ನಟ ಯಶ್ ಜನ್ಮದಿನಕ್ಕೆ ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿ ಮೂವರು ಸಾವು

ಗದಗ: ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ ಮೂವರ ಸಾವಿಗೀಡಾದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಸೂರಣಗಿ ಗ್ರಾಮದ ಹನುಮಂತ ಹರಿಜನ(21), ಮುರಳಿ ನಡವಿನಮನಿ(20), … Continued

ಮಗಳು ಮೃತಪಟ್ಟರೂ ಆಕೆಯ ಕಾನೂನಾತ್ಮಕ ಉತ್ತರಾಧಿಕಾರಿಗಳಿಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ : ಹೈಕೋರ್ಟ್

ಬೆಂಗಳೂರು : ಹಿಂದೂ ಉತ್ತರಾಧಿಕಾರ ಕಾಯಿದೆಗೆ ತಿದ್ದುಪಡಿ ಮಾಡುವ ಮುನ್ನ ಮಗಳು ಮೃತಪಟ್ಟಿದ್ದಾರೆಂಬ ಕಾರಣಕ್ಕೆ ಮಗಳ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ನಿರಾಕರಿಸಲು ಸಾಧ್ಯವಿಲ್ಲ. ಪುತ್ರಿ ಮೃತಪಟ್ಟಿದ್ದರೂ ಆಕೆಯ ಕಾನೂನಾತ್ಮಕ ವಾರಸುದಾರರಿಗೆ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠ ಇತ್ತೀಚಿಗೆ ತೀರ್ಪು ನೀಡಿದೆ. ”ಹೆಣ್ಣು ಮಕ್ಕಳಿಗೆ ಜಂಟಿ ಉತ್ತರಾಧಿಕಾರದ (ಕೊಪಾರ್ಸೆನರಿ) … Continued

ಕೋಮುಗಲಭೆಗೆ ಯತ್ನ ಆರೋಪ : ಪುನೀತ್ ಕೆರೆಹಳ್ಳಿ ವಿರುದ್ಧ ದೂರು ನೀಡಿದ ಕಾಂಗ್ರೆಸ್

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕೋಮುಗಲಭೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಪುನೀತ ಕೆರೆಹಳ್ಳಿ ವಿರುದ್ಧ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸೈಬರ್ ಕ್ರೈಂಗೆ ದೂರು ನೀಡಲಾಗಿದೆ. ರಾಷ್ಟ್ರ ರಕ್ಷಣಾ ಪಡೆ ವಾಟ್ಸಾಪ್ ಗ್ರೂಪ್​ನಲ್ಲಿ ಸಂದೇಶ ರವಾನಿಸುವ ಮೂಲಕ ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪುನೀತ್​ ಕೆರೆಹಳ್ಳಿ … Continued

ಬೆಳಗಾವಿ : ಪ್ರೇಮಿಗಳೆಂದು ತಿಳಿದು ಅಕ್ಕ-ತಮ್ಮನನ್ನು ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಬೆಳಗಾವಿ : ಬೆಳಗಾವಿ ಪ್ರವೇಶಿಸುವ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದವರನ್ನು ಶೆಡ್ ನೊಳಗೆ ಕೂಡಿಹಾಕಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಗಾಂಜಾ ನಶೆಯಲ್ಲಿ ಏಳು ಜನ ಅನ್ಯಕೋಮಿನ ಯುವಕರು ಸೇರಿ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹೊರವಲಯದ ಯಮನಪುರದ ಸಚಿನ್ ಲಮಾಣಿ (22), ಮುಸ್ಕಾನ್ ಪಟೇಲ್ (23) … Continued

ಕಾರು-ಸ್ಕೂಟರ್ ಮುಖಾಮುಖಿ ಡಿಕ್ಕಿ : ಮೂವರು ಸಾವು

ತುಮಕೂರು: ಕಾರು ಹಾಗೂ ಸ್ಕೂಟರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕಿನಲ್ಲಿದ್ದ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಜೋಡಗಟ್ಟೆ ಬಳಿ ಶನಿವಾರ ನಡೆದಿದೆ. ಮೃತರನ್ನು ತಿಪಟೂರು ಮೂಲದ ಅನಿಲಕುಮಾರ (21), ನರಸಿಂಹ ಮೂರ್ತಿ (21), ಕಾವ್ಯ (19) ಎಂದು ಗುರುತಿಸಲಾಗಿದೆ. ಮೂವರು ಆದಿಚುಂಚನಗಿರಿ ಮಠಕ್ಕೆ ತೆರಳಿ ಸ್ಕೂಟರ್‌ನಲ್ಲಿ ವಾಪಸ್ ಮನೆಗೆ ಬರುತ್ತಿದ್ದಾಗ ಜೋಡಗಟ್ಟೆ … Continued

ಅಯೋಧ್ಯಾ ರಾಮಮಂದಿರ ಪ್ರತಿಷ್ಠಾಪನೆ ; ಜ.22ಕ್ಕೆ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆಗೆ ಸೂಚನೆ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಿಮಿತ್ತ ಜನವರಿ 22ರಂದು ರಾಜ್ಯದ ಎಲ್ಲ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಜನವರಿ … Continued

ಸಾರಿಗೆ ಬಸ್‍ಗಳ ಮುಖಾಮುಖಿ ಡಿಕ್ಕಿ; ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ವಿಜಯಪುರ: ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟು, 10ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕವಲಗಿ ಗ್ರಾಮದ ಮದಭಾವಿ ಕ್ರಾಸ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಬಸವನ ಬಾಗೇಬಾಡಿ ತಾಲೂಕಿನ ಡೋಣೂರ ಗ್ರಾಮದ ಸಾಜೀದಾ ಬೇಗಂ ಮಕಾನದಾರ್ (36) ಮತ್ತು ಕಲಬುರಗಿ ಪಟ್ಟಣದ ನಿವಾಸಿ ರೋಹಿಣಿ ಪಂಚಾಳ (31) … Continued

ಹುಬ್ಬಳ್ಳಿ: ಕರಸೇವಕ ಶ್ರೀಕಾಂತ ಪೂಜಾರಿ ಜೈಲಿನಿಂದ ಬಿಡುಗಡೆ ; ಭರ್ಜರಿ ಸ್ವಾಗತ

ಹುಬ್ಬಳ್ಳಿ: ಮೂವತ್ತು ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕರಸೇವಕ ಶ್ರೀಕಾಂತ ಪೂಜಾರಿ ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ರಾಮ ಜನ್ಮಭೂಮಿ ಹೋರಾಟ ಪ್ರಕರಣದಲ್ಲಿ 31 ವರ್ಷಗಳ ನಂತರ ಬಂಧನಕ್ಕೊಳಗಾಗಿದ್ದ ಶ್ರೀಕಾಂತ ಪೂಜಾರಿ ಅವರು ಕೋರ್ಟ್‌ ನಿಂದ ಜಾಮೀನು ದೊರೆತ ಮೇಲೆ 9 ದಿನಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 31 ವರ್ಷಗಳ ಹಿಂದಿನ ರಾಮಜನ್ಮಭೂಮಿ ಹೋರಾಟದ ಗಲಭೆ ಪ್ರಕರಣದಲ್ಲಿ … Continued

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರಿ ವೈದ್ಯ ಹುದ್ದೆ ತೊರೆದ ಸಂಸದ ಶ್ರೀನಿವಾಸ್ ಪ್ರಸಾದ ಅಳಿಯ…!

ಚಾಮರಾಜನಗರ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಂಸದ ಶ್ರೀನಿವಾಸ ಪ್ರಸಾದ ಅವರ ಅಳಿಯ ತಮ್ಮ ಸರ್ಕಾರಿ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಸಂಸದ ವಿ.ಶ್ರೀನಿವಾಸಪ್ರಸಾದ ಅವರ ಅಳಿಯ ಡಾ.ಎನ್‌ಎಸ್ ಮೋಹನ ಬೆಂಗಳೂರು ಸಂಜಯ ಗಾಂಧಿ ಆಸ್ಪತ್ರೆಯ ಖ್ಯಾತ ಬೆನ್ನುಹುರಿ ತಜ್ಞ ಹಾಗು ಪ್ರಾಧ್ಯಾಪಕರಾಗಿದ್ದರು. ಮುಂದಿನ ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್‌ … Continued

ಖ್ಯಾತ ಕನ್ನಡ-ತುಳು ಸಾಹಿತಿ, ಜಾನಪದ-ಯಕ್ಷಗಾನ ವಿದ್ವಾಂಸ ಪ್ರೊ. ‌ಅಮೃತ ಸೋಮೇಶ್ವರ ಇನ್ನಿಲ್ಲ

ಮಂಗಳೂರು : ಕನ್ನಡದ ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ಯಕ್ಷಗಾನ ಪ್ರಸಂಗ ಕರ್ತೃ ಪ್ರೊ.ಅಮೃತ ಸೋಮೇಶ್ವರ (89) ಅವರು ಶನಿವಾರ (ಜನವರಿ 6) ಬೆಳಿಗ್ಗೆ ನಿಧನರಾದರು. ಅವರು ವಯೋಸಹಜವಾಗಿ ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹ ಸೋಮೇಶ್ವರದ ‘ಒಲುಮೆ’ಯಲ್ಲಿ ನಿಧನರಾದರು. ಅಮೃತ ಸೋಮೇಶ್ವರ ಅವರಿಗೆ ಪತ್ನಿ ನರ್ಮದಾ, ಮಕ್ಕಳಾದ ಚೇತನ ಸೋಮೇಶ್ವರ, ಜೀವನ ಸೋಮೇಶ್ವರ ಇದ್ದಾರೆ. … Continued