ವೀಡಿಯೊ.. | ಹೃದಯಸ್ಪರ್ಶಿ ಘಟನೆ : ಜೈಲೊಳಗಿದ್ದ ಅಮ್ಮನ ನೋಡಲು ಹಂಬಲಿಸಿ ಜೈಲಿನ ಬಾಗಿಲಲ್ಲಿ ನಿಂತು ಕಣ್ಣೀರಿಟ್ಟ 9 ವರ್ಷದ ಬಾಲಕಿ

ಕರ್ನೂಲ್: 9 ವರ್ಷದ ಬಾಲಕಿಯೊಬ್ಬಳು  ಜೈಲಿನಲ್ಲಿದ್ದ  ತನ್ನ ತಾಯಿಯನ್ನು ಭೇಟಿಯಾಗಲು ಅವಕಾಶ ನೀಡುವಂತೆ ಜೈಲಿನ ಅಧಿಕಾರಿಗಳಿಗೆ  ಮನವಿ ಮಾಡುತ್ತ ಜೋರಾಗಿ ಅಳುತ್ತಿರುವ ಹೃದಯಸ್ಪರ್ಶಿ ಘಟನೆ ಕರ್ನೂಲ್‌ನಲ್ಲಿ ವರದಿಯಾಗಿದೆ ಮತ್ತು ಘಟನೆಯ ವಿಡಿಯೋ ದೃಶ್ಯಾವಳಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಬಿಗಿ ಭದ್ರಕೋಟೆಯ ಜೈಲಿನೊಳಗೆ ಬಂಧಿಯಾಗಿರುವ ಅಮ್ಮನನ್ನು ಹೊರಗೆ ಬಿಡಲು ಅವಕಾಶವಿಲ್ಲ. ಬಾಲಕಿಯನ್ನು ಒಳಗೆ … Continued

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಡ್ವಾಣಿ, ಜೋಶಿಗೆ ಆಹ್ವಾನಿಸಿದ ವಿ ಎಚ್‌ ಪಿ

ನವದೆಹಲಿ: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಹಿರಿಯರಾದ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಹ್ವಾನ ನೀಡಿದೆ. ಅಡ್ವಾಣಿ ಮತ್ತು ಜೋಶಿ ಇಬ್ಬರೂ ರಾಮಮಂದಿರಕ್ಕಾಗಿ ಆಂದೋಲನದ ಮುಂಚೂಣಿಯಲ್ಲಿದ್ದರು. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರದ ಪ್ರಾಣ … Continued

ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ? : ಮಮತಾ ಬ್ಯಾನರ್ಜಿ ಪ್ರಸ್ತಾವನೆ, ಅದಕ್ಕೆ ಖರ್ಗೆ ಹೇಳಿದ್ದೇನೆಂದರೆ…

ನವದೆಹಲಿ: ಲೋಕಸಭೆ ಚುನಾವಣೆ ಮುಗಿಯುವವರೆಗೆ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್‌ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಹೆಸರಿಸುವುದಿಲ್ಲ ಎಂದು ಸೋಮವಾರ ಪ್ರಕಟಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಡಿಸೆಂಬರ್‌ ೧೯) ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ 180 ಟರ್ನ್‌ ಹೊಡೆದಿದ್ದಾರೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ … Continued

ಮಂಗಳವಾರ ಮತ್ತೆ 49 ಲೋಕಸಭೆ ಸಂಸದರ ಅಮಾನತು: ಈವರೆಗೆ ಒಟ್ಟು 141 ಸಂಸದರ ಅಮಾನತು

ನವದೆಹಲಿ: ಲೋಕಸಭೆಯು ನಿನ್ನೆ (ಮತ್ತು ಕಳೆದ ವಾರ 13) 33 ಸದಸ್ಯರನ್ನು ಅಮಾನತುಗೊಳಿಸಿದ ನಂತರ ಇಂದು, ಮಂಗಳವಾರ ಬೆಳಿಗ್ಗೆ 49 ಸಂಸದರನ್ನು ಅಮಾನತುಗೊಳಿಸಲಾಗಿದೆ. ರಾಜ್ಯಸಭೆಯ ಸದಸ್ಯರೂ ಸೇರಿದಂತೆ ಈವರೆಗೆ ಒಟ್ಟು 141 ಸಂಸದರನ್ನು ಅಮಾನತು ಮಾಡಲಾಗಿದೆ. ಈ ಚಳಿಗಾಲದ ಅಧಿವೇಶನ ಇನ್ನೂ ಮೂರು ದಿನಗಳು ಉಳಿದಿವೆ, ಇದು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮೊದಲು, ಸಂಸತ್ತಿನ … Continued

ವೀಡಿಯೊ…| ಉಪರಾಷ್ಟ್ರಪತಿಯವರ ʼಅನುಕರಣೆʼ ಮಾಡಿ ಅಣಕಿಸಿದ ಟಿಎಂಸಿ ಸಂಸದ: ವೀಡಿಯೊ ಚಿತ್ರೀಕರಿಸಿದ ರಾಹುಲ್ ಗಾಂಧಿ

ನವದೆಹಲಿ : ರಾಜ್ಯಸಭೆ ಹಾಗೂ ಲೋಕಸಭೆಯಿಂದ ಅಮಾನತುಗೊಂಡ ಸಂಸದರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿರುವ ವೇಳೆ, ಟಿಎಂಸಿ ಸಂಸದರಾದ ಕಲ್ಯಾಣ ಬ್ಯಾನರ್ಜಿ ಅವರು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಚೇರ್ಮನ್‌ ಜಗದೀಪ ಧನಕರ್ ಅವರನ್ನು ಅಣಕಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕ ಅದರ ಚಿತ್ರೀಕರಿಸಿದ್ದಾರೆ. ಈ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಧನಕರ್‌ ಅವರು ಇದು … Continued

ಐಪಿಎಲ್ ಹರಾಜು ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ನಂತರದ ಸ್ಥಾನದಲ್ಲಿ ಪ್ಯಾಟ್ ಕಮ್ಮಿನ್ಸ್

ದುಬೈ: ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮಂಗಳವಾರ ಕೋಲ್ಕತ್ತಾ ನೈಟ್ಸ್ ರೈಡರ್ಸ್ (ಕೆಕೆಆರ್)ಗೆ 24.75 ಕೋಟಿ ರೂ.ಗಳಿಗೆ ಮಾರಾಟವಾಗಿದ್ದು, ಅವರು ಐಪಿಎಲ್ ಹರಾಜು ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಆಟಗಾರ ಎನಿಸಿಕೊಂಡಿದ್ದಾರೆ. ಸ್ಟಾರ್ಕ್ ಎಂಟು ವರ್ಷಗಳ ಅನುಪಸ್ಥಿತಿಯ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಮರಳಲಿದ್ದಾರೆ, ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು … Continued

ಆಸ್ತಿ ಕಬಳಿಸಲು ಒಂದೇ ಕುಟುಂಬದ 6 ಮಂದಿ ಹತ್ಯೆ

ಹೈದರಾಬಾದ್‌ : ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮಕ್ಲೂರು ಗ್ರಾಮದಲ್ಲಿ ಒಂದು ವಾರದ ಅವಧಿಯಲ್ಲಿ ಒಂದೇ ಕುಟುಂಬದ ಆರು ಸದಸ್ಯರನ್ನು ಆಸ್ತಿ ವಿಚಾರವಾಗಿ ಹತ್ಯೆ ಮಾಡಲಾಗಿದೆ. ಪ್ರಮುಖ ಆರೋಪಿ ಮಕ್ಲೂರು ಮೂಲದ ಪ್ರಶಾಂತ (20) ಕೊಲೆಗೈದ ಶಂಕಿತ ಆರೋಪಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಕಾಮರೆಡ್ಡಿ ಜಿಲ್ಲೆಯ ಸದಾಶಿವನಗರದಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾದ ನಂತರ ಅಧಿಕಾರಿಗಳು … Continued

ಅಯೋಧ್ಯೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಎಲ್‌ಕೆ ಅಡ್ವಾಣಿ, ಮುರಳಿಮನೋಹರ ಜೋಶಿಗೆ ಮನವಿ: ರಾಮಮಂದಿರ ಟ್ರಸ್ಟ್

ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿ ಹಿರಿಯರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಆರೋಗ್ಯ ಮತ್ತು ವಯಸ್ಸಿನ ಕಾರಣ ಮುಂದಿನ ತಿಂಗಳು ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎಂದು ದೇವಸ್ಥಾನದ ಟ್ರಸ್ಟ್ ಸೋಮವಾರ ತಿಳಿಸಿದೆ. “ಇಬ್ಬರೂ ಹಿರಿಯರು ಮತ್ತು ಅವರ ವಯಸ್ಸನ್ನು ಪರಿಗಣಿಸಿ, ಅವರನ್ನು ಪಾಲ್ಗೊಳ್ಳದಂತೆ … Continued

ಅಯ್ಯೋ ರಾಮಾ..| ಕಾಂಗ್ರೆಸ್ಸಿನ ‘ದೇಶಕ್ಕಾಗಿ ದೇಣಿಗೆʼ ಕ್ರೌಡ್‌ಫಂಡಿಂಗ್ ಅಭಿಯಾನ ಆರಂಭ : ಕ್ಲಿಕ್‌ ಮಾಡಿದ್ರೆ ಹೋಗುವುದು ಬಿಜೆಪಿ ದೇಣಿಗೆ ಪುಟಕ್ಕೆ ..!

ನವದೆಹಲಿ : ರಾಜಕೀಯ ಪಕ್ಷಕ್ಕೆ ಹಣವನ್ನು ದೇಣಿಗೆ ನೀಡುವಂತೆ ಬೆಂಬಲಿಗರನ್ನು ಆಹ್ವಾನಿಸುವ ತನ್ನ ‘ದೇಶಕ್ಕಾಗಿ ದೇಣಿಗೆ (‘Donate for Desh)’ ಕ್ರೌಡ್‌ಫಂಡಿಂಗ್ ಅಭಿಯಾನ ಆರಂಭಿಸಿದ್ದು, ಆದರೆ ಸೋಮವಾರ (ಡಿಸೆಂಬರ್‌ 18) ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ತಾಂತ್ರಿಕವಾಗಿ ಅಡೆತಡೆ ಎದುರಾಗಿದೆ. ಪಕ್ಷವು ಈ ಅಭಿಯಾನವನ್ನು ಘೋಷಿಸುವ ಮೊದಲು ಡೊಮೇನ್ ಹೆಸರುಗಳನ್ನು ಬುಕ್ ಮಾಡಲಿಲ್ಲ. ಇದರ ಪರಿಣಾಮವಾಗಿ, DonateforDesh.org … Continued

ತಮಿಳುನಾಡು ಮಳೆ: 7,500 ಜನರ ಸ್ಥಳಾಂತರ, ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ 800 ಜನ, ಕಾಯಲ್‌ಪಟ್ಟಿಣಂನಲ್ಲಿ ಒಂದೇ ದಿನ 95 ಸೆಂಮೀ ದಾಖಲೆ ಮಳೆ…!

ಚೆನ್ನೈ: ಕಳೆದ ದಿನದಿಂದ ಸುರಿದ ಭಾರೀ ಮಳೆಯ ನಂತರ ತಿರುನಲ್ವೇಲಿ ಮತ್ತು ತೂತುಕುಡಿ ಸೇರಿದಂತೆ ದಕ್ಷಿಣ ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿನ ಹಳ್ಳಿಗಳು, ಪಟ್ಟಣಗಳು, ರಸ್ತೆಗಳು ಮತ್ತು ಹೆದ್ದಾರಿಗಳು ಜಲಾವೃತಗೊಂಡು ನದಿಗಳನ್ನು ಹೋಲುತ್ತಿವೆ. ಧಾರಾಕಾರ ಮಳೆಯಿಂದ ತತ್ತರಿಸಿರುವ ತಮಿಳುನಾಡಿನ ನಾಲ್ಕು ದಕ್ಷಿಣ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಭಾರೀ … Continued