ಏಪ್ರಿಲ್‌ ೨೫ರಂದು ಜಿಲ್ಲಾಮಟ್ಟದ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ನಂದೊಳ್ಳಿಯ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗ (ಕಬಡ್ಡಿ) ಸಮಿತಿಯ ಆಶ್ರಯದಲ್ಲಿ ಏಪ್ರಿಲ್‌ ೨೫ ರಂದು ನಂದೊಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ ೨೫೦೦೧, ದ್ವಿತೀಯ ಬಹುಮಾನ ೧೫೦೦೧, ತೃತೀಯ ೧೦೦೦೧, ಚತುರ್ಥ ಬಹುಮಾನ ೭೦೦೧ ರೂ.ಗಳ ಬಹುಮಾನವಿದೆ. … Continued

ಕುಮಟಾ: ಅದ್ಧೂರಿಯಾಗಿ ನಡೆದ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವ

ಕುಮಟಾ;ಉತ್ತರ ಕನ್ನಡ ಜಿಲ್ಲೆಯ ಹೆಸರುವಾಸಿ ಜಾತ್ರೆಗಳಲ್ಲೊಂದಾದ ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವು ಶನಿವಾರ ನಡೆಯಿತು. ಇದು ಪ್ರತಿವರ್ಷ ಚೈತ್ರ ಶುದ್ಧ ಹುಣ್ಣಿಮೆ ದಿನದಂದು ನಡೆಯುತ್ತದೆ.ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ರಥೋತ್ಸವ ಸ್ಥಗಿತವಾಗಿತ್ತು.ಈ ವರ್ಷ ಯಾವುದೇ ಆತಂಕವಿಲ್ಲದೆ ರಥೋತ್ಸವ ಅದ್ಧೂರಿಯಾಗಿ ಸಂಪನ್ನವಾಯಿತು. ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀದೇವಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು. … Continued

ಕುಮಟಾ: ಟಿ.ಡಿ.ಕಾಮತ್‌ ನಿಧನ

ಕುಮಟಾ: ಮೂಲತಃ ಕುಮಟಾದವರಾದ ಹಾಲಿ ಮುಂಬೈ ನಿವಾಸಿಯಾಗಿದ್ದ ಟಿ.ಡಿ.ಕಾಮತ್‌ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರು ಕುಮಟಾದ ಪ್ರಸಿದ್ಧ ಜವಳಿ ವ್ಯಾಪಾರಿ ಡಿ.ಟಿ. ಕಾಮತ್‌ ಅವರ ಪುತ್ರರಾಗಿದ್ದರು. ಅಶೋಕ ಲೇಲ್ಯಾಂಡ್‌ ಸೇರಿದಂತೆ ಹಲವು ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದ ಟಿ.ಡಿ.ಕಾಮತ್‌ ಕುಮಟಾದ … Continued

ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭ

ಅಂಕೋಲಾ : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಅಂಕೋಲಾ ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಸೋಮವಾರ ಜೈಹಿಂದ ಕ್ರೀಡಾಂಗೆಣದಲ್ಲಿ ಆರಂಭವಾಯಿತು. ಒಟ್ಟಾರೆ 16 ತಂಡಗಳು ಈ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಲು ಇಂತಹ ಪಂದ್ಯಾವಳಿ ಅಗತ್ಯ ಎಂದರು. ಪತ್ರಕರ್ತ ವಿಠ್ಠಲದಾಸ … Continued

ಮುರ್ಡೇಶ್ವರದ ಸಾರ್ವಜನಿಕ ಮಹಾರಥೋತ್ಸವ ಇಲ್ಲ: ಒಳಾಂಗಣ ಪೂಜೆಗಷ್ಟೇ ಸೀಮಿತ

ಭಟ್ಕಳ: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನೆವರಿ 20 ರಂದು ನಡೆಯಲಿರುವ ಮುರ್ಡೇಶ್ವರದ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದ ಕೋವಿಡ್ ನಿಯಮಗಳ ಪ್ರಕಾರ ಅನುಮತಿ ನೀಡಿಲ್ಲ.ಜಾತ್ರೆ ಕೇವಲ ದೇವಾಲಯದ ಒಳಾಂಗಣದ ಪೂಜೆ ಪುರಸ್ಕಾರಗಳಿಗೆ ಮಾತ್ರ ಸೀಮಿತವಾಗಿರಲಿದೆ ಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ತಿಳಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಮತ್ತು ಭಕ್ತಾರು ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ … Continued

ಕುಮಟಾ: ನಾಗೇಶ ಭಟ್ಟರ ಮುಕ್ತಾಯ ಕಥಾಸಂಕಲನ ಲೋಕಾರ್ಪಣೆ

ಕುಮಟಾ: ಭಾರತೀಯ ದೂರ ಸಂಚಾರ ನಿಗಮ(ಬಿಎಸ್ಎನ್ಎಲ್)ದ ನಿವೃತ್ತ ಉದ್ಯೋಗಿಗಳಾದ ನಾಗೇಶ ಭಟ್ಟ ಅವರು ಬರೆದ ‘ಮುಕ್ತಾಯ’ ಕಥಾಸಂಕಲನ ಲೋಕಾರ್ಪಣೆಗೊಂಡಿತು. ಇದು ಹತ್ತು ಚಿಕ್ಕ ಕಥೆಗಳ ಸಂಕಲನವಾಗಿದೆ. ಖ್ಯಾತ ಸಾಹಿತಿ ಶ್ರೀಧರ ಬಳಿಗಾರ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕ ಹಾಗೂ ಸರಸ್ವತಿ ಪ್ರಕಾಶನದ ಪ್ರಕಾಶಕ ಕೃಷ್ಣಮೂರ್ತಿ ಹೆಬ್ಬಾರರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗಜಾನನ … Continued

ಕೂಜಳ್ಳಿಯಲ್ಲಿ ನಡೆದ ಪಂ.ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮ

ಕುಮಟಾ: ಸಂಗೀತ ಕೇವಲ ಮನಸ್ಸಿಗೆ ನೆಮ್ಮದಿಯನ್ನಷ್ಟೇ ನೀಡುವುದಿಲ್ಲ, ಜೊತೆಗೆ ಮಹಾದಾನಂದವನ್ನೂ ನೀಡುತ್ತದೆ ಎಂದು ಎಂಟಿಎನ್ಎಲ್ ನಿವೃತ್ತ ಜಿಡಿಎಂ ರಮೇಶ ಎಸ್. ಹೆಗಡೆ ಹೇಳಿದರು. ಪಂ.ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಕುಮಟಾ ತಾಲೂಕಿನ ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪಂ. ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಗೀತ ಆಸ್ವಾದನೆಯೂ ಒಂದು … Continued

ಕೆನರಾ ಕ್ರೆಡಿಟ್ ಸೌಹಾರ್ದ ಸಂಘಕ್ಕೆ ೧.೨೯ ಲಕ್ಷ ರೂ. ಲಾಭ

ಕುಮಟಾ: ಕೆನರಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಸಭೆಯು ಬಗ್ಗೋಣದ ಲಯನ್ಸ್ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಜಿ.ಜಿ.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು ೨೦೨೦-೨೧ ರಲ್ಲಿ ೧೨೯೭೦೧ ರೂ.ಗಳಷ್ಟು ಲಾಭ ಮಾಡಿದೆ. ಲಾಕ್ ಡೌನ್ ಇತ್ಯಾದಿ ಸಮಸ್ಯೆಯ ಮಧ್ಯೆಯೂ ಸಂಘವು ಲಾಭಗಳಿಸಿದ್ದು ಸಂತಸದ ವಿಷಯವಾಗಿದೆ. ಜನರು ಆರ್ಥಿಕ ಅಭಿವೃದ್ಧಿ ಹೊಂದಬೇಕಾದರೆ ಹಣಕಾಸು … Continued

ಕುಮಟಾ ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ಬಿ ಪ್ಲಸ್ ನ್ಯಾಕ್ ಮಾನ್ಯತೆ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ನವೆಂಬರ್ ೧೮ ಮತ್ತು ೧೯ ರಂದು ನ್ಯಾಕ್ ಸಮೀತಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದು, ಕಾಲೇಜು ಬಿ ಪ್ಲಸ್‌ ನ್ಯಾಕ್ ಶ್ರೇಣಿ ಉನ್ನತಿ ಪಡೆದುಕೊಂಡಿದೆ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಚರ್ಚೆ, ಆಡಳಿತ ಮಂಡಳಿಯೊಂದಿಗಿನ ಸಭೆ, ಪೂರ್ವ ವಿದ್ಯಾರ್ಥಿಗಳೊಂದಿಗಿನ ಸಂಭಾಷಣೆ ನಡೆಸಿ ನ್ಯಾಕ್ ಸಮಿತಿ ಮೆಚ್ಚುಗೆ … Continued

ಕುಮಟಾ: ನವೆಂಬರ್‌ 18-19ರಂದು ಡಾ.ಎ.ವಿ ಬಾಳಿಗಾ ವಾಣಿಜ್ಯ ಕಾಲೇಜಿಗೆ ನ್ಯಾಕ್ ಸಮಿತಿ

ಕುಮಟಾ; ರಾಜ್ಯದ ಪ್ರತಿಷ್ಠಿತ ಮಹಾವಿದ್ಯಾಲಯದಲ್ಲಿ ಒಂದಾಗಿರುವ ಕುಮಟಾದ ಕೆನರಾ ಕಾಲೇಜು ಸೊಸೈಟಿಯ ಡಾ.ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪರಿವೀಕ್ಷಣೆಗಾಗಿ ನ್ಯಾಕ್ ಸಮಿತಿಯು ಆಗಮಿಸಲಿದೆ. ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯವು ನ್ಯಾಕ್ ಮೌಲ್ಯಮಾಪನ ಮತ್ತು ಮರು-ಮಾನ್ಯತೆ ಪ್ರಕ್ರಿಯೆಗೆ ಒಳಪಡುತ್ತಿದ್ದು ನವೆಂಬರ್‌ ೧೮ ಮತ್ತು ೧೯ ೨೦೨೧ರಂದು ನ್ಯಾಕ್ ಸಮಿತಿಯ ಸದಸ್ಯರು ಮಹಾವಿದ್ಯಾಲಯಕ್ಕೆ ತಮ್ಮ ನಿಯೋಜಿತ … Continued