ಇಸ್ರೋದ ʼಗಗನಯಾನʼ ಮಿಷನ್‌ ನಲ್ಲಿ ಬಾಹ್ಯಾಕಾಶಕ್ಕೆ ಹೋಗಲು ಆಯ್ಕೆಯಾದ 4 ಗಗನಯಾತ್ರಿಗಳ ಹೆಸರನ್ನು ಘೋಷಿಸಿದ ಪ್ರಧಾನಿ ಮೋದಿ

ತಿರುವನಂತಪುರಂ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಗಗನಯಾನದ ಭಾಗವಾಗಿ ಭೂ ಕಕ್ಷೆಗೆ ಹಾರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ. ಪ್ರಶಾಂತ ಬಾಲಕೃಷ್ಣನ್ ನಾಯರ್, (ಗ್ರೂಪ್ ಕ್ಯಾಪ್ಟನ್) ಅಂಗದ ಪ್ರತಾಪ, … Continued

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ : ಕಾಂಗ್ರೆಸ್ಸಿನ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷ ರಾಜೀನಾಮೆ

ಮುಂಬೈ: ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ ಮುರುಮಕರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ಅವರು ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದರು. ಬಸವರಾಜ ಪಾಟೀಲ ಅವರು ಭಾರತೀಯ ಜನತಾ ಪಕ್ಷಕ್ಕೆ … Continued

ಚಿನ್ನಾಭರಣ ನಗದು ಸೇರಿ ಒಂದೇ ತಿಂಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಬಂದ ದೇಣಿಗೆ ಹಣವೆಷ್ಟು ಗೊತ್ತಾ..?

ಅಯೋಧ್ಯೆ : ನೂತನವಾಗಿ ನಿರ್ಮಿಸಲಾದ ಅಯೋಧ್ಯೆ ರಾಮಮಂದಿರದಲ್ಲಿ ಜನವರಿ 22 ರಂದು ಪ್ರಾಣ ಪ್ರತಿಷ್ಠೆ ಸಮಾರಂಭ ನಡೆದಾಗಿನಿಂದ ಒಂದು ತಿಂಗಳಲ್ಲಿ ಸಾಕಷ್ಟು ದೇಣಿಗೆ ಹರಿದು ಬಂದಿದೆ. ಇದರಲ್ಲಿ ಸುಮಾರು 25 ಕೋಟಿ ಮೌಲ್ಯದ 25 ಕೆಜಿ ಚಿನ್ನ ಮತ್ತು ಬೆಳ್ಳಿ ಆಭರಣಗಳು ಸೇರಿವೆ. ಈ ಮಾಹಿತಿಯನ್ನು ರಾಮಮಂದಿರ ಟ್ರಸ್ಟ್ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ರಾಮಮಂದಿರ ಟ್ರಸ್ಟ್‌ನ ಉಸ್ತುವಾರಿ … Continued

ಜಾರ್ಖಂಡದಲ್ಲಿ ಕಾಂಗ್ರೆಸ್ಸಿಗೆ ಆಘಾತ : ಪಕ್ಷದ ಏಕೈಕ ಸಂಸದೆ ಬಿಜೆಪಿಗೆ ಸೇರ್ಪಡೆ

ರಾಂಚಿ: ಜಾರ್ಖಂಡ್‌ನ ಸಿಂಗ್‌ಭೂಮ್ (ಎಸ್‌ಟಿ) ಕ್ಷೇತ್ರದ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಅವರು ಸೋಮವಾರ ಇಲ್ಲಿನ ರಾಜ್ಯ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಗೀತಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡರು. ನಾನು ಬಿಜೆಪಿ ಸೇರಿದ್ದೇನೆ. … Continued

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ವಿಜಯಶೇಖರ ಶರ್ಮಾ

ನವದೆಹಲಿ: ವಿಜಯಶೇಖರ ಶರ್ಮಾ ಅವರು ಪೇಟಿಂಎ (Paytm) ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ನ ಅರೆಕಾಲಿಕ ನಾನ್-ಎಕ್ಸಿಕ್ಯೂಟಿವ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅಲ್ಲದೆ, ಬ್ಯಾಂಕ್‌ನ ಮಂಡಳಿಯನ್ನು ಪುನರ್ರಚಿಸಲಾಗಿದೆ. ಮಾರ್ಚ್ 15 ರ ನಂತರದ ಯಾವುದೇ ಗ್ರಾಹಕರಿಂದ ಠೇವಣಿ ಮತ್ತು ಕ್ರೆಡಿಟ್‌ಗಳನ್ನು ಸ್ವೀಕರಿಸದಂತೆ ರಿಸರ್ವ್ ಬ್ಯಾಂಕ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ಅನ್ನು ನಿರ್ಬಂಧಿಸಿದೆ. ಸೆಂಟ್ರಲ್ ಬ್ಯಾಂಕ್ … Continued

‘ತಪ್ಪು ಮಾಡಿದ್ದೇನೆ….’: ವೀಡಿಯೊ ರಿಟ್ವೀಟ್ ಮಾಡಿದ್ದಕ್ಕೆ ಸುಪ್ರೀಂ ಕೋರ್ಟಿನಲ್ಲಿ ಅರವಿಂದ ಕೇಜ್ರಿವಾಲ್ ತಪ್ಪೊಪ್ಪಿಗೆ

ನವದೆಹಲಿ: ಯೂ ಟ್ಯೂಬರ್ ಧ್ರುವ ರಾಥಿ ಅವರು ಪೋಸ್ಟ್ ಮಾಡಿದ ಮಾನಹಾನಿಕರ ವೀಡಿಯೊವನ್ನು ಮರುಟ್ವೀಟ್ ಮಾಡುವ ಮೂಲಕ ತಪ್ಪು ಮಾಡಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. “ನಾನು ರಿಟ್ವೀಟ್ ಮಾಡುವ ಮೂಲಕ ತಪ್ಪು ಮಾಡಿದ್ದೇನೆ ಎಂದು ನಾನು ಹೇಳಬಲ್ಲೆ” ಎಂದು ಅವರು ಹೇಳಿದರು. ಕೇಜ್ರಿವಾಲ್ ಪರ ಹಿರಿಯ ವಕೀಲ … Continued

ವೀಡಿಯೊ..| ಕೊಳೆ ಬಟ್ಟೆ ಧರಿಸಿ ಬಂದಿದ್ದ ವ್ಯಕ್ತಿಗೆ ʼನಮ್ಮ ಮೆಟ್ರೋʼ ಮೆಟ್ರೋ ಒಳಗೆ ಬಿಡದ ಸಿಬ್ಬಂದಿ: ಸೇವೆಯಿಂದ ಉದ್ಯೋಗಿ ವಜಾ

ಬೆಂಗಳೂರು: ಮಾಸಲು ಹಾಗೂ ಕೊಳೆಯಾದ ಉಡುಪು ಧರಿಸಿ ಬಟ್ಟೆಗಳ ಗಂಟು ಹೊತ್ತು ‘ನಮ್ಮ ಮೆಟ್ರೋ’ ದಲ್ಲಿ ಪ್ರಯಾಣಿಸಲು ಬಂದಿದ್ದ ರೈತರೊಬ್ಬರಿಗೆ ಒಳ ಪ್ರವೇಶಿಸಲು ಭದ್ರತಾ ಸಿಬ್ಬಂದಿ ನಿರಾಕರಿಸಿದ ನಂತರ ವಿವಾದ ಸೃಷ್ಟಿಯಾಗಿದ್ದು, ಈಗ ಭದ್ರತಾ ಸಿಬ್ಬಂದಿ ವಿರುದ್ಧ ಬಿಎಂಆರ್‌ಸಿಎಲ್ ಕ್ರಮ ಕೈಗೊಂಡಿದೆ. ಪ್ರಯಾಣಿಕನನ್ನು ಅವಮಾನಿಸಿದ್ದ ಭದ್ರತಾ ಮೇಲ್ವಿಚಾರಕರನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ಬಿಎಂಆರ್‌ಸಿಎಲ್ ಸೋಮವಾರ ತಿಳಿಸಿದೆ. ಮಾಸಲು … Continued

ಖ್ಯಾತ ಗಜಲ್‌ ಗಾಯಕ ಪಂಕಜ ಉಧಾಸ್ ನಿಧನ

ಮುಂಬೈ: ಖ್ಯಾತ ಗಜಲ್‌ ಗಾಯಕ ಪಂಕಜ ಉಧಾಸ್ ಅವರು 72 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೋಮವಾರ ಫೆಬ್ರವರಿ 26 ರಂದು ಬೆಳಿಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ನಿಧನರಾದರು ಎಂದು ಅವರ ತಂಡ ದೃಢಪಡಿಸಿದೆ. “ಪಂಕಜ್ ಸರ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ಅವರು ಆರೋಗ್ಯವಾಗಿರಲಿಲ್ಲ. ಅವರು ಇಂದು (ಫೆಬ್ರವರಿ … Continued

1ನೇ ತರಗತಿಗೆ ಪ್ರವೇಶ ಪಡೆಯಲು ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ

ನವದೆಹಲಿ : ಕೇಂದ್ರ ಶಿಕ್ಷಣ ಸಚಿವಾಲಯವು 1ನೇ ತರಗತಿಗೆ ಮಕ್ಕಳ ಪ್ರವೇಶಾತಿಗೆ ಬೇಕಾದ ವಯಸ್ಸಿನ ಅರ್ಹತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಹತ್ವದ ನಿರ್ದೇಶನ ಪತ್ರ ಹೊರಡಿಸಿದೆ. 2024-25ರ ಶೈಕ್ಷಣಿಕ ವರ್ಷದಿಂದ 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ 6 ವರ್ಷ ವಯಸ್ಸನ್ನು ನಿಗದಿಪಡಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. … Continued

ಮುಸ್ಲಿಂ ಪಕ್ಷಕ್ಕೆ ಕೋರ್ಟ್ ಹಿನ್ನಡೆ : ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಅಲಾಹಾಬಾದ್‌ ಹೈಕೋರ್ಟ್‌

ಲಕ್ನೋ : ವಾರಾಣಸಿಯ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯೊಂದರಲ್ಲಿ ಹಿಂದೂ ಪ್ರಾರ್ಥನೆಯನ್ನು ನಿಲ್ಲಿಸಿದ ಮುಲಾಯಂ ಸಿಂಗ್ ಸರ್ಕಾರವು 1993 ರ ಕ್ರಮವನ್ನು “ಕಾನೂನುಬಾಹಿರ” ಎಂದು ಅಲಹಾಬಾದ್ ಹೈಕೋರ್ಟ್ ಇಂದು, ಸೋಮವಾರ ಹೇಳಿದೆ. ಹಾಗೂ 30 ವರ್ಷಗಳ ನಂತರ ಪ್ರಾರ್ಥನೆ ಪುನರಾರಂಭಿಸಲು ಅನುಮತಿ ನೀಡಿದ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ನ್ಯಾಯಮೂರ್ತಿ … Continued