್ಲಿ ಮತ್ತೆ ಪ್ರಸಾರವಾಗಲಿದೆ. ದೂರದರ್ಶನದ ಅಧಿಕೃತ ಹ್ಯಾಂಡಲ್‌ನ ಟ್ವೀಟ್ ಪ್ರಕಾರ ಈ ಧಾರವಾಹಿ ಟಿವಿಯಲ್ಲಿ ಮತ್ತೆ ಪ್ರಸಾರವಾಗಲು ಸಿದ್ಧವಾಗಿದೆ. ಶುಕ್ರವಾರ, ದೂರದರ್ಶನದ ಅಧಿಕೃತ X ಹ್ಯಾಂಡಲ್, ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿದ ರಮಾನಂದ ಸಾಗರ ಅವರ ಪೌರಾಣಿಕ … Continued

‘ಹಿಂದೂ’ ಪದದ ಕುರಿತು ಆಕ್ಷೇಪಾರ್ಹ ಹೇಳಿಕೆ: ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಬೆಂಗಳೂರು : ಹಿಂದು ಪದದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ‘ಹಿಂದೂ’ ಎಂಬ ಪದವು ಪರ್ಷಿಯನ್ ಪದವಾಗಿದ್ದು, ಅದಕ್ಕೆ ‘ಅಶ್ಲೀಲ’ ಎಂಬ ಅರ್ಥವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸತೀಶ … Continued

ಜೀಪ್ – ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಸಾವು

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಗರ್ಲಗುಂಜಿ ರಸ್ತೆಯಲ್ಲಿ ಸಣ್ಣ ಹೊಸೂರ ಬಳಿ ಜೀಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಬೇಕವಾಡ ಗ್ರಾಮದ ರಾಮಲಿಂಗ ಮುತಗೇಕರ ಮತ್ತು ಹನುಮಂತ ಪಾಟೀಲ (19) ಎಂದು ಗುರುತಿಸಲಾಗಿದೆ. ನಂದಿಹಾಳ ಗ್ರಾಮಕ್ಕೆ ಸೈನಿಕ ತರಬೇತಿ ಪಡೆಯಲು ಇವರು ತೆರಳುತ್ತಿದ್ದರು … Continued

ವೀಡಿಯೊ..| ಎಲ್ಲಾ ಬುರುಡೆ..ಎಲ್ಲಾ ಬುರುಡೆ, ವಧು ಅನ್ನೋದು ಬುರುಡೆ..ವರ ಅನ್ನೋದು ಬುರುಡೆ : 568 ಜೋಡಿ ನಕಲಿ ಸಾಮೂಹಿಕ ವಿವಾಹ ಕಾರ್ಯಕ್ರಮ, 15 ಜನರ ಬಂಧನ

ಬಲಿಯಾ: ಮುಖ್ಯಮಂತ್ರಿ ಸಾಮೂಹಿಕ ವಿವಾಹ ಸ್ಕೀಮ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಉತ್ತರ ಪ್ರದೇಶದಲ್ಲಿ ವಿವಾಹ ವಂಚನೆಯಲ್ಲಿ ತೊಡಗಿದ್ದಕ್ಕಾಗಿ ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ. ಬುಧವಾರ ಮೊದಲ ಬಾರಿಗೆ ವರದಿಯಾದ ಈ ಹಗರಣದಲ್ಲಿ ನಕಲಿ ಸಾಮೂಹಿಕ ವಿವಾಹದಲ್ಲಿ ವಧುಗಳು ಹಾರ ಬದಲಾಯಿಸುವುದನ್ನು ಚಿತ್ರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ … Continued

ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿ ಖುಲಾಸೆ ಪ್ರಶ್ನಿಸಿದ ಸಿಬಿಐ: ಹೈಕೋರ್ಟ್‌ ನಿಂದ ಆರೋಪಿಗೆ ನೋಟಿಸ್‌ ಜಾರಿ

ಬೆಂಗಳೂರು: ವಿಶೇಷ ನ್ಯಾಯಾಲಯವು ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ್ದನ್ನು ಬದಿಗೆ ಸರಿಸುವಂತೆ ಕೋರಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಂತೋಷ ರಾವ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿಗೊಳಿಸಿದೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಸಂತೋಷ ರಾವ್‌ ಅವರನ್ನು 2023ರ ಜೂನ್‌ … Continued

ಡಾ ಸರ್ವಪಲ್ಲಿ ರಾಧಾಕೃಷ್ಣನ್‌ ರಿಂದ ಎಲ್‌.ಕೆ. ಅಡ್ವಾಣಿ ವರೆಗೆ: 1954 ರಿಂದ 2024ರ ವರೆಗಿನ ʼಭಾರತ ರತ್ನʼ ಪ್ರಶಸ್ತಿ ಪುರಸ್ಕೃತರ ಪಟ್ಟಿ

ನವದೆಹಲಿ : ಬಿಜೆಪಿ ದಿಗ್ಗಜ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು 1954 ರಲ್ಲಿ ಸ್ಥಾಪಿಸಲಾಯಿತು. ಮಾನವ ಪ್ರಯತ್ನದ ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಶ್ರೇಣಿಯ … Continued