ಅಯೋಧ್ಯೆ ರಾಮಮಂದಿರದ 20 ಅರ್ಚಕರ ಹುದ್ದೆಗಳಿಗೆ 3000 ಅರ್ಜಿಗಳು

ಅಯೋಧ್ಯೆ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ 20 ಅರ್ಚಕರ ಹುದ್ದೆಗೆ ಸುಮಾರು 3,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಚಕರ ನೇಮಕಾತಿಗೆ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ ಜಾಹೀರಾತು ನೀಡಿತ್ತು. ಅದರಂತೆ 3,000 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಆ ಪೈಕಿ 200 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. … Continued

ಭೀಕರ ಘಟನೆ: ಅತ್ಯಾಚಾರ ಸಂತ್ರಸ್ತೆಯನ್ನು ಹಾಡಹಗಲೇ ಅಟ್ಟಾಡಿಸಿ ಕೊಚ್ಚಿ ಕೊಂದ ಆರೋಪಿಗಳು

ಕೌಶಂಬಿ: 19 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು ಆರೋಪಿ ಹಾಗೂ ಆತನ ಸಹೋದರ ಸೇರಿಕೊಂಡು ಹಾಡಹಗಲೇ    ಅಟ್ಟಾಡಿಸಿ ಕೊಚ್ಚಿ   ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಧೆರ್ಹಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಭೀಕರ ಹತ್ಯೆಗೂ ಕೆಲವು ದಿನಗಳ ಮುನ್ನವಷ್ಟೇ ಆರೋಪಿಗಳಾದ ಅಶೋಕ ಮತ್ತು ಪವನ್ ನಿಶಾದ್ ಎಂಬವರನ್ನು ಜಾಮೀನಿನ ಮೇಲೆ … Continued

ನಟಿ ತ್ರಿಶಾ ಬಗ್ಗೆ ಮನ್ಸೂರ್ ಅಲಿ ಖಾನ್‌ ಅವಹೇಳನಕಾರಿ ಹೇಳಿಕೆ: ಇದು ವಿಕೃತ ಮನಸ್ಥಿತಿಯವರು ಹೇಳುವ ಮಾತು ಎಂದ ಮೆಗಾಸ್ಟಾರ್‌ ಚಿರಂಜೀವಿ

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಮೆಗಾಸ್ಟಾರ್‌ ಚಿರಂಜೀವಿ ಖಂಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ತ್ರಿಷಾ ಬಗ್ಗೆ ಮನ್ಸೂರ್ ಅಲಿ ಖಾನ್ ನೀಡಿರುವ ಹೇಳಿಕೆಗಳು ಖಂಡನೀಯ ಎಂದು ಹೇಳಿದ್ದಾರೆ. ಕಲಾವಿದರಿಗೆ ಮಾತ್ರವಲ್ಲದೇ, ಮಹಿಳೆರಿಗೆ ಅಥವಾ … Continued

ವೀಡಿಯೊ..| ರಾಜೀವ ಗಾಂಧಿ ಬದಲಿಗೆ ರಾಹುಲ್‌ ಗಾಂಧಿಯಂತಹ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೇಳಿ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಎಡವಟ್ಟು

ಈ ರಾಷ್ಟ್ರದ ಏಕತೆಗಾಗಿ ರಾಹುಲ್ ಗಾಂಧಿಯಂತಹ ಕಾಂಗ್ರೆಸ್‌ ನಾಯಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ರಾಜೀವ್ ಗಾಂಧಿ ಅವರನ್ನು ಉಲ್ಲೇಖಿಸುವ ಭರದಲ್ಲಿ ರಾಹುಲ್ ಗಾಂಧಿ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜೀವ್ ಗಾಂಧಿ ಅವರನ್ನು ಉಲ್ಲೇಖಿಸುವಾಗ ಅಚಾತುರ್ಯದಿಂದ ರಾಹುಲ್ ಗಾಂಧಿ … Continued

ವೀಡಿಯೊ…| ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ, ಒಳಗಡೆ ಸಿಲುಕಿರುವ 41 ಕಾರ್ಮಿಕರ ಮೊದಲ ವಿಡಿಯೋ ಬಿಡುಗಡೆ

ಉತ್ತರಕಾಶಿ : ಉತ್ತರಾಖಂಡದ ಉತ್ತರಕಾಶಿಯಲ್ಲಿ ಕುಸಿದ ಸಿಲ್ಕ್ಯಾರಾ ಸುರಂಗದೊಳಗೆ ಕಾರ್ಮಿಕರು ಸಿಲುಕಿದ ನಂತರದ ಮೊದಲ ದೃಶ್ಯಗಳು ಮಂಗಳವಾರ ಬೆಳಿಗ್ಗೆ ಹೊರಬಂದಿವೆ. ಕುಸಿದ ಸುರಂಗದ ಅವಶೇಷಗಳ ಮೂಲಕ ಸೋಮವಾರ ಆರು ಇಂಚು ಅಗಲದ ಪೈಪ್‌ ಅನ್ನು ತಳ್ಳಲಾಯಿತು, ಇದು ಎಂಟು ದಿನಗಳ ಕಾಲ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರ ದೊಡ್ಡ ಪ್ರಮಾಣದ ಆಹಾರ ಪೂರೈಸಲು ಅನುವು ಮಾಡಿಕೊಟ್ಟಿತು. … Continued

ಉತ್ತರಕಾಶಿ : 9 ದಿನಗಳಿಂದ ಸುರಂಗ ಕುಸಿದು ಸಿಕ್ಕಿಬಿದ್ದ ಕೆಲಸಗಾರರಿಗೆ 6 ಇಂಚಿನ ಅಗಲದ ಪೈಪ್ ಮೂಲಕ ಬಿಸಿಯಾದ ಆಹಾರ ರವಾನೆಗೆ ತಯಾರಿ

ಉತ್ತರಕಾಶಿ : ಉತ್ತರಕಾಶಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿನ ದೊಡ್ಡ ಪ್ರಗತಿಯಲ್ಲಿ, 6 ಇಂಚಿನ ಅಗಲದ ಪರ್ಯಾಯ ಪೈಪ್, ವಾರದ ಹಿಂದೆ ಸುರಂಗ ಕುಸಿದ ನಂತರ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಸಿಕ್ಕಿಬಿದ್ದ ಕಾರ್ಮಿಕರಿಗೆ ಈ ಪೈಪ್‌ ಮೂಲಕ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಿಸಿಯಾದ ಆಹಾರವನ್ನು ಕಳುಹಿಸಲು ಅಧಿಕಾರಿಗಳು ಈಗ ತಯಾರಿ ನಡೆಸಿದ್ದಾರೆ. ಸಿಕ್ಕಿಬಿದ್ದ ಕಾರ್ಮಿಕರು ಎದುರಿಸುತ್ತಿರುವ … Continued

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತದ ತಂಡ ಪ್ರಕಟ: ಹೊಸ ಮುಖಗಳಿಗೆ ಮಣೆ, ಸೂರ್ಯಕುಮಾರ ಯಾದವ್ ನಾಯಕ

ನವದೆಹಲಿ : ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ T20I ಸರಣಿಗೆ ಸೂರ್ಯಕುಮಾರ ಯಾದವ್ ಅವರನ್ನು ಭಾರತ ಕ್ರಿಕೆಟ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದ ಹೆಚ್ಚಿನ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ ತಂಡವು ಹೊಸ ಆಟಗಾರರನ್ನು ಹೊಂದಿದೆ. ಆರಂಭಿಕ ಆಟಗಾರರಾದ ರುತುರಾಜ್ ಗಾಯಕ್ವಾಡ್ ಅವರು … Continued

ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲು ತಮಿಳುನಾಡು ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಚೆನ್ನೈ : ನಟಿ ತ್ರಿಶಾ ಕೃಷ್ಣನ್ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಟ್ಟಿರುವ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (NCW) ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಚಾರವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿದೆ ಮತ್ತು ಸಂಬಂಧಿತ ಸೆಕ್ಷನ್‌ಗಳಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ … Continued

ವಿಶ್ವಕಪ್: ಐಸಿಸಿ ಟೂರ್ನಮೆಂಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ನೇಮಕ, ತಂಡದಲ್ಲಿ ಭಾರತದ ತಂಡದ 6 ಆಟಗಾರರಿಗೆ, ಆಸ್ಟ್ರೇಲಿಯಾದಿಂದ ಇಬ್ಬರಿಗೆ ಸ್ಥಾನ

ನವದೆಹಲಿ: ಅಂತಿಮ ಹಣಾಹಣಿಯಲ್ಲಿ ಆರು ಬಾರಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತವು ಸೋತಿದ್ದರೂ, ಐಸಿಸಿ (ICC) ಹೆಸರಿಸಿದ ವಿಶ್ವಕಪ್ 2023 ರ ಟೂರ್ನಮೆಂಟ್ ತಂಡವು ಭಾರತೀಯ ಆಟಗಾರರ ಪ್ರಾಬಲ್ಯವನ್ನು ಎತ್ತಿ ತೋರಿಸಿದೆ. ರೋಹಿತ್ ಶರ್ಮಾ ಅವರು 2023 ರ ವಿಶ್ವಕಪ್ ಟೂರ್ನಮೆಂಟ್‌ನ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ICC) ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ವಿರಾಟ್ ಕೊಹ್ಲಿ … Continued

ಇಂಫಾಲ್ ವಿಮಾನ ನಿಲ್ದಾಣದ ಬಳಿ ‘ಯುಎಫ್‌ಒ’ ಕಂಡುಬಂದ ನಂತರ ನಂತರ ಎರಡು ರಫೇಲ್‌ ಯುದ್ಧ ವಿಮಾನ ಕಳುಹಿಸಿದ ವಾಯುಪಡೆ

ಇಂಫಾಲ್ (ಮಣಿಪುರ): ಭಾರತೀಯ ವಾಯು ಪಡೆಯ ಎರಡು ರಫೇಲ್ ಯುದ್ಧ ವಿಮಾನಗಳು ಮಣಿಪುರ ರಾಜಧಾನಿ ಇಂಫಾಲ್‌ಗೆ ರವಾನೆ ಆಗಿವೆ. ಇಂಫಾಲ್ ವಿಮಾನ ನಿಲ್ದಾಣದ ಬಳಿ ಗುರುತಿಸಲಾಗದ ಹಾರುವ ವಸ್ತು (UFO) ಹಾರಾಡುತ್ತಿವೆ ಎಂಬ ಮಾಹಿತಿ ಸಿಕ್ಕ ಕೂಡಲೇ ಭಾರತೀಯ ವಾಯು ಪಡೆ ತನ್ನ ಎರಡು ರಫೇಲ್ ಯುದ್ಧ ವಿಮಾನಗಳನ್ನ ಇಂಫಾಲ್‌ಗೆ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. … Continued