ಮನೆ ಕಟ್ಟಲು ತೋಡಿದ್ದ ಗುಂಡಿಗೆ ಬಿದ್ದು ಇಬ್ಬರು ಬಾಲಕರ ಸಾವು

ಧಾರವಾಡ: ಇಬ್ಬರು ಬಾಲಕರು ನೀರಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಬಾಲಕರನ್ನು ಕುಮಾರ ನಿಂಗಪ್ಪ ಮುದಕಣ್ಣವರ (7) ಮತ್ತು ಪ್ರಥಮ ಸುರೇಶ ಉಳ್ಳಾಗಡ್ಡಿ (7) ಎಂದು ಗುರುತಿಸಲಾಗಿದೆ. ಪ್ರಥಮ ಉಳ್ಳಾಗಡ್ಡಿ ಎಂಬಾತ ಧಾರವಾಡದ ಸತ್ತೂರಿನವನು. ರಜೆ ಇದ್ದಿದ್ದರಿಂದ ಮನಸೂರಿಗೆ ಬಂದಿದ್ದ ಎನ್ನಲಾಗಿದೆ. ಇವರಿಬ್ಬರು ಬುಧವಾರ … Continued

ಪುಸ್ತಕ ಎಂಬುದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ

ಸಿದ್ದಾಪುರ : ಪುಸ್ತಕ ಎಂಬುದು ಕೇವಲ ಅಚ್ಚಾದ ವಸ್ತುವಲ್ಲ; ಅದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ ಎಂದು ಸಿದ್ದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅಭಿಪ್ರಾಯಪಟ್ಟರು. ಪೌರ್ಣಿಮಾ ಸಾಹಿತ್ಯ ವೇದಿಕೆ ಹಾಗೂ ಪ್ರಯೋಗ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಲಯನ್ಸ್‌ ಬಾಲಭವನದಲ್ಲಿ ಆಯೋಜಿಸಲಾದ ಪತ್ರಕರ್ತ, … Continued

ಬೆಂಗಳೂರು : ಮೇ 8ರಂದು ಭಾರತೀಯ ಸಾಂಸ್ಕೃತಿಕತೆ, ನಾಟ್ಯಶಾಸ್ತ್ರ ಮತ್ತು ಯಕ್ಷಗಾನ ಕುರಿತು ಮಾತುಕತೆ-ಸಂವಾದ

ಬೆಂಗಳೂರು : ಅಜಿಂ ಪ್ರೇಮಜೀ ವಿಶ್ವ ವಿದ್ಯಾಲಯದಿಂದ ಭಾರತೀಯ ಸಾಂಸ್ಕೃತಿಕತೆ,  ನಾಟ್ಯಶಾಸ್ತ್ರ ಹಾಗೂ ಯಕ್ಷಗಾನ ಈ ಕರಾವಳಿ ಪರಂಪರೆಯ ದೃಶ್ಯ ಕಾವ್ಯದ ಕುರಿತು  ಮಾತು-ಸಂವಾದ ಕಾರ್ಯಕ್ರಮ ಬೆಂಗಳೂರಿನ ಕೋರಮಂಗಲದ ಇಂಡಿಯನ್‌ ಹೆರಿಟೇಜ್‌ ಅಕಾಡೆಮಿಯಲ್ಲಿ ಮೇ 8ರಂದು ಸಂಜೆ 6:30ರಿಂದ ನಡೆಯಲಿದೆ. ದಶಕರೂಪಕಗಳ ದಶಾವತಾರಗಳು-ಯಕ್ಷಗಾನ ಸಂಶೋಧನಾ ಕೃತಿಯ ಲೇಖಕ ಹಾಗೂ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅವರು  … Continued

ಭಟ್ಕಳ; ಇಬ್ಬರು ಸಮುದ್ರ ಪಾಲು

ಕಾರವಾರ : ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳಿದ್ದ ಇಬ್ಬರು ಯುವಕರು ಆಕಸ್ಮಿಕವಾಗಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬುಧವಾರ ಅಪರಾಹ್ನ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಉತ್ತರ ಪ್ರದೇಶದ ಕಾನ್ಪುರ ಮೂಲದ ಅಫ್ರೋಜ್ (34) ಮತ್ತು ರಿಜ್ವಾನ್ (28) ಎಂದು ಹೇಳಲಾಗಿದೆ. ಮೃತರು ಭಟ್ಕಳದ ಸ್ಥಳೀಯ ಗಾರ್ಮೆಂಟ್ಸ್‌ನಲ್ಲಿ … Continued

ಮೂರು ವರ್ಷಗಳ ನಂತರ ಶೃಂಗೇರಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಡಿ.ಎನ್. ಜೀವರಾಜ

ಬೆಂಗಳೂರು: ಮೂರು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ನಡೆದ ಮತಗಳ ಮರುಎಣಿಕೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬಿಜೆಪಿ ನಾಯಕ ಡಿ. ಎನ್. ಜೀವರಾಜ ಅವರು ಬುಧವಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬುಧವಾರ ಮಧ್ಯಾಹ್ನ 3:30ಕ್ಕೆ ವಿಧಾನಸೌಧದ ಮೊದಲ ಮಹಡಿಯಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಜೀವರಾಜ ಅವರಿಗೆ ಪ್ರಮಾಣವಚನ ಬೋಧಿಸಿದರು. ಜೀವರಾಜ ಅವರು … Continued

ಶಿರಸಿ : ಮೇ 8ರಂದು ರಾಘವೇಂದ್ರ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಘವೇಂದ್ರ ಮಠದಲ್ಲಿ ಮೇ 7 ಹಾಗೂ 8ರಂದು ಎರಡು ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 7ರಂದು ಗುರುವಾರ ರಾಘವೇಂದ್ರ ಮಠದ ಶ್ರೀ ಗುರುರಾಯರ ಸನ್ನಿಧಿಯಲ್ಲಿ ನೂತನ ನಾಗಪ್ರತಿಷ್ಠೆಯ ಅಂಗವಾಗಿ  ಧಾರ್ಮಿಕ ವಿಧಿವಿಧಾನಗಳು ಹಾಗೂ ಮೇ 8ರಂದು ಶುಕ್ರವಾರ ನಾಗಪ್ರತಿಷ್ಠೆ,  ಹೊಸದಾಗಿ ನಿರ್ಮಿಸಲಾದ ಬಾವಿಯಲ್ಲಿ … Continued

ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು

ಚಿಕ್ಕಮಗಳೂರು : ಬಾತುಕೋಳಿ ಹಿಡಿಯುವುದಕ್ಕೆ ಹೋದ ನಾಲ್ವರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ರಜೆಯಲ್ಲಿ ಸಂಬಂಧಿಕರ ಮನೆಗೆ ಬಂದಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೃತ ಮಕ್ಕಳನ್ನು ಅಬ್ದುಲ್ ರೆಹಮಾನ್ (13), ನಾಯಜ್ (12), ಶಿವಮೊಗ್ಗದ ಮೈದಿಹಾ (9), ಅರಮಾನ್ … Continued

ಜೊಯಿಡಾ ; ವೃದ್ಧೆ ಮೇಲೆ ಚಿರತೆ ದಾಳಿ

ಕಾರವಾರ : ಮುಂಜಾನೆ ಶೌಚಕ್ಕೆಂದು ಹೊರಬಂದ ವೃದ್ಧೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಪಣಸೋಲಿ ವಲಯದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. 70 ವರ್ಷದ ವೃದ್ಧೆ ಸುಶೀಲಾ ದೇಸಾಯಿ ಪ್ರತಿರೋಧ ತೋರಿ ಪಾರಾಗಿ ಬಂದಿದ್ದಾರೆ ಎಂದು ಹೇಳಲಾಗಿದೆ. ಪಣಸೋಲಿ ವಲಯದ ಅವುರ್ಲಿ ದಾಬೆ ಗ್ರಾಮದ ನಿವಾಸಿ ಸುಶೀಲಾ … Continued

ಕರ್ನಾಟಕ ಉಪಚುನಾವಣೆ : ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

ಬಾಗಲಕೋಟೆ/ ದಾವಣಗೆರೆ : ಕರ್ನಾಟಕದಲ್ಲಿ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಜಯಗಳಿಸಿದೆ. ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ ಮೇಟಿ ಗೆಲುವಿನ ನಗೆ ಬೀರಿದರೆ ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ ಶಾಮನೂರು ಅವರು ಜಯಗಳಿಸಿದ್ದಾರೆ. ಎಚ್​​.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ (Bagalakot) ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್​​ … Continued

ಗದಗ : ಜಾತ್ರೆಯಲ್ಲಿ ಅವಘಡ ; ಬ್ರೇಕ್ ಡ್ಯಾನ್ಸ್ ತೊಟ್ಟಿಲು ಮುರಿದುಬಿದ್ದು ಹಲವರಿಗೆ ಗಾಯ

ಗದಗ : ನಗರದ ತೋಂಟದಾರ್ಯ ಮಠದ ಆವರಣದಲ್ಲಿ ನಡೆದಿರುವ ಜಾತ್ರೆಯಲ್ಲಿನ  ಬ್ರೇಕ್ ಡ್ಯಾನ್ಸ್  ತೊಟ್ಟಿಲು ಕಟ್ ಆಗಿ ಕೆಳಗೆ ಬಿದ್ದಿದ್ದು, ಹಲವರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಭಾನುವಾರ ರಾತ್ರಿ 9ರ ಸುಮಾರಿಗೆ ನಡೆದಿದೆ ಎನ್ನಲಾಗಿದ್ದು, ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈ ತೊಟ್ಟಿಲಿನಲ್ಲಿ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಸದ್ದು ಕೇಳಿದೆ. … Continued