ಚುನಾವಣಾ ಫಲಿತಾಂಶದಿಂದ ಅಸಮಾಧಾನಗೊಂಡ ಕಾಂಗ್ರೆಸ್‌ನ ‘ಬಂಡಾಯ’ ನಾಯಕರಿಂದ ಶೀಘ್ರದಲ್ಲೇ ಸಭೆ: ವರದಿ

ನವದೆಹಲಿ: ಮಣಿಪುರ, ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ನಿರಾಸೆಗೊಂಡಿರುವ ಕಾಂಗ್ರೆಸ್‌ನ 23 ನಾಯಕರ ಗುಂಪು (ಜಿ-23) ಮುಂದಿನ 48 ಗಂಟೆಗಳಲ್ಲಿ ಸಭೆ ನಡೆಸಲಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. “ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶಗಳು ಮತ್ತು ಕಾಂಗ್ರೆಸ್‌ನ ಕ್ಷಿಪ್ರ ಕುಸಿತದಿಂದ ಅಸಮಾಧಾನಗೊಂಡಿರುವ ಜಿ -23 ನಾಯಕರು ಮುಂದಿನ 48 … Continued

ಪಾಕ್‌ ಭೂ ಪ್ರದೇಶಕ್ಕೆ ಅಪ್ಪಳಿಸಿದ ಭಾರತದಿಂದ ‘ಶಸ್ತ್ರ ರಹಿತ ಸೂಪರ್ಸಾನಿಕ್ ಕ್ಷಿಪಣಿ ಉಡಾವಣೆ: ಪಾಕಿಸ್ತಾನ ಸೇನೆ ಆರೋಪ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿರುಗಾಳಿಯ ನಡುವೆ, ದೇಶದ ಮಿಯಾನ್ ಚನ್ನು ಪ್ರದೇಶದಲ್ಲಿ ಭಾರತದ ‘ಸೂಪರ್ಸಾನಿಕ್ ಹಾರುವ ವಸ್ತು’ ಬಿದ್ದಿದೆ ಎಂದು ಪಾಕಿಸ್ತಾನಿ ಸೇನೆ ಹೇಳಿಕೊಂಡಿದೆ. ಭಾರತೀಯ ಶಸತ್ರ ರಹಿತ ಸೂಪರ್ಸಾನಿಕ್ ಕ್ಷಿಪಣಿ” ತನ್ನ ಭೂಪ್ರದೇಶವನ್ನು ಅಪ್ಪಳಿಸಿದ್ದು, ನಾಗರಿಕ ಆಸ್ತಿಯನ್ನು ಹಾನಿಗೊಳಿಸಿದೆ ಆದರೆ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ಪಾಕಿಸ್ತಾನದ ಮಿಲಿಟರಿ ಗುರುವಾರ ಹೇಳಿದೆ. ಪಾಕಿಸ್ತಾನವು … Continued

ಗೋವಾ ಚುನಾವಣಾ ಫಲಿತಾಂಶ: ಆಡಳಿತ ವಿರೋಧಿ ಅಲೆಯನ್ನೇ ಸೋಲಿಸಿದ ಬಿಜೆಪಿ, ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟ ಕಾಂಗ್ರೆಸ್…!

ಪಣಜಿ: ಗೋವಾ ವಿಧಾನಸಭೆಯ 40 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯ ಕೊನೆಯಲ್ಲಿ ನೆಕ್‌ ಟು ನೆಕ್‌ ಹಣಾಹಣಿಯ ನಂತರ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕೇಔಲ ಒಂದು ಸ್ಥಾನದಿಂದಾಗಿ ಸರಳ ಬಹುತಮದಿಂದ ವಂಚಿತವಾಗಿದೆ. ಆದರೆ ಕರಾವಳಿ ರಾಜ್ಯದಲ್ಲಿ ಸತತ ಮೂರನೇ ಸರ್ಕಾರವನ್ನು ರಚಿಸಲು … Continued

ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ವಿಫಲವಾದ ಸಮಾಜವಾದಿ ಪಕ್ಷ ಎಡವಿದ್ದೆಲ್ಲಿ..?

ನವದೆಹಲಿ: ಉತ್ತರ ಪ್ರದೇಶದ ಮತದಾರರು ಬಿಜೆಪಿಗೆ ಮೂರನೇ ಎರಡರಷ್ಟು ಜನಾದೇಶವನ್ನು ನೀಡುವುದರೊಂದಿಗೆ, ಯೋಗಿ ಆದಿತ್ಯನಾಥ ಅವರಿಗೆ ಮತ್ತೊಂದು ಐದು ವರ್ಷಗಳ ಅವಧಿಗೆ ಅಧಿಕಾರ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮೂವತ್ತೇಳು ವರ್ಷಗಳ ನಂತರ ಅಧಿಕಾರಕ್ಕೆ ಮರಳಿ ಬಂದ ಏಕೈಕ ಮುಖ್ಯಮಂತ್ರಿ ಎಂಬ ಇತಿಹಾಸವನ್ನು ಬರೆಯಲಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಈ ಚುನಾವಣೆ ಸೆಮಿಫೈನಲ್ ಎಂದು ಹೇಳಲಾಗಿದ್ದು, ಪ್ರಧಾನಿ … Continued

ಪಂಜಾಬ್ ಸಿಎಂ ಚನ್ನಿ ಸೋಲಿಸಿದ್ದು ಮೊಬೈಲ್ ದುರಸ್ತಿ ಅಂಗಡಿ ಕೆಲಸಗಾರ…!

ಚಂಡೀಗಢ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪ್ರಚಂಡ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. ಮುಖ್ಯಮಂತ್ರಿ ಚರಣ್ಜಿತ್‌ ಸಿಂಗ್‌ ಚನ್ನಿ ಸೇರಿದಂತೆ ಕಾಂಗ್ರೆಸ್ಸಿನ ಘಟನಾಘಟಿ ನಾಯಕರು ಸೋಲನುಭವಿಸಿದ್ದಾರೆ ಪಂಜಾಬ್ ನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ್ದು ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ … Continued

ನಾನು ಭಯೋತ್ಪಾದಕನಲ್ಲ ಎಂದು ಪಂಜಾಬ್‌ ಜನ ಸಾಬೀತು ಮಾಡಿದ್ದಾರೆ; ಪಂಜಾಬ್​ನಲ್ಲಿ ಆಪ್​ ಗೆಲುವಿಗೆ ಕೇಜ್ರಿವಾಲ್ ಹೇಳಿಕೆ

ನವದೆಹಲಿ: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (AAP) ಸಾಧನೆಯನ್ನು ದೊಡ್ಡ ಕ್ರಾಂತಿ ಎಂದು ಬಣ್ಣಿಸಿರುವ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಂಜಾಬ್ ಜನರು ನಾನು ಭಯೋತ್ಪಾದಕನಲ್ಲ ಎಂಬುದನ್ನು ಸಾಬೀತು‌ ಪಡಿಸಿದ್ದಾರೆ. ದೆಹಲಿಯಲ್ಲಿ ಮೊದಲು ಸಂಭವಿಸಿದ ಈ ಕ್ರಾಂತಿಯು ಈಗ ಪಂಜಾಬ್‌ಗೆ ಹರಡಿದೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ಹರಡಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಪಕ್ಷದ … Continued

ಗಮನ ಸೆಳೆದ ಲಖೀಂಪುರ ಖೇರಿಯ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ..!

ಲಕ್ನೋ: ಅಕ್ಟೋಬರ್ 2021 ರಲ್ಲಿ ಲಖಿಂಪುರ ಖೇರಿ ಹಿಂಸಾಚಾರದ ಋಣಾತ್ಮಕ ಪರಿಣಾಮವು ಈ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿಲ್ಲ, ಜಿಲ್ಲೆಯ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿಯು ಮುನ್ನಡೆ ಸಾಧಿಸಿದೆ. ಕೇಂದ್ರದ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಅವರ ಒಡೆತನದ ಎಸ್‌ಯುವಿಯಿಂದ ಹಲವಾರು ರೈತರ … Continued

ಗೋವಾ: ಬಿಜೆಪಿಗೆ ಮೂವರು ಪಕ್ಷೇತರರ ಬೆಂಬಲ ಘೋಷಣೆ, ಸರ್ಕಾರದ ರಚನೆ ಹಾದಿ ಸುಗಮ

ಪಣಜಿ: ಮೂವರು ಸ್ವತಂತ್ರ ಶಾಸಕರು ಕೇಸರಿ ಪಕ್ಷಕ್ಕೆ ಬೆಂಬಲ ಪತ್ರ ನೀಡಿದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಕರಾವಳಿ ರಾಜ್ಯವಾದ ಗೋವಾದಲ್ಲಿ ಮತ್ತೊಮ್ಮೆ ತನ್ನ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ.3 ಸ್ವತಂತ್ರ ಶಾಸಕರು ನಮಗೆ ಬೆಂಬಲ ಪತ್ರ ನೀಡಿದ್ದಾರೆ, ಹೀಗಾಗಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ’ ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತನವಡೆ … Continued

ಉತ್ತರ ಪ್ರದೇಶ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ ಸತತ ಗೆಲುವು : 2017ರ ಚುನಾವಣೆಗಿಂತ ಹೆಚ್ಚು ಮತಗಳನ್ನು ಪಡೆದ ಬಿಜೆಪಿ..!

ಲಕ್ನೋ: ಬಿಜೆಪಿ ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿವುದರೊಂದಿಗೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮರಳಲಿದ್ದಾರೆ – ಭಾರತದ ಅತ್ಯಂತ ರಾಜಕೀಯವಾಗಿ ಪ್ರಮುಖ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಆಡಳಿತಾರೂಢ ಪಕ್ಷ ಅಧಿಕಾರಕ್ಕೆ ಬುರುವುದು 37 ವರ್ಷಗಳಲ್ಲಿ ಇದೇ ಮೊದಲನೆಯದು, ಜೊತೆಗೆ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಕಳೆದ ಚುನಾವಣೆಗಿಂತ … Continued

ಆಪ್‌ನ ಭಗವಂತ್ ಮಾನ್ ಪಂಜಾಬ್ ಸಿಎಂ ಆಗಿ ರಾಜಭವನದ ಬದಲು ಶಹೀದ್‌ ಭಗತ್ ಸಿಂಗ್ ಪೂರ್ವಜರ ಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕರಿಸ್ತಾರೆ..!

ಧುರಿ (ಪಂಜಾಬ್): ಸ್ವಾತಂತ್ರ್ಯ ಹೋರಾಟಗಾರ ಶಹೀದ್‌ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನವಾನ್‌ಶಹರ್ ಜಿಲ್ಲೆಯ ಖಟ್ಕರ್‌ಕಲನ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳುವುದಾಗಿ ಪಂಜಾಬ್ ಮುಖ್ಯಮಂತ್ರಿ ನಿಯೋಜಿತ ಭಗವಂತ್ ಮಾನ್ ಪ್ರೇಕ್ಷಕರ ಹರ್ಷೋದ್ಗಾರ ಮಧ್ಯೆ ಗುರುವಾರ ಘೋಷಣೆ ಮಾಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ವಾಡಿಕೆಯಂತೆ ಮುಖ್ಯಮಂತ್ರಿಗಳ ಫೋಟೋ ಇರುವುದಿಲ್ಲ ಎಂದು ಅವರು ಪ್ರಕಟಿಸಿದ್ದಾರೆ. “ಪ್ರಮಾಣ ಸ್ವೀಕಾರ … Continued