ಕುಮಟಾ: ನಿವೃತ್ತ ತಹಶೀಲ್ದಾರ ಮೇಘರಾಜ ನಾಯ್ಕ ನಿಧನ

ಕುಮಟಾ: ನಗರದ ಪೋಸ್ಟಲ್ ಕಾಲೋನಿ ಸಮೀಪದ ನಿವಾಸಿ ನಿವೃತ್ತ ತಹಸೀಲ್ದಾರ ಮೇಘರಾಜ್ ನಾಯ್ಕ್ (62) ಗುರುವಾರ ಮುಂಜಾನೆ ನಿಧನರಾದರು. ಅವರು ಕುಮಟಾದಲ್ಲಿ ತಹಸೀಲ್ದಾರ ಆಗಿದ್ದಾಗ ನೆರೆ ಹಾವಳಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದ ಪರಿಸ್ಥಿತಿಯ ನಿರ್ವಹಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದರು. ಮೂಲತಃ ಕುಮಟಾ ತಾಲೂಕಿನ ಕಾಗಾಲ ಗ್ರಾಮದವರಾಗಿದ್ದ ಮೇಘರಾಜ ನಾಯ್ಕ ಅವರು ವಿಧಾನ … Continued

ಕುಮಟಾ: ಬಾಳಿಗಾ ಕಾಲೇಜಿನಲ್ಲಿ ರಾಜ್ಯಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ ಉದ್ಘಾಟನೆ

ಕುಮಟಾ: ಡಾ. ಎ. ವಿ. ಬಳಿಗಾ ವಾಣಿಜ್ಯ ಮಹಾವಿದ್ಯಾಯದ ಕ್ರೀಡಾಂಗಣದಲ್ಲಿ ಭಾನುವಾರ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿಯ ಉದ್ಘಾಟನೆ ನಡೆಯಿತು. ಶಾಸಕ ದಿನಕರ್ ಶೆಟ್ಟಿ ಪಂದ್ಯಾವಳಿ ಉದ್ಘಾಟಿಸಿದರು. ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಿದೆ. ಆದರೂ ಇತರ ಕ್ರೀಡೆಗೆ ಮಹತ್ವ ಬರುತ್ತಿದೆ. ಫ್ಲೋರ್ ಬಾಲ್ ಒಂದು ನೂತನ ಕ್ರೀಡೆ. ರಾಜ್ಯ ಮಟ್ಟದ … Continued

ದತ್ತಾತ್ರೇಯ ವೈದ್ಯ ನಿಧನ

ಕುಮಟಾ : ಹೊನ್ನಾವರ ತಾಲೂಕಿನ ನವಿಲುಗೋಣದ ಭುವಿನಕೊಡ್ಲು ದತ್ತಾತ್ರೇಯ ವೈದ್ಯ (87) ಭಾನುವಾರ ಸಂಜೆ ನಿಧನರಾದರು. ಮೃತರು ಪುತ್ರ, ಆರು ಪುತ್ರಿಯರು  ಹಾಗೂ ಅಪಾರಬಂಧು ಬಳಗವನ್ನು ಅಗಲಿದ್ದಾರೆ. ಉತ್ತಮ ಕೃಷಿಕರು ಆಗಿದ್ದ ಅವರು ಸುಧೀರ್ಘ ಕಾಲದಿಂದ ಶ್ರೀ ಭುವನೇಶ್ವರ ಮತ್ತು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ ಕೊಂಡುಬಂದಿದ್ದರು. ನವಿಲುಗೋಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ದತ್ತಣ್ಣ … Continued

ಕುಮಟಾದಲ್ಲಿ ಅಕ್ಟೊಬರ್ 6ರಿಂದ 12ರ ವರೆಗೆ ತಾಳಮದ್ದಳೆ ಸಪ್ತಾಹ

ಕುಮಟಾ : ನಗರದ ಶ್ರೀ ಮಹಾಸತಿ ಸಭಾಭವನದಲ್ಲಿ ಅಕ್ಟೊಬರ್ ೬ರಿಂದ ೧೨ರ ವರೆಗೆ ತಾಳಮದ್ದಳೆ ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಯಕ್ಷ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮೈಸೂರು ಶ್ರೀರಂಗಪಟ್ಟಣದ ಯಕ್ಷ ಕೌಮುದಿ ಟ್ರಸ್ಟ್ ಅಧ್ಯಕ್ಷರಾದ ಗ. ನಾ. ಭಟ್ಟ ತಿಳಿಸಿದರು. ಯಕ್ಷ ಕೌಮುದಿ ಟ್ರಸ್ಟ್ ಮತ್ತು ಕುಮಟಾದ ಯುಗಾದಿ ಉತ್ಸವ ಸಮಿತಿ ಕುಮಟಾ ಸಂಯುಕ್ತ … Continued

ಕುಮಟಾ: ಖ್ಯಾತ ವಕೀಲ ಶ್ರೀಪಾದ ಶಾಸ್ತ್ರೀ ನಿಧನ

ಕುಮಟಾ :ಖ್ಯಾತ ವಕೀಲರಾಗಿದ್ದ ಕುಮಟಾದ ಶ್ರೀಪಾದ ಶಾಸ್ತ್ರೀ (86) ಅವರು ಶನಿವಾರ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಮೃತರು ವಕೀಲರ ಸಂಘದ ಅಧ್ಯಕ್ಷರಾಗಿ, ನೋಟರಿಯಾಗಿ ಸೇವೆ ಸಲ್ಲಿಸಿದ್ದರು. ಸುಮಾರು 60 ವರ್ಷಗಳ ದೀರ್ಘ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಇವರು ಸಾವಿರಾರು ಯುವ ವಕೀಲರಿಗೆ ಮಾರ್ಗ ದರ್ಶಕರಾಗಿಯೂ ಸಹಾಯ ಮಾಡಿದ್ದರು. ಶಾಸ್ತ್ರೀಯವರ ಆತ್ಮಕ್ಕೆ ಶಾಂತಿ ಕೋರಿ … Continued

ಕುಮಟಾ: ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಂಕರ ಶಾಸ್ತ್ರೀ ನಿಧನ

ಕುಮಟಾ: ನಗರದ ವಕೀಲ ಹಾಗೂ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಂಕರ ಶಾಸ್ತ್ರೀ (52) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ನಗರದಲ್ಲಿ ಟಿವಿಎಸ್ ದ್ವಿಚಕ್ರ ವಾಹನ ಶೋ ರೂ ನಡೆಸುತ್ತಿದ್ದ ಇವರು ಕುಮಟಾ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಶಂಕರ ಶಾಸ್ತ್ರೀಯವರು ಕುಮಟಾದ ಖ್ಯಾತ ವಕೀಲರಾದ ಶ್ರೀಪಾದ ಶಾಸ್ತ್ರೀ ಅವರ … Continued

ಕುಮಟಾ: ಜುಲೈ 17ರಂದು ನಾದೋಪಾಸನೆ ಕಾರ್ಯಕ್ರಮ

ಕುಮಟಾ: ಗುರು ಪೂರ್ಣಿಮೆ ನಿಮಿತ್ತ ಕೂಜಳ್ಳಿ ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ  ಕುಮಟಾದ ಹವ್ಯಕ ಸಭಾಭವನದಲ್ಲಿ ಜುಲೈ 17ರಂದು ನಾದೋಪಾಸನೆ ಕಾರ್ಯಕ್ರಮ ನಡೆಯಲಿದೆ. ಕುಮಟಾ ಗಂಧರ್ವ ಕಲಾ ಕೇಂದ್ರದ ಸಹಯೋಗದಲ್ಲಿಈ ಕಾರ್ಯಕ್ರಮವು  ಜುಲೈ 17ರಂದು ಭಾನುವಾರ ಬೆಳಿಗ್ಗೆ 9:30ರಿಂದ ಸಂಜೆ 7ರ ವರೆಗೆ ಕುಮಟಾ ಹವ್ಯಕ ಸಭಾಭವನದಲ್ಲಿ  ಈ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಗೌರೀಶ … Continued

ಕುಮಟಾ: ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಸಿಎ, ಐಬಿಪಿಎಸ್, ಎಂಬಿಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಘಾಟನೆ

ಕುಮಟಾ: ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಸಮಯದ ಸದುಪಯೋಗದ ಅರಿವಿರಬೇಕು. ಯಾವ ಶಿಕ್ಷಣ ಸಂಸ್ಥೆಗಳೂ ಉದ್ಯೋಗ ಭರವಸೆ ನೀಡ ಬಾರದು, ಬದುಕುವ ದಾರಿ ತೋರಿಸಬೇಕು ಎಂದು ಉಡುಪಿಯ ತ್ರಿಷಾ ಸಂಸ್ಥೆಯ ಸಿಇಒ ಗೋಪಾಲಕೃಷ್ಣ ಭಟ್ಟ ಹೇಳಿದರು. ಅವರು ನಗರದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆರಂಭವಾದ ಸಿಎ, ಐಬಿಪಿಎಸ್ ಮತ್ತು ಎಂಬಿಎ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಚಟುವಟಿಕೆ ಉದ್ಘಾಟಿಸಿ … Continued

ಕುಮಟಾ: ಭಕ್ತರನ್ನು ವಿಸ್ಮಯಗೊಳಿಸಿದ ಚಂದಾವರ ಹನುಮಂತ ದೇವರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಚಂದಾವರದ ಹನುಮಂತ ದೇವರು ವಾರ್ಷಿಕ ಸವಾರಿ ಹೋಗುವುದು ಸಂಪ್ರದಾಯ. ಈ ವರ್ಷದ ಸವಾರಿ ಅನೇಕ ವಿಸ್ಮಯಕ್ಕೆ ಕಾರಣವಾಗಿದೆ. ಸುಮಾರು ಒಂದು ತಿಂಗಳ ಸವಾರಿ ಕಾಲದಲ್ಲಿ ಚಂದಾವರದ ಶ್ರೀ ಹನುಮಂತ ದೇವರು ಅನೇಕ ವಿಸ್ಮಯಕ್ಕೆ ಕಾರಣವಾಗಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಚಂದಾವರದಿಂದ ಸವಾರಿ ಹೊರಟ ಶ್ರೀಹನುಮಂತ ದೇವರು ಕುಮಟಾದ ತಂಡ್ರಕುಳಿಯಲ್ಲಿ ತಂಗಿ … Continued

ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ ರೆಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು: ಎಸ್‌ಪಿ ಖಡಕ್‌ ಸೂಚನೆ

ಕುಮಟಾ: ಕುಮಟಾ: ಉತ್ತರಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಪ್ರವಾಸಿಗರು ಸುಮುದ್ರದ ಅಲೆಗೆ ಸಿಲುಕಿ ಅಪಾಯಕ್ಕೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬೀಚ್‌ಗೆ ಹೊಂದಿಕೊಂಡಿರುವ ರೇಸಾರ್ಟ್‌ ಮಾಲಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದರ ಬಗ್ಗೆ ರೆಸಾರ್ಟ್‌ ಮಾಲೀಕರೊಂದಿಗೆ ಸಭೆ ನಡೆಸಿದ್ದೇವೆ. … Continued