ತನ್ನ ವರ್ಗಾವಣೆ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪರಂಬೀರ್‌ ಸಿಂಗ್‌, ದೇಶ್ಮುಖ್ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯ

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಹೊರಿಸಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಸಿಂಗ್, ಕಳೆದ ವಾರ ಅವರ ವರ್ಗಾವಣೆ ಕಾನೂನುಬಾಹಿರ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದು … Continued

ಉತ್ತರಾಖಂಡ್‌ ಸಿಎಂಗೆ ಕೊರೊನಾ ಸೋಂಕು‌

ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆಯ ಮೇರೆಗೆ ಪ್ರತ್ಯೇಕವಾಗಿದ್ದಾರೆ. ಟ್ವೀಟ್‌ ಮೂಲಕ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ರಾವತ್, ‘ ನನ್ನು ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ. ನಾನು ಚೆನ್ನಾಗಿದ್ದೇನೆ ಮತ್ತು ನನಗೆ ಯಾವುದೇ ಸಮಸ್ಯೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಪ್ರತ್ಯೇಕವಾಗಿದ್ದೇನೆ. ಕಳೆದ ಕೆಲವು … Continued

ಭಾರತ ಏಕಪಕ್ಷೀಯ ದೇಶವಾಗುತ್ತದೆಯೋ ಇಲ್ಲವೋ ಎಂಬುದಕ್ಕೆ ಬಂಗಾಳ ಚುನಾವಣೆ ನಿರ್ಣಾಯಕ

ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿಯವರ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್  ಪಶ್ಚಿಮ ಬಂಗಾಳದ ಚುನಾವಣೆ ಹೊಸ್ತಿಲಲ್ಲಿ  ಸವಾಲುಗಳು, ತೃಣಮೂಲ ಕಾಂಗ್ರೆಸ್‌ ಪ್ರಬಲ್ಯ, ಬಿಜೆಪಿ ಪ್ರಯತ್ನ, ಎಡ-ಕಾಂಗ್ರೆಸ್‌ ಒಕ್ಕೂಟ, ಮಮತಾ ಬ್ಯಾನರ್ಜಿ ನಾಯಕತ್ವ. ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ವಿಭಿನ್ನ ಫಲಿತಾಂಶದ  ಇತ್ಯಾದಿ ಸಂಗತಿಗಳ ಬಗ್ಗೆ ಟೆಲಿಗ್ರಾಫ್‌ … Continued

ಭಾರತದಲ್ಲಿ ಲಸಿಕೆ ವ್ಯರ್ಥದ ಪ್ರಮಾಣ 6.5%, ತೆಲಂಗಾಣಕ್ಕೆ ಮೊದಲ ಸ್ಥಾನ, ಕರ್ನಾಟಕಕ್ಕೆ ನಾಲ್ಕನೇ ನಂಬರ್‌

ನವ ದೆಹಲಿ: ಭಾರತದಲ್ಲಿ ಸರಾಸರಿ ಕೊವಿಡ್‌-19 ಲಸಿಕೆ ವ್ಯರ್ಥವು 6.5% ರಷ್ಟಿದೆ, ಲಸಿಕೆ ವ್ಯರ್ಥವಾಗಿರುವ ರಾಜ್ಯಗಳಲ್ಲಿ ತೆಲಂಗಾಣ (17.6 %) ಮತ್ತು ಆಂಧ್ರಪ್ರದೇಶ (11.6% ) ವ್ಯರ್ಥವಾಗುತ್ತಿದೆ ಎಂದು ಕೇಂದ್ರವು ತಿಳಿಸಿದೆ. ದೇಶದಲ್ಲಿ ಒಟ್ಟು 3,64,67,744 ಲಸಿಕೆ ಪ್ರಮಾಣ ನೀಡಲಾಗಿದೆ, ಇದರಲ್ಲಿ 45-60 ವರ್ಷ ವಯಸ್ಸಿನ 1,48,60,930 ಫಲಾನುಭವಿಗಳು ನಿರ್ದಿಷ್ಟ ಸಹ-ಕಾಯಿಲೆಗಳು ಮತ್ತು ಹಿರಿಯ ನಾಗರಿಕರಿಗೆ … Continued

20 ವರ್ಷದ ಯುವತಿ ಹೊಟ್ಟೆಯಲ್ಲಿ 16 ಕೆಜಿ ತೂಕದ ಗಡ್ಡೆ…!

ಭೋಪಾಲ್: ಭೋಪಾಲ್‌ನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಭಾನುವಾರ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರ 20 ವರ್ಷದ ಮಹಿಳೆಯ ಹೊಟ್ಟೆಯಿಂದ 16 ಕಿಲೋಗ್ರಾಂ ಗೆಡ್ಡೆ ಹೊರ ತೆಗೆದಿದ್ದಾರೆ. ಆಸ್ಪತ್ರೆಯ ವ್ಯವಸ್ಥಾಪಕ ದೇವೇಂದ್ರ ಚಂದೋಲಿಯಾ ಅವರು, ಇದು ಅಂಡಾಶಯದ ಗೆಡ್ಡೆಯಾಗಿದ್ದು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಮಹಿಳೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. “ಎರಡು ದಿನಗಳ ಹಿಂದೆ, … Continued

ಜಮ್ಮು-ಕಾಶ್ಮೀರದ ಶೋಪಿಯಾನದಲ್ಲಿ ನಾಲ್ವರು ಉಗ್ರರು ಹತ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆಯುತ್ತಿರುವ ಮುಖಾಮುಖಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯನ್ನು ಸೋಮವಾರ ಮುಂಜಾನೆಯಿಂದ ನಡೆಸಿದ್ದು, ಶೋಪಿಯಾನ್‌ನ ಮಣಿಹಾಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಈ ಪ್ರದೇಶಕ್ಕೆ ಮುತ್ತಿಗೆ ಹಾಕಿದ ನಂತರ, ಅಲ್ಲಿ ಅಡಗಿರುವ ಉಗ್ರರನ್ನು ಶರಣಾಗುವಂತೆ ಕೇಳಿಕೊಂಡರು. ಆದರೆ, ಉಗ್ರರು ಈ … Continued

ಭಾರತದಲ್ಲಿ 46,951 ದೈನಂದಿನ ಕೊರೊನಾ ಸೋಂಕು…ಮಹಾರಾಷ್ಟ್ರವೇ ದೊಡ್ಡ ತಲೆನೋವು

ನವ ದೆಹಲಿ: ಭಾರತದಲ್ಲಿ ಕಳೆದ 24 ತಾಸಿನಲ್ಲಿ 46,951 ಹೊಸ ಕೊರೊನಾ ಸೋಂಕು ದಾಖಲಿಸಿದೆ.ಇದರಲ್ಲಿ 30,535 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಮತ್ತು 2,644 ಪ್ರಕರಣಗಳು ಪಂಜಾಬ್‌ನಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಜನವರಿ 12 ರಿಂದ ಮೊದಲ ಬಾರಿಗೆ ದೇಶಾದ್ಯಂತ ಸಾವುಗಳ ಸಂಖ್ಯೆ 200 ಅಂಕಿಗಳನ್ನು ದಾಟಿದ್ದು, 212 ಜನ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು … Continued

ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ, ೧೦, ೧೨ನೇ ಕ್ಲಾಸಿನವರು‌ ಮನೆ ಹತ್ತಿರದ ಕೇಂದ್ರದಲ್ಲೇ ಪರೀಕ್ಷೆ ಬರೆಯಬಹುದು

ನವ ದೆಹಲಿ : ಕೊವಿಡ್‌-೧೯ ಸಾಂಕ್ರಾಮಿಕ ರೋಗದ ನಡುವೆ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ೧೦ ಮತ್ತು ೧೨ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿದೆ. ಅವರು ತಮ್ಮ ಪರೀಕ್ಷಾ ಕೇಂದ್ರವನ್ನು ಬದಲಾಯಿಸುವ ಆಯ್ಕೆಯನ್ನು ಮಂಡಳಿ ನೀಡಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಮಾರ್ಚ್ 25ರೊಳಗೆ ತಮ್ಮ ಸ್ವಂತ ಶಾಲೆಗೆ ಮನವಿ ಸಲ್ಲಿಸಬಹುದು. ಆದರೆ, ಶಾಲೆಗಳು ಮಾರ್ಚ್ … Continued

ಬಿಜೆಪಿಗೆ ಸೇರ್ಪಡೆಗೊಂಡ ಟಿಎಂಸಿ ಸಂಸದ ಸಿಸಿರ್‌ ಅಧಿಕಾರಿ

ಕೋಲ್ಕತ್ತ: ನಿರೀಕ್ಷೆಯಂತೆ ಪಶ್ಚಿಮ ಬಂಗಾಳ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ಅವರ ತಂದೆ ಟಿಎಂಸಿ ಸಂಸದ ಸಿಸಿರ್‌ ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಎಗ್ರಾದಲ್ಲಿ ನಡೆದ ಗೃಹ ಸಚಿವ ಅಮಿತ್‌ ಶಾ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡು ಮಾತನಾಡಿ, ಬಂಗಾಳವನ್ನು ದೌರ್ಜನ್ಯದಿಂದ ರಕ್ಷಿಸಲು ಬಿಜೆಪಿ ಅಧಿಕಾರಕ್ಕೆ ತರುವುದು ಅಗತ್ಯವಾಗಿದೆ … Continued

ಅನಿಲ್ ದೇಶ್ಮುಖ್ ವಿರುದ್ಧ ಪರಮ್ ಬಿರ್ ಸಿಂಗ್ ಆರೋಪದ ತನಿಖೆ ನಡೆಸಲು ಜೂಲಿಯೊ ರಿಬೆರಿಯೊ ನಿರಾಕರಣೆ

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮುಂಬೈ, ಗುಜರಾತ್ ಮತ್ತು ಪಂಜಾಬ್‌ನ ಮಾಜಿ ಡಿಜಿಪಿ ಜೂಲಿಯೊ ರಿಬೆರಿಯೊ ಅವರ ಹೆಸರನ್ನು ಸೂಚಿಸಿದ ಕೆಲವೇ ಗಂಟೆಗಳ ನಂತರ, ಹಿರಿಯ ಪೋಲೀಸ್ ವಿಚಾರಣೆಯ ಭಾಗವಾಗಲು ಅವರು ನಿರಾಕರಿಸಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ … Continued