ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜೋರಾದ ಗಾಳಿಮಳೆಯ ಮುನ್ಸೂಚನೆ

ಬೆಂಗಳೂರು: ಹವಾಮಾನ ಇಲಾಖೆಯು ಕರ್ನಾಟಕದ   ಹಲವಾರು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯೊಂದಿಗೆ ಜೋರಾಗಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗರಿಷ್ಠ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ … Continued

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ; ನಾಡಹಬ್ಬದ ವೇಳಾಪಟ್ಟಿ ಪ್ರಕಟ

ಬೆಂಗಳೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026 ಅನ್ನು ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಕಾರ್ಯಕ್ರಮಗಳ ಅಧಿಕೃತ ದಿನಾಂಕಗಳನ್ನು ಘೋಷಿಸಲಾಗಿದೆ. ಈ ವರ್ಷದ ದಸರಾ ಮಹೋತ್ಸವವು ಅಕ್ಟೋಬರ್ 11 ರಿಂದ ಅಕ್ಟೋಬರ್ 21 ರವರೆಗೆ ನಡೆಯಲಿದೆ. ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಉದ್ಘಾಟಕರನ್ನು … Continued

₹9 ಕೋಟಿ ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್‌ ನಟ ರಾಜಪಾಲ್ ಯಾದವ್‌ಗೆ ಮೂರು ತಿಂಗಳ ಜೈಲು ಶಿಕ್ಷೆ

ನವದೆಹಲಿ: ಬಾಲಿವುಡ್‌ ನಟ ರಾಜಪಾಲ ಯಾದವ್ ಅವರ  ₹9 ಕೋಟಿ ಸಾಲಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣಗಳಲ್ಲಿದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಏಳು ಪ್ರತ್ಯೇಕ ಪ್ರಕರಣಗಳಲ್ಲೂ ತಲಾ ಮೂರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಈ ಆದೇಶವನ್ನು ಪ್ರಕಟಿಸಿದ್ದು, ಪ್ರತಿಯೊಂದು ಪ್ರಕರಣದಲ್ಲೂ ದೂರುದಾರರಿಗೆ ₹1.05 ಕೋಟಿ … Continued

25 ವರ್ಷದ ಹಿಂದಿನ ಸಾಲ ತೀರಿಸಲು ವಿಳಾಸ, ಮೊಬೈಲ್ ನಂಬರ್‌ ಇಲ್ಲದೆ ಸ್ನೇಹಿತನ ಹುಡುಕಿಕೊಂಡು ಕೇರಳದಿಂದ ತೆಲಂಗಾಣಕ್ಕೆ ಬಂದ ವ್ಯಕ್ತಿ…!

ಧರ್ಮಪುರಿ (ತೆಲಂಗಾಣ): ಸ್ನೇಹ ಮತ್ತು ಪ್ರಾಮಾಣಿಕತೆಗೆ ಅಪರೂಪದ ನಿದರ್ಶನವಾಗಿ, ಕೇರಳದ ವ್ಯಕ್ತಿಯೊಬ್ಬರು ಸುಮಾರು 25 ವರ್ಷಗಳ ಹಿಂದೆ ಸ್ನೇಹಿತನಿಂದ ಪಡೆದಿದ್ದ ಸಾಲವನ್ನು ತೀರಿಸಲು ತೆಲಂಗಾಣದ ಧರ್ಮಪುರಿಗೆ ಬಂದು ಅದನ್ನು ಮರಳಿಸಿದ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಅವರಿಗೆ ತಮ್ಮ ಹಳೆಯ ಸ್ನೇಹಿತನನ್ನು ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಪ್ರಸ್ತುತ ಗಲ್ಫ್ ದೇಶದಲ್ಲಿದ್ದಾರೆ. … Continued

ನ್ಯಾಯಾಲಯದಲ್ಲೇ ದಾಖಲೆಗಳ ಎಸೆತ, ಸಿಜೆಐ ವಿರುದ್ಧ ನಿಂದನೆ ; ಅರ್ಜಿದಾರನ ವಿರುದ್ಧ ಕ್ರಮ ಕೈಗೊಳ್ಳದ ಸುಪ್ರೀಂ ಕೋರ್ಟ್

ನವದೆಹಲಿ : ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ (ಜುಲೈ 10) ನಡೆದ ವಿಚಾರಣೆಯ ವೇಳೆ ಅನಿರೀಕ್ಷಿತ ಘಟನೆ ನಡೆಯಿತು. ಸ್ವತಃ ತಮ್ಮ ಪ್ರಕರಣವನ್ನು ತಾವೇ ವಾದಿಸುತ್ತಿದ್ದ ಅರ್ಜಿದಾರರೊಬ್ಬರು ನ್ಯಾಯಾಲಯದಲ್ಲೇ ಪ್ರಕರಣದ ದಾಖಲೆಗಳನ್ನು ಎಸೆದು, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ವಿಚಾರಣೆಗೆ ಅಡ್ಡಿಪಡಿಸಿದ ಘಟನೆ ನಡೆಯಿತು. ನಂತರ ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ … Continued

ವಿಡಿಯೋ | ಮೊದಲ ಬಾರಿಗೆ ಅಮೆರಿಕ–ಇಸ್ರೇಲ್ ದಾಳಿಗೆ ಧ್ವಂಸಗೊಂಡ ಖಮೆನಿ ನಿವಾಸದ ಮೊದಲ ವಿಡಿಯೋ ಬಿಡುಗಡೆ ಮಾಡಿದ ಇರಾನ್‌

ತೆಹ್ರಾನ್ : ಅಮೆರಿಕಾ–ಇಸ್ರೇಲ್ ಜಂಟಿಯಾಗಿ 2025ರ ಫೆಬ್ರವರಿ 28ರಂದು ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೆನಿಯ ನಿವಾಸಕ್ಕೆ ಉಂಟಾದ ಭಾರೀ ಹಾನಿಯ ದೃಶ್ಯಗಳನ್ನು ಇರಾನ್‌ನ ಸರ್ಕಾರಿ ಮಾಧ್ಯಮವು ಮೊದಲ ಬಾರಿಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. 35 ಸೆಕೆಂಡುಗಳ ಈ ವಿಡಿಯೊವನ್ನು ಇರಾನ್‌ನ ಸರ್ಕಾರಿ ದೂರದರ್ಶನ ಪ್ರಸಾರ ಮಾಡಿದ್ದು, … Continued

ವಿಡಿಯೊ: ನೀರು ನುಗ್ಗಿ ಹಾವು ಸಾಕಣೆ ಕೇಂದ್ರಗಳಿಂದ ತಪ್ಪಿಸಿಕೊಂಡ 900ಕ್ಕೂ ಹೆಚ್ಚು ಹಾವುಗಳು ; ಕಚ್ಚಿದ್ದಕ್ಕೆ ಮಹಿಳೆ ಸಾವು, ಹಲವರಿಗೆ ಕಡಿತ

ಬೀಜಿಂಗ್: ಚೀನಾದ ಹಲವು ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಭೀಕರ ಪ್ರವಾಹದ ನಡುವೆಯೇ, ದೇಶದ ಗುಾಂಗ್ಸಿ (Guangxi) ಪ್ರದೇಶದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ. ಪ್ರವಾಹದ ನೀರು ಹಾವು ಸಾಕಾಣಿಕೆ ಕೇಂದ್ರಗಳಿಗೆ ನುಗ್ಗಿದ ಪರಿಣಾಮ ನೂರಾರು ಹಾವುಗಳು ತಪ್ಪಿಸಿಕೊಂಡಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬ್ಲೂಮ್‌ಬರ್ಗ್ ವರದಿ ಹಾಗೂ ಚೀನಾದ ಸರ್ಕಾರಿ ಪ್ರಸಾರ ಸಂಸ್ಥೆ … Continued

ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಮೂವರು ಟಿಎಂಸಿ ಮಾಜಿ ಸಂಸದರಿಗೆ ರಾಜ್ಯಸಭೆ ಟಿಕೆಟ್ ನೀಡಿದ ಬಿಜೆಪಿ

ನವದೆಹಲಿ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ಗುರುವಾರ ಸಂಜೆ (ಜುಲೈ 9) ಬಿಜೆಪಿ ಸೇರ್ಪಡೆಯಾದ ಬೆನ್ನಿಗೇ ರಾಜ್ಯಸಭೆ ಮೂವರು ಮಾಜಿ ಸದಸ್ಯರಾದ ಸುಖೇಂದು ಶೇಖರ ರಾಯ್, ಸುಷ್ಮಿತಾ ದೇವ್ ಹಾಗೂ ಪ್ರಕಾಶ ಚಿಕ್ ಬರಾಯಿಕ್ ಅವರಿಗೆ ಜುಲೈ 24ರಂದು ನಡೆಯಲಿರುವ ರಾಜ್ಯಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ನೀಡಲಾಗಿದೆ. ಪಕ್ಷಾಂತರಕ್ಕೂ ಮುನ್ನವೇ ಈ ಮೂವರು … Continued

ಸಿಗರೇಟ್ ತುಂಡು ಹೆಕ್ಕಿ ತಂದು ಯಂತ್ರಕ್ಕೆ ಹಾಕಿದ್ರೆ ಸಿಗಲಿದೆ ಆಹಾರ ; ಸ್ವೀಡನ್‌ನಲ್ಲಿ ಕಾಗೆಗಳಿಗೆ ನಗರ ಸ್ವಚ್ಛತೆಗೆ ವಿಶಿಷ್ಟ ತರಬೇತಿ

ಸ್ಟಾಕ್‌ಹೋಮ್ : ಸ್ವೀಡನ್‌ನ ಕೊರ್ವಿಡ್‌ ಕ್ಲೀನಿಂಗ್‌ (Corvid Cleaning) ಎಂಬ ಸ್ಟಾರ್ಟ್‌ಅಪ್ ನಗರ ಪ್ರದೇಶಗಳ ಸ್ವಚ್ಛತೆಯನ್ನು ಹೆಚ್ಚಿಸಲು ಕಾಗೆಗಳ ಬುದ್ಧಿಮತ್ತೆಯನ್ನು ಬಳಸುವ ವಿನೂತನ ಪರೀಕ್ಷಾರ್ಥ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಕಾಗೆಗಳಿಗೆ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಸಿಗರೇಟ್ ತುಂಡುಗಳನ್ನು (Cigarette Butts) ಸಂಗ್ರಹಿಸಿ ವಿಶೇಷ ಯಂತ್ರದಲ್ಲಿ ಹಾಕಿದರೆ ಆಹಾರದ ರೂಪದಲ್ಲಿ ಸಣ್ಣ ಬಹುಮಾನ ದೊರೆಯುವಂತೆ … Continued