ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದ ಟೆಂಪೋ ಟ್ರಾವೆಲರ್…!

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದ್ದು, ಅದರ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಟೆಂಪೋ ಟ್ರಾವೆಲರ್ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ಇಂಡಿಗೋ ಹೇಳಿಕೆ ತಿಳಿಸಿದೆ. ಶುಕ್ರವಾರ ಮಧ್ಯಾಹ್ನ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. … Continued

ಜನಿವಾರ ವಿವಾದ | ವಿದ್ಯಾರ್ಥಿ ಸುಚಿವ್ರತಗೆ ಭೀಮಣ್ಣ ಖಂಡ್ರೆ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಉಚಿತ ಪ್ರವೇಶ; ಸಚಿವ ಈಶ್ವರ ಖಂಡ್ರೆ

ಬೀದರ : ಜನಿವಾರ ತೆಗೆಯದ ಕಾರಣಕ್ಕೆ ಸಿಇಟಿ ಗಣಿತ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾರಣ ವಿದ್ಯಾರ್ಥಿ ಸುಚಿವ್ರತ ಪರೀಕ್ಷೆ ವಂಚಿತರಾಗಿದ್ದು, ಈ ಹಿನ್ನೆಲೆಯಲ್ಲಿ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯದಲ್ಲಿ ಉಚಿತ ಪ್ರವೇಶ ನೀಡುವುದಾಗಿ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದ್ದಾರೆ. ಇಂದು, ಭಾನುವಾರ ಬೆಳಿಗ್ಗೆ ಸಚಿವ … Continued

ವಾಯು ವಿಹಾರಕ್ಕೆ ಹೋಗಿದ್ದ ಕಾರವಾರ ನಗರಸಭೆ ಮಾಜಿ ಸದಸ್ಯನ ಹತ್ಯೆ

ಕಾರವಾರ: ನಗರಸಭೆಯ ಮಾಜಿ ಸದಸ್ಯ ಸತೀಶ ಕೊಳಂಬಕರ ಅವರನ್ನು ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಭಾನುವಾರ ನಗರದಲ್ಲಿ ಸಂಭವಿಸಿದೆ. ಸತೀಶ ಅವರು ಭಾನುವಾರ ಬೆಳಿಗ್ಗೆ ವಾಯು ವಿಹಾರಕ್ಕೆ ಮಾರುಕಟ್ಟೆ ಬಳಿ ಆಗಮಿಸಿದ್ದರು. ಇದನ್ನು ಗಮನಿಸಿದ ಹಂತಕ ನಗರದ ಬಿಎಸ್ ಎನ್ ಎಲ್ ಕಚೇರಿ ಸಮೀಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇಬ್ಬರು … Continued

ಪ್ಲೀಸ್ ಪಾಸ್ ಮಾಡಿ, ನನ್ನ ಲವ್ ನಿಮ್ಮ ಕೈಯಲ್ಲಿದೆ : ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟು ವಿದ್ಯಾರ್ಥಿಯ ವಿಚಿತ್ರ ಮನವಿ…!

ಬೆಳಗಾವಿ : ರಾಜ್ಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದ್ದು, ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ವಿಚಿತ್ರ ಬೇಡಿಕೆಯಿಟ್ಟು ಬರೆದ ಪತ್ರಗಳು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ಮೌಲ್ಯಮಾಪನ ಕೇಂದ್ರಗಳಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿಯೊನ್ನ ತನ್ನ ಉತ್ತರ ಪತ್ರಿಕೆಗಳ ಒಳಗೆ ನಗದು ಹಣ ಮತ್ತು ತನ್ನ “ಪ್ರೇಮ”ದ ಬಗ್ಗೆಯೂ ಬರೆದು ತನ್ನನ್ನು ಪಾಸ್‌ ಮಾಡುವಂತೆ ವಿನಂತಿಸಿಕೊಂಡಿದ್ದಾನೆ. … Continued

ಜನಿವಾರ ತೆಗೆಸಿದ ಪ್ರಕರಣ : ಪ್ರಾಂಶುಪಾಲ, ಸಿಬ್ಬಂದಿ ಕೆಲಸದಿಂದ ವಜಾ

ಬೀದರ : ನಗರದ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಸುಚಿವ್ರತ್‌ಗೆ ಜನಿವಾರ ತೆಗೆಯಲು ಬಲವಂತ ಮಾಡಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ಕರ್ತವ್ಯ ಲೋಪ ಎಸಗಿದ್ದ ಕಾಲೇಜಿನ ಪ್ರಾಂಶುಪಾಲ ಮತ್ತು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ … Continued

ಜನಿವಾರ ವಿವಾದ; ಸಿಇಟಿ ವಂಚಿತ ವಿದ್ಯಾರ್ಥಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಬಗ್ಗೆ ಸೂಕ್ತ ಕ್ರಮ

ಬೆಂಗಳೂರು: ಬೀದರ ಮತ್ತು ಶಿವಮೊಗ್ಗದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಸಿಇಟಿ (CET 2025) ವೇಳೆ ಜನಿವಾರ ತೆಗೆಸಿದ ಘಟನೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಪರೀಕ್ಷೆ ವಂಚಿತ ವಿದ್ಯಾರ್ಥಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಪರೀಕ್ಷೆ ವಂಚಿತ ಬೀದರ ವಿದ್ಯಾರ್ಥಿಗೆ ಮತ್ತೊಮ್ಮೆ ಸಿಇಟಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗುವುದು ಎಂದು … Continued

ವೀಡಿಯೊ…| 28 ಕಿಮೀ ರಾಮಸೇತು ಸಮುದ್ರ ಈಜಿದ ಹುಬ್ಬಳ್ಳಿ ಪೊಲೀಸ್‌ ಅಧಿಕಾರಿ…!

ಹುಬ್ಬಳ್ಳಿ : ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯ ವರೆಗೆ ರಾಮ ಸೇತು ಸಮುದ್ರ ಮಾರ್ಗದಲ್ಲಿ 28 ಕಿ.ಮೀ.ಈಜುವ ಮೂಲಕ ಹುಬ್ಬಳ್ಳಿಯ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿ ಇದ್ದ ಈಜು ತಂಡ ಜಾಗತಿಕವಾಗಿ ಗಮನ ಸೆಳೆದಿದೆ. ಈ ಸಾಧನೆ ಮಾಡಿದವರಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್‌ ಮುರುಗೇಶ ಚನ್ನಣ್ಣವರ ಅವರು ಒಬ್ಬರು. ಇವರ ಜೊತೆ ಹುಬ್ಬಳ್ಳಿಯ ವೈದ್ಯಕೀಯ ವಿದ್ಯಾರ್ಥಿ … Continued

ರಿಕ್ಕಿ ರೈ ಮೇಲೆ ಗುಂಡಿನ ದಾಳಿ ; ಮುತ್ತಪ್ಪ ರೈ 2ನೇ ಪತ್ನಿ ಸೇರಿ ನಾಲ್ವರ ವಿರುದ್ಧ ಎಫ್‌ ಐಆರ್‌

ರಾಮನಗರ: ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಅವರ ಪುತ್ರ 35 ವರ್ಷದ ರಿಕ್ಕಿ ರೈ ಮೇಲೆ ಬಿಡದಿ ಸಮೀಪದ ಕರಿಯಪ್ಪನದೊಡ್ಡಿಯಲ್ಲಿ ರಾತ್ರಿ ನಡೆದ ಗುಂಡಿನ ದಾಳಿ ನಡೆದ ಪ್ರಕರಣದಲ್ಲಿ ಬಿಡದಿ ಪೊಲೀಸ್ ಠಾಣೆಯಲ್ಲಿ ಶನಿವಾರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಿಕ್ಕಿ ಅವರ ಕಾರು ಚಾಲಕ ಜಿ. ಬಸವರಾಜು … Continued

ಬಾಂಗ್ಲಾದೇಶದಲ್ಲಿ ಹಿಂದೂ ನಾಯಕನ ಅಪಹರಣ ಮಾಡಿ ಬಡಿದು ಕೊಂದರು…!

ಢಾಕಾ: ಬಾಂಗ್ಲಾದೇಶದ ದಿನಾಜಪುರ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ಪ್ರಮುಖ ನಾಯಕನೊಬ್ಬನನ್ನು ಅವರ ಮನೆಯಿಂದ ಅಪಹರಿಸಿ ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಶುಕ್ರವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ಢಾಕಾದಿಂದ ವಾಯುವ್ಯಕ್ಕೆ ಸುಮಾರು 330 ಕಿಲೋಮೀಟರ್ ದೂರದಲ್ಲಿರುವ ದಿನಾಜಪುರದ ಬಸುದೇಬಪುರ ಗ್ರಾಮದ ನಿವಾಸಿ ಭಬೇಶಚಂದ್ರ ರಾಯ್ (58) ಅವರ ಶವ ಗುರುವಾರ ರಾತ್ರಿ ಪತ್ತೆಯಾಗಿದೆ ಎಂದು ಪೊಲೀಸರು ಮತ್ತು … Continued

ವೀಡಿಯೊ..| ಬಪ್ಪನಾಡು ಜಾತ್ರೆ ರಥೋತ್ಸವದ ವೇಳೆ ಮುರಿದುಬಿದ್ದ ತೇರು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವದ ವೇಳೆ ತೇರಿನ ಮೇಲ್ಭಾಗ ಕುಸಿದು ಬಿದ್ದ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಮುಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವ ವೇಳೆ ದೇವರ ತೇರು ಮುರಿದು ಬಿದ್ದಿರುವ ಘಟನೆ ಶನಿವಾರ ಬೆಳಗಿನ … Continued