ದುರಸ್ತಿ ಮಾಡುವಾಗಲೇ ಮೊಬೈಲ್‌ ಸ್ಫೋಟ, ಹೊತ್ತಿಕೊಂಡ ಬೆಂಕಿ ಜ್ವಾಲೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್: ಕೆಲಸಗಾರರೊಬ್ಬರು ಮೊಬೈಲ್‌ ದುರಸ್ತಿ ಮಾಡುವಾಗ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡ ಕ್ಷಣವನ್ನು ದೃಶ್ಯಗಳು ಸೆರೆಯಾಗಿವೆ. ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಬಂಟಿ ಮೊಬೈಲ್ ಶಾಪ್ ಎಂಬ ದುರಸ್ತಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಅಂಗಡಿಯಲ್ಲಿ ಕೆಲಸ ಮಾಡುವವ ಮೊಬೈಲ್‌ ದುರಸ್ತಿ ಮಾಡಿ ಪರೀಕ್ಷಿಸುತ್ತಿರುವಾಗ ಜೋರಾಗಿ ಸ್ಫೋಟ ಸಂಭವಿಸಿದೆ. ಮುಂದಿನ ಕ್ಷಣದಲ್ಲಿ, ಕೆಲಸಗಾರನ ಕೈಯಲ್ಲಿಯೇ ಮೊಬೈಲ್‌ ಫೋನ್‌ನ … Continued

ಶಾಕಿಂಗ್ ವೀಡಿಯೊದಲ್ಲಿ ಚಿರತೆಯ ಬಾಲ-ಹಿಂಗಾಲು ಹಿಡಿದು ಎಳೆಯುತ್ತಿರುವ ವ್ಯಕ್ತಿ | ವೀಕ್ಷಿಸಿ

ವ್ಯಕ್ತಿಯೊಬ್ಬ ಚಿರತೆಯ ಬಾಲ ಹಿಡಿದು ಎಳೆಯುತ್ತಿರುವ ಆಘಾತಕಾರಿ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಭಾರತೀಯ ಅರಣ್ಯ ಸೇವೆಗಳ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ 20 ಸೆಕೆಂಡುಗಳ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ಚಿರತೆಯನ್ನು ಅದರ ಬಾಲ ಮತ್ತು ಅದರ ಒಂದು ಹಿಂಗಾಲು ಹಿಡಿದು ಎಳೆಯುತ್ತಿರುವುದನ್ನು ನೋಡಬಹುದು. ಚಿರತೆ ಹಿಡಿತದಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು … Continued

ಅತ್ಯಾಚಾರ ಪ್ರಕರಣದಲ್ಲಿ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಮೊರೆ ಹೋದ ಬಿಜೆಪಿ ನಾಯಕ ಶಹನವಾಜ್ ಹುಸೇನ್

ನವದೆಹಲಿ: ಮಹಿಳೆಯೊಬ್ಬರ ದೂರಿನ ಮೇಲೆ ಅತ್ಯಾಚಾರ ಆರೋಪದಡಿ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಶಹನವಾಜ್ ಹುಸೇನ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಆಶಾ ಮೆನನ್ ಅವರು ಎಫ್‌ಐಆರ್ ದಾಖಲಿಸಲು ನಿರ್ದೇಶಿಸುವ 2018 ರ ವಿಚಾರಣಾ ಆದೇಶದಲ್ಲಿ ಯಾವುದೇ ವಿರೂಪತೆಯಿಲ್ಲ ಎಂದು ಹೇಳಿದರು ಮತ್ತು … Continued

ಜಗದೀಶ್ ಟೈಟ್ಲರ್ ಚಿತ್ರವಿದ್ದ ಟೀ ಶರ್ಟ್‌ ಧರಿಸಿ ಗೋಲ್ಡನ್ ಟೆಂಪಲ್‌ಗೆ ಭೇಟಿ: ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ದೂರು ದಾಖಲು

ಅಮೃತಸರ: ಪಂಜಾಬಿನ  ಅಮೃತಸರದ ಗೋಲ್ಡನ್ ಟೆಂಪಲ್‌ಗೆ  ಭೇಟಿ ನೀಡುವ ವೇಳೆ ಜಗದೀಶ್ ಟೈಟ್ಲರ್ ಚಿತ್ರವಿರುವ ಟಿ-ಶರ್ಟ್ ಧರಿಸಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತ ಕರಮ್‌ಜಿತ್ ಸಿಂಗ್ ಗಿಲ್ ವಿರುದ್ಧ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ) ಎಸ್‌ಜಿಪಿಸಿ ಪೊಲೀಸ್ ದೂರು ದಾಖಲಿಸಿದೆ. ಎಸ್‌ಜಿಪಿಸಿ ಅಧ್ಯಕ್ಷ, ವಕೀಲ ಹರ್ಜಿಂದರ್ ಸಿಂಗ್ ಧಾಮಿ ಅವರು ಕಾಂಗ್ರೆಸ್ ಕಾರ್ಯಕರ್ತ ಕರಮ್‌ಜಿತ್ ಸಿಂಗ್ ಗಿಲ್ … Continued

ಎಂಟು ಯೂಟ್ಯೂಬ್ ಚಾನಲ್​ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಉದ್ದೇಶಪೂರ್ವಕವಾಗಿ ಭಾರತ ವಿರೋಧಿ ವಿಷಯವನ್ನು” ಪ್ರಚಾರ ಮಾಡಿದ್ದಕ್ಕಾಗಿ ಕೇಂದ್ರವು ಎಂಟು ಯೂ ಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ, ಅದರಲ್ಲಿ ಏಳು ಭಾರತೀಯ ಮತ್ತು ಒಂದು ಪಾಕಿಸ್ತಾನದ ಯೂ ಟ್ಯೂಬ್‌ ಚಾನೆಲ್‌ಗಳಾಗಿವೆ. ನಿರ್ಬಂಧಿಸಲಾದ ಚಾನೆಲ್‌ಗಳು ಒಟ್ಟು 85 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, 114 ಕೋಟಿಗೂ ಹೆಚ್ಚು ವೀಕ್ಷಕರಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ … Continued

ಜ್ಞಾನವಾಪಿ ಕೇಸ್‌ ಹಿಂಪಡೆಯದಿದ್ರೆ ಕನ್ಹಯ್ಯಲಾಲ್‌ಗೆ ಮಾಡಿದಂತೆ ತಲೆ ಕಡಿಯ್ತೇವೆ: ಫಿರ್ಯಾದಿ ಪತಿಗೆ ಪಾಕಿಸ್ತಾನದಿಂದ ಕೊಲೆ ಬೆದರಿಕೆ

ವಾರಾಣಸಿ: ಪಾಕಿಸ್ತಾನದ ನಂಬರ್‌ ಮೂಲಕ ಕರೆ ಮಾಡಿದ ಅಪರಿಚಿತರು ತಲೆ ಕಡಿಯುವುದಾಗಿ ನಮಗೆ ಬೆದರಿಕೆಯೊಡ್ಡಿದ್ದಾರೆ ಎಂದು ಶೃಂಗಾರ ಗೌರಿ-ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾದಿಯಾಗಿರುವ ಮಹಿಳೆಯ ಪತಿ ವಾರಣಾಸಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದ ವಿಚಾರಣೆ ಗುರುವಾರದಿಂದ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪುನರಾರಂಭವಾಗಿದೆ. ಸೋಹನ್ ಲಾಲ್ ಆರ್ಯ ಅವರಿಂದ … Continued

ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ನೇಮಕಾತಿ: ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೂ ಅವಕಾಶ

ನವದೆಹಲಿ: ಭಾರತೀಯ ಅಂಚೆ ಇಲಾಖೆಯಲ್ಲಿನ 98 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಕುರಿತು ಪ್ರಕಟಣೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಆಯಾ ರಾಜ್ಯಗಳ ಪೋಸ್ಟ್‌ಮೆನ್, ಮೇಲ್ ಗಾರ್ಡ್‌ಗಳು ಮತ್ತು ಇತರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇಲಾಖೆಯು 98,083 ಉದ್ಯೋಗ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ರಾಷ್ಟ್ರದಾದ್ಯಂತ 23 ವೃತ್ತಗಳಲ್ಲಿ ಅಂಚೆ ಕಚೇರಿ … Continued

ನಾನು ಕ್ರೈಸ್ತ ಧರ್ಮದವಳು, ಧ್ವಜಾರೋಹಣ ಮಾಡುವುದಿಲ್ಲ: ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ

ಚೆನ್ನೈ: ಸ್ವಾತಂತ್ರ್ಯೋತ್ಸವದಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಧ್ವಜಾರೋಹಣ ಮಾಡಲು ಹಾಗೂ ಧ್ವಜಕ್ಕೆ ನಮಿಸಲು ನಿರಾಕರಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದು ಸ್ವಾತಂತ್ರ್ಯ ದಿನಾಚರಣೆಯಂದು ಈ ಘಟನೆ ನಡೆದಿದ್ದು, ಈಗ ವಿವಾದಕ್ಕೀಡಾಗಿದೆ. ಮುಖ್ಯಾಧ್ಯಾಪಕಿ ತಮಿಳ್‌ ಸೆಲ್ವಿ ಈ ವರ್ಷ ನಿವೃತ್ತಿ ಹೊಂದಲಿದ್ದು, ಅವರನ್ನು ಅಭಿನಂದಿಸುವ ಸಲುವಾಗಿ ಆಗಸ್ಟ್ 15 ರಂದು … Continued

ಚಿತ್ರೀಕರಣದ ವೇಳೆ ಖ್ಯಾತ ನಟ ನಾಸರ್‌ಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಹೈದರಾಬಾದ್: ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಜನಪ್ರಿಯ ಚಲನಚಿತ್ರ ನಟ ನಾಸರ್ ಅವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳು ಚಿತ್ರದ ಚಿತ್ರೀಕರಣವು ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಸುಹಾಸಿನಿ, ಮೆಹ್ರೀನ್ ಮತ್ತು ಶಿಯಾಜಿ ಶಿಂಧೆ ಅವರೊಂದಿಗೆ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟ ನಾಸಿರ್ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರಿಗೆ … Continued

ನಿತೀಶಕುಮಾರ್-ತೇಜಸ್ವಿ ಯಾದವ್ ಸಂಪುಟದಲ್ಲಿ 72%ರಷ್ಟು ಸಚಿವರ ಮೇಲಿದೆ ಅಪರಾಧ ಪ್ರಕರಣಗಳು : ವರದಿ

ನವದೆಹಲಿ: ಬಿಹಾರದಲ್ಲಿ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಶೇಕಡಾ 70ಕ್ಕೂ ಹೆಚ್ಚು ಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ, ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ. ಬಿಹಾರದಲ್ಲಿ ಇತ್ತೀಚಿನ ರಾಜಕೀಯ ಸ್ಥಿತ್ಯಂತರದ ನಂತರ, ಜೆಡಿಯು ಹಾಗೂ ಆರ್‌ಜೆಡಿ ಸೇರಿದಂತೆ ಏಳು ಪಕ್ಷಗಳ ಮಹಾಘಟಬಂಧನ (ಎಂಜಿಬಿ) ಜೊತೆಗಿನ … Continued