ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಕೆಲವೇ ಸಮಯದಲ್ಲಿ ಶ್ಯೂರಿಟಿ ಮೇಲೆ ಬಿಡುಗಡೆ

ಅಟ್ಲಾಂಟಾ: ಜಾರ್ಜಿಯಾದಲ್ಲಿ ಪಿತೂರಿ ಆರೋಪದ ಮೇಲೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಔಪಚಾರಿಕವಾಗಿ ಬಂಧಿಸಲಾಯಿತು. ಮತ್ತು ಐತಿಹಾಸಿಕ ಮಗ್ ಶಾಟ್ ತೆಗೆದ ನಂತರ $ 2,00,000 ಬಾಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಜಾರ್ಜಿಯಾದಲ್ಲಿ 2020 ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು 18 ಇತರ ಆರೋಪಿಗಳೊಂದಿಗೆ ಪಿತೂರಿ ರೂಪಿಸಿದ ಆರೋಪ ಹೊತ್ತಿರುವ ಟ್ರಂಪ್, … Continued

ಚಂದ್ರನ ಮೇಲೆ ಚಂದ್ರಯಾನ-3 ಇಳಿಯುವಿಕೆಗೆ ಪಾಕಿಸ್ತಾನದ ವ್ಯಕ್ತಿಯ ಪ್ರತಿಕ್ರಿಯೆ ಹೇಗಿತ್ತು ನೋಡಿ | ವೀಡಿಯೊ

ತನ್ನ ಚಂದ್ರಯಾನ-3 ಮಿಷನ್ ಮೂಲಕ ಐತಿಹಾಸಿಕ ಚಂದ್ರನ ಮೇಲೆ ಇಳಿದು ಸಾಧನೆ ಮಾಡಿದ ನಂತರ, ಭಾರತವು ಚಂದ್ರನ ಮೇಲೆ ನಾಲ್ಕನೇ ದೇಶವಾಯಿತು ಮತ್ತು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶವಾಯಿತು. ಪ್ರಪಂಚದಾದ್ಯಂತ ಅಭಿನಂದನೆಗಳು ಹರಿದುಬಂದವು. ಪಾಕಿಸ್ತಾನದಲ್ಲಿಯೂ ಈ ಮೊದಲು ವ್ಯಂಗ್ಯವಾಡಿದ್ದ ಇಮ್ರಾನ್ ಖಾನ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವ … Continued

ಅಮೆರಿಕದ ಮೃಗಾಲಯದಲ್ಲಿ ವಿಶಿಷ್ಟ ಜಿರಾಫೆ ಜನನ

ನ್ಯೂಯಾರ್ಕ್: ಅಮೆರಿಕದ ಟೆನ್ನೆಸ್ಸಿಯಲ್ಲಿರುವ ಬ್ರೈಟ್ಸ್ ಮೃಗಾಲಯದಲ್ಲಿ ಅಪರೂಪದ ಜಿರಾಫೆಯೊಂದು ಜನಿಸಿದೆ. ಸಾಮಾನ್ಯವಾಗಿ ಜಿರಾಫೆ ದೇಹದ ತುಂಬಾ ಆಕರ್ಷಕ ಕಂದು ಬಣ್ಣದ ದೊಡ್ಡ ಗಾತ್ರದ ಚುಕ್ಕೆಗಳು ಅಥವಾ ತೇಪೆಗಳನ್ನು ಕಾಣುತ್ತೇವೆ ಆದರೆ ಈ ಜಿರಾಫೆಯು ತನ್ನ ದೇಹದಲ್ಲಿ ಒಂದೇ ಒಂದು ಚುಕ್ಕೆ ಅಥವಾ ತೇಪೆಗಳಿಲ್ಲದೆ ಜನಿಸಿದೆ. ಜುಲೈ 31 ರಂದು ಜನಿಸಿದ ಜಿರಾಫೆಗೆ ಇನ್ನೂ ಹೆಸರಿಡಲಾಗಿಲ್ಲ. ಇಡೀ … Continued

ಈಗ ಹೇರ್‌ ಕಟ್‌ ಮಾಡಲು ಬಂತು ರೋಬೋಟ್‌ | ವೀಕ್ಷಿಸಿ

ತಾಂತ್ರಿಕ ಪ್ರಗತಿಗಳ ಮಧ್ಯೆ, ವ್ಯಕ್ತಿಗಳು ಈಗ ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ವೈವಿಧ್ಯಮಯ ರೋಬೋಟ್‌ಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಸ್ವಯಂಚಾಲಿತ ಫ್ಲೋರ್ ಕ್ಲೀನರ್‌ಗಳಿಂದ ಹಿಡಿದು ಮನೆ ಸಹಾಯಕರವರೆಗೆ, ಸಾಧ್ಯತೆಗಳ ಶ್ರೇಣಿಗೆ ಮಿತಿಯಿಲ್ಲ. ಇಂತಹದ್ದೇ ಒಂದು ನಿದರ್ಶನದಲ್ಲಿ, ಆರ್ಕೈವ್ ಮಾಡಲಾದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ, ಹೇರ್‌ಕಟ್ ಮಾಡಲು ವಿನ್ಯಾಸಗೊಳಿಸಲಾದ ರೋಬೋಟ್‌ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ವೀಡಿಯೊದಲ್ಲಿ, ಅಮೇರಿಕನ್ ಇಂಜಿನಿಯರ್ … Continued

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆ : ಡ್ರೈವರ್‌ ರಹಿತ ಬಸ್ ಸರ್ವಿಸ್‌ ಆರಂಭಿಸಿದ ಸ್ಯಾನ್ ಫ್ರಾನ್ಸಿಸ್ಕೋ …!

ಸ್ಯಾನ್ ಫ್ರಾನ್ಸಿಸ್ಕೋ : ಜನನಿಬಿಡ ರಸ್ತೆಗಳಲ್ಲಿ ಸಾಗುವ ಬಸ್, ಜನರು ಬರುವಾಗ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ. ಬಸ್ ಹತ್ತಿದ ನಂತರ ತಾನೇ ಮುಂದಕ್ಕೆ ಚಲಿಸುತ್ತದೆ. ಈ ಬಸ್ಸಿನಲ್ಲಿ ಡ್ರೈವರ್ ಇಲ್ಲ.. ಸ್ಟೀರಿಂಗ್ ಕೂಡ ಇಲ್ಲ. ಆದರೂ ಬಸ್ ಸಲೀಸಾಗಿ ತನ್ನಷ್ಟಕ್ಕೆ ಚಲಿಸುತ್ತದೆ. ರೋಬೋಟ್ಯಾಕ್ಸಿಗಳು ಮೊದಲು ಬಂತು. ಈಗ ಚಾಲಕ ರಹಿತ ಬಸ್‌ಗಳು ಬಂದಿವೆ.ಈಗ ಅಮೆರಿಕದ ಸ್ಯಾನ್ … Continued

ಪಾಕಿಸ್ತಾನದಲ್ಲಿ ಉಗ್ರರಿಂದ ಬಾಂಬ್ ದಾಳಿ : 11 ಕಾರ್ಮಿಕರು ಸಾವು

ಪಾಕಿಸ್ತಾನದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಖೈಬರ್ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಬಾಂಬ್‌ ಸೋಟಕ್ಕೆ 11 ಕಾರ್ಮಿಕರು ಸಾವಿಗೀಡಾಗಿದ್ದಾರೆ. ಸ್ಫೋಟದ ತೀವ್ರತೆಗೆ ಬಳಿಕ ದೇಹಗಳು ಛಿದ್ರವಾಗಿ ಬಿದ್ದಿವೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ನಿರ್ಮಾಣ ಹಂತದ ಸರ್ಕಾರಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 11 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು … Continued

ತಾಂತ್ರಿಕ ದೋಷ: 47 ವರ್ಷಗಳ ನಂತರ ಹಾರಿಸಲಾದ ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ -25 ಅಪಘಾತವಾಗಿ ಚಂದ್ರನ ಮೇಲೆ ಪತನ

ಮಾಸ್ಕೋ: ಸುಮಾರು 47 ವರ್ಷಗಳ ನಂತರ ರಷ್ಯಾದ ಮೊದಲ ಚಂದ್ರನ ಮೇಲೆ ಇಳಿಯಲು ಹಾರಿಸಲಾದ ಬಾಹ್ಯಾಕಾಶ ನೌಕೆ ಲೂನಾ -25 ಪ್ರೋಬ್ ಇಳಿಯುವ ಪೂರ್ವದ ಕೌಶಲ್ಯದ ಸಂದರ್ಭದಲ್ಲಿ ಉಂಟಾದ ತೊಡಕಿನಿಂದಾಗಿ ನಂತರ ಚಂದ್ರನ ಮೇಲ್ಮೈಗೆ ಅಪ್ಪಳಿಸಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಭಾನುವಾರ ತಿಳಿಸಿದೆ. ಶನಿವಾರ ಮಧ್ಯಾಹ್ನ 2:57 ಕ್ಕೆ (1157 GMT) Luna-25 … Continued

ವೀಡಿಯೊ.. : ಏಷ್ಯಾ ಕಪ್ ಕ್ರಿಕೆಟ್‌ 2023-ಬೆಚ್ಚಿ ಬೀಳುವಂತಹ ಸಿದ್ಧತೆ : ನಿಗಿ ನಿಗಿ ಕೆಂಡದ ಮೇಲೆ ನಡೆದಾಡಿದ ಬಾಂಗ್ಲಾದೇಶದ ಕ್ರಿಕೆಟಿಗ | ವೀಕ್ಷಿಸಿ

ಏಷ್ಯಾ ಕಪ್ ಕ್ರಿಕೆಟ್‌ 2023 ಆರಂಭವಾಗಲು ಎರಡು ವಾರಗಳೂ ಇಲ್ಲ. ಈ ಟೂರ್ನಿಯಲ್ಲಿ ಭಾಗವಹಿಸುವ ಬಹುತೇಕ ಎಲ್ಲ ತಂಡಗಳು ಅಂತಿಮ ಹಂತದ ಸಿದ್ಧತೆಯಲ್ಲಿವೆ. ಈ ಪಂದ್ಯಾವಳಿಯು 2023 ರ ಏಕ ದಿನದ ಪಂದ್ಯದ ವಿಶ್ವಕಪ್‌ಗೆ ಮುಂಚಿತವಾಗಿ ಆಟಗಾರರು ಸ್ಪರ್ಧೆಗೆ ತಮ್ಮ ವಿಭಿನ್ನ ವಿಧಾನಗಳಲ್ಲಿ ತಯಾರಿ ನಡೆಸುತ್ತಿರುವಾಗ, ಬಾಂಗ್ಲಾದೇಶದ ಆರಂಭಿಕ ಆಟಗಾರ ಮೊಹಮ್ಮದ್ ನಯಿಮ್ ಶೇಖ್ ನಡೆಸಿದ … Continued

ನೂರಾರು ಮೊಸಳೆಗಳಿಂದ ತುಂಬಿ ತುಳುಕುತ್ತಿರುವ ನದಿಯಲ್ಲಿ ದೋಣಿ ವಿಹಾರದ ಭಯಾನಕ ದೃಶ್ಯಗಳು : ವೀಕ್ಷಿಸಿ

ಅಪಾಯಕಾರಿ ಮೊಸಳೆಗಳು ಲಕ್ಷಾಂತರ ವರ್ಷಗಳಿಂದ ಜಲಮಾರ್ಗಗಳು ಮತ್ತು ನದಿ ತೀರಗಳನ್ನು ಆಳಿದ ಪರಭಕ್ಷಕಗಳಾಗಿವೆ. ತಮ್ಮ ಶಕ್ತಿಯುತ ದವಡೆಗಳು, ರೇಜರ್-ಚೂಪಾದ ಹಲ್ಲುಗಳ ಸಾಲುಗಳಿಂದ ಮತ್ತು ವಿಲಕ್ಷಣ ಸಾಮರ್ಥ್ಯದಿಂದ, ಈ ಸರೀಸೃಪಗಳು ಇತರ ಪ್ರಾಣಿಗಳು ಮತ್ತು ಮನುಷ್ಯರಲ್ಲಿ ಭಯವನ್ನು ಉಂಟುಮಾಡುತ್ತವೆ. ಆದ್ದರಿಂದ, ಮೊಸಳೆಯನ್ನು ಎದುರಿಸುವುದು ನಿಜವಾಗಿಯೂ ಅಪಾಯಕಾರಿ ಎಂಬುದು ಎಂಥವರಿಗೂ ಅರ್ಥವಾಗುವಂತ ವಿಷಯವಾಗಿದೆ. ತರಬೇತಿ ಪಡೆದ ವೃತ್ತಿಪರರು ಸಹ … Continued

26/11 ಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾ ಹೇಬಿಯಸ್ ಕಾರ್ಪಸ್ ರಿಟ್‌ ಅರ್ಜಿ ತಿರಸ್ಕರಿಸಿದ ಅಮೆರಿಕ ಕೋರ್ಟ್: ಭಾರತಕ್ಕೆ ಹಸ್ತಾಂತರ ಇನಷ್ಟು ಸನಿಹ

ವಾಷಿಂಗ್ಟನ್:  2008 ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿ, ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ರಿಟ್ ಅನ್ನು ಅಮೆರಿಕದ ನ್ಯಾಯಾಲಯ ತಿರಸ್ಕರಿಸಿದ್ದು, ಇದು ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರಿಗೆ ಪ್ರಮಾಣೀಕರಣ ನೀಡಲು ದಾರಿ ಮಾಡಿಕೊಟ್ಟಿದೆ. ತಹವ್ವುರ್ ರಾಣಾ “ಹೇಬಿಯಸ್ ಕಾರ್ಪಸ್ ರಿಟ್‌ … Continued