ಬೆಂಗಳೂರು | ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿದ ಚಿರತೆ ಕೂಡಿ ಹಾಕಿದ ದಂಪತಿ ; 5 ತಾಸು ಕಾರ್ಯಾಚರಣೆ ನಂತರ ಸೆರೆ

 ಬೆಂಗಳೂರು: ತಮ್ಮ ಮನೆಯೊಳಗೆ ನುಗ್ಗಿದ ಚಿರತೆಯನ್ನು ದಂಪತಿ ಮನೆಯೊಳಗೆ ಕೂಡಿ ಹಾಕಿದ ನಂತರ ತಕ್ಷಣವೇ ಕಟ್ಟಡದಿಂದ ಹೊರಬಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಐದು ಗಂಟೆಗಳ ಕಾರ್ಯಾಚರಣೆಯ ನಂತರ ಚಿರತೆಯನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕೊಂಡೊಯ್ಯಲಾಯಿತು. ಬೆಂಗಲೂರು ನಗರದ ಹೊರವಲಯದ ಜಿಗಣಿಯಲ್ಲಿರುವ ಕುಂಟ್ಲು ರೆಡ್ಡಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಮಂಜುನಾಥ … Continued

ವೀಡಿಯೊ..| ವಾಯು ಪಡೆ ಯುದ್ಧ ವಿಮಾನ ಪತನ ; ಓರ್ವ ಪೈಲಟ್‌ ಸಾವು : ಯುದ್ಧ ವಿಮಾನ ಬೀಳುವ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬುಧವಾರ ಗುಜರಾತ್‌ನ ಜಾಮನಗರದಲ್ಲಿ ಭಾರತೀಯ ವಾಯುಪಡೆಯ ಫೈಟರ್ ಜೆಟ್ ಪತನಗೊಂಡ ಕ್ಷಣಗಳ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ. ವೀಡಿಯೊ ಕ್ಲಿಪ್‌ ಜೆಟ್‌ ಕೆಳಕ್ಕೆ ಬರುತ್ತಿರುವುದನ್ನು ತೋರಿಸುತ್ತದೆ ಮತ್ತು ನಂತರ ದೂರದಿಂದ ಭಾರಿ ಸ್ಫೋಟ ಹಾಗೂ ಬೆಂಕಿ ಜ್ವಾಲೆಯನ್ನು ತೋರಿಸುತ್ತದೆ. ಜೆಟ್ ಕೆಲವು ಸೆಕೆಂಡುಗಳ ಕಾಲ ಸ್ಥಿರವಾಗಿ ಹಾರುತ್ತದೆ ಮತ್ತು ನಂತರ ಕೆಳಗೆ ಧುಮುಕುವುದನ್ನು ವೀಡಿಯೊ ತೋರಿಸುತ್ತದೆ. ಕೆಲವೇ … Continued

ಅಕ್ಷರಲೋಕದ ನಂದಾದೀಪ ಮಹಾಂತಪ್ಪ ನಂದೂರ ಅಭಿನಂದನ ಗ್ರಂಥ ಏ.4ರಂದು ಲೋಕಾರ್ಪಣೆ

(೪-೦೪-೨೦೨೫) ಕೇಶ್ವಾಪುರ ರೈಲ್ವೆ ಅಧಿಕಾರಗಳ ಕ್ಲಬ್‌ನಲ್ಲಿ ಮಹಾಂತಪ್ಪ ನಂದೂರ ಅವರ “ನಂದ ದುರಿತ ಜ್ಯೋತಿ”ಅಭಿನಂದನ ಗ್ರಂಥ ಲೋಕಾರ್ಪಣೆಯಾಗುತ್ತಿದ್ದು, ಈ ನಿಮಿತ್ತ ಲೇಖನ) ವೃತ್ತಿ ರೈಲ್ವೆ ಇಲಾಖೆ, ಪ್ರವೃತ್ತಿ ಕಥೆ, ಕವನ, ನಾಟಕ ಮುಂತಾದ ಸಾಹಿತ್ಯಾಸಕ್ತಿಯ ಚಟುವಟಿಕೆಗಳು…ಇದು ಖ್ಯಾತ ಕವಿ ಮಹಾಂತಪ್ಪ ನಂದೂರ ಅವರ ವ್ಯಕ್ತಿತ್ವವನ್ನು ಬಣ್ಣಿಸಬಹುದಾದ ಒಂದು ವಾಕ್ಯದ ನಿರೂಪಣೆ. ಮೂಲತಃ ಕಲಬುರಗಿಯವರಾದ ಇವರು ಉದ್ಯೋಗಕ್ಕಾಗಿ … Continued

ಉತ್ತರ ಕನ್ನಡ | ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ಮೇಲೆ ಗುಂಡುಹಾರಿಸಿದ ಪೊಲೀಸರು

ಕಾರವಾರ : ತಪ್ಪಿಸಿಕೊಳ್ಳಲು ಯತ್ನಿಸಿದ ಕಾರಿನಲ್ಲಿ ಕೋಟಿ ರೂ.ಸಿಕ್ಕಿದ್ದ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನೀಲವೇಣಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ಕೆಲದಿನಗಳ ಹಿಂದೆ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಗಿದ್ದ ಕೋಟಿ ರೂ.ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ … Continued

ವೀಡಿಯೊ…| 6 ತಿಂಗಳ ಶಿಶುವನ್ನು ಎತ್ತಿಕೊಂಡು ನಿಗಿನಿಗಿ ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತಿ…!

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಅವರಂಗಾಡುನಲ್ಲಿರುವ ಅಗ್ನಿ ಮರಿಯಮ್ಮನ್ ದೇವಾಲಯದ ಉತ್ಸವದಲ್ಲಿ ಆರು ತಿಂಗಳ ಮಗುವನ್ನು ಎತ್ತಿಕೊಂಡು ಕೆಂಡ ಹಾಯಲು ಹೋಗಿ ವ್ಯಕ್ತಿಯೊಬ್ಬ ಮುಗ್ಗರಿಸಿ ಬಿದ್ದಿದ್ದು, ಅಲ್ಲಿದ್ದವರು ತಕ್ಷಣವೇ ಸಹಾಯಕ್ಕೆ ಧಾವಿಸಿ ಮುಗುವನ್ನು ಸುರಕ್ಷಿತವಾಗಿ ಮೇಲೆಕ್ಕೆತ್ತಿದ್ದಾರೆ. ಈ ಘಟನೆಯ ವೀಡಿಯೊ ಈಗ ವೈರಲ್‌ ಆಗಿದೆ. ವ್ಯಕ್ತಿಯೊಬ್ಬರು ಆರು ತಿಂಗಳಿನ ಶಿಶುವನ್ನು ಎತ್ತಿಕೊಂಡು ಕೆಂಡ ಹಾಯಲು ಮುಂದಾಗಿದ್ದಾರೆ, ಜೋರಾಗಿ … Continued

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ ; ಅಖಿಲ ಭಾರತ ಮುಸ್ಲಿಂ ಜಮಾತ್ ಸ್ವಾಗತ

ಬರೇಲಿ : ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಗುರುವಾರ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದ್ದನ್ನು ಸ್ವಾಗತಿಸಿದ್ದಾರೆ. ಇದು ಬಡ ಹಾಗೂ ಹಿಂದುಳಿದ ಮುಸ್ಲಿಮರಿಗೆ ಗಮನಾರ್ಹ ಆರ್ಥಿಕ ಲಾಭ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಮಸೂದೆಯ ಪರವಾಗಿ ಮತ ಚಲಾಯಿಸಿದ ಎಲ್ಲಾ ಲೋಕಸಭಾ ಸದಸ್ಯರಿಗೆ ನಾನು … Continued

ಪಶ್ಚಿಮ ಬಂಗಾಳ | 25,000 ಶಿಕ್ಷಕರ ನೇಮಕಾತಿ ರದ್ದು ; ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್ ; ಮಮತಾ ಸರ್ಕಾರಕ್ಕೆ ತೀವ್ರ ಮುಖಭಂಗ

ನವದೆಹಲಿ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರ ಹಗರಣದಲ್ಲಿ ಶಾಲಾ ಉದ್ಯೋಗಗಳಿಗೆ ಸಂಬಂಧಿಸಿದಂತೆ 2016 ರಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಡಬ್ಲ್ಯುಬಿಎಸ್‌ಎಸ್‌ಸಿ) 25,000 ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಗಳನ್ನು ರದ್ದುಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಸು … Continued

ವಕ್ಫ್ ತಿದ್ದುಪಡಿ ಮಸೂದೆ : ಲೋಕಸಭೆಯಲ್ಲಿ ಅಂಗೀಕಾರದ ನಂತರ ಇಂದು ರಾಜ್ಯಸಭೆಯತ್ತ ಎಲ್ಲರ ಕಣ್ಣು; ಪಕ್ಷಗಳ ಬಲಾಬಲ ಹೇಗಿದೆ…?

ನವದೆಹಲಿ : ಲೋಕಸಭೆಯು ಬುಧವಾರ ಮಧ್ಯರಾತ್ರಿ ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ ಅಂಗೀಕಾರ ನೀಡಿದ್ದು, ಇಂದು ರಾಜ್ಯಸಭೆಯತ್ತ ಎಲ್ಲರ ಚಿತ್ತವಿದೆ. ಲೋಕಸಭೆಯಲ್ಲಿ ಮಸೂದೆಯ ಪರವಾಗಿ 288 ಮತ್ತು ವಿರುದ್ಧವಾಗಿ 232 ಮತಗಳು ಬಂದವು. 100 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ವಿಪಕ್ಷದ ಸದಸ್ಯರು ಪ್ರಸ್ತಾಪಿಸಿದರು, ಆದರೆ ಮತದಾನದ ಸಮಯದಲ್ಲಿ ಎಲ್ಲವನ್ನೂ ತಿರಸ್ಕರಿಸಲಾಯಿತು. ಚರ್ಚೆಯ ಸಂದರ್ಭದಲ್ಲಿ, ಸರ್ಕಾರವು ಮಸೂದೆಯನ್ನು … Continued

ಭಾರತದ ರಫ್ತಿನ ಮೇಲೆ 26%ರಷ್ಟು ಪ್ರತಿ ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ : ಭಾರತದ ಯಾವ ವಲಯದ ಮೇಲೆ ಪರಿಣಾಮ…?

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ 26% ಪ್ರತಿ ಸುಂಕವನ್ನು ಘೋಷಿಸಿದ್ದಾರೆ. ಆ ಮೂಲಕ ಭಾರತಕ್ಕೆ ಪ್ರಮುಖ ವ್ಯಾಪಾರದ ಹೊಡೆತ ನೀಡಿದ್ದಾರೆ. ಅವರ ‘ವಿಮೋಚನಾ ದಿನ’ ಭಾಷಣದಲ್ಲಿ ಘೋಷಿಸಿದ ಈ ಕ್ರಮವು ಹೊಸ ವ್ಯಾಪಾರ ಅಡೆತಡೆಗಳಿಗಿಂತ ಸುಂಕದ ರಿಯಾಯಿತಿಗಳನ್ನು ನಿರೀಕ್ಷಿಸುತ್ತಿದ್ದ ಭಾರತಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ. ಏಪ್ರಿಲ್ 9 ರಿಂದ … Continued

ಸುದೀರ್ಘ ಚರ್ಚೆಯ ನಂತರ ಮಧ್ಯರಾತ್ರಿ ವಕ್ಫ್ (ತಿದ್ದುಪಡಿ) ಮಸೂದೆ 2024 ಅಂಗೀಕರಿಸಿದ ಲೋಕಸಭೆ

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬುಧವಾರ ಮಧ್ಯರಾತ್ರಿ  2 ಗಂಟೆಗೆ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು, ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ತಮ್ಮ ವಾದವನ್ನು ಮಂಡಿಸಿದ 12 ಗಂಟೆಗಳ ಬಿಸಿ ಚರ್ಚೆಯ ನಂತರ ಮಸೂದೆಯ ಪರವಾಗಿ 288 ಮತ್ತು ವಿರುದ್ಧ 232 ಮತಗಳು ಚಲಾವಣೆಯಾದವು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು ಬುಧವಾರ ಬೆಳಗ್ಗೆ ಲೋಕಸಭೆಯಲ್ಲಿ ಮಸೂದೆಯನ್ನು … Continued