‘ನನಗೆ ಬೆಂಬಲವಿಲ್ಲ ಮಾತ್ರವಲ್ಲ…’: 25 ವರ್ಷಗಳ ನಂತರ ಬಿಜೆಪಿಗೆ ನಟಿ ಗೌತಮಿ ರಾಜೀನಾಮೆ

ಚೆನ್ನೈ: ತಮ್ಮ ಆಸ್ತಿ ಕಬಳಿಸಿದ ವ್ಯಕ್ತಿಗೆ ಪಕ್ಷದ ಹಿರಿಯರು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಟಿ ಗೌತಮಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಗೌತಮಿ ಅವರು ತಮ್ಮ ದುಸ್ಥಿತಿಯನ್ನು ‘X’ ನಲ್ಲಿ ತಿಳಿಸಿದ್ದಾರೆ, ತಾನು ಕಳೆದ 25 ವರ್ಷಗಳಿಂದ ಬಿಜೆಪಿಯ ಸದಸ್ಯನಾಗಿದ್ದೆ ಮತ್ತು ಪ್ರಾಮಾಣಿಕ ಬದ್ಧತೆಯಿಂದ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಪಕ್ಷದಿಂದ ಬೆಂಬಲದ ಕೊರತೆಯನ್ನು … Continued

ಜಸ್ಟಿನ್ ಟ್ರುಡೊ ಅಸಮರ್ಥ… ನಾನು ಪ್ರಧಾನಿಯಾದ್ರೆ ಭಾರತದೊಂದಿಗೆ ಕೆನಡಾದ ಸಂಬಂಧ ಮರುಸ್ಥಾಪನೆ : ಕೆನಡಾ ವಿಪಕ್ಷದ ನಾಯಕ

ಕೆನಡಾದ ಕನ್ಸರ್ವೇಟಿವ್ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ಭಾರತದೊಂದಿಗಿನ ರಾಜತಾಂತ್ರಿಕ ವಿವಾದದ ಬಗ್ಗೆ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಟೀಕಿಸಿದ್ದಾರೆ. ಟ್ರುಡೊ ಅವರು “ಎಂಟು ವರ್ಷಗಳ ನಂತರ ಯಾವುದಕ್ಕೂ ಯೋಗ್ಯರಲ್ಲ” ಎಂಬಂತಾಗಿದೆ ಮತ್ತು ಅವರನ್ನು “ಭಾರತದಲ್ಲಿ ನಗುವ ಸ್ಟಾಕ್” ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಕೆನಡಿಯನ್ನರ ಆದ್ಯತೆಯ ಅಭ್ಯರ್ಥಿಯಾಗಿರುವ ಕೆನಡಾದ … Continued

ಕ್ರಿಕೆಟ್ ವಿಶ್ವಕಪ್ 2023 : ಕೊಹ್ಲಿ ಭರ್ಜರಿ ಬ್ಯಾಟಿಂಗ್‌, ಶಮಿ ಮಾರಕ ಬೌಲಿಂಗ್‌ನಿಂದ ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ನಿರ್ಣಾಯಕ ಗೆಲುವು

ಧರ್ಮಶಾಲಾ : ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನದಿಂದಾಗಿ ಭಾರತವು ಭಾನುವಾರ ಧರ್ಮಶಾಲಾದಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಡ್ಯಾರಿಲ್ ಮಿಚೆಲ್ ಅವರ 130 ಮತ್ತು ರಚಿನ್ ರವೀಂದ್ರ ಅವರ 75 ರನ್‌ಗಳ ಹೊರತಾಗಿಯೂ ಮೊಹಮ್ಮದ್ ಶಮಿ ಅವರ ಐದು ವಿಕೆಟ್ (54ಕ್ಕೆ 5) ಭಾರತಕ್ಕೆ ನ್ಯೂಜಿಲೆಂಡ್ … Continued

ಹೃದಯಾಘಾತದ ನಂತರ 1 ತಾಸು ಕಾಲ ಹೃದಯದ ಬಡಿತ ನಿಂತು ಹೋಗಿತ್ತು… ಆದರೂ ಬದುಕುಳಿದ ಈ ವ್ಯಕ್ತಿ…! ಈ ಪವಾಡ ಹೇಗಾಯ್ತು..?

ನಾಗಪುರ : ಮಹಾರಾಷ್ಟ್ರದ ನಾಗಪುರದ ವ್ಯಕ್ತಿಯೊಬ್ಬರಿಗೆ ಸುಮಾರು ಒಂದು ಗಂಟೆಗಳ ಕಾಲ ಹೃದಯ ಬಡಿತ ನಿಂತು ಹೋಗಿದ್ದರೂ ಅವರು ಜೀವಂತವಾಗಿ ಬದುಕುಳಿದಿದ್ದಾರೆ….! ಈ ಪವಾಡ ಸದೃಶ ಘಟನೆಗೆ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, 32 ವರ್ಷದ ರೋಗಿಯು ಆಗಸ್ಟ್ 25 ರಂದು ಹೃದಯಾಘಾತಕ್ಕೊಳಗಾದ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರು … Continued

ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್ : ಪ್ರಾಂಶುಪಾಲರು ಅಮಾನತು

ಲಕ್ನೋ : ಉತ್ತರ ಪ್ರದೇಶದ ಲಕ್ನೋದ ಠಾಕೂರ್‌ಗಂಜ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರಲ್ಲಿ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ನಮಾಜ್ ಮಾಡಿದ ಆರೋಪಿತ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಶಾಲೆಯ ಪ್ರಾಂಶುಪಾಲರಾದ ಮೀರಾ ಯಾದವ್ ಅವರನ್ನು ಉತ್ತರ ಪ್ರದೇಶ ಸರ್ಕಾರಿ ನೌಕರ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು-1999 ರ ಅಡಿಯಲ್ಲಿ ಶನಿವಾರ ತಕ್ಷಣದಿಂದಲೇ ಜಾರಿಗೆ … Continued

ಕಾಂಗ್ರೆಸ್ ಜೊತೆಗಿನ ಸಮಾಜವಾದಿ ಪಕ್ಷದ ಭಿನ್ನಾಭಿಪ್ರಾಯಕ್ಕೆ ಹೊಸ ಟ್ವಿಸ್ಟ್ ನೀಡಿದ ಅಖಿಲೇಶ ಯಾದವ್ ‘ಪಿಡಿಎ’ ಟ್ವೀಟ್

ನವದೆಹಲಿ : ಮೂರು ದಿನಗಳ ಹಿಂದೆ ಕಾಂಗ್ರೆಸ್‌ ಅನ್ನು ಗೇಲಿ ಮಾಡುವ ಮೂಲಕ ವಿಪಕ್ಷಗಳ ಮೈತ್ರಿಕೂಟ-ಇಂಡಿಯಾ ಬ್ಲಾಕ್‌ ಜೊತೆಗಿನ ತಮ್ಮ ಪಕ್ಷದ ಸಂಬಂಧದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಮೂಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈಗ ‘ಪಿಡಿಎ’ ಪದವನ್ನು ಬಳಸಿ ಮತ್ತೊಂದು ಪೋಸ್ಟ್ ಹಾಕಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಆರು … Continued

ಭವಿಷ್ಯದ ಮಾನವ ಸಹಿತ ಗಗನಯಾನ ಕಾರ್ಯಾಚರಣೆಗೆ ಮಹಿಳಾ ಪೈಲಟ್‌ಗಳು, ಮಹಿಳಾ ವಿಜ್ಞಾನಿಗಳಿಗೆ ಇಸ್ರೋ ಆದ್ಯತೆ: ಸೋಮನಾಥ

ತಿರುವನಂತಪುರಂ: ಮಾನವಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ ಮಿಷನ್‌ನಲ್ಲಿ, ಯುದ್ಧ ವಿಮಾನ ಚಲಾಯಿಸುವ ಮಹಿಳಾ ಪೈಲಟ್ ಅಥವಾ ಮಹಿಳಾ ವಿಜ್ಞಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ ಭಾನುವಾರ (ಅಕ್ಟೋಬರ್ 22) ತಿಳಿಸಿದ್ದಾರೆ. ಇಸ್ರೋ 2024 ರ ತನ್ನ ಗಗನಯಾನ ಬಾಹ್ಯಾಕಾಶ ನೌಕೆಯಲ್ಲಿ ಮಹಿಳೆಯನ್ನು ಹೋಲುವ … Continued

ಭಾರತದ ಅಕ್ಕಪಕ್ಕದ ಸಮುದ್ರದಲ್ಲಿ ರೂಪುಗೊಳ್ಳಲಿದೆ ಅವಳಿ ಚಂಡಮಾರುತಗಳು : ಐಎಂಡಿ

ನವದೆಹಲಿ: ಹವಾಮಾನ ತಜ್ಞರು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಅವಳಿ ಚಂಡಮಾರುತಗಳ ರಚನೆಯನ್ನು ಊಹಿಸಿದ್ದಾರೆ, ಈ ಹಿಂದೆ 2018 ರಲ್ಲಿ ಅಪರೂಪದ ವಿದ್ಯಮಾನ ಸಂಭವಿಸಿತ್ತು. ‘ತೇಜ್’ ಚಂಡಮಾರುತವು ಅರೇಬಿಯನ್ ಸಮುದ್ರದಲ್ಲಿ ತೀವ್ರ ಚಂಡಮಾರುತವಾಗಿ ಬದಲಾಗಲಿದೆ, ಇದೇ ವೇಳೆ ‘ಹಾಮೂನ್’ ಚಂಡಮಾರುತ ‘ಬಂಗಾಳ ಕೊಲ್ಲಿಯಲ್ಲಿ ಅಕಾಲಿಕ ಹಂತದಲ್ಲಿದೆ. ನೈಋತ್ಯ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ‘ತೇಜ್’ ಚಂಡಮಾರುತ … Continued

ಇಸ್ರೇಲ್-ಹಮಾಸ್ ಯುದ್ಧ: ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ಕಳುಹಿಸಿದ ಭಾರತ

ನವದೆಹಲಿ: ಯುದ್ಧಪೀಡಿತ ಗಾಜಾಕ್ಕೆ ಜಗತ್ತಿನಾದ್ಯಂತ ನೆರವು ಹರಿದು ಬರುತ್ತಿದ್ದು, ಮಾನವೀಯ ಆಧಾರದ ಮೇಲೆ ಭಾರತ ಕೂಡ ವೈದ್ಯಕೀಯ ನೆರವು ಮತ್ತು ವಿಪತ್ತು ಪರಿಹಾರದ ವಸ್ತುಗಳನ್ನು ರವಾನಿಸಿದೆ. ಅಕ್ಟೋಬರ್‌ 7ರಂದು ಹಮಾಸ್​ ಉಗ್ರರು ಗಾಜಾದಿಂದ ಇಸ್ರೇಲ್​ ಮೇಲೆ 5 ಸಾವಿರ ರಾಕೆಟ್​ಗಳ ಮೂಲಕ ದಾಳಿ ಮಾಡಿ ಇಸ್ರೇಲ್​ನಲ್ಲಿ ಮಾರಣಹೋಮ ಸೃಷ್ಟಿಸಿದ ನಂತರ ಪ್ರತೀಕಾರವಾಗಿ ಇಸ್ರೇಲ್​ ಹಮಾಸ್​ ಉಗ್ರರರ … Continued

ವೀಡಿಯೊ…| ಮೈದುನನ ಮದುವೆಯಾಗಲು ಅತ್ತಿಗೆಯಂದಿರ ಹೊಡೆದಾಟ : ಹಲವರಿಗೆ ಗಾಯ

ಬಿಹಾರದ ಹಿಲ್ಸಾ ಜಿಲ್ಲೆಯಲ್ಲಿ ಮೈದುನನ್ನು ಮದುವೆಯಾಗಲು ಇಬ್ಬರು ಅತ್ತಿಗೆಯಂದಿರು ಜಗಳ ಮಾಡಿಕೊಂಡ ವಿಚಿತ್ರ ಹಾಗೂ ಅಸಾಮಾನ್ಯ ಘಟನೆ ಇತ್ತೀಚಿಗೆ ನಡೆದಿರುವುದು ವರದಿಯಾಗಿದೆ. ಈ ಪರಿಸ್ಥಿತಿ ವೇಳೆ ಪರಿಸ್ಥಿತಿ ಉಲ್ಬಣಗೊಂಡಿದ್ದು, ಇಬ್ಬರು ಮಹಿಳೆಯರ ತವರು ಮನೆಯ ಕುಟುಂಬದ ಸದಸ್ಯರು ಕೂಡ ಜಗಳದಲ್ಲಿ ಸೇರಿಕೊಂಡು ಪರಸ್ಪರ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ. ನೋಡುಗರು ಈ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ, ಅದು ತಕ್ಷಣವೇ … Continued