ವೀಡಿಯೊ | ವಿಶ್ವದ ಅತಿ ಎತ್ತರದ ರೈಲು ಸೇತುವೆ ಮೇಲೆ ಪ್ರಾಯೋಗಿಕವಾಗಿ ವ್ಯಾಗನ್ ಓಡಿಸಿದ ಭಾರತೀಯ ರೈಲ್ವೆ ; ಲೋಕಾರ್ಪಣೆಗೆ ತಯಾರಿ..?

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್‌ ನದಿ ಮೇಲೆ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಉಕ್ಕಿನ ಕಮಾನು ರೈಲ್ವೆ ಸೇತುವೆ ಶೀರ್ಘವೇ ಲೋಕಾರ್ಪಣೆಯಾಗಲಿದೆ. ಭಾನುವಾರ (ಜೂನ್ 16) ಈ ರೈಲ್ವೆ ಸೇತುವೆಯಲ್ಲಿ ಪ್ರಾಯೋಗಿಕವಾಗಿ ವ್ಯಾಗನ್ ಟವರ್ ಓಡಿಸಿ ಪರಿಶೀಲನೆ ಮಾಡಲಾಗಿದೆ. ಅಲ್ಲದೆ, ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳು ಹಳಿ ಸೇರಿದಂತೆ ಇತರ ತಾಂತ್ರಿಕ … Continued

ಶಾಲೆಯಲ್ಲಿ ದ್ವೇಷ, ಹಿಂಸಾಚಾರದ ಬಗ್ಗೆ ಕಲಿಸಬಾರದು: ಪಠ್ಯಪುಸ್ತಕಗಳಲ್ಲಿ ಬಾಬ್ರಿ ಕೈಬಿಟ್ಟಿದಕ್ಕೆ ಎನ್‌ಸಿಇಆರ್‌ಟಿ ಮುಖ್ಯಸ್ಥ

ನವದೆಹಲಿ: ದ್ವೇಷ ಮತ್ತು ಹಿಂಸೆ ಶಿಕ್ಷಣದ ವಿಷಯಗಳಲ್ಲ ಮತ್ತು ಶಾಲಾ ಪಠ್ಯಪುಸ್ತಕಗಳು ಅವುಗಳ ಮೇಲೆ ಕೇಂದ್ರೀಕರಿಸಬಾರದು ಎಂದು ದೇಶದ ಉನ್ನತ ಶಿಕ್ಷಣ ಸಂಸ್ಥೆ ಎನ್‌ಸಿಇಆರ್‌ಟಿ (NCERT)ಯ ಮುಖ್ಯಸ್ಥರು ಹೇಳಿದ್ದಾರೆ. ಶಾಲಾ ಪಠ್ಯಪುಸ್ತಕಗಳಲ್ಲಿ ಗಲಭೆಗಳ (Riots) ಬಗ್ಗೆ ಪಾಠ ಮಾಡುವುದರಿಂದ ಹಿಂಸಾತ್ಮಕ ವ್ಯಕ್ತಿತ್ವಗಳ ನಿರ್ಮಾಣ ಆಗಬಹುದು ಎಂದು ಎನ್​ಸಿಇಆರ್​ಟಿ ನಿರ್ದೇಶಕ ದಿನೇಶ ಪ್ರಸಾದ ಸಕ್ಲಾನಿ (Dinesh Prasad … Continued

ಕಾಸರಗೋಡು: ಸಂಪೂರ್ಣ ದರ್ಶನ ನೀಡಿದ ಅನಂತಪುರ ದೇವಸ್ಥಾನದ ಮೊಸಳೆ ಮರಿ ಬಬಿಯಾ

ಕಾಸರಗೋಡು : ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಪ್ರಥಮ ಬಾರಿಗೆ ಕಾಣಿಸಿಕೊಂಡ ಬಬಿಯಾ ಹೆಸರಿನ ಮೊಸಳೆ ಮರಿ ಜೂನ್ 14ರ ಸಂಜೆ ಪ್ರಾಂಗಣದ ಎತ್ತರದ ಜಾಗದಲ್ಲಿ ಭಕ್ತರಿಗೆ ಮೊದಲ ಸಲ ಸಂಪೂರ್ಣ ದರ್ಶನ ನೀಡಿದೆ ಎಂದು ವರದಿಯಾಗಿದೆ. ಈ ದೇವಾಲಯದ ಕೊಳದಲ್ಲಿ ಸುಮಾರು 80 ವರ್ಷಗಳ … Continued

ದೇಗುಲದ ಆವರಣದ ಒಳಗೆ ಗೋವಿನ ರುಂಡ ಎಸೆದ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ರತ್ಲಾಮ್: ಮಧ್ಯಪ್ರದೇಶದ ಜಯೋರಾ ಪಟ್ಟಣದ ದೇವಸ್ಥಾನದ ಆವರಣದಲ್ಲಿ ಕತ್ತರಿಸಿದ ಹಸುವಿನ ತಲೆಯನ್ನು ಎಸೆದ ಆರೋಪದ ಮೇಲೆ ನಾಲ್ವರು ಆರೋಪಿಗಳ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಜಾರಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಶುಕ್ರವಾರ ಮುಂಜಾನೆ ದೇವಸ್ಥಾನದ ಆವರಣದಲ್ಲಿ ಗೋವಿನ ರುಂಡದ ಭಾಗಗಳನ್ನು ಎಸೆದಿದ್ದಾರೆ ಎಂದು ಅಧಿಕಾರಿಗಳು … Continued

ಫ್ರಿಡ್ಜ್‌ ಗಳಲ್ಲಿ ಗೋಮಾಂಸ ಪತ್ತೆಯಾದ ನಂತರ 11 ಮನೆಗಳು ನೆಲಸಮ

ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧ ಕ್ರಮದ ಭಾಗವಾಗಿ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಮಾಂಡ್ಲಾದಲ್ಲಿ 11 ವ್ಯಕ್ತಿಗಳು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿಕೊಂಡಿದ್ದ ಮೆನಗಳನ್ನು ನೆಲಸಮಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೈನ್‌ಪುರದ ಭೈನ್‌ವಾಹಿ ಪ್ರದೇಶದಲ್ಲಿ ಮಾಂಸಕ್ಕಾಗಿ ಹೆಚ್ಚಿನ ಸಂಖ್ಯೆಯ ಹಸುಗಳನ್ನು ತರಲಾಗಿದೆ ಎಂಬ ಸುಳಿವು ದೊರೆತ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ … Continued

ಪವಿತ್ರಗೌಡ ನಟ ದರ್ಶನ್ ಪತ್ನಿ ಅಲ್ಲ ; ವಕೀಲರ ಸ್ಪಷ್ಪನೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರು ನಟ ದರ್ಶನ್‌ ಅವರ ಸಹನಟಿ ಮಾತ್ರವೇ ಹೊರತು ಅವರ ಪತ್ನಿಯಲ್ಲ ಎಂದು ದರ್ಶನ್ ಪರ ವಕೀಲ ಅನಿಲಬಾಬು ಶನಿವಾರ ಸ್ಪಷ್ಟಪಡಿಸಿದ್ದಾರೆ. ಚಿತ್ರದುರ್ಗದ ನಿವಾಸಿ ರೇಣುಕಸ್ವಾಮಿ (33) ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ದರ್ಶನ್, ಅವರ ಸ್ನೇಹಿತೆ ಪವಿತ್ರ ಗೌಡ ಮತ್ತು ಇತರ … Continued

ಉಪ ಸಭಾಪತಿ ಹುದ್ದೆ ನೀಡದಿದ್ರೆ ಸ್ಪೀಕರ್ ಸ್ಥಾನಕ್ಕೆ ವಿಪಕ್ಷಗಳಿಂದ ಸ್ಪರ್ಧೆ..?

ನವದೆಹಲಿ : ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್‌ಡಿಎ ಸರ್ಕಾರ ರಚನೆಯಾಗಿ ಸಚಿವ ಸಂಪುಟದ ರಚನೆಯೂ ಆಗಿದೆ. ಎನ್‌ಡಿಎ ಒಕ್ಕೂಟದ ಮುಂದೆ ಈಗ ಲೋಕಸಭೆ ಸ್ಪೀಕರ್ ಆಯ್ಕೆಯ ಸವಾಲಿದೆ. ಸರ್ಕಾರ ರಚನೆಯಾಗುವ ಮುನ್ನ ಜೆಡಿಯು ಮತ್ತು ಟಿಡಿಪಿ ಪಕ್ಷಗಳು ಸ್ಪೀಕರ್ ಹುದ್ದೆಗ ಪಟ್ಟು ಹಿಡಿದಿದೆ ಎಂದು ವರದಿಯಾಗಿತ್ತು. ಆ ವಿಷಯ ಸದ್ಯಕ್ಕೆ ತಣ್ಣಗಾಗಿದ್ದು ಎನ್‌ಡಿಎಯಿಂದ … Continued

ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದು14 ಮಂದಿ ಸಾವು

ನವದೆಹಲಿ : ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಋಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ 26 ಜನರಿದ್ದ ಟೆಂಪೋ ಟ್ರಾವೆಲರ್ ರಸ್ತೆಯಿಂದ ಸ್ಕಿಡ್ ಆಗಿ ಅಲಕನಂದಾ ನದಿಗೆ ಬಿದ್ದ ಪರಿಣಾಮ ಕನಿಷ್ಠ 14 ಪ್ರವಾಸಿಗರು ಮೃತಪಟ್ಟಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು … Continued

ನ್ಯಾಯಾಲಯ ಉದ್ದೇಶಿಸಿ ಮಾತು: ಕೇಜ್ರಿವಾಲ ವೀಡಿಯೊ ತೆಗೆದುಹಾಕಲು ಪತ್ನಿ, ಜಾಲತಾಣಗಳಿಗೆ ದೆಹಲಿ ಹೈಕೋರ್ಟ್ ತಾಕೀತು

ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ ಅವರು ನ್ಯಾಯಾಲಯ ಉದ್ದೇಶಿಸಿ ಆಡಿದ್ದ ಮಾತುಗಳ ವೀಡಿಯೊ ರೆಕಾರ್ಡಿಂಗ್‌ಗಳನ್ನು ಸಾಮಾಜಿಕ ಜಾಲತಾಣ ವೇದಿಕೆಗಳಿಂದ ತೆಗೆದು ಹಾಕುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರ ಪತ್ನಿ ಹಾಗೂ ಇತರೆ ಐವರಿಗೆ ದೆಹಲಿ ಹೈಕೋರ್ಟ್ ಶನಿವಾರ ಆದೇಶಿಸಿದೆ. .ಅಲ್ಲದೆ, ಈ ವಿಚಾರಣೆಯ ವೀಡಿಯೊಗಳಿರುವ ಇತರೆ … Continued

ಇಂದಿರಾ ಗಾಂಧಿಯನ್ನು ‘ಭಾರತ ಮಾತೆ’, ಮಾರ್ಕ್ಸ್‌ವಾದಿ ನಾಯಕನನ್ನು ತಮ್ಮ ʼರಾಜಕೀಯ ಗುರುʼ ಎಂದು ಬಣ್ಣಿಸಿದ ಕೇಂದ್ರದ ಬಿಜೆಪಿ ಸಚಿವ..!

ತ್ರಿಶೂರ್ : ಕೇಂದ್ರ ಸಚಿವ ಮತ್ತು ತ್ರಿಶೂರ್ ಸಂಸದ ಹಾಗೂ ನಟ ಸುರೇಶ ಗೋಪಿ ಅವರು ಶನಿವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ “ಭಾರತದ ಮಾತೆ”‌ ಇದ್ದಂತೆ ಮತ್ತು ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ “ಧೈರ್ಯಶಾಲಿ ಆಡಳಿತಗಾರ” ಎಂದು ಬಣ್ಣಿಸಿದ್ದಾರೆ. ಕೇರಳದ  ಮಾರ್ಕ್ಸ್‌ವಾದಿ ಹಿರಿಯ ಇ.ಕೆ. ನಾಯನಾರ್ ತಮ್ಮ “ರಾಜಕೀಯ ಗುರುಗಳು” ಎಂದು … Continued