ಉತ್ತರ ಪ್ರದೇಶ: ೮ನೇ ಕ್ಲಾಸ್‌ ಪಾಸ್‌ ಆದವ ಹೆರಿಗೆ ಮಾಡಲು ಹೋಗಿ ತಾಯಿ-ಮಗು ಸಾವು

ಸುಲ್ತಾನಪುರ : ಉತ್ತರ ಪ್ರದೇಶ ಮತ್ತೊಂದು ಅಧ್ವಾನಕ್ಕೆ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬನ ಅಧ್ವಾನದಿಂದ ತಾಯಿ-ಮಗು ಸತ್ತು ಹೋಗಿದೆ..! 8ನೇ ತರಗತಿ ಓದಿರುವ ವ್ಯಕ್ತಿಯೊಬ್ಬ ಹೆರಿಗೆ ಮಾಡಲು ಹೋಗಿ ತಾಯಿ- ಮಗು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದು ಮಲ್ಲನ್‌ನ ಪೂರ್ವಾ ಗ್ರಾಮದ ಪೂನಂ ಎನ್ನುವ ಹೆಸರಿನ ಗರ್ಭಿಣಿ ಮಹಿಳೆ ಮಂಗಳವಾರ ರಾತ್ರಿ, … Continued

ಪರಮ್ ಬಿರ್ ಸಿಂಗ್ ಪತ್ರ: ಅಜಿತ ಪವಾರ್‌- ಜಯಂತ ಪಾಟೀಲ ಭೇಟಿ ಮಾಡಲಿರುವ ಶರದ್ ಪವಾರ್

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಾ.೨೧ರಂದು (ಭಾನುವಾರ) ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಿದ್ದಾರೆ. ಗೃಹ ಸಚಿವ ಅನಿಲ್ ದೇಶ್ಮುಖ್ “ದುಷ್ಕೃತ್ಯ” ದಲ್ಲಿ ತೊಡಗಿದ್ದಾರೆ. ಅಮಾನತುಗೊಂಡ ಎಪಿಐ ಸಚಿನ್ ವಾಝೆ ಅವರಿಗೆ ಪ್ರತಿ ತಿಂಗಳು … Continued

ಭಾರತದಲ್ಲಿ 44 ಸಾವಿರ ಸಮೀಪಕ್ಕೆ ನೆಗೆದ ದೈನಂದಿನ ಕೊರೊನಾ ಸೋಂಕು…!

ನವ ದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದ್ದು, ಕಳೆದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 43,846 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಕಳೆದ ವರ್ಷದ 112 ದಿನಗಳ ಗರಿಷ್ಠ ಸಂಖ್ಯೆಯಾಗಿದೆ. ಇದೇ ಸಮಯದಲ್ಲಿ ದಿನವೊಂದರಲ್ಲಿ 197 ಕೊವಿಡ್‌ ಮರನಗಳು ಸಂಭವಿಸಿವೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಪ್ರಕರಣ ಹೆಚ್ಚಳವಾಗಿದ್ದು ದೇಶದಲ್ಲಿ ಒಟ್ಟಾರೆ ಪ್ರಕರಣಗಳು ಹೆಚ್ಚಲು ಕಾರಣವಾಗಿದ್ದರೆ ಉಳಿದಂತೆ ದೆಹಲಿ, … Continued

ಪತ್ರ ತನ್ನದೇ ಎಂದು ಖಚಿತಪಡಿಸಿದ ಪರಮ್‌ಬಿರ್‌: ಶೀಘ್ರದಲ್ಲೇ ಸರ್ಕಾರ ತಲುಪಲಿದೆ ಸಹಿ ಮಾಡಿದ ನಕಲು

ಮುಂಬೈ: ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಳುಹಿಸಿದ “ಸಹಿ ಮಾಡದ ಪತ್ರ” ದ ಹಿಂದಿನ ರಹಸ್ಯಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಮುಖ್ಯಮಂತ್ರಿ … Continued

ನನ್ನ ವಿರುದ್ಧದ ಆರೋಪ ಆತ್ಮರಕ್ಷಣೆಗಾಗಿ ಪರಮ್‌ ಬಿರ್‌ ಮಾಡಿದ ಪಿತೂರಿ, ಮಾನನಷ್ಟ ಮೊಕದ್ದಮೆ ಹೂಡುವೆ: ದೇಶ್ಮುಖ್

ಮುಂಬೈ: ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅಪ್ಪಟ ಸುಳ್ಳು ಎಂದು ಹೇಳಿರುವ ಆರೋಪವನ್ನು ಗೃಹ ಸಚಿವ ಅನಿಲ್ ದೇಶ್ಮುಖ್ ಇದು ನನ್ನ ಮತ್ತು ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಆತ್ಮರಕ್ಷಣೆಗಾಗಿ ಅಪಖ್ಯಾತಿಗೊಳಿಸುವ ಪಿತೂರಿಯಾಗಿದೆ. ಪರಮ್‌ ಬಿರ್‌ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ. ಪ‌ರಮ್‌ ಬೀರ್ ಸಿಂಗ್ ಹೇಗೆ ಸುಳ್ಳು ಹೇಳುತ್ತಿದ್ದಾರೆ. ಸಚಿನ್ … Continued

ದೆಹಲಿ ಮಾದರಿಯಲ್ಲಿ ಬೆಂಗಳೂರನ್ನು ನಾಲ್ಕು ದಿಕ್ಕುಗಳಿಂದ ಸುತ್ತುವರಿಯಿರಿ: ಕರ್ನಾಟಕದ ರೈತರಿಗೆ ಟಿಕಾಯತ್‌ ಕರೆ

ಶಿವಮೊಗ್ಗ: ನರೇಂದ್ರ ಮೋದಿಯವರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವಂತೆ ಅಗ್ರಹಿಸಿ ನಡೆಯುತ್ತಿರುವ ದೇಶವ್ಯಾಪಿ ರೈತ ಹೋರಾಟದ ಭಾಗವಾಗಿ ಶನಿವಾರ ಹೋರಾಟದ ನೆಲ ಶಿವಮೊಗ್ಗದಲ್ಲಿ ಬೃಹತ್ ರೈತ ಮಹಾ ಪಂಚಾಯತ್ ನಡೆಯಿತು. ದಕ್ಷಿಣ ಭಾರತದ ಮೊಟ್ಟ ಮೊದಲನೆ ಬಾರಿಗೆ ಶಿವಮೊಗ್ಗದಲ್ಲಿ ನಡೆದ ಈ ಮಹಾ ಪಂಚಾಯತ್ ನಲ್ಲಿ ರೈತ ಹೋರಾಟದ ನೇತಾರರಾದ ರಾಕೇಶ್ … Continued

ಅನಿಲ ದೇಶಮುಖ್‌ ರಾಜೀನಾಮೆಗೆ ಬಿಜೆಪಿ ಒತ್ತಾಯ

ಮುಂಬೈ ಮಹಾರಾಷ್ಟ್ರದ ರಾಜಕಾರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರು ಸಚಿನ್ ವಾಜ್ ಅವರಿಗೆ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸುವಂತೆ ಒತ್ತಡ ಹೇರಿದ್ದಾಗಿ ಪರಮ್ ಬೀರ್ ಸಿಂಗ್ ಪತ್ರ ಬರೆದ ನಂತರ ಬಿಜೆಪಿ ಅನಿಲ ದೇಶಮುಖ ಅವರನ್ನು ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿದೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ … Continued

ಮಹಾ ಗೃಹ ಸಚಿವ ದೇಶ್​ಮುಖ್ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸಲು ವಾಜೆ ಮೇಲೆ ಒತ್ತಡ: ಪರಮ್‌ಬಿರ್‌ ಸಿಂಗ್ ಸ್ಫೋಟಕ ಆರೋಪ‌

ಮುಂಬೈ: ಇತ್ತೀಚೆಗಷ್ಟೇ ಮುಂಬೈ ಪೊಲೀಸ್‌ ಆಯುಕ್ತ ಹುದ್ದೆಯಿಂದ ವರ್ಗಾವಣೆಯಾಗಿದ್ದ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪರಮ್ ಬೀರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ. ಮುಂಬಯಿ ಪೊಲೀಸ್ ಅಪರಾಧ ವಿಭಾಗದ … Continued

ಮಹಾರಾಷ್ಟ್ರದಲ್ಲಿ 27 ಸಾವಿರಕ್ಕೂ ಹೆಚ್ಚು ದೈನಂದಿನ ಕೊರೊನಾ ಪ್ರಕರಣ ದಾಖಲು

ಮುಂಬೈ: ಮಹಾರಾಷ್ಟ್ರದಲ್ಲಿ ಶನಿವಾರ 27,126 ಹೊಸ ಕೊವಿಡ್‌-19 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ಒಂದು ದಿನದ ಗರಿಷ್ಠ ಏರಿಕೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 92 ಸಾವುನೋವುಗಳೊಂದಿಗೆ, ಸಾವಿನ ಸಂಖ್ಯೆ 53,300 ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶನಿವಾರ, 13,588 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಕೆ 22,03,553 … Continued

ತಮಿಳುನಾಡು: ಕೊರೊನಾ ಹೆಚ್ಚಳ, 9, 10, 11ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಸ್ಥಗಿತ

ಚೆನ್ನೈ: ತಮಿಳುನಾಡಿನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಮಾರ್ಚ್ 22ರಿಂದ 9, 10 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ. ಶಾಲೆಗಳು 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಕ್ತವಾಗಿರುತ್ತವೆ. ಕೋವಿಡ್ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಾಜ್ಯ ಮಂಡಳಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. … Continued