ಕ್ಯಾಮರಾದಲ್ಲಿ ಸೆರೆ : ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಕಾಲುವೆಗೆ ಎಸೆದ ಪೊಲೀಸರು…!

ಪಾಟ್ನಾ: ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಶವವನ್ನು ಪೊಲೀಸರು ಕಾಲುವೆಗೆ ಎಸೆಯುತ್ತಿರುವ ದೃಶ್ಯ ಸೆರೆಯಾಗಿದೆ. ದಾರಿಹೋಕರೊಬ್ಬರು ತೆಗೆದ ವಿಡಿಯೋ ತುಣುಕಿನಲ್ಲಿ ಪೊಲೀಸರು ತಮ್ಮ ಲಾಠಿಗಳಿಂದ ಶವವನ್ನು ಕಾಲುವೆಗೆ ತಳ್ಳುತ್ತಿರುವುದನ್ನು ತೋರಿಸುತ್ತದೆ. ವೀಡಿಯೊ ವ್ಯಾಪಕವಾಗಿ ಪ್ರಸಾರವಾದ ನಂತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲೋಪವನ್ನು ಒಪ್ಪಿಕೊಂಡ ಸ್ಥಳೀಯ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ರಕ್ಷಿಸಲು ಸಾಧ್ಯವಾಗದ ದೇಹದ … Continued

ಚೆನ್ನೈನ ವ್ಯಕ್ತಿಗೆ ಬ್ಯಾಂಕ್ ಖಾತೆಗೆ 753 ಕೋಟಿ ರೂ.ಗಳ ಅಸಾಮಾನ್ಯ ಉಡುಗೊರೆ…!

ಚೆನ್ನೈ : ಚೆನ್ನೈನ ಫಾರ್ಮಸಿ ಉದ್ಯೋಗಿಯೊಬ್ಬರು ಶನಿವಾರ ತಮ್ಮ ಬ್ಯಾಂಕ್ ಖಾತೆಗೆ 753 ಕೋಟಿ ರೂ.ಗಳನ್ನು ಜಮಾ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಮುಹಮ್ಮದ್ ಇದ್ರಿಸ್ ಎಂಬವರು ಶುಕ್ರವಾರ (ಅಕ್ಟೋಬರ್ 6) ತನ್ನ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಿಂದ 2,000 ರೂ.ಗಳನ್ನು ಸ್ನೇಹಿತರೊಬ್ಬರಿಗೆ ವರ್ಗಾಯಿಸಿದ್ದರು. ಈ ವಹಿವಾಟಿನ ನಂತರ, ಅವರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು … Continued

ಅಯೋಧ್ಯೆ ರಾಮ ಮಂದಿರ : ಈ ವರ್ಷದ ಮಾರ್ಚ್‌ ವರೆಗೆ 900 ಕೋಟಿ ಖರ್ಚು, ಬ್ಯಾಂಕ್ ಖಾತೆಗಳಲ್ಲಿ 3,000 ಕೋಟಿ ರೂ ಇದೆ: ಚಂಪತ್ ರಾಯ್‌

ಅಯೋಧ್ಯೆ : ಫೆಬ್ರವರಿ 5, 2020 ಮತ್ತು ಈ ವರ್ಷದ ಮಾರ್ಚ್ 31 ರ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 900 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು ಟ್ರಸ್ಟ್ ತನ್ನ ಬ್ಯಾಂಕ್ ಖಾತೆಗಳಲ್ಲಿ 3,000 ಕೋಟಿ ರೂಪಾಯಿಗಳನ್ನು ಹೊಂದಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ … Continued

ಜಾತಿ ಸಮೀಕ್ಷೆಗೆ ಆದೇಶಿದ ರಾಜಸ್ಥಾನ ಸರ್ಕಾರ

ಜೈಪುರ : ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಈಗ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಆದೇಶಿಸಿದೆ. ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಈ ವೇಳೆ ರಾಜಸ್ಥಾನದ ಅಶೋಕ ಗೆಹ್ಲೋಟ್‌ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಆದೇಶ ಹೊರಡಿಸಿದೆ. ಎಲ್ಲಾ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು … Continued

ಲೋಕಸಭೆಗೆ ಈಗ ಚುನಾವಣೆ ನಡೆದ್ರೆ ಮೋದಿ ನೇತೃತ್ವಕ್ಕೆ ಜೈಕಾರವೋ ? ವಿಪಕ್ಷಗಳ ಮೈತ್ರಿಕೂಟಕ್ಕೋ..? ಯಾರಿಗೆ ಬಹುಮತ..? : ಇದಕ್ಕೆ ಇಂಡಿಯಾ ಟಿವಿ-ಸಿ ಎನ್‌ ಎಕ್ಸ್‌ ಸಮೀಕ್ಷೆ ಏನು ಹೇಳಿದೆ ನೋಡಿ…

ನವದೆಹಲಿ: ಲೋಕಸಭೆಗೆ ಈಗ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) 543 ಲೋಕಸಭಾ ಸ್ಥಾನಗಳಲ್ಲಿ 315 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಗಳಿಸಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಯಲ್ಲಿ ಕಂಡುಬಂದಿದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ (I.N.D.I.A) 172 ಲೋಕಸಭಾ ಸ್ಥಾನಗಳನ್ನು ಪಡೆಯಬಹುದು ಮತ್ತು ಪ್ರಾದೇಶಿಕ ಪಕ್ಷಗಳು … Continued

ವೀಡಿಯೊ…: ಹೆಲ್ಮೆಟ್‌ನೊಳಗೆ ಅಡಗಿಕೊಂಡಿತ್ತು ವಿಷಪೂರಿತ ನಾಗರಹಾವು…ಅದೃಷ್ಟವಶಾತ್‌ ವ್ಯಕ್ತಿ ಕಡಿತದಿಂದ ಪಾರು | ವೀಕ್ಷಿಸಿ

ಕೇರಳದ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿಟ್ಟಿದ್ದ ಹೆಲ್ಮೆಟ್‌ನಲ್ಲಿ ನಾಗರಹಾವನ್ನು ಪತ್ತೆಯಾಗಿದೆ. ವಾಹನ ಸವಾರ ಈ ವಿಷಕಾರಿ ಹಾವಿನ ಕಡಿತದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ತ್ರಿಶೂರ್ ಮೂಲದ ಸೋಜನ್, ತನ್ನ ಕೆಲಸದ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಪಕ್ಕದ ಪ್ಲಾಟ್‌ಫಾರ್ಮ್‌ನಲ್ಲಿ ಹೆಲ್ಮೆಟ್ ಇರಿಸಿದ್ದರು. ಸಂಜೆ ಅವರು ಹೊರಡುವಾಗ ತಮ್ಮ ಹೆಲ್ಮೆಟ್‌ ತೆಗೆದಾಗ ಅವರಿಗೆ ಹೆಲ್ಮೆಟ್‌ ಒಳಗೆ ಏನೋ ಪ್ರವೇಶಿಸಿದೆ ಎಂಬುದು … Continued

ಲೋಕಸಭೆ ಚುನಾವಣೆ : ಬಿಹಾರದಲ್ಲಿ ನಿತೀಶ ಲೆಕ್ಕಾಚಾರ ಫಲ ನೀಡುವುದೇ..? ; ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ಹಲವು ವರ್ಷಗಳಿಂದ ಅತ್ಯಂತ ಅಸ್ಥಿರವಾಗಿರುವ ಬಿಹಾರ ರಾಜಕೀಯವು ಹಲವಾರು ಸಮ್ಮಿಶ್ರ ಸರ್ಕಾರಗಳ ರಚನೆ ಮತ್ತು ಸಾಕಷ್ಟು ತಿರುವುಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ರಾಜ್ಯದಲ್ಲಿನ ರಾಜಕೀಯ ಸನ್ನಿವೇಶದಲ್ಲಿನ ಕ್ರಿಯಾತ್ಮಕ ಬದಲಾವಣೆಗಳು 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಮಾಡಿದೆ. ಶನಿವಾರ (ಅಕ್ಟೋಬರ್ 7) ನಡೆಸಿದ ಇತ್ತೀಚಿನ ಇಂಡಿಯಾ ಟಿವಿ-ಸಿಎನ್‌ಎಕ್ಸ್ … Continued

ಆರು ತಿಂಗಳ ಜೈಲು ಶಿಕ್ಷೆ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ ನಟಿ ಜಯಪ್ರದಾ

ಚೆನ್ನೈ: ತಮ್ಮ ಮಾಲೀಕತ್ವದ ಚಿತ್ರಮಂದಿರದ ಉದ್ಯೋಗಿಗಳ ವಿಮಾ ಪಾಲಿನ ಹಣದ ಬಾಕಿ ಮೊತ್ತ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತನಗೆ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಬಾಲಿವುಡ್‌ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರು ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಜಯಪ್ರದಾ ಅವರು ತಮ್ಮ ಮಾಲೀಕತ್ವದ ಚಿತ್ರಮಂದಿರದ ಉದ್ಯೋಗಿಗಳ ವಿಮಾ … Continued

2024ರಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಭಾರತದ ʼಗಗನಯಾನ ನೌಕೆʼಯ ಮೊದಲ ಚಿತ್ರ ಬಿಡುಗಡೆ : ಇದನ್ನು ಹೇಗೆ ಮಾಡಲಾಗುತ್ತದೆ ಎಂದು ಹೇಳಿದ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು, ಶನಿವಾರ ಅದು ಡಿಸೆಂಬರ್ 2024 ರಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲು ಸಜ್ಜಾಗಿರುವ ʼಗಗನಯಾನʼ ಬಾಹ್ಯಾಕಾಶ ನೌಕೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಈ ಕಾರ್ಯಾಚರಣೆಗಾಗಿ ಶೀಘ್ರದಲ್ಲೇ ಮಾನವರಹಿತ ಹಾರಾಟ ಪರೀಕ್ಷೆಯನ್ನು ಪ್ರಾರಂಭಿಸುವುದಾಗಿ ಬಾಹ್ಯಾಕಾಶ ಸಂಸ್ಥೆ ಹೇಳಿದೆ. “ಗಗನಯಾನ ಮಿಷನ್‌ಗಾಗಿ ಮಾನವರಹಿತ ಹಾರಾಟ ಪರೀಕ್ಷೆಗಳನ್ನು ಇಸ್ರೋ ಪ್ರಾರಂಭಿಸಲಿದೆ. … Continued

ಸಿಕ್ಕಿಂ ಹಠಾತ್ ಪ್ರವಾಹ: ಸಾವಿನ ಸಂಖ್ಯೆ 56ಕ್ಕೆ ಏರಿಕೆ, 100ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆ

ಸಿಕ್ಕಿಂನಲ್ಲಿ ಸಂಭವಿಸಿದ ತೀಸ್ತಾ ನದಿಯ ಭಾರೀ ಪ್ರವಾಹದಲ್ಲಿ ಸತ್ತವರ ಸಂಖ್ಯೆ ಶನಿವಾರ 56 ಕ್ಕೆ ತಲುಪಿದೆ. ಇದುವರೆಗೆ ಸಿಕ್ಕಿಂನಲ್ಲಿ 26 ಮೃತದೇಹಗಳು ಪತ್ತೆಯಾದರೆ, ಪಶ್ಚಿಮ ಬಂಗಾಳದ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ 30 ಮೃತದೇಹಗಳು ಪತ್ತೆಯಾಗಿವೆ. ಸೇನಾ ಸಿಬ್ಬಂದಿ ಸೇರಿದಂತೆ ಸಿಕ್ಕಿಂನಲ್ಲಿ ಕನಿಷ್ಠ 142 ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ವಿಪತ್ತು ನಿರ್ವಹಣಾ ಅಧಿಕಾರಿಗಳು ಸಿಕ್ಕಿಂನಲ್ಲಿ ಇದುವರೆಗೆ … Continued