ವೀಡಿಯೋ: ಆದಿಪುರುಷ ಸಿನೆಮಾ ವೀಕ್ಷಣೆ ವೇಳೆ ಥಿಯೇಟರ್‌ನಲ್ಲಿ ಕಾಣಿಸಿಕೊಂಡ ಮಂಗ : ‘ಜೈ ಶ್ರೀ ರಾಮ’ ಎಂದು ಕೂಗಿದ ಅಭಿಮಾನಿಗಳು | ವೀಕ್ಷಿಸಿ

ಆದಿಪುರುಷ ಸಿನೆಮಾ ಇಂದು ಶುಕ್ರವಾರ (ಜೂನ್ 16) ಹೆಚ್ಚಿನ ಅಭಿಮಾನಿಗಳ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರದ ಹೊರಗೆ ಸಾಲುಗಟ್ಟಿ ನಿಂತಿದ್ದರು. ನೆಟಿಜನ್‌ಗಳು ಚಿತ್ರ ವೀಕ್ಷಿಸುತ್ತಿರುವ ಹಾಲ್‌ನಲ್ಲಿ ಹನುಮಂತನಿಗೆ ಮೀಸಲಿಟ್ಟ ಆಸನದ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರು ಭಗವಾನ್ ಹನುಮಂತನಿಗಾಗಿ ಒಂದು ಆಸನವನ್ನು ಕಾಯ್ದಿರಿಸಿದ್ದಾರೆ. ಏಕೆಂದರೆ ಹಿಂದೂ ಮಹಾಕಾವ್ಯ ರಾಮಾಯಣವನ್ನು ಪಠಿಸಿದಾಗ … Continued

ಕಾಶ್ಮೀರ : ಕುಪ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಶುಕ್ರವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಸೇನೆ ಎನ್‌ಕೌಂಟರ್‌ನಲ್ಲಿ ಐವರು ವಿದೇಶಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಐವರು ವಿದೇಶಿ ಭಯೋತ್ಪಾದಕರು ಹತರಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಾಶ್ಮೀರ ಎಡಿಜಿಪಿ … Continued

ಮದುವೆ ವೇಳೆ ವರದಕ್ಷಿಣೆ ಕೇಳಿದ್ದಕ್ಕೆ ವರನನ್ನು ಮರಕ್ಕೆ ಕಟ್ಟಿ ಹಾಕಿದ ವಧುವಿನ ಕುಟುಂಬ | ವೀಕ್ಷಿಸಿ

ಪ್ರತಾಪಗಢ : ಉತ್ತರ ಪ್ರದೇಶದ ಪ್ರತಾಪ್‌ಗಢದಲ್ಲಿ ಮಂಗಳವಾರ, ಜೂನ್ 14 ರಂದು ಮದುವೆಯ ʼಜಯ ಮಾಲಾ’ ಸಮಾರಂಭದಲ್ಲಿ ವರ ಮತ್ತು ವಧುವಿನ ಕುಟುಂಬಗಳ ನಡುವೆ ವಾಗ್ವಾದ ನಡೆದ ನಂತರ ಮದುವೆ ಸಮಾರಂಭದಲ್ಲಿ ಜಗಳ ಉಲ್ಬಣಗೊಂಡು ವರನನ್ನು ಮರಕ್ಕೆ ಕಟ್ಟಿಹಾಕಿದ ಘಟನೆ ವರದಿಯಾಗಿದೆ. ಜಗಳಕ್ಕೆ ಕಾರಣ ವರ – ಅಮರಜೀತ ವರ್ಮಾ – ವಧುವಿನ ಕುಟುಂಬದಿಂದ ವರದಕ್ಷಿಣೆಗೆ … Continued

ಪಂಚಾಯತ ಚುನಾವಣೆಗೆ 21 ಕಿಮೀ ಓಡಿ ಬಂದು ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ…! ಕಾರಣ…?

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿರುವುದು ಈಗ ಭಾರೀ ಸುದ್ದಿಯಾಗಿದೆ. ಅಬ್ಬರ, ಪಟಾಕಿ, ಜನರ ಜೈಕಾರ ಯಾವುದೂ ಇಲ್ಲದೆ ಅವರು 21 ಕಿಮೀ ಓಡಿ ಬಂದು ವಿಭಿನ್ನವಾಗಿ ನಾಮಪತ್ರ ಸಲ್ಲಿಸಿರುವುದು ಜನರ ಗಮನ ಸೆಳೆದಿದೆ. ಪಶ್ಚಿಮ ಬಂಗಾಳದಲ್ಲಿ ಸದ್ಯ ಪಂಚಾಯತ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಡಾರ್ಜಿಲಿಂಗ್‌ ಹಿಲ್ಸ್‌ನ ಮಾಜಿ ಸೈನಿಕ, ಶರಣ್‌ … Continued

ಮಣಿಪುರ : ಕೇಂದ್ರ ಸಚಿವರ ಮನೆಗೆ ಬೆಂಕಿ ಹಚ್ಚಿದ ಸಾವಿರಾರು ಜನರ ಗುಂಪು

ನವದೆಹಲಿ: ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಗಿರುವ ಮಣಿಪುರದಲ್ಲಿನ ಹಿಂಸಾಚಾರದ ಇತ್ತೀಚಿನ ಘಟನೆಯಲ್ಲಿ ಕಳೆದ ರಾತ್ರಿ ಕೇಂದ್ರ ಸಚಿವರೊಬ್ಬರ ಮನೆ ಮೇಲೆ 1,000 ಕ್ಕೂ ಹೆಚ್ಚು ಜನರ ಗುಂಪೊಂದು ದಾಳಿ ಮಾಡಿದೆ. ಘಟನೆಯ ವೇಳೆ ಕೇಂದ್ರ ಸಚಿವ ಆರ್‌.ಕೆ. ರಂಜನ್ ಸಿಂಗ್ ಅವರು ಇಂಫಾಲ್‌ನ ತಮ್ಮ ಮನೆಯಲ್ಲಿ ಇರಲಿಲ್ಲ … Continued

ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ : ಹೆತ್ತವರ ಶವದ ಜೊತೆ ಆಹಾರವಿಲ್ಲದೆ 3 ದಿನ ಕಳೆದರೂ ಬದುಕಿತ್ತು 6 ದಿನದ ಹಸುಳೆ….!

ಹಾಲುಗಲ್ಲದ ಕಂದ. ಜಗತ್ತನ್ನ ಕಂಡು ಇನ್ನೂ ಒಂದು ವಾರ ಕೂಡ ತುಂಬಿರಲಿಲ್ಲ. ಜನಿಸಿದ ಮೂರೇ ದಿನಕ್ಕೆ ಉಸಿರನ್ನೇ ನಿಲ್ಲಿಸುವಂಥ ಹಸಿವು ಕಾಡಿತ್ತು. ಅಮ್ಮನ ಎದೆಹಾಲಿಗಾಗಿ ಮಲಗಿದ್ದಲ್ಲೇ ಚೀರುತ್ತಿತ್ತು. ಆದರೆ ಹೆತ್ತವಳಿಗೆ ಕಂದನ ಅಳು ಕೇಳುತ್ತಿರಲಿಲ್ಲ. ಅಪ್ಪನಿಗೆ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ಪುಟಾಣಿಯ ಪಕ್ಕದಲ್ಲೇ ಹೆತ್ತವರು ಸಾವಿನ ಮನೆ ಸೇರಿದ್ದರು…! ಗಂಡ ಹೆಂಡತಿ ಸಾವಿನ ಮನೆ ಸೇರಿದ್ದರೆ ಹೆತ್ತವರ … Continued

400 ವಾಹನಗಳ ಮೆರವಣಿಗೆ.. ಸೈರನ್ ಅಬ್ಬರ 300 ಕಿಮೀ ಪಯಣ : ಸಿನಿಮಾ ಸ್ಟೈಲಿನಲ್ಲಿ ಕಾಂಗ್ರೆಸ್‌ ಸೇರಿದ ಬಿಜೆಪಿ ನಾಯಕ | ವೀಕ್ಷಿಸಿ

ಭೋಪಾಲ್:‌ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿಯಿರುವಂತೆಯೇ ಮಧ್ಯಪ್ರದೇಶ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೇಂದ್ರ ಸಚಿವ ಜ್ಯೋತಿಯಾಧಿತ್ಯ ಸಿಂಧಿಯಾ ಅವರ ಆಪ್ತ ಬೈಜನಾಥ್ ಸಿಂಗ್ ಯಾದವ್ ಬಿಜೆಪಿ ತೊರೆದು ತಮ್ಮ ಮೊದಲಿನ ಪಕ್ಷ ಕಾಂಗ್ರೆಸ್ಸಿಗೆ ಮರಳಿದ್ದಾರೆ. ಆದರೆ ಅವರು ಸೇರ್ಪಡೆಯಾಗಿರುವ ರೀತಿಯ ಮೂಲಕ ಅವರು ಗಮನ ಸೆಳೆದಿದ್ದಾರೆ. ಅವರು ಮಧ್ಯಪ್ರದೇಶದ ಶಿವಪುರಿಯಿಂದ … Continued

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ 1,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ : ಪೋಕ್ಸೊ ಪ್ರಕರಣ ಕೈಬಿಟ್ಟ ಪೊಲೀಸರು

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್‌ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಆರೋಪದ ದೂರಿನಲ್ಲಿ, ದೆಹಲಿ ಪೊಲೀಸರು 1,500 ಪುಟಗಳ ಆರೋಪಪಟ್ಟಿಯನ್ನು (ಚಾರ್ಜ್‌ಶೀಟ್) ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ಗೆ ಗುರುವಾರ ಸಲ್ಲಿಸಿದ್ದಾರೆ. 180ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ. ಸಿಂಗ್‌ ವಿರುದ್ಧ, … Continued

ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭಕ್ಕೆ ಇನ್ನೂ ನಾಲ್ಕೈದು ದಿನ ವಿಳಂಬ: ಸಂಪುಟ ಸಭೆ ಬಳಿಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಹೇಳಿಕೆ

ಬೆಂಗಳೂರು: ಮನೆ ಯಜಮಾನಿಗೆ 2,000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯನ್ನು 4-5 ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ. ಶುಕ್ರವಾರದಿಂದ ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಧ್ಯಾಹ್ನವಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ತಿಳಿಸಿದ್ದಾರೆ. ಆದರೆ ಕ್ಯಾಬಿನೆಟ್ ಸಭೆ ನಂತರ ಶುಕ್ರವಾರ ಚಾಲನೆ ನೀಡಬೇಕಿದ್ದ … Continued

ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ರಾಜ್ಯದ ಸಾರಿಗೆ ಸಿಬ್ಬಂದಿಗೆ ಶೇ.15ರಷ್ಟು ವೇತನ ಹೆಚ್ಚಳಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇಂದು, ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ವೇಳೆ ಸಾರಿಗೆ ಸಿಬ್ಬಂದಿ ವೇತನ ಶೇ.15ರಷ್ಟು ಹೆಚ್ಚು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಏಪ್ರಿಲ್ ತಿಂಗಳಿನಿಂದ ಪೂರ್ವಾನ್ವಯ ಆಗುವಂತೆ ಸಾರಿಗೆ ನೌಕರರಿಗೆ … Continued