100 ವರ್ಷಗಳಲ್ಲಿ ವಕ್ಫ್ ಮಂಡಳಿಗಳ ಬಳಿ 18 ಲಕ್ಷ ಎಕರೆ ಭೂಮಿ ಇತ್ತು… ಕಳೆದ 12 ವರ್ಷಗಳಲ್ಲಿ 21 ಲಕ್ಷ ಎಕರೆಗಳು ಅದಕ್ಕೆ ಸೇರ್ಪಡೆ ; ಲೋಕಸಭೆಯಲ್ಲಿ ಅಮಿತ್‌ ಶಾ

ನವದೆಹಲಿ : ಭಾರತದಲ್ಲಿ ವಕ್ಫ್ ಆಸ್ತಿಯ ಇತಿಹಾಸವು 12 ನೇ ಶತಮಾನದ ಕೊನೆಯಲ್ಲಿ ಎರಡು ಗ್ರಾಮಗಳೊಂದಿಗೆ ಪ್ರಾರಂಭವಾಯಿತು ಮತ್ತು ಈಗ 39 ಲಕ್ಷ ಎಕರೆಗಳಿಗೆ ಬೆಳೆದಿದೆ. ಭಾರತದಲ್ಲಿ ವಕ್ಫ್ ಮಂಡಳಿಗಳ ಅಡಿಯಲ್ಲಿ ಒಟ್ಟು ಭೂಮಿ ಕಳೆದ 12 ವರ್ಷಗಳಲ್ಲಿ ದ್ವಿಗುಣಗೊಂಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಬುಧವಾರ ಸಂಜೆ ಗೃಹ ಸಚಿವ ಅಮಿತ್ ಶಾ ಅವರು ವಕ್ಫ್ … Continued

ಆರೋಗ್ಯದಲ್ಲಿ ಏರುಪೇರು : ಲಾಲು ಪ್ರಸಾದ ಯಾದವ್ ಆಸ್ಪತ್ರೆಗೆ ದಾಖಲು

ಪಾಟ್ನಾ: ಆರ್‌ಜೆಡಿ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್‌ ಅವರನ್ನು ಪಾಟ್ನಾದ ಆಸ್ಪತ್ರೆಗೆ ದಾಖಲಿಸಿ ನಂತರ ಬುಧವಾರ ದೆಹಲಿಗೆ ಕರೆದೊಯ್ದು ಏಮ್ಸ್‌ಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿದೆ. 76 ವರ್ಷದ ನಾಯಕನನ್ನು ಎಐಐಎಂಎಸ್‌ನ ಕಾರ್ಡಿಯಾಲಜಿ ಪ್ರಾಧ್ಯಾಪಕ ಡಾ ರಾಕೇಶ ಯಾದವ್ ಅವರ ಕಾರ್ಡಿಯೋ-ನ್ಯೂರೋ ಸೆಂಟರ್‌ನ ಕಾರ್ಡಿಯೋ ಕ್ರಿಟಿಕಲ್ ಕೇರ್ ಘಟಕಕ್ಕೆ ದಾಖಲಿಸಲಾಗಿದೆ … Continued

6 ವಾರಗಳಲ್ಲಿ ಓಲಾ, ಉಬರ್, ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು : ಓಲಾ, ಉಬರ್‌ ಮತ್ತು ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ಸೇವೆಯನ್ನು ಸಂಬಂಧಿತ ಸಂಸ್ಥೆಗಳು ಆರು ವಾರಗಳಲ್ಲಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶ ಮಾಡಿದೆ. ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಗೆ ನಿರ್ದೇಶನ ಕೋರಿ ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌, ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಎಎನ್‌ಐ ಟೆಕ್ನಾಲಜೀಸ್‌ … Continued

ವಿಧಾನಸೌಧದ ಮುಂದೆ ವಿಷ ಸೇವಿಸಲು ಯತ್ನಿಸಿದ ಯುವಕ

ಬೆಂಗಳೂರು: ವಿಧಾನಸೌಧದ ಮುಂದೆಯೇ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಭದ್ತರಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಂಜಯ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವ ಎಂದು ಹೇಳಲಾಗಿದೆ. ಕೂಡಲೇ ವಿಧಾನಸೌಧ ಠಾಣೆಯ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ವಿಷದ ಸಣ್ಣ ಬಾಟಲು ಹಾಗೂ ಕೆಲವು … Continued

ಮುಡಾ ಹಗರಣ | ಇ.ಡಿ ತನಿಖೆಗೆ ಹೈಕೋರ್ಟ್‌ ಅನುಮತಿ ; ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ..?

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ಬದಲಿ ನಿವೇಶನ (ಈಗ ವಾಪಸ್‌ ಮಾಡಲಾಗಿದೆ) ಹಂಚಿಕೆ ಮಾಡಿದ ಸಮಯದಲ್ಲಿ ಮುಡಾ ಆಯುಕ್ತರಾಗಿದ್ದ ಡಾ. ಡಿ ಬಿ ನಟೇಶ ಅವರಿಗೆ ಜಾರಿ ನಿರ್ದೇಶನಾಲಯ (ED) ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿ ಏಕಸದಸ್ಯ ಪೀಠ ಮಾಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟ್‌ ಬುಧವಾರ … Continued

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ-2024 ಮಂಡನೆ ; ಮಸೂದೆಯ ಪ್ರಮುಖ ಬದಲಾವಣೆ ಸೆಕ್ಷನ್ 40ರ ರದ್ದತಿ ; ಇತರ ಪ್ರಮುಖ ಅಂಶಗಳೆಂದರೆ…

ನವದೆಹಲಿ : ವಿಪಕ್ಷಗಳ ಆಕ್ಷೇಪ ಹಾಗೂ ಭಾರೀ ಗದ್ದಲದ ನಡುವೆ ವಕ್ಫ್ (ತಿದ್ದುಪಡಿ) ಮಸೂದೆ-2024 ಲೋಕಸಭೆಯಲ್ಲಿ ಬುಧವಾರ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್‌ ರಿಜಿಜು ಲೋಕಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಮಸೂದೆ ಮಂಡಿಸಿದರು. ವಕ್ಫ್ ಆಸ್ತಿಗಳ ನಿಯಂತ್ರಣಕ್ಕಾಗಿ 1995ರ ವಕ್ಫ್ ಕಾಯಿದೆಯನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮೊದಲ ಬಾರಿಗೆ ಆಗಸ್ಟ್ 2024ರಲ್ಲಿ ಲೋಕಸಭೆಯಲ್ಲಿ … Continued

ಬೆಳಗಾವಿ | ಅಕ್ಕನ ಮಗಳ ಮದುವೆಗೆ ರಜೆ ಕೊಟ್ಟಿಲ್ಲವೆಂದು ನೊಂದು ಬಸ್ಸಿನಲ್ಲೇ ಚಾಲಕ ಆತ್ಯಹತ್ಯೆ

ಬೆಳಗಾವಿ: ತಮ್ಮ ಮನೆಯಲ್ಲಿ ನಡೆಯುತ್ತಿರುವ ಮದುವೆಯಲ್ಲಿ ಪಾಲ್ಗೊಳ್ಳಲು ಮೇಲಧಿಕಾರಿಗಳು ರಜೆ (Leave) ಕೊಡಲಿಲ್ಲ ಎಂದು ತೀವ್ರವಾಗಿ ಮನನೊಂದ ರಾಜ್ಯ ಸಾರಿಗೆ ಸಂಸ್ಥೆ ಚಾಲಕನೊಬ್ಬ driver) ಬಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಬೆಳಗಾವಿ ಡಿಪೋದ 2ನೇ ಘಟಕದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಚಾಲಕನನ್ನು ನಗರದ ಹಳೆ … Continued

ಬಾಹ್ಯಾಕಾಶದಿಂದ ತೆಗೆದ ಭೂಮಿಯ ಉತ್ತರ-ದಕ್ಷಿಣ ಧ್ರುವಗಳ ಇದೇ ಮೊದಲ ಅದ್ಭುತ ವೀಡಿಯೊ ಹಂಚಿಕೊಂಡ ಸ್ಪೇಸ್‌ ಎಕ್ಸ್ | ವೀಕ್ಷಿಸಿ

ಫ್ರಮ್‌2 (Fram2) ಮಿಷನ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ ಸ್ಪೇಸ್‌ಎಕ್ಸ್ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಧ್ರುವ ಪ್ರದೇಶಗಳ ಮೊದಲ ವೀಡಿಯೊವನ್ನು ಬಿಡುಗಡೆ ಮಾಡಿದೆ. ಫ್ರಮ್‌ 2 (Fram2) ಮಿಷನ್‌ ಸೋಮವಾರ, ಮಾರ್ಚ್ 31 ರಂದು ಪ್ರಾರಂಭವಾಯಿತು ಹಾಗೂ ನಾಲ್ವರು ಗಗನಯಾತ್ರಿಗಳನ್ನು ಭೂಮಿಯ ಧ್ರುವೀಯ ಕಕ್ಷೆಗೆ ಕಳುಹಿಸಿತು. ಅಮೆರಿಕದ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ರೆಸಿಲಿಯನ್ಸ್ … Continued

ಅಮೆರಿಕದ ಸೆನೆಟಿನಲ್ಲಿ ನಿರಂತರ 25 ಗಂಟೆ ಭಾಷಣ ಮಾಡಿ ನೂತನ ದಾಖಲೆ ಸ್ಥಾಪಿಸಿದ ಡೆಮೋಕ್ರಾಟ್ ಸೆನೆಟರ್‌ ಕೋರಿ ಬುಕರ್…!

ವಾಷಿಂಗ್ಟನ್‌ : ನ್ಯೂಜೆರ್ಸಿಯ ಡೆಮಾಕ್ರಟಿಕ್ ಸೆನೆಟರ್ ಕೋರಿ ಬುಕರ್ ಅವರು 25 ಗಂಟೆ 5 ನಿಮಿಷಗಳ ಕಾಲ ಮಾಡಿದ ಮ್ಯಾರಥಾನ್ ಭಾಷಣ ಅಮೆರಿಕದ ಸೆನೆಟ್‌ನ ಇತಿಹಾಸದಲ್ಲಿ ಸುದೀರ್ಘ ಭಾಷಣ ಎಂಬ ದಾಖಲೆ ಸ್ಥಾಪಿಸಿದೆ. ಬುಕರ್ ಅವರ ಭಾಷಣವು 1957 ರಲ್ಲಿ ದಿವಂಗತ ಸೆನೆಟರ್ ಸ್ಟ್ರೋಮ್ ಥರ್ಮಂಡ್ ಸೆಟ್ ಮಾಡಿದ 24-ಗಂಟೆ ಮತ್ತು 18-ನಿಮಿಷಗಳ ಸುದೀರ್ಘ ಅವಧಿಯನ್ನು … Continued

ಚಿಕ್ಕಮಗಳೂರು| ಪತ್ನಿ ಬಿಟ್ಟು ಹೋದ ಕೋಪಕ್ಕೆ ಗುಂಡು ಹಾರಿಸಿ ಕುಟುಂಬದ ಮೂವರ ಹತ್ಯೆ; ನಂತರ ತಾನೂ ಆತ್ಮಹತ್ಯೆ..

ಚಿಕ್ಕಮಗಳೂರು: ಹೆಂಡತಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಅತ್ತೆ, ನಾದಿನಿ ಹಾಗೂ 7 ವರ್ಷದ ಮಗುವನ್ನು ಗುಂಡುಹಾರಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾಂಡ್ಯ ಬಳಿ ನಡೆದಿದೆ ಎಂದು ವರದಿಯಾಗಿದೆ. ರತ್ನಾಕರ ಎಂಬಾತ ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗು … Continued