ಹೊಸ ಉದ್ಯೋಗ ಪಡೆಯಲು ಸುಲಭವಾಗಲು1 ಕೋಟಿಗೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಸೈನ್ಸ್‌ ಕಲಿಸಲಿದೆ ಗೂಗಲ್

ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರು 1.1 ಕೋಟಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣವನ್ನು ಒದಗಿಸಲು $ 20 ಮಿಲಿಯನ್ ಅನುದಾನವನ್ನು ಘೋಷಿಸಿದ್ದಾರೆ. ” ಪ್ರಮುಖ ನಗರ ಕೇಂದ್ರಗಳು ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ತಲುಪುವ ರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆಗಳನ್ನು ಬೆಂಬಲಿಸಲು ನಾವು ಗಮನಹರಿಸುತ್ತೇವೆ ಮತ್ತು ಸರ್ಕಾರಗಳು ಮತ್ತು ಶಿಕ್ಷಕರು … Continued

ದಕ್ಷಿಣ ಇಸ್ರೇಲ್‌ನಲ್ಲಿ 1,200 ವರ್ಷಗಳಷ್ಟು ಹಳೆಯದಾದ ಐಷಾರಾಮಿ ಮಹಲು ಪತ್ತೆ : ತಜ್ಞರಿಗೇ ಅಚ್ಚರಿ ತಂದ ಈ ಮಹಲು

ಪುರಾತತ್ತ್ವಜ್ಞರು ಇಸ್ರೇಲ್‌ನ ದಕ್ಷಿಣ ಭಾಗದಲ್ಲಿರುವ ಮರುಭೂಮಿಯಲ್ಲಿ 1,200 ವರ್ಷಗಳಷ್ಟು ಹಳೆಯದಾದಭವ್ಯವಾದ ಭವನವೊಂದನ್ನು   ಪತ್ತೆಮಾಡಿದ್ದಾರೆ. ಇದು ನೆಗೆವ್ ಪ್ರದೇಶದ ಶ್ರೀಮಂತ ನಿವಾಸಿಗಳಿಗೆ ಜೀವನದ ವಿಶಿಷ್ಟ ನೋಟವನ್ನು ನೀಡುತ್ತಿತ್ತು ಎಂದು ದೇಶದ ಪುರಾತನ ಪ್ರಾಧಿಕಾರ ಮಂಗಳವಾರ ತಿಳಿಸಿದೆ. ಬೆಡೋಯಿನ್ ಪಟ್ಟಣವಾದ ರಾಹತ್‌ನಲ್ಲಿನ ಆವಿಷ್ಕಾರವು 8 ಅಥವಾ 9 ನೇ ಶತಮಾನದ ಆರಂಭಿಕ ಇಸ್ಲಾಮಿಕ್ ಅವಧಿಗೆ ಸಂಬಂಧಿಸಿದೆ ಎಂದು … Continued

ಭಾರತೀಯ ಗರ್ಭಿಣಿ ಪ್ರವಾಸಿ ಸಾವು: ಪೋರ್ಚುಗಲ್ ಆರೋಗ್ಯ ಸಚಿವರ ರಾಜೀನಾಮೆ

ಲಿಸ್ಬನ್: ಭಾರತೀಯ ಗರ್ಭಿಣಿ ಪ್ರವಾಸಿಯೊಬ್ಬರು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆಯಿಲ್ಲದೆ ಆಸ್ಪತ್ರೆಗಳ ನಡುವೆ ಸಾಗಾಟದ ಸಮಯದಲ್ಲಿ ಮೃತಪಟ್ಟ ನಂತರ ಪೋರ್ಚುಗಲ್‌ ನಲ್ಲಿ ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪೋರ್ಚುಗಲ್‌ನ ಆರೋಗ್ಯ ಸಚಿವ ಮಾರ್ಟಾ ಟೆಮಿಡೊ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದನ್ನು ಪ್ರಧಾನ ಮಂತ್ರಿ ಅಂಗೀಕರಿಸಿದ್ದಾರೆ ಎಂದು ಪೋರ್ಚುಗಲ್‌ನ … Continued

ಇಂದು ಗಣೇಶ ಚತುರ್ಥಿ : ಭಾರತವಲ್ಲ, ನೇಪಾಳವೂ ಅಲ್ಲ; ಈ ದೇಶದ ಕರೆನ್ಸಿ ನೋಟಿನಲ್ಲಿ ಮಾತ್ರ ಗಣೇಶನ ಚಿತ್ರವಿದೆ….!

ನವದೆಹಲಿ: ಇಂದು ಗಣೇಶ ಚತುರ್ಥಿಯ ಶುಭ ಸಂದರ್ಭ. ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಬುದ್ಧಿವಂತಿಕೆ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ ಗಣೇಶನಿಗೆ 108 ಹೆಸರುಗಳಿವೆ. ಜಗತ್ತಿನಲ್ಲಿ ಒಂದು ದೇಶದ ಕರೆನ್ಸಿ ನೋಟುಗಳಲ್ಲಿ ಗಣೇಶನ ಚಿತ್ರವಿದೆ ಮತ್ತು ಆದರೆ ಅದು ಭಾರತವಲ್ಲ. ನೇಪಾಳವೂ ಅಲ್ಲ.ಹಿಂದೂ ರಾಷ್ಟ್ರವೂ ಅಲ್ಲ. ಇಂಡೋನೇಷ್ಯಾದ 20,000 ರೂಪಾಯಿ ನೋಟಿನ ಮೇಲೆ ಗಣೇಶನ … Continued

ಜಾಗತಿಕ ಶೀತಲ ಸಮರ ಕೊನೆಗೊಳಿಸಿದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ನಿಧನ

ಮಾಸ್ಕೋ: ಜಾಗತಿಕ ಶೀತಲ ಸಮರ ಕೊನೆಗೊಳಿಸಿ ಇತಿಹಾಸದ ದಿಕ್ಕನ್ನು ಬದಲಿಸಿದ ಮತ್ತು 20 ನೇ ಶತಮಾನದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಮಿಖಾಯಿಲ್ ಗೋರ್ಬಚೇವ್ 91 ನೇ ವಯಸ್ಸಿನಲ್ಲಿ ಮಾಸ್ಕೋದಲ್ಲಿ ನಿಧನರಾದರು. ಅವರ ಮರಣವನ್ನು ರಷ್ಯಾದ ಸುದ್ದಿ ಸಂಸ್ಥೆಗಳು ಮಂಗಳವಾರ ಘೋಷಿಸಿದವು, ಗೋರ್ಬಚೇವ್ ಮಾಸ್ಕೋದ ಕೇಂದ್ರ ಆಸ್ಪತ್ರೆಯಲ್ಲಿ “ಗಂಭೀರ ಮತ್ತು ದೀರ್ಘಕಾಲದ ಅನಾರೋಗ್ಯದ ನಂತರ” ನಿಧನರಾದರು ಎಂದು … Continued

ದೊಡ್ಡ ಜೇಡಗಳೊಂದಿಗೆ ನಿರ್ಭಯವಾಗಿ ಆಟವಾಡುವ ಈ ಪುಟ್ಟ ಹುಡುಗಿ: ಇಂಟರ್ನೆಟ್ ಅಚ್ಚರಿ | ವೀಕ್ಷಿಸಿ

ಜೇಡದ ಬಗ್ಗೆ ಯೋಚಿಸಿದರೆ ಮನಸ್ಸಿಗೆ ಬರುವ ಮೊದಲ ಪದ ಭಯ ! ಹಾವುಗಳು ಮತ್ತು ಜೇಡಗಳಂತಹ ಜೀವಿಗಳು ತಕ್ಷಣವೇ ಹೆಚ್ಚಿನ ಜನರಲ್ಲಿ ಭಯಕ್ಕೆ ಕಾರಣಗುತ್ತವೆ. ಕೆಲವರಿಗೆ ಅವುಗಳನ್ನು ಸ್ಪರ್ಶಿಸುವುದು ದೂರದ ಮಾತು. ಅವುಗಳನ್ನು ನೋಡಿದರೂ ಸಹ ಕೆಲವರಿಗೆ ಹೆದರಿಕೆಯಾಗಿ ಬಿಡುತ್ತದೆ. ಕೆಲವರಿಗೆ ಅದು ದುಃಸ್ವಪ್ನದಂತೆ ಕಾಡುತ್ತದೆ. ಆದರೆ ಇತ್ತೀಚೆಗೆ, ದೈತ್ಯಾಕಾರದ ಜೇಡದೊಂದಿಗೆ ಆಟವಾಡುತ್ತಿರುವ ಪುಟ್ಟ ಹುಡುಗಿಯ … Continued

ಅಮೆಜಾನ್ ಕಾಡಿನಲ್ಲಿ 26 ವರ್ಷಗಳಿಂದ ಯಾರ ಸಂಪರ್ಕಕ್ಕೂ ಬಾರದೆ ಒಂಟಿಯಾಗಿ ಜೀವಿಸಿದ್ದ ಬುಡಕಟ್ಟು ಜನಾಂಗವೊಂದರ ಕೊನೆಯ ವ್ಯಕ್ತಿ ಸಾವು…

ಬ್ರೆಜಿಲ್‌ನ ದಟ್ಟ ಅಮೆಜಾನ್ ಕಾಡಿನಲ್ಲಿ 26 ವರ್ಷಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದ ಬುಡಕಟ್ಟು ಜನಾಂಗವೊಂದರ ಕಟ್ಟ ಕಡೆಯ ವ್ಯಕ್ತಿ ಮೃತಪಟ್ಟಿದ್ದಾನೆ. ಬ್ರೆಜಿಲ್ ಮೂಲದ ಸ್ಥಳೀಯ ಸಂರಕ್ಷಣಾ ಸಂಸ್ಥೆ ಫುನೈ ಈ ಮರಣವನ್ನು ವರದಿ ಮಾಡಿದೆ. ಈತ ತನ್ನ ಗುಡಿಸಲಿನಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ. ತನ್ನ 60ರ ವಯಸ್ಸಿನಲ್ಲಿ ಸ್ವಾಭಾವಿಕವಾಗಿಯೇ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ. … Continued

ಎರಡು ದೊಡ್ಡ ಕಾಂಗರೂಗಳ ‘ಜಂಗಿ ನಿಖಾಲಿ ಕುಸ್ತಿ’: ಹೊಡೆದಾಟದಲ್ಲಿ ತಗಡಿನ ಶೆಡ್‌ಗೆ ಅಪ್ಪಳಿಸಿದ ಒಂದು ಕಾಂಗರೂ : ವೀಕ್ಷಿಸಿ

ಕಾಂಗರೂಗಳ ವೀಡಿಯೊಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತವೆ. ಇಂಟರ್ನೆಟ್ ಬಳಕೆದಾರರು ಕಾಂಗರೂಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಈಗ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಎರಡು ಕಾಂಗರೂಗಳ ನಡುವಿನ ತೀವ್ರವಾದ ಹೊಡೆದಾಟದ ವೀಡಿಯೊವೊಂದು ವೈರಲ್‌ ಆಗಿದೆ. ಆಸ್ಟ್ರೇಲಿಯದ ನಿಸರ್ಗಧಾಮದಲ್ಲಿ ಎರಡು ಕಾಂಗರೂಗಳ ಬಾಕ್ಸಿಂಗ್ ಪಂದ್ಯವನ್ನು ಒಳಗೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟ್ವಿಟರ್‌ನಲ್ಲಿ ನೌ ದಿಸ್ ಹಂಚಿಕೊಂಡಿರುವ ಈ ವೀಡಿಯೊದಲ್ಲಿ … Continued

ಒಂದು ವರ್ಷದ ಬಳಿಕ ಆಫ್ಘಾನಿಸ್ತಾನ ಚಿತ್ರಮಂದಿರಗಳು ಓಪನ್: ಆದ್ರೆ ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ಕತ್ತರಿ, 37 ಸಿನೆಮಾಗಳಲ್ಲಿ ಒಂದರಲ್ಲಿ ಮಾತ್ರ ಮಹಿಳೆ ನಟನೆ…!!

ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಒಂದು ವರ್ಷದ ನಂತರ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಆದರೆ ಚಲನಚಿತ್ರಗಳಲ್ಲಿ ಮಹಿಳಾ ಕಲಾವಿದರ ಪಾತ್ರಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಒಂದು ವರ್ಷದ ನಂತರ, ದೇಶದ ಚಿತ್ರಮಂದಿರಗಳು ಚಲನಚಿತ್ರಗಳನ್ನು … Continued

ನೀವು ಇಲ್ಲೇಕೆ ಬಂದಿರಿ, ಭಾರತಕ್ಕೆ ವಾಪಸ್ ಹೋಗಿ: ಅಮೆರಿಕದಲ್ಲಿ ಭಾರತೀಯ ಮೂಲದ ಮಹಿಳೆಯರಿಗೆ ಜನಾಂಗೀಯ ನಿಂದನೆ, ಹಲ್ಲೆ | ವೀಡಿಯೊವೀಕ್ಷಿಸಿ

ಟೆಕ್ಸಾಸ್: ಭಾರತದ ಮೂಲದ ನಾಲ್ವರು ಅಮೆರಿಕನ್ನರ ಗುಂಪಿನ ಮೇಲೆ ಜನಾಂಗೀಯ ನಿಂದನೆ ಮಾಡಿ, ಹಲ್ಲೆ ನಡೆಸಿದ ಆರೋಪದಲ್ಲಿ ಮೆಕ್ಸಿಕನ್- ಅಮೆರಿಕನ್ ಮಹಿಳೆಯನ್ನು ಟೆಕ್ಸಾಸ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಮೂಲದ ಅಮೆರಿಕದ ಮಹಿಳೆಯರನ್ನು ಜನಾಂಗೀಯವಾಗಿ ನಿಂದಿಸಿರುವ ಈ ಮಹಿಳೆ, ‘ಭಾರತಕ್ಕೆ ವಾಪಸ್ ಹೋಗಿ’ ಎಂದು ತಾಕೀತು ಮಾಡುವುದು … Continued