ಗೋಕರ್ಣ ಕಡಲ ತೀರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಬಂದಿದ್ದ ಹಿರಿಯ ನಾಗರಿಕರೊಬ್ಬರ ಮೃತದೇಹ ಬುಧವಾರ ಇಲ್ಲಿನ ಮುಖ್ಯ ಕಡಲತೀರಕ್ಕೆ ತೇಲಿಬಂದಿದೆ ಎಂದು ವರದಿಯಾಗಿದೆ. ರಾಮತೀರ್ಥ ಭಾಗದ ಸಮುದ್ರದ ನೀರಿನಲ್ಲಿ ಬುಧವಾರ ಅಪರಿಚಿತ ವ್ಯಕ್ತಿಯ ದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರರು ತಕ್ಷಣವೇ ಕಡಲತೀರದ ಜಾಗೃತ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ.. ಬೀಚ್ ಸೂಪರ್‌ವೈಸರ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. … Continued

ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಭೇಟಿಯಾದ ವಿಧಾನಸಭೆ ಸ್ಪೀಕರ್ : ಬಿಜೆಪಿ ತೀವ್ರ ಆಕ್ರೋಶ

ಬೆಂಗಳೂರು: ಸಾಂವಿಧಾನಿಕ ಹುದ್ದೆಯ ಘನತೆಯನ್ನು ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ಕೇವಲ ಪಕ್ಷದ ಲೆಟರ್‌ಹೆಡ್‌ಗೆ ಸೀಮಿತಗೊಳಿಸಿದ್ದು, ಇದೀಗ ವಿಧಾನಸಭೆ ಸ್ಪೀಕರ್‌ ಹುದ್ದೆಯನ್ನೂ ರಾಜಕೀಯ ನೇಮಕಾತಿಯ ಮಟ್ಟಕ್ಕೆ ಇಳಿಸಿದೆ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲಕುಮಾರ ಆರೋಪಿಸಿದ್ದಾರೆ. ಬುಧವಾರ (ಸೆಪ್ಟೆಂಬರ್‌ 2) ಹೇಳಿಕೆ ನೀಡಿದ ಅವರು, ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಜಿ.ಎಸ್‌. ಪಾಟೀಲ್‌ ಅವರು … Continued

‘ನೀವು ಕೆಲಸ ಮುಂದುವರಿಸಿ, ನಾನು ನೋಡ್ತೇನೆ’: ನೇಪಾಳ ಪ್ರವಾಹದ ವೇಳೆ 265 ಕಾರ್ಮಿಕರನ್ನು ಸುರಂಗದಲ್ಲೇ ಬಿಟ್ಟುಹೋದ ಚೀನಿ ಮೇಲ್ವಿಚಾರಕ !

ಕಠ್ಮಂಡು: ನೇಪಾಳದಲ್ಲಿ ಆಗಸ್ಟ್‌ 26ರಂದು ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ವೇಳೆ ತ್ರಿಶೂಲಿ-3ಎ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಕಾರ್ಮಿಕರನ್ನು ಅಲ್ಲೇ ಬಿಟ್ಟು ಚೀನಿ ಮೇಲ್ವಿಚಾರಕನೊಬ್ಬ ತಾನೊಬ್ಬನೇ ಅಲ್ಲಿಂದ ಹೊರಗೆ ತೆರಳಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುರಂಗ ಸಂಖ್ಯೆ 3ರಿಂದ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ರಾಜ್‌ ಛೇತ್ರಿ ಅವರು ದುರಂತದ … Continued

ನಕಲಿ ಎನ್‌ಸಿಐಬಿ ಅಧಿಕಾರಿ ಸೋಗಿನಲ್ಲಿ ವಂಚನೆ: 8 ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ಆರೋಪಿ ಕೇರಳದಲ್ಲಿ ಬಂಧನ

ಮಂಗಳೂರು: ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಯಂತೆ ನಕಲಿ ವೇಷ ಧರಿಸಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದ ಕುಖ್ಯಾತ ವಂಚಕನನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತಾರಕ್ಕನ್ ಅಲಿಯಾಸ್ ಆಂಥೋನಿ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ನಡೆದ … Continued

ಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕ

ಅಯೋಧ್ಯೆ: ರಾಮಮಂದಿರದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಬುಧವಾರ (ಸೆಪ್ಟೆಂಬರ್‌ 2) ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ಅವರನ್ನು ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯಾಗಿ ನೇಮಿಸಿದೆ. ಪಶ್ಚಿಮ ವಾಯು ಕಮಾಂಡ್‌ ಮುಖ್ಯಸ್ಥರಾಗಿ ‘ಆಪರೇಷನ್‌ ಸಿಂಧೂರ’ ವೇಳೆ ನೇತೃತ್ವ ವಹಿಸಿದ್ದ ಜೀತೇಂದ್ರ ಮಿಶ್ರ ಅವರಿಗೆ … Continued

200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಒಂದು ಹೆಣ್ಣು ಮಗುವಿನ ಜನನವು ಇಡೀ ಕುಟುಂಬಕ್ಕೆ ಐತಿಹಾಸಿಕ ಸಂಭ್ರಮದ ಕ್ಷಣವಾಗಿ ಪರಿಣಮಿಸಿದೆ. ಸುಮಾರು 200 ವರ್ಷಗಳ ಬಳಿಕ ಹಾಗೂ ನಾಲ್ಕು ತಲೆಮಾರುಗಳ ನಂತರ ದಹಿಫಾಲೆ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿರುವ ಹಿನ್ನೆಲೆಯಲ್ಲಿ, ನವಜಾತ ಶಿಶುವನ್ನು ರಥದಲ್ಲಿ ಕೂಡ್ರಿಸಿಕೊಂಡುಅದ್ಧೂರಿ ಮೆರವಣಿ ಮೂಲಕ ಮನೆಗೆ ಸ್ವಾಗತಿಸಲಾಯಿತು. ಆಸ್ಪತ್ರೆಯಿಂದ ಬಿಡುಗಡೆಯಾದ ತಾಯಿ ಮತ್ತು ಮಗು … Continued

ಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !

ಬೀಡ್‌: ಮಗಳ ಶಿಕ್ಷಣಕ್ಕಾಗಿ ಹಣ ಸಂಪಾದಿಸಬೇಕೆಂಬ ಸಂಕಲ್ಪದೊಂದಿಗೆ ಮ್ಯಾರಥಾನ್‌ಗೆ ಇಳಿದ ಮಹಾರಾಷ್ಟ್ರದ 47 ವರ್ಷದ ತಾಯಿಯೊಬ್ಬರು, ಸೀರೆ ಧರಿಸಿ ಬರಿಗಾಲಿನಲ್ಲೇ ಓಡಿ ಮೊದಲ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನಲ್ಲಿ ನಡೆದ ‘ಅಮೃತ ದೌಡ್’ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಸೀರೆ ಧರಿಸಿ ಓಡಿದ 47 ವರ್ಷದ ರಮಾಬಾಯಿ ರಣವೀರ ಅವರು, ಕ್ರೀಡಾ … Continued

ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?

ನವದೆಹಲಿ: ರಷ್ಯಾದಲ್ಲಿ ತೀವ್ರಗೊಂಡಿರುವ ದೇಶೀಯ ಇಂಧನ ಕೊರತೆಯ ಹಿನ್ನೆಲೆಯಲ್ಲಿ, ಭಾರತವು ರಷ್ಯಾಕ್ಕೆ ಗ್ಯಾಸೋಲಿನ್(ಪೆಟ್ರೋಲ್)ನ ಪ್ರಮುಖ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಕಳೆದ ಎರಡು ತಿಂಗಳುಗಳಲ್ಲಿ ಭಾರತವು ಸುಮಾರು 1 ಮಿಲಿಯನ್ (10 ಲಕ್ಷ) ಬ್ಯಾರೆಲ್ ಇಂಧನವನ್ನು ರಷ್ಯಾಕ್ಕೆ ಕಳುಹಿಸಿದೆ. ಇಂಧನ ವಿಶ್ಲೇಷಣಾ ಸಂಸ್ಥೆ ‘ವೋರ್ಟೆಕ್ಸಾ’ (Vortexa) ವರದಿ ಪ್ರಕಾರ, ಆಗಸ್ಟ್ ತಿಂಗಳಲ್ಲಿ ರಷ್ಯಾದ ಸಾಗರೋತ್ತರ ಗ್ಯಾಸೋಲಿನ್ ಆಮದು … Continued

ತಾಯಿ ಗದರಿದ ಕೋಪಕ್ಕೆ ಕೆರೆಗೆ ಹಾರಿದ 14 ವರ್ಷದ ಮಗಳು ; ರಕ್ಷಿಸಲು ಹೋದ ತಾಯಿಯೂ ಮುಳುಗಿ ಸಾವು

ಮಡಿಕೇರಿ: ಮಗಳಿಗೆ ಗದರಿದ್ದಕ್ಕೆ ತಾಯಿ-ಮಗಳ ಜೀವನ ದುರಂತ ಅಂತ್ಯ ಕಂಡ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ತಲಕಾವೇರಿ ಸಮೀಪದ ಕೆಂಪರಾಜಮೊಟ್ಟೆ ಕಾಲೋನಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮನೆಗೆ ತಡವಾಗಿ ಬಂದಿದ್ದ ವಿಚಾರಕ್ಕೆ ತಾಯಿ ಗದರಿದ್ದರಿಂದ ಮನನೊಂದ ಮಗಳು ಕೆರೆಗೆ ಹಾರಿದ್ದು, ಆಕೆಯನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು 45 ವರ್ಷದ … Continued