ಪಾಕಿಸ್ಥಾನ ಸೇನೆಗೆ ಚೀನಾದಿಂದ ೫ ಲಕ್ಷ ಕೊವಿಡ್‌ ಲಸಿಕೆ

ಇಸ್ಲಾಮಾಬಾದ್: ಚೀನಾದಿಂದ 5,00,000 ಡೋಸ್ ಕೊರೋನಾ ಲಸಿಕೆಯನ್ನು ಪಾಕಿಸ್ಥಾನ ಸೈನಿಕರಿಗೆ ನೀಡಲಾಗಿದೆ. ಚೀನಾ ಸೈನ್ಯದಿಂದ ಕೋವಿಡ್ -19 ಲಸಿಕೆ ನೆರವು ಪಡೆದ ಮೊದಲ ವಿದೇಶಿ ಸೈನ್ಯ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಸೇನೆಯು ಪಾತ್ರವಾಗಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಪಾಕಿಸ್ತಾನ ಸೇನೆಗೆ ಎಷ್ಟು ಲಸಿಕೆಗಳನ್ನು ಸರಬರಾಜು ಮಾಡಲಾಗಿದೆ ಎಂದು ಹೇಳಿಕೆಯಲ್ಲಿ … Continued

ರಷ್ಯಾದ ಸ್ಪುಟ್ನಿಕ್‌-ವಿ ಕೊವಿಡ್‌ ಔಷಧ ಈಗ ಜಾಗತಿಕ ಫೇವರಿಟ್‌

ಮಾಸ್ಕೊ: ಸುರಕ್ಷತಾ ಪ್ರಯೋಗಗಳನ್ನು ಪೂರ್ಣಗೊಳಿಸುವ ಮೊದಲು ರಷ್ಯಾ ವಿಶ್ವದ ಮೊದಲ ಕೋವಿಡ್ -19 ಲಸಿಕೆಯನ್ನು ಬಳಕೆಗಾಗಿ ತೆರವುಗೊಳಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಗಸ್ಟ್‌ನಲ್ಲಿ ಪ್ರಕಟಿಸಿದ ನಂತರ ಇದು ವಿಶ್ವಾದ್ಯಂತ ಸಂಶಯಕ್ಕೆ ಕಾರಣವಾಯಿತು. ಆದರೆ ಈಗ ಅದೇ ಸ್ಪುಟ್ನಿಕ್‌ ಔಷಧವು ಸೋವಿಯತ್ ಯುಗದ ನಂತರ ರಷ್ಯಾ ತನ್ನ ಅತಿದೊಡ್ಡ ವೈಜ್ಞಾನಿಕ ಪ್ರಗತಿ ಸಾಧಿಸುತ್ತಿರುವುದರಿಂದ ಈಗ ಅವರು … Continued

ಶಾಂತರೀತಿ ಪ್ರತಿಭಟನೆಗೆ ರೈತರಿಗೆ ಅವಕಾಶ ನೀಡಿ:ಅಮರಿಕ

ವಾಷಿಂಗ್ಟನ್‌ (ಅಮೆರಿಕ): ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವದ ಮೌಲ್ಯಗಳ ಪಾಲನೆಯಾಗಬೇಕು ಮತ್ತು ಪ್ರತಿಭಟನಾನಿರತರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕಲ್ಲದೆ ಇಂಟರ್‌ನೆಟ್‌ಗೆ ತಡೆಯಾಗದಂತೆ ನೋಡಿಕೊಳ್ಳಬೇಕೆಂದು ಅಮೆರಿಕದ ಕಾಂಗ್ರೆಶ್ನಲ್‌ ಇಂಡಿಯಾ ಆಗ್ರಹಿಸಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿಯೊಂದಿಗೆ ಮಾತನಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಶ್ನಲ್‌ ಇಂಡಿಯಾ ಸಹ ಅಧ್ಯಕ್ಷ ಬ್ರಾಡ್ ಶೆರ್ಮನ್ ತಿಳಿಸಿದ್ದಾರೆ. … Continued

ಮ್ಯಾನ್ಮಾರ್‌ನಲ್ಲಿ ಸೈನ್ಯ ದಂಗೆ ವಿರುದ್ಧ ಬೃಹತ್‌ ಪ್ರದರ್ಶನ

ಮ್ಯಾನ್ಮಾರ್‌ನಲ್ಲಿ ಭಾನುವಾರ ಕಳೆದ ವಾರ ನಡೆದ ಸೈನಿಕ ದಂಗೆ ಮತ್ತು ಚುನಾಯಿತ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಇಂಟರ್ನೆಟ್ ನಿರ್ಬಂಧ ಮತ್ತು ಫೋನ್ ಮಾರ್ಗಗಳ ನಿರ್ಬಂಧಗಳ ಹೊರತಾಗಿಯೂ ನಡೆದ ಪ್ರತಿಭಟನೆಗಳು 2007 ರ ಬೌದ್ಧ ಸನ್ಯಾಸಿ ನೇತೃತ್ವದ ಕೇಸರಿ ಕ್ರಾಂತಿಯ ನಂತರ ದೇಶದ ಅತಿದೊಡ್ಡ … Continued

ಸಂಪ್ರದಾಯ ಮುರಿದು ಬಿಷಪ್‌ಗಳ ಸಿನೊಡ್‌ನ ಅಧೀನ ಕಾರ್ಯದರ್ಶಿಯಾಗಿ ಮಹಿಳೆ ನೇಮಕ ಮಾಡಿದ ಪೋಪ್‌

ಪೋಪ್ ಫ್ರಾನ್ಸಿಸ್ ಕ್ಯಾಥೊಲಿಕ್ ಸಂಪ್ರದಾಯವನ್ನು ಮುರಿದು ಮಹಿಳೆಯನ್ನು ಬಿಷಪ್‌ಗಳ ಸಿನೊಡ್‌ನ ಅಧೀನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ, ಇವರು ಮತದಾನದ ಹಕ್ಕು ಪಡೆದಿರುವ ಮೊದಲಲ ಸಿನೋಡ್‌ನ ಅಧೀನ ಕಾರ್ಯದರ್ಶಿಯಾಗಿದ್ದಾರೆ. ಫ್ರೆಂಚ್ ಮಹಿಳೆ ನಥಾಲಿ ಬೆಕ್ವಾರ್ಟ್ ಫೆಬ್ರವರಿ 6 ರಂದು ಸಿನೊಡ್ಗೆ ಹೆಸರಿಸಲಾದ ಎರಡು ಹೊಸ ಉಪ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲಿ ಅವರು 2019 ರಿಂದ ಸಲಹೆಗಾರರಾಗಿದ್ದಾರೆ. ಈ … Continued

ಜಂಟಿ ಸಮರಾಭ್ಯಾಸ: ಅಮೆರಿಕ ವಾಯುಪಡೆ ಭಾರತಕ್ಕೆ ಆಗಮನ

ಜೈಪುರ: ಪಾಕಿಸ್ತಾನ ಗಡಿಯಲ್ಲಿ ಹದಿನೈದು ದಿನಗಳ ಕಾಲ ನಡೆಯುವ ಇಂಡೋ-ಯುಎಸ್ ಜಂಟಿ ವಾಯುಪಡೆ ಕವಾಯತಿನಲ್ಲಿಪಾಲ್ಗೊಳ್ಳಲು ಅಮೆರಿಕದ ಸೈನಿಕರು ರಾಜಸ್ಥಾನವನ್ನು ತಲುಪಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. 270 ಯುಎಸ್ ಸೈನಿಕರ ತಂಡವು ವಿಶೇಷ ವಿಮಾನದಲ್ಲಿ ಸೂರತ್‌ಗೆ ತಲುಪಿ ಮಹಾಜನ್ ಫೀಲ್ಡ್ ಫೈರಿಂಗ್ ಶ್ರೇಣಿಗೆ ತೆರಳಿದ್ದು, ಫೆಬ್ರವರಿಯಲ್ಲಿ ಜಂಟಿ ವಾಯುಪಡೆ ಕವಾಯತು ನಡೆಯಲಿದೆ ಎಂದು ರಕ್ಷಣಾ … Continued

ಹಫೀಜ್‌ ಸಯೀದ್‌, ವಟಾಲಿಗೆ ಜಾಮೀನು ರಹಿತ ವಾರಂಟ್

ನವ ದೆಹಲಿ: ಲಷ್ಕರ್-ಎ-ತೈಬಾ (ಎಲ್‌ಇಟಿ) ಮುಖ್ಯಸ್ಥ ಮುಹಮ್ಮದ್ ಹಫೀಜ್ ಸಯೀದ್, ಕಾಶ್ಮೀರಿ ಉದ್ಯಮಿ ಜಹೂರ್ ಅಹ್ಮದ್ ಷಾ ವಟಾಲಿ, ಪ್ರತ್ಯೇಕತಾವಾದಿ ಅಲ್ತಾಫ್ ಅಹ್ಮದ್ ಷಾ ಅಲಿಯಾಸ್ ಫುಂಟೂಶ್ ಮತ್ತು ಯುಎಇ ಉದ್ಯಮಿ ನವಲ್ ಕಿಶೋರ್‌ ವಿರುದ್ಧ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿದೆ. ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕರಿಗೆ ಧನಸಹಾಯ ಪ್ರಕರಣದಲ್ಲಿ ಜಾರಿ … Continued

ಎಚ್‌ಎಎಲ್‌-ಯುಎಸ್‌ ಲಾಕ್ಹೀಡ್‌ ಮಾರ್ಟಿನ್‌ ಒಪ್ಪಂದ

ಭಾರತದ ಬಾಹ್ಯಾಕಾಶ ವಲಯದಲ್ಲಿನ ಔದ್ಯಮಿಕ ಸಹಯೋಗಕ್ಕಾಗಿ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಅಮೆರಿಕದ ರಕ್ಷಣಾ ಪ್ರಮುಖ ಲಾಕ್ಹೀಡ್‌ ಮಾರ್ಟಿನ್‌ ಏರೋನಾಟಿಕ್ಸ್‌ ತಿಳಿಸಿದೆ. ಇದು ಭಾರತದ ಉದ್ಯಮ ಸಂಬಂಧವನ್ನು ಬಲಪಡಿಸುತ್ತದೆ. ಅಲ್ಲದೇ ಕಂಪನಿಯ ಜಾಗತಿಕ ಬಾಹ್ಯಾಕಾಶ ಉದ್ಯಮದ ಪ್ರಗತಿಗೆ ಪೂರಕವಾಗಲಿದೆ ಎಂದು ಕಂಪನಿಯ ಇಂಟಿಗ್ರೇಟೆಡ್‌ ಫೈಟರ್‌ ಗ್ರೂಪ್‌ನ ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಉಪಾಧ್ಯಕ್ಷ ಜಿ.ಆರ್‌.ಮೆಕ್‌ಡೊನಾಲ್ಡ್‌ … Continued

ಸೆನೆಟ್ ದೋಷಾರೋಪಣೆ ವಿಚಾರಣೆಗೆ ಟ್ರಂಪ್‌ ಹಾಜರಾಗಲ್ಲ

ವಾಷಿಂಗ್ಟನ್‌: ಅಮೆರಿಕದ ರಾಜಧಾನಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಕುರಿತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸೆನೆಟ್ ದೋಷಾರೋಪಣೆ ವಿಚಾರಣೆಗೆ ಸಾಕ್ಷ್ಯ ನುಡಿಯುವಂತೆ ಕೋರಿದ್ದು, ಮಾಜಿ ಅಧ್ಯಕ್ಷರು ಯಾವುದೇ ಸಾಕ್ಷ್ಯ ಹೇಳುವುದಿಲ್ಲ ಎಂದು ಟ್ರಂಪ್‌ ಸಲಹೆಗಾರರು ತಿಳಿಸಿದ್ದಾರೆ. ಟ್ರಂಪ್‌ರ ಸಾಕ್ಷ್ಯವನ್ನು ಒತ್ತಾಯಿಸಲು ಡೆಮೋಕ್ರಾಟ್‌ಗಳಿಗೆ ಅಧಿಕಾರವಿಲ್ಲದಿದ್ದರೂ, ಜನವರಿ 6 ರಂದು ನಡೆದ ಹಿಂಸಾತ್ಮಕ ಘಟನೆಗಳಿಗೆ ಟ್ರಂಪ್‌ರನ್ನು … Continued

ಸಂಯಮದಿಂದ ವರ್ತಿಸಲು ಸರ್ಕಾರ-ರೈತರಿಗೆ ವಿಶ್ವಸಂಸ್ಥೆ ಮನವಿ

ನವದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಹಾಗೂ ಭಾರತೀಯ ಅಧಿಕಾರಿಗಳು ಮನವ ಹಕ್ಕುಗಳಿಗೆ ಧಕ್ಕೆಯಾಗದಂತೆ ಸಂಯಮದಿಂದ  ನಡೆದುಕೊಳ್ಳಬೇಕೆಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ಎಲ್ಲರಿಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ “ಸಮನಾದ ಪರಿಹಾರಗಳನ್ನು” ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿಗೆ ಮಾನವ ಹಕ್ಕುಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ರಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ … Continued