ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಬಸ್ -ಓಮ್ನಿಬಸ್ ಮಧ್ಯೆ ಡಿಕ್ಕಿ ; ಐವರು ಸಾವು, 60 ಮಂದಿಗೆ ಗಾಯ

ಚೆನ್ನೈ: ಮುಂಜಾನೆ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ತಮಿಳುನಾಡು ಸರ್ಕಾರಿ ಬಸ್ ಮತ್ತು ಓಮ್ನಿಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸಾವಿಗೀಡಾಗಿದ್ದು, ಸುಮಾರು 60 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಓರ್ವ ಮಹಿಳೆ ಸೇರಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಗುಡುವಂಚೇರಿಯ ರಿತಿಕಾ (32), ವಾಣಿಯಂಬಾಡಿಯ ಮೊಹಮ್ಮದ್ ಫಿರೋಜ್ (37), ಎಸ್‌ಇಟಿಸಿ ಬಸ್ ಚಾಲಕ ಕೆ.ಎಲುಮಲೈ (47) … Continued

ಹಿರಿಯ ನಟ ಚಂದ್ರಮೋಹನ ನಿಧನ

ಹೈದರಾಬಾದ್: ತೆಲುಗು ಇಂಡಸ್ಟ್ರಿಯ ಪ್ರವರ್ತಕ ಎಂದೇ ಬಿಂಬಿತವಾಗಿರುವ ಚಂದ್ರ ಮೋಹನ ಶನಿವಾರ, ನವೆಂಬರ್ 11 ರಂದು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಅವರು ಪತ್ನಿ ಜಲಂಧರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವಯೋಸಹಜ ಸಮಸ್ಯೆಗಳಿಂದಾಗಿ ಅವರು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು … Continued

ಪ್ರಧಾನಿ ಮೋದಿ ಒಳಗೊಂಡ ‘ಅಬಂಡನ್ಸ್ ಇನ್ ಮಿಲೆಟ್ಸ್’ ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ

ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಒಳಗೊಂಡಿರುವ ‘ಅಬಂಡೆನ್ಸ್ ಇನ್ ಮಿಲೆಟ್ಸ್’ ಎಂಬ ಹಾಡನ್ನು ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ’ ಅಡಿಯಲ್ಲಿ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ಫಾಲು (ಫಲ್ಗುಣಿ ಶಾ) ಮತ್ತು ಗೌರವ್ ಷಾ ಅವರ ಹಾಡು ಈ ವರ್ಷದ ಮಾರ್ಚ್‌ನಲ್ಲಿ ಜಾಗತಿಕ ರಾಗಿ (ಶ್ರೀ ಅನ್ನ) ಸಮ್ಮೇಳನವನ್ನು ಉದ್ಘಾಟಿಸುವಾಗ ಪ್ರಧಾನಿ ಮಾಡಿದ ಭಾಷಣದ ಭಾಗಗಳನ್ನು … Continued

ಅನೇಕ ಕಾಂಗ್ರೆಸ್ ನಾಯಕರು ಭಗವಾನ್ ರಾಮ, ‘ಹಿಂದೂ’ ಎಂಬ ಪದವನ್ನು ದ್ವೇಷಿಸುತ್ತಾರೆ ; ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ

ನವದೆಹಲಿ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ ಕೃಷ್ಣಂ ಅವರು ಶುಕ್ರವಾರ ತಮ್ಮ ಪಕ್ಷದಲ್ಲಿ ಶ್ರೀರಾಮನನ್ನು ಮತ್ತು ‘ಹಿಂದೂ’ ಪದವನ್ನು ದ್ವೇಷಿಸುವ ಅನೇಕ ನಾಯಕರು ಇದ್ದಾರೆ ಎಂದು ಹೇಳಿದ್ದಾರೆ. “ಕಾಂಗ್ರೆಸ್‌ನಲ್ಲಿ ರಾಮನನ್ನು ದ್ವೇಷಿಸುವ ಕೆಲವು ನಾಯಕರಿದ್ದಾರೆ ಎಂದು ನನಗೆ ಅನಿಸಿದೆ, ಈ ನಾಯಕರೂ ಹಿಂದೂ ಪದವನ್ನು ದ್ವೇಷಿಸುತ್ತಾರೆ, ಅವರು ಹಿಂದೂ ಧಾರ್ಮಿಕ ಗುರುಗಳನ್ನು ಅವಮಾನಿಸಲು ಬಯಸುತ್ತಾರೆ, ಪಕ್ಷದಲ್ಲಿ … Continued

‘ಹಿಂದೂಗಳು ಸಹಿಷ್ಣುಗಳು…ಅವರ ಜೀವನ ವಿಧಾನದಿಂದ ನಾವು ಕಲಿತಿದ್ದೇವೆ, ಭಗವಾನ್ ರಾಮ ನಮ್ಮ ಸಂಸ್ಕೃತಿ-ನಾಗರಿಕತೆಯ ಭಾಗ : ಜಾವೇದ್ ಅಖ್ತರ್

ಮುಂಬೈ :   ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಹಿಂದೂ ಸಂಸ್ಕೃತಿಯನ್ನು ಹೊಗಳಿದ್ದಾರೆ ಮತ್ತು ಅವರು ಹಿಂದೂಗಳು ಯಾವಾಗಲೂ ಸಹಿಷ್ಣುಗಳು ಎಂದು ಹೇಳಿದ್ದಾರೆ. ಮುಂಬೈನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ. ಠಾಕ್ರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿಂದೂ ಧರ್ಮದ ಸಾಂಸ್ಕೃತಿಕ ಮಹತ್ವವನ್ನು ಒತ್ತಿ ಹೇಳಿದ ಅವರು, … Continued

ಅಂಚೆ ಇಲಾಖೆಯಲ್ಲಿ 1899 ಹುದ್ದೆಗಳ ನೇಮಕ: 10, 12ನೇ ತರಗತಿ, ಪದವೀಧರರು ಅರ್ಜಿ ಸಲ್ಲಿಸಬಹುದು..

ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್‌, ಎಂಟಿಎಸ್‌ ಸೇರಿದಂತೆ ಒಟ್ಟು 1899 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ … Continued

ರಾಜಸ್ಥಾನ ಸಿಎಂ ಅಶೋಕ ಗೆಹ್ಲೋಟ್ ಆಪ್ತ ಬಿಜೆಪಿಗೆ ಸೇರ್ಪಡೆ

ಜೈಪುರ: ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸೂರಸಾಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಹಾಗೂ ಜೋಧಪುರ ಮಾಜಿ ಮೇಯರ್ ರಾಮೇಶ್ವರ್ ದಧಿಚ್ ಅವರು ಗುರುವಾರ ನಾಮಪತ್ರ ಹಿಂಪಡೆದಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ವಿನೋದ ಶರ್ಮಾ ಕೂಡ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು. … Continued

ವೊಡಾಫೋನ್‌ ಐಡಿಯಾಗೆ ₹ 1,128 ಕೋಟಿ ಮರುಪಾವತಿಸಲು ಬಾಂಬೆ ಹೈಕೋರ್ಟ್‌ ಆದೇಶ

ಮುಂಬೈ: 2016-17ರ ಮೌಲ್ಯಮಾಪನ ವರ್ಷಕ್ಕೆ ಮೂಲ ಮತ್ತು ಮುಂಗಡ ತೆರಿಗೆಯಲ್ಲಿ ಕಡಿತಗೊಳಿಸಿದ ₹1,100 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್‌ಗೆ (ವಿಐ ಲಿಮಿಟೆಡ್) ಮರುಪಾವತಿಸುವಂತೆ ಬಾಂಬೆ ಹೈಕೋರ್ಟ್ ಆದಾಯ ತೆರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಕೆ.ಆರ್.ಶ್ರೀರಾಮ ಮತ್ತು ಡಾ.ನೀಲಾ ಗೋಖಲೆ ಅವರಿದ್ದ ಪೀಠವು ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಂಬಂಧಿಸಿದ … Continued

ಕ್ರಿಕೆಟ್ ವಿಶ್ವಕಪ್ 2023 : ಶ್ರೀಲಂಕಾ ವಿರುದ್ಧ ಗೆಲುವಿನಿಂದ ನ್ಯೂಜಿಲೆಂಡಿಗೆ ಹೆಚ್ಚಿದ ಸೆಮಿಫೈನಲ್‌ ಅವಕಾಶ, ಪಾಕಿಸ್ತಾನಕ್ಕೆ ಇದು ಸಾಧ್ಯವಿದೆಯೇ..? ಲೆಕ್ಕಾಚಾರ ಹೀಗಿದೆ….

ಬೆಂಗಳೂರು: ಗುರುವಾರ ನಡೆದ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಐದು ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 2023 ರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ ಪ್ರವೇಶದ ಓಟದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡೂ ತಂಡಗಳು ಭಾರಿ ಕಠಿಣ ಸವಾಲು ನೀಡಿದೆ. ನ್ಯೂಜಿಲೆಂಡ್ ಈಗ 9 ಪಂದ್ಯಗಳಿಂದ 10 ಅಂಕಗಳನ್ನು +0.743 ರ ನಿವ್ವಳ ರನ್ ರೇಟ್‌ ಹೊಂದಿದೆ. … Continued

ವೀಡಿಯೊ…: : ಚುನಾವಣಾ ಪ್ರಚಾರದ ವಾಹನದಿಂದ ಕೆಳಗೆ ಬೀಳುತ್ತಿದ್ದ ತೆಲಂಗಾಣ ಸಚಿವ ಕೆಟಿಆರ್ ; ರಕ್ಷಿಸಿದ ಗನ್‌ಮ್ಯಾನ್‌

ಹೈದರಾಬಾದ್ : ಬಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಅವರು ಗುರುವಾರ ಆರ್ಮೂರ್‌ನಲ್ಲಿ ರೋಡ್‌ಶೋ ವೇಳೆ ತಮ್ಮ ಪ್ರಚಾರ ವಾಹನದಿಂದ ಮುಕ್ಕುರಿಸಿ ಬಿದ್ದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಪ್ರಚಾರ ವಾಹನದ ಚಾಲಕ ಥಟ್ಟನೆ ಬ್ರೇಕ್ ಹಾಕಿದ್ದರಿಂದ ವಾಹನದ ಮೇಲೆ ಹಾಕಿದ್ದ ರೇಲಿಂಗ್ ಕೆಳಕ್ಕೆ ಜಾರಿ ನಿಂತಿದ್ದ ಸಚಿವರು ಮತ್ತು ಇತರರನ್ನು ಕೆಳಕ್ಕೆ … Continued