ಬಿಹಾರದಲ್ಲಿ 65%ಕ್ಕೆ ಹೆಚ್ಚಿಸಿದ್ದ ಮೀಸಲಾತಿ ರದ್ದುಪಡಿಸಿದ್ದ ಪಾಟ್ನಾ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೆ (ಎಸ್‌ಸಿ/ಎಸ್‌ಟಿ) ಇದ್ದ ಶೇಕಡಾ 50ರಷ್ಟು ಮೀಸಲಾತಿಯನ್ನು ಶೇ. 65ಕ್ಕೆ ಹೆಚ್ಚಿಸಿ 2023ರಲ್ಲಿ ಬಿಹಾರ ಶಾಸಕಾಂಗ ಮಾಡಿದ್ದ ತಿದ್ದುಪಡಿಗಳನ್ನು ರದ್ದುಪಡಿಸಿದ್ದ ಪಾಟ್ನಾ ಹೈಕೋರ್ಟ್‌ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ ಸೆಪ್ಟೆಂಬರ್‌ನಲ್ಲಿ ಪ್ರಕರಣದ … Continued

20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಬೆಲೆಬಾಳುವ ವಸ್ತು ದೋಚಿದ್ದ ಖತರ್ನಾಕ್‌ ವ್ಯಕಿಯನ್ನು ಆತನ ತಂತ್ರದ ಮೂಲಕವೇ ಹೆಡೆಮುರಿ ಕಟ್ಟಿದ ಪೊಲೀಸರು..!

ಪಾಲ್ಘರ್: ದೇಶದಾದ್ಯಂತ 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಅವರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ 43 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಲ್ಲ ಸೋಪಾರ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಎಂಬಿವಿವಿ ಪೊಲೀಸರು ತನಿಖೆ ನಡೆಸಿದ್ದು, ಜುಲೈ 23 ರಂದು ಥಾಣೆ ಜಿಲ್ಲೆಯ ಕಲ್ಯಾಣದಿಂದ ಆರೋಪಿ … Continued

ಸರಪಳಿಯಲ್ಲಿ ಮರಕ್ಕೆ ಕಟ್ಟಿಹಾಕಿದ ಸ್ಥಿತಿಯಲ್ಲಿ ಸಿಂಧುದುರ್ಗ ಕಾಡಿನಲ್ಲಿ ಮಹಿಳೆ ಪತ್ತೆ ; ಆಕೆಯ ಜೇಬಿನಲ್ಲಿ ಅಮೆರಿಕ ಪಾಸ್‌ಪೋರ್ಟ್ ಪತ್ತೆ…

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯವೊಂದರಲ್ಲಿ 50 ವರ್ಷದ ಮಹಿಳೆ ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಮೆರಿಕ ಪಾಸ್‌ಪೋರ್ಟ್‌ನ ಫೋಟೋಕಾಪಿ ಮತ್ತು ತಮಿಳುನಾಡು ವಿಳಾಸ ಇರುವ ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳು ಮಹಿಳೆ ಬಳಿ ಪತ್ತೆಯಾಗಿವೆ. ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಮುಂಬೈಯಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ … Continued

ಮೈ ಜುಂ ಎನ್ನುವ ವೀಡಿಯೊ..| ಮಧ್ಯಪ್ರದೇಶದಲ್ಲಿ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಯತ್ನಿಸಿದ 15 ಅಡಿ ಹೆಬ್ಬಾವು…

ಮಧ್ಯಪ್ರದೇಶದ ಜಬಲ್‌ಪುರದ ಕಲ್ಯಾಣಪುರ ಪ್ರದೇಶದಲ್ಲಿ 15 ಅಡಿ ಉದ್ದದ ಹೆಬ್ಬಾವಿನ ದಾಳಿಯಿಂದ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಘಟನೆಯಲ್ಲಿ ತೆರೆದ ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹೆಬ್ಬಾವು ವ್ಯಕ್ತಿಯ ಕುತ್ತಿಗೆಗೆ ಬಲವಾಗಿ ಸುತ್ತು ಹಾಕಿ ಹಿಡಿದುಕೊಂಡಿದೆ. ಸಕಾಲದಲ್ಲಿ ನೆರವಿಗೆ ಬಂದ ಗ್ರಾಮಸ್ಥರಿಂದ ವ್ಯಕ್ತಿಯ ಜೀವ ಉಳಿದಿದೆ. ಇಂಡಿಯಾ ಟುಡೇ … Continued

ಶಿರೂರು ಗುಡ್ಡ ಕುಸಿತ ದುರಂತ : 13ನೇ ದಿನವೂ ಸಿಗದ ನಾಪತ್ತೆಯಾದವರ ಸುಳಿವು ; ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಸತತ 13 ದಿನಗಳ ಕಾರ್ಚಾರಣೆ ನಡೆದರೂ ಕೇರಳ ಲಾರಿ ಚಾಲಕ ಅರ್ಜುನ್ ಸೇರಿದಂತೆ ನಾಪತ್ತೆಯಾಗಿರುವ ಮೂವರು ಮತ್ತು ಲಾರಿ ಪತ್ತೆಯಾಗಿಲ್ಲ. ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ನದಿಯೊಳಗೆ ಹೋಗಲು ಸ್ಕೂಬಾ ಡೈ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಶೋಧ ಕಾರ್ಯಚರಣೆಯನ್ನು … Continued

ಅಯೋಧ್ಯೆಯ ʼಭಗವಾನ್‌ ರಾಮಲಲ್ಲಾʼನ ಚಿತ್ರ ಇರುವ ವಿಶ್ವದ ಮೊದಲ ಅಂಚೆ ಚೀಟಿ ಬಿಡುಗಡೆ ಮಾಡಿದ ಲಾವೋಸ್‌ ದೇಶ…!

ನವದೆಹಲಿ : ಅಯೋಧ್ಯೆಯ ಶ್ರೀರಾಮ ಲಲ್ಲಾ ಒಳಗೊಂಡ ಅಂಚೆ ಚೀಟಿಯನ್ನು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ (ಲಾವೊ ಪಿಡಿಆರ್) ಬಿಡುಗಡೆ ಮಾಡಿದ್ದು, ಹಿಂದೂ ದೇವರನ್ನು ಒಳಗೊಂಡ ಅಂಚೆಚೀಟಿ ಬಿಡುಗಡೆ ಮಾಡಿದ ವಿಶ್ವದ ಮೊದಲ ದೇಶವಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ ಅವರು ಲಾವೋಸ್‌ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು … Continued

ಪ್ಯಾರಿಸ್ ಒಲಿಂಪಿಕ್ಸ್ 2024 : ಭಾರತಕ್ಕೆ ಮೊದಲ ಪದಕ ಗೆದ್ದ ಶೂಟರ್‌ ಮನು ಭಾಕರ್‌

ಪ್ಯಾರಿಸ್‌ : ಭಾನುವಾರ (ಜುಲೈ 28) ಪ್ಯಾರಿಸ್‌ ಒಲಿಂಪಿಕ್ ನಲ್ಲಿ ಶೂಟಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಪ್ಯಾರಿಸ್‌ನ ಚಟೌರೊಕ್ಸ್ ಶೂಟಿಂಗ್ ಸೆಂಟರ್‌ನಲ್ಲಿ ಹರಿಯಾಣದ 22 ವರ್ಷ ವಯಸ್ಸಿನ ಮನು ಬಾಕರ್‌ ಅವರು ಮಹಿಳೆಯರ 10 ಮೀಟರ್ ಏರ್‌ ಪಿಸ್ತೂಲ್ ಫೈನಲ್ ನಲ್ಲಿ ಮೂರನೇ ಸ್ಥಾನ … Continued

ಸುಲ್ತಾನಪುರ ಸಂಸದ ನಿಶಾದ್‌ ಆಯ್ಕೆ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಮೇನಕಾ ಗಾಂಧಿ

ಲಕ್ನೋ : ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸುಲ್ತಾನಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಸಮಾಜವಾದಿ ಪಕ್ಷದ ಸಂಸದ ರಾಮ ಭುವಲ್‌ ನಿಶಾದ್‌ ಅವರ ಆಯ್ಕೆ ಸಿಂಧುತ್ವ ಪ್ರಶ್ನಿಸಿ ಬಿಜೆಪಿಯ ಮಾಜಿ ಸಂಸದೆ ಮೇನಕಾ ಗಾಂಧಿ ಅಲಹಾಬಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ನಿಶಾದ್ ವಿರುದ್ಧ 43,174 ಮತಗಳ ಅಂತರದಿಂದ ಸೋತ ಮೇನಕಾ ಗಾಂಧಿ ಅವರು ಶನಿವಾರ ನ್ಯಾಯಾಲಯದ ನೋಂದಣಿಗೆ ಚುನಾವಣಾ … Continued

ದೆಹಲಿಯ ಐಎಎಸ್ ಕೋಚಿಂಗ್ ಸೆಂಟರ್‌ ನೆಲಮಾಳಿಗೆಯಲ್ಲಿ ನೀರು ನುಗ್ಗಿ 3 ಯುಪಿಎಸ್‌ ಸಿ ವಿದ್ಯಾರ್ಥಿಗಳು ಸಾವು

ನವದೆಹಲಿ : ಪಶ್ಚಿಮ ದಿಲ್ಲಿಯ ಜನಪ್ರಿಯ ಕೋಚಿಂಗ್‌ ಸೆಂಟರ್‌ನ ನೆಲಮಾಳಿಗೆಯಲ್ಲಿ ಹಠಾತ್‌ ನೀರು ನುಗ್ಗಿದ ಪರಿಣಾಮ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಂದ್ರ ನಗರದ ರಾವ್ ಅವರ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯು ಶನಿವಾರ ಸಂಪೂರ್ಣವಾಗಿ ಜಲಾವೃತಗೊಂಡಿರುವುದನ್ನು ದೃಶ್ಯಗಳು ತೋರಿಸಿವೆ. ಶನಿವಾರ ರಾತ್ರಿ 7:19 ಕ್ಕೆ … Continued

ಒಂಬತ್ತು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ; ಮೈಸೂರಿನ ವಿಜಯಶಂಕರ ಮೇಘಾಲಯದ ನೂತನ ರಾಜ್ಯಪಾಲ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ತಡರಾತ್ರಿ ಒಂಬತ್ತು ರಾಜ್ಯಗಳಿಗೆ ಗವರ್ನರ್‌ಗಳನ್ನು ನೇಮಿಸಿದ್ದಾರೆ. ಅವರ ನೇಮಕಾತಿಯ ದಿನಾಂಕಗಳು ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುತ್ತವೆ ಎಂದು ಹೇಳಿದ್ದಾರೆ. ಮೈಸೂರಿನ ಮಾಜಿ ಲೋಕಸಭಾ ಸದಸ್ಯ ಸಿ.ಎಚ್. ವಿಜಯಶಂಕರ ಅವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಅವರು ಹುಣಸೂರು ಕ್ಷೇತ್ರದ ಶಾಸಕ ಹಾಗೂ ಮೈಸೂರಿನ ಸಂಸದರಾಗಿಯೂ ಸೇವೆ … Continued