‘ನಮ್ಮ ಮಕ್ಕಳೊಂದಿಗೆ ನಾವು ವೇಗವಾಗಿ ಓಡಿದೆವು, ಆದರೆ…ʼ : ಮಣಿಪುರದ ಮತ್ತೊಂದು ಸಾಮೂಹಿಕ ಅತ್ಯಾಚಾರ ಭಯಾನಕ ಘಟನೆ ಬೆಳಕಿಗೆ

ಇಂಫಾಲ : ಬುಧವಾರ ಎಫ್‌ಐಆರ್ ದಾಖಲಾದ ನಂತರ ಮಣಿಪುರದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಘಟನೆ ಬೆಳಕಿಗೆ ಬಂದಿದೆ. ಮೇ 3 ರಂದು ಜನಾಂಗೀಯ ಘರ್ಷಣೆಗಳು ನಡೆದಾಗ ಚುರಾಚಂದಪುರದ ತನ್ನ ಮನೆಯಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಕುಕಿ ಪುರುಷರು ತನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು 37 ವರ್ಷದ ಮಹಿಳೆ ದೂರಿದ್ದಾರೆ. ಗುಂಪಿನಿಂದ ತಪ್ಪಿಸಿಕೊಳ್ಳಲು ನಾವು … Continued

ಚುನಾವಣಾಧಿಕಾರಿಗಳ ನೇಮಕಾತಿಗಳ ನೇಮಕಾತಿಗೆ ನೂತನ ಮಸೂದೆ : ಆಯ್ಕೆ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಲ್ಲ

ನವದೆಹಲಿ: ಇಂದು, ಗುರುವಾರ (ಆಗಸ್ಟ್‌ ೧೦) ರಾಜ್ಯಸಭೆಯಲ್ಲಿ ಮಂಡಿಸಲಿರುವ ಹೊಸ ಮಸೂದೆಯ ಪ್ರಕಾರ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲಿದೆ. ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ, ಪ್ರಧಾನಿ, ಲೋಕಸಭೆಯ ವಿರೋಧ … Continued

ಸುಳ್ಳು ಸುದ್ದಿ ಪ್ರಸಾರ: 8 ಯುಟ್ಯೂಬ್‌ ಚಾನೆಲ್‌ಗಳ ನಿಷೇಧ

ನವದೆಹಲಿ: ಸುಳ್ಳು ಸುದ್ದಿಗಳನ್ನು ಹರಡಿದ ಹಾಗೂ ದೇಶ ವಿರೋಧಿ ಚುಟವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇರೆಗೆ ಕೇಂದ್ರ ಸರಕಾರವು ಹೊಸದಾಗಿ 8 ಯುಟ್ಯೂಬ್‌ ಚಾನೆಲ್‌ಗಳನ್ನು ನಿಷೇಧಿಸಿದೆ. 23 ಮಿಲಿಯನ್ ಸಂಚಿತ ಚಂದಾದಾರರ ಸಂಖ್ಯೆ ಹೊಂದಿರುವ ಎಂಟು ಯೂಟ್ಯೂಬ್ ಚಾನೆಲ್‌ಗಳಾದ ಯಹಾ ಸಚ್ ದೇಖೋ, ಕ್ಯಾಪಿಟಲ್ ಟಿವಿ, ಕೆಪಿಎಸ್ ನ್ಯೂಸ್, ಸರ್ಕಾರಿ ವ್ಲಾಗ್, ಅರ್ನ್ ಟೆಕ್ ಇಂಡಿಯಾ, ಎಸ್‌ಪಿಎನ್ … Continued

ಮ್ಯೂಸಿಕ್ ಕಂಪನಿ ಸಿಇಒ ಕಿಡ್ನಾಪ್ ಮಾಡಿದ ಶಿವಸೇನಾ ಶಾಸಕನ ಪುತ್ರನ ವಿರುದ್ಧ ಎಫ್‌ ಐಆರ್ | ವೀಡಿಯೊ

ಮುಂಬೈ : ಬುಧವಾರ (ಆಗಸ್ಟ್‌ 9) ಗೋರೆಗಾಂವ್ ಪೂರ್ವ ಪ್ರದೇಶದಿಂದ ಸುಲಿಗೆ ಮಾಡಲು ಉದ್ಯಮಿ ರಾಜಕುಮಾರ ಸಿಂಗ್ ಅವರನ್ನು ಅಪಹರಿಸಿದ ಆರೋಪದಲ್ಲಿ ಶಿವಸೇನಾ (ಶಿಂಧೆ ಬಣ) ಶಾಸಕ ಪ್ರಕಾಶ ಸುರ್ವೆ ಅವರ ಪುತ್ರ ರಾಜ್ ಸುರ್ವೆ ಮತ್ತು ಇತರರ ವಿರುದ್ಧ ಮುಂಬೈ ಪೊಲೀಸರು ವನರಾಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. … Continued

ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ದಂಡ, ಎಟಿಎಂ-ಎಸ್‌ಎಂಎಸ್ ಶುಲ್ಕಗಳಿಂದ 35,000 ಕೋಟಿ ರೂ. ಸಂಗ್ರಹಿಸಿದ ಬ್ಯಾಂಕುಗಳು

ನವದೆಹಲಿ : ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಐದು ಖಾಸಗಿ ವಲಯದ ಬ್ಯಾಂಕ್‌ಗಳು 2018 ರಿಂದ ಎಸ್‌ಎಂಎಸ್, ಎಟಿಎಂ ವಹಿವಾಟು ಸೇವೆಗಳಿಗಾಗಿ ಹಾಗೂ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದ ಕಾರಣಕ್ಕಾಗಿ ದಂಡದ ಮೂಲಕ 35,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ವಿತ್ತ ಸಚಿವಾಲಯದ … Continued

ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದ ಆರ್‌ಬಿಐ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು ಗುರುವಾರ ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಪ್ರಮುಖ ರೆಪೊ ದರವನ್ನು ಬದಲಾಯಿಸದೆ ಶೇ 6.50 ಕ್ಕೆ ಇರಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.. ಇದು ಮೂರನೇ ಬಾರಿಗೆ 6 ಸದಸ್ಯರ ಹಣಕಾಸು ನೀತಿ ಸಮಿತಿ (MPC) ಪ್ರಮುಖ ದರಗಳನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. … Continued

ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ: ಬ್ರಿಜ್ ಭೂಷಣ್

ನವದೆಹಲಿ: ನಿರ್ಗಮಿತ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ನ್ಯಾಯಾಲಯದ ಮುಂದೆ ಲೈಂಗಿಕ ಕಿರುಕುಳದ ಆರೋಪಗಳ ವಿರುದ್ಧ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ, ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಅವರು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ ಬ್ರಿಜ್ ಭೂಷಣ್ … Continued

ಟೊಮೆಟೊ ಹಾರ ಹಾಕಿಕೊಂಡು ಸದನಕ್ಕೆ ಬಂದ ಎಎಪಿ ಸಂಸದ

ನವದೆಹಲಿ: ಏರುತ್ತಿರುವ ಬೆಲೆಗಳ ವಿರುದ್ಧ ವಿಶಿಷ್ಟವಾದ ಪ್ರತಿಭಟನೆಯಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸುಶೀಲಕುಮಾರ ಗುಪ್ತಾ ಅವರು ಬುಧವಾರ ಟೊಮೆಟೊ ಮತ್ತು ಶುಂಠಿಯ ಹಾರ ಹಾಕಿಕೊಂಡು ಸಂಸತ್ತಿಗೆ ಆಗಮಿಸಿದ್ದಾರೆ. ಟೊಮೆಟೊ ಮತ್ತು ಶುಂಠಿಯ ಬೆಲೆ ಏರಿಕೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಾನು ಸಂಸತ್ತಿಗೆ ಈ ಹಾರವನ್ನು ಧರಿಸಿ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. … Continued

ಜಿ-ಮೇಲ್‌ ಮೊಬೈಲ್ ಅಪ್ಲಿಕೇಶನ್‌ ಗೆ ಭಾಷಾ ಅನುವಾದದ ಫೀಚರ್‌ ಸೇರಿಸಿದ ಗೂಗಲ್‌

ಜಿ-ಮೇಲ್‌ (Gmail) ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಮಗ್ರ ಅನುವಾದದ ವೈಶಿಷ್ಟ್ಯವನ್ನು ಗೂಗಲ್‌ (Google) ಪರಿಚಯಿಸಿದೆ. ಈ ಕ್ರಮವು ತಡೆರಹಿತ ಭಾಷೆಯ ಸಂವಹನವನ್ನು ಸುಲಭಗೊಳಿಸುವ ಉದ್ದೇಶ ಹೊಂದಿದೆ. ಜಿ-ಮೇಲ್‌ (Gmail) ಮೊಬೈಲ್ ಅಪ್ಲಿಕೇಶನ್‌(Gmail)ನಲ್ಲಿ ಈ ವೈಶಿಷ್ಟ್ಯವು ಬಳಕೆದಾರರಿಗೆ ನೇರವಾಗಿ ಸಿಗಲಿದೆ ಎಂದು ಗೂಗಲ್‌ ಹೇಳಿದ್ದು, ವಿವಿಧ ಭಾಷೆಗಳಲ್ಲಿ ಸಂಭಾಷಣೆಗಳನ್ನು ಸುಲಭವಾಗಿ ಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ “ಹೆಚ್ಚು ವಿನಂತಿಸಿದ … Continued

ಸಂಸತ್ತಿನಲ್ಲಿ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’ ವಿವಾದ : ಬಿಜೆಪಿ ಮಹಿಳಾ ಸಂಸದರಿಂದ ಸ್ಪೀಕರ್‌ ಓ ಬಿರ್ಲಾಗೆ ದೂರು; ಕ್ರಮಕ್ಕೆ ಒತ್ತಾಯ

ನವದೆಹಲಿ: ಆಗಸ್ಟ್ 9 ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಭಾಷಣ ಮುಗಿಸಿ ಹೊರಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಆರೋಪಿಸಿದರು. ಅವಿಶ್ವಾಸ ನಿರ್ಣಯದ ಮೇಲಿನ ಭಾಷಣದ ಸಂದರ್ಭದಲ್ಲಿ, ಸ್ಮೃತಿ ಇರಾನಿ … Continued