ಕೊವಿಡ್‌ ವ್ಯಾಕ್ಸಿನೇಷನ್‌: ಮುಂದಿನ ಹಂತದಲ್ಲಿ ೫೦ ವರ್ಷಕ್ಕಿಂತ ಮೇಲ್ಪಟ್ಟವರ ಸೇರಿಸಲು ಚಿಂತನೆ

ಕೊವಿಡ್‌-೧೯ ಸಾರ್ವಜನಿಕ ರೋಗನಿರೋಧಕ ಚಾಲನೆಯ ಮುಂದಿನ ಹಂತದಲ್ಲಿ ಭಾರತವು ೫೦ ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೇರಿಸಿಕೊಳ್ಳಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಪತ್ರಿಕೆಯ ವರದಿಯ ಪ್ರಕಾರ, ನ್ಯಾಷನಲ್ ಎಕ್ಸ್‌ಪರ್ಟ್ ಗ್ರೂಪ್ ಆನ್ ಲಸಿಕೆ ಅಡ್ಮಿನಿಸ್ಟ್ರೇಷನ್ ಫಾರ್ ಕೋವಿಡ್ -೧೯ (ಎನ್‌ಇಜಿವಿಎಸಿ) ರಚಿಸಿದ ಆದ್ಯತೆಯ ಪಟ್ಟಿಯು ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರ ನಂತರ, ಮುಂದಿನ ಸಾಲಿನಲ್ಲಿ … Continued

ದೇಶದಲ್ಲಿ ಒಂದೇ ದಿನ 22,854 ಕೊರೋನಾ ಸೋಂಕು…!

ನವ ದೆಹಲಿ : ಕೊರೊನಾ ವೈರಸ್ ಅಬ್ಬರ ಮತ್ತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ೨೪ ತಾಸಿನಲ್ಲಿ ಒಂದೇ ದಿನದಲ್ಲಿ 22,854 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಗುರುವಾರ ತಿಳಿಸಿದೆ. ಈ ಸೋಂಕಿನಿಂದ 126 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,58,189ಕ್ಕೆ ಏರಿಕೆಯಾಗಿದೆ. .ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ 10,938,146ಕ್ಕೆ … Continued

ಮಮತಾ ಗಾಯಗೊಂಡ ಘಟನೆ: ಪ್ರಜಾಪ್ರಭುತ್ವದ ಮೇಲಿನ ಹಲ್ಲೆ ಎಂದ ಹಲವು ನಾಯಕರು, ಬೃಹನ್‌ ನಾಟಕ ಎಂದ ಬಿಜೆಪಿ, ಎಡಪಕ್ಷಗಳು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಪ್ರಚಾರ ನಡೆಸುತ್ತಿರುವಾಗ ಬುಧವಾರ ಗಾಯಗೊಂಡ ನಂತರ ಅವರನ್ನು ಕೊಲ್ಕತ್ತಾಕ್ಕೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಘಟನೆಯನ್ನು ತನ್ನ ಮೇಲೆ ನಡೆದ ದಾಳಿ ಎಂದು ಹೇಳಿದ್ದರೆ ಪ್ರತ್ಯಕ್ಷ ದರ್ಶಿಗಳು ಇದು ಅಪಘಾತದಿಂದ ಸಂಭವಿಸಿದ ಘಟನೆ ಎಂದು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. … Continued

ಮಮತಾ ಮೇಲೆ ಹಲ್ಲೆ ನಡೆದಿಲ್ಲ: ಪ್ರತ್ಯಕ್ಷದರ್ಶಿಗಳ ಹೇಳಿಕೆ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣ ತೀವ್ರ ಕೋಲಾಹಲ ಸೃಷ್ಟಿಸಿದೆ.ಅದಕ್ಕೆ ಈಗ ಹೊಸ ತಿರುವೂ ಸಿಕ್ಕಿದೆ. ಇಬ್ಬರು ಪ್ರತ್ಯಕ್ಷ ದರ್ಶಿಗಳ ಪ್ರಕಾರ ಕಾರಿ ಚಲಿಸಿದ್ದರಿಂದ ಅದು ತಾಗಿ ಮಮತಾ ಅವರಿಗೆ ಪೆಟ್ಟಾಗಿದೆ … Continued

ಮಹಿಳೆಯರು ಜೀನ್ಸ್‌ ಧರಿಸುವುದು, ಪುರುಷರು ಶಾರ್ಟ್ಸ್‌ ಧರಿಸುವುದಕ್ಕೆ ನಿಷೇಧ ಹೇರಿದ ಖಾಪ್‌ ಪಂಚಾಯತ್‌

ಮುಜಫ್ಫರನಗರ: ಉತ್ತರ ಪ್ರದೇಶದ ಮುಜಫ್ಫರನಗರದ ಖಾಪ್‌ ಪಂಚಾಯತ್‌ ಮಹಿಳೆಯರಿಗೆ ಜೀನ್ಸ್‌ ಹಾಗೂ ಪುರುಷರಿಗೆ ಶಾರ್ಟ್ಸ್‌ ಧರಿಸುವುದಕ್ಕೆ ನಿರ್ಬಂಧ ವಿಧಿಸಿದೆ. ಜೀನ್ಸ್‌ ಉಡುಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ. ಇದನ್ನು ಧರಿಸದೇ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಬೇಕು ಎಂದು ರಜಪೂತ್‌ ಸಮಾಜದ ಖಾಪ್‌ ಪಂಚಾಯತ್‌ ಹೇಳಿದೆ. ಮಾರ್ಚ್‌ ೨ರಂದು ಪಂಚಾಯತ್‌ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸಮುದಾಯದ ಮುಖಂಡ ಠಾಕೂರ … Continued

ಪಶ್ಚಿಮ ಬಂಗಾಳ: ಬಿಜೆಪಿ ತೆಕ್ಕೆಗೆ ಸೇರಿದ ಟಿಎಂಸಿ ಸಚಿವ, ಶಾಸಕ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಎಂಸಿ ಟಿಕೇಟ್‌ ನಿರಾಕರಿಸಿದ ನಂತರ ಸಚಿವ ಬಚ್ಚು ಹನ್ಸದಾ ಹಾಗೂ ಶಾಸಕ ಗೌರಿಶಂಕರ ದತ್ತ ಬಿಜೆಪಿ ಪಾಳೆಯಕ್ಕೆ ಬಂದು ಸೇರಿದ್ದಾರೆ. ಉತ್ತರ ಬಂಗಾಳ ಅಭಿವೃದ್ಧಿ ರಾಜ್ಯ ಸಚಿವ ಬಚ್ಚು ಹನ್ಸದಾ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಅವರು ದಕ್ಷಿಣ ದಿನಾಜ್‌ಪುರ ಜಿಲ್ಲೆಯ … Continued

ಬಿಜೆಪಿ ತಾರಾ ಪ್ರಚಾರಕ ಮಿಥುನ್‌ ಚಕ್ರವರ್ತಿಗೆ ವೈ-ಪ್ಲಸ್‌ ಭದ್ರತೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರ್ಪಡೆಯಾದ ಹಿರಿಯ ನಟ ಮಿಥುನ್‌ ಚಕ್ರವರ್ತಿಗೆ ಕೇಂದ್ರ ಗೃಹ ಸಚಿವಾಲಯ ವೈ-ಪ್ಲಸ್ ಭದ್ರತೆ ನೀಡಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮಿಥುನ್ ಚಕ್ರವರ್ತಿಗೆ ಭದ್ರತಾ ರಕ್ಷಣೆ ನೀಡಲಿದೆ. ಸಾಮಾನ್ಯವಾಗಿ, ವೈ-ಪ್ಲಸ್ ಭದ್ರತೆಯಲ್ಲಿ, 11 ಕಮಾಂಡೋಗಳನ್ನು ಒಳಗೊಂಡ ವಿಸ್ತಾರವಾದ ಭದ್ರತಾ ಕವರ್ ಪಡೆಯಲಾಗುತ್ತದೆ ಮತ್ತು 55 ಕ್ಕೂ … Continued

ಮಮತಾ ಬ್ಯಾನರ್ಜಿಗೆ ಗಾಯ: ಪಿತೂರಿಯ ಸಂದೇಹ ವ್ಯಕ್ತಪಡಿಸಿದ ದೀದಿ

ನಂದಿಗ್ರಾಮ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ಇಲ್ಲಿನ ಬಿರುಲಿಯಾ ಬಜಾರ್‌ನಲ್ಲಿ ನಡೆದ ಜನರ ನೂಕು ನುಗ್ಗಲಿನಿಂದಾಗಿ ಗಾಯಗೊಂಡಿದ್ದಾರೆ. ಸ್ಥಳಿಯ ಮತದಾರರನ್ನು ಭೇಟಿ ಮಾಡುತ್ತಿದ್ದ ಸಂದರ್ಭದಲ್ಲಿ ಜನರ ನೂಕಾಟದಿಂದಾಗಿ ಮಮತಾ ಅವರ ಕಾಲಿಗೆ ಗಾಯವಾಗಿದೆ. ಆಕೆಯ ತಲೆಗೆ ಕೂಡ ಪೆಟ್ಟಾಗಿದೆ. ದೇವಸ್ಥಾನದಿಂದ ಕಾರಿನ ಕಡೆಗೆ ಬರುತ್ತಿದ್ದಾಗ, … Continued

ಗಣರಾಜ್ಯೋತ್ಸವ ಹಿಂಸಾಚಾರ-೩೮ ಜನರ ಮೇಲೆ ಪ್ರಕರಣ ದಾಖಲು: ಸಚಿವ ಕೃಷ್ಣಾರೆಡ್ಡಿ

ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈವರೆಗೆ ೩೮ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕೃಷ್ಣಾರೆಡ್ಡಿ ತಿಳಿಸಿದ್ದಾರೆ. ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಸೈಬರ್‌ ಅಪರಾಧ ಸೇರಿದಂತೆ ಕಾನೂನು ಉಲ್ಲಂಘಿಸಿದ ೩೮ ಜನರ ವಿರುದ್ಧ … Continued

ಮೋದಿ ಸರಕಾರ ಅಧಿಕಾರದಲ್ಲಿರುವವರೆಗೂ ರೈತರ ಹೋರಾಟ: ನರೇಂದ್ರ ಟಿಕಾಯತ್‌

ಮುಜಫ್ಫರನಗರ: ಕೇಂದ್ರದ ಮೋದಿ ಸರಕಾರ ಅಧಿಕಾರದಲ್ಲಿರುವವರೆಗೆ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ಹೋರಾಟ ಮುಂದುವರೆಸಲು ಸನ್ನದ್ಧರಾಗಿದ್ದಾರೆ ಎಂದು ಕೃಷಿಕರ ಮುಖಂಡ ನರೇಂದ್ರ ಟಿಕಾಯತ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅವಧಿ ಇನ್ನೂ ಮೂರುವರೆ ವರ್ಷಗಳಿವೆ. ಅಲ್ಲಿಯವರೆಗೂ ನಾವು ಬೇಡಿಕೆ ಈಡೇರಿಕೆಗೆ ಹೋರಾಟ ಮುಂದುವರೆಸುತ್ತೇವೆ. ಕೇಂದ್ರ ಸರಕಾರದ ಯಾವುದೇ ಪ್ರಚೋದನೆಗೂ … Continued