ಜೆಎಸ್‌ಎಸ್‌ ಅಂಗಸ್ಥೆಗಳ 28 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಡಾ.ವೀರೇಂದ್ರ ಹೆಗ್ಗಡೆ ಸನ್ಮಾನ

ಧಾರವಾಡ: ಜೆ.ಎಸ್.ಎಸ್ ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಸಂಸ್ಥೆ, ಇಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ, ಉತ್ತಮ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಲಾಗುತ್ತದೆ ಆದ್ದರಿಂದ ಇಲ್ಲಿ ಪ್ರತಿ ವಿದ್ಯಾರ್ಥಿಯ ಭವಿಷ್ಯ ಉಜ್ವಲಾವಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜೆ.ಎಸ್.ಎಸ್ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಜೆ.ಎಸ್.ಎಸ್ ಎಂಬಿಎ ಸಭಾಭವನದಲ್ಲಿ ಜೆ.ಎಸ್.ಎಸ್ … Continued

ಯಾವುದೇ ಕಾರಣಕ್ಕೂ ಕಣ್ಣಿನ ನಿರ್ಲಕ್ಷ್ಯ ಮಾಡಬೇಡಿ: ಡಾ. ಕಾತ್ಯಾಯಿನಿ

ಧಾರವಾಡ: ಕಣ್ಣು ಮಾನವನ ದೇಹದ ಅತಿ ಮುಖ್ಯ ಅಂಗ, ಪ್ರತಿ ದಿನ ನಮ್ಮ ಕಣ್ಣು ೨೫೦೦೦ ಬಾರಿ ಮಿಟುಕಿಸುತ್ತದೆ. ಕಣ್ಣಿನಿಂದಲೇ ನಾವು ಪ್ರಪಂಚದ ಆಗುಹೋಗುಗಳನ್ನು ನೋಡುತ್ತೇವೆ. ಕಣ್ಣಿಗೆ ಏನಾದರೂ ಸಮಸ್ಯೆ ಆದಲ್ಲಿ ನುರಿತ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಇಲ್ಲವಾದಲ್ಲಿ ಮುಂದೆ ಅಂಧಕಾರದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬರಬಹುದು ಎಂದು ಡಾ.ಕಾತ್ಯಾಯಿನಿ ಹೇಳಿದರು. ಜೆ.ಎಸ್.ಎಸ್ ಶ್ರೀ … Continued

ಕೊಡ್ಲಗದ್ದೆ: ಪೌಷ್ಟಿಕ ಆಹಾರ ಮೇಳ

ಅಂಕೋಲಾ: ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಗ್ರಾಮದ ಗ್ರಾಮ ಅರಣ್ಯ ಸಮಿತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೊಡ್ಲಗದ್ದೆ ಜ್ಞಾನೋದಯ ಜ್ಞಾನ ವಿಕಾಸ ಸಂಘದವರಿಂದ ಪೌಷ್ಟಿಕ ಆಹಾರ ಮೇಳ ಸೋಮವಾರ (ಅಕ್ಟೋಬರ್‌ 18) ನಡೆಯಿತು. ಸುಂಕಸಾಳದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರಗಳ ಕುರಿತು ಮಾಹಿತಿ … Continued

ಜೆಎಸ್ಎಸ್ ನೂತನ ಆಡಳಿತ ಮಂಡಳಿಯ ೪೮ ವರ್ಷಗಳ ಸಾರ್ಥಕ-ಪ್ರಾಮಾಣಿಕ ಸೇವೆಯಿಂದ ಸಂಸ್ಥೆಈಗ ಹೆಮ್ಮರ: ಡಾ. ನ. ವಜ್ರಕುಮಾರ

ಧಾರವಾಡ: ಉತ್ತರ ಕರ್ನಾಟಕದ ಶಿಕ್ಷಣದ ಹೆಬ್ಬಾಗಿಲಾಗಿರುವ ಧಾರವಾಡಕ್ಕೆ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜನತಾ ಶಿಕ್ಷಣ ಸಮಿತಿಯ ಸಾರಥ್ಯವನ್ನು ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು. ಅವರು ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ೪೮ ವರ್ಷಗಳನ್ನು ಪೂರೈಸಿ ೪೯ನೇ ವರ್ಷಕ್ಕೆ ಕಾಲಿಡುತ್ತಿರುವ … Continued

ಹಿರಿಯ ರಾಜಕಾರಣಿ ಡಾ.ಎಂ.ಪಿ.ಕರ್ಕಿ ನಿಧನ: ಜನತೆ ಕಂಬನಿ

ಕುಮಟಾ;ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಸಜ್ಜನ ರಾಜಕಾರಣಿ, ಶಿಕ್ಷಣ ಪ್ರೇಮಿ, ಖ್ಯಾತ ವೈದ್ಯರಾಗಿದ್ದ ಹೊನ್ನಾವರದ ಕರ್ಕಿಯ ಡಾ.ಎಂ.ಪಿ.ಕರ್ಕಿ(೮೭) ಸೋಮವಾರ ಸಂಜೆ ನಿಧನರಾದ ಸುದ್ದಿ ತಿಳಿಯುತ್ತಿರುವಂತೆ ಜನರು ಕಣ್ಣೀರು ಮಿಡಿದರು. ಜನಸಂಘದ ಮೂಲಕ ರಾಜಕೀಯಕ್ಕೆ ಬಂದ ಡಾ.ಎಂ.ಪಿ.ಕರ್ಕಿ ನಂತರ ಬಿಜೆಪಿಯಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ೧೯೮೩ ಮತ್ತು ೧೯೯೪ ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನೋಪಯೋಗಿ ಕಾರ್ಯದ … Continued

ಜೈನ್ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದ ಅಧ್ಯಕ್ಷರಾಗಿ ಭವರಲಾಲ್‌ ಜೈನ್‌ ಸತತ 3ನೇ ಬಾರಿಗೆ ಆಯ್ಕೆ

ಹುಬ್ಬಳ್ಳಿ: ಘಂಟಿಕೇರಿಯ ಶ್ರೀ ಜೈನ್ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಭವರಲಾಲ್‌ ಸಿ.ಜೈನ್‌ ಅವರು ಆಯ್ಕೆಯಾಗಿದ್ದಾರೆ. ಅವರನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಮಹೇಂದ್ರ.ಪಿ. ಪಾಲ್ಗೋತಾ, ಮುಖ್ಯ ಕಾರ್ಯದರ್ಶಿಯಾಗಿ ಭರತ್ ಭಂಡಾರಿ ಹಾಗೂ ಖಜಾಂಚಿಯಾಗಿ ಪೂರನ್‌ ನಹತ ಆಯ್ಕೆಯಾಗಿದ್ದಾರೆ. ಶ್ರೀ ಜೈನ್ ರಾಜಸ್ಥಾನಿ … Continued

ಬಾಡ :ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಕುಮಟಾ : ತಾಲೂಕಿನ ಪ್ರಸಿದ್ಧ ಶಕ್ತಿ ಸ್ಥಳ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನವಾಯಿತು. ವಿಜಯ ದಶಮಿ ದಿನವಾದ ಶುಕ್ರವಾರ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳ ಮೂಲಕ ನವರಾತ್ರಿ ಉತ್ಸವ ವೈಭವಯುತವಾಗಿ ನಡೆಯಿತು. ಮುಂಜಾನೆ ಪಲ್ಲಕಿ ಉತ್ಸವ ನಡೆಯಿತು. ಶ್ರೀ ಕಾಂಚಿಕಾ ಪರಮೇಶ್ವರಿ ಪಲ್ಲಕಿ ಮೂಲಕ ಭತ್ತದ ಗದ್ದೆಗೆ ಸಾಗಿ … Continued

ಧಾರವಾಡ: ಜೆ.ಎಸ್.ಎಸ್ ಶಿಕ್ಷಕಿಯರಿಗೆ ಸುವರ್ಣ ಪದಕ

ಧಾರವಾಡ: ಧಾರವಾಡದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಶಿಕ್ಷಕಿಯರು ಕರ್ನಾಟಕ ವಿಶ್ವವಿದ್ಯಾಲಯದಿಂದ ಸುವರ್ಣ ಪದಕ ಪಡೆದಿದ್ದಾರೆ. ಹುಬ್ಬಳ್ಳಿಯ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕಿ ಸುನಂದಾ ಸಪೂರಿ ಅವರಿಗೆ ಎಂ.ಎಸ್ ಸ್ನಾತಕೋತ್ತರ ಪದವಿಯಲ್ಲಿ ಸುವರ್ಣ ಪದಕ ದೊರೆತಿದೆ. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸುತ್ತಿರುವ ರೇಣುಕಾ ಯಳಮಲಿ … Continued

ಶಿಕ್ಷಕರ ಕಾರ್ಯ ಶ್ಲಾಘನೆ ಮಾಡಿದ ಸಚಿವ ನಾಗೇಶ, ಅಧಿಕಾರಿಗಳ ಕೆಲಸದ ಬಗ್ಗೆ ಅತೃಪ್ತಿ

ಕುಮಟಾ;ರಾಜ್ಯ ಪ್ರಾಥಮಿಕ ಮತ್ತು ಪ್ರಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಗುರುವಾರ sಸಂಜೆ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾ ನ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶೈಕ್ಷಣಿಕ ಸಭೆ ನಡೆಸಿದರು.ತಡ ರಾತ್ರಿ ೯ ಘಂಟೆಯ ತನಕ ಜಿಲ್ಲಾ ಶೈಕ್ಷಣಿಕ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಪನಿರ್ದೇಶಕರನ್ನು ಮತ್ತು ಬಿ.ಇ.ಒ ಮತ್ತಿತರ ಅಧಿಕಾರಿಗಳ ಮೇಲೆ ಜಿಲ್ಲೆಯ ಪ್ರಗತಿ ಬಗ್ಗೆ ತೆಗೆದುಕೊಂಡ ಕ್ರಮಗಳ … Continued

ಶಿಕ್ಷಣ ಸಚಿವರಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್- ರಸಾಯನ ಶಾಸ್ತ್ರ ಪ್ರಯೋಗಾಲಯ ಉದ್ಘಾಟನೆ

ಕುಮಟಾ; ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದು .ಭಾರತ ಶಿಕ್ಷಣದಲ್ಲಿ ಯಾವ ದೇಶಕ್ಕಿಂತ ಕಡಿಮೆ ಇಲ್ಲ. ಜಗತ್ತಿನ ಪ್ರಮುಖ ದೇಶದಲ್ಲಿ ಶೇ.೫೦ ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಭಾರತೀಯರಿದ್ದಾರೆ. ಇಂದು ಭಾರತದ ಹಳ್ಳಿ-ಹಳ್ಳಿಗಳಲ್ಲಿ ಪುರೋಹಿತರು ಸಿಗದಿದ್ದರೂ ಸೋಪ್ಟ್‌ವೇರ್ ಎಂಜಿನಿಯರ್ ಸಿಗುತ್ತಿದ್ದಾರೆ ಎಂದು … Continued