ಮುಂಬೈ: 20 ಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಜನರು ಸಾವು, 15 ಜನರಿಗೆ ಗಾಯ

ಮುಂಬೈ: ಮುಂಬೈನ ಭಾಟಿಯಾ ಆಸ್ಪತ್ರೆ ಸಮೀಪದ ಟಾರ್ಡಿಯೊ ಪ್ರದೇಶದಲ್ಲಿ ಶನಿವಾರ (ಜನವರಿ 22) ಬೆಳಿಗ್ಗೆ ಸಂಭವಿಸಿದ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಹಾಗೂ 15 ಜನರು ಗಾಯಗೊಂಡಿದ್ದಾರೆ. ಭಾಟಿಯಾ ಆಸ್ಪತ್ರೆ ಸಮೀಪ ಇರುವ 20 ಮಹಡಿಯ ಕಮಲಾ ಬಿಲ್ಡಿಂಗ್ ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು, 7 ಮಂದಿ ಮೃತಪಟ್ಟಿದ್ದಾರೆ … Continued

ಕೊಲೆ ಮಾಡಲು ಬಂದವರ ಕಣ್ಣಿಗೆ ಖಾರದ ಪುಡಿ ಎರಚಿ ಪತಿಯನ್ನು ಬಚಾವ್ ಮಾಡಿದ ಮಹಿಳೆ..!

ಹೈದರಾಬಾದ್: ಮಹಿಳೆಯೊಬ್ಬಳು ಪತಿ ಹತ್ಯೆಗೆ ಬಂದಿದ್ದ ನಾಲ್ವರು ದುಷ್ಕರ್ಮಿಗಳ ಕಣ್ಣಿಗೆ ಖಾರದ ಪುಡಿ ಎರಚಿ ತನ್ನ ಪತಿ ಉಳಿಸಿಕೊಂಡಿರುವ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ನಡೆದಿದೆ. ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್ ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ನಾಲ್ವರು ಮಂದಿ ದುಷ್ಕರ್ಮಿಗಳು ಆಟೊದಲ್ಲಿ ಬಂದಿದ್ದಾರೆ. ಇವರಲ್ಲಿ ಮೂವರು ವೇಮುಲಾ ಮನೆಗೆ … Continued

ಭಾರತದಲ್ಲಿ 3.37 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ಇದು ನಿನ್ನೆಗಿಂತ ಸ್ವಲ್ಪ ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 3,37,704 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ, ಹೊಸ ಕೋವಿಡ್ ಪ್ರಕರಣಗಳು ಸ್ವಲ್ಪ ಇಳಿಕೆಯನ್ನು ತೋರಿಸಿದೆ. ದೇಶದ ಓಮಿಕ್ರಾನ್ ಸಂಖ್ಯೆ 10,050 ಕ್ಕೆ ಏರಿದೆ – ಇದು ನಿನ್ನೆಯಿಂದ 3.69 ರಷ್ಟು ಹೆಚ್ಚಾಗಿದೆ. ಭಾರತದ ಸಕ್ರಿಯ ಪ್ರಕರಣ ಪ್ರಸ್ತುತ 21,13,365 5.43% ರಷ್ಟಿದ್ದರೆ, ಚೇತರಿಕೆ ದರವು ಶೇಕಡಾ 93.31 ರಷ್ಟಿದೆ. … Continued

ಸೂಪರ್‌ ಹೀರೋ….ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಮರಿಯನ್ನು ರಕ್ಷಿಸಿದ ನಾಯಿ..! ಹೃದಯಸ್ಪರ್ಶಿ ಘಟನೆ ವಿಡಿಯೊದಲ್ಲಿ ಸೆರೆ

ನಾಯಿಗಳು ಅದ್ಭುತ ಪ್ರೀತಿ, ದಯೆ ಹಾಗೂ ಬದ್ಧತೆಯುಳ್ಳ ಪ್ರಾಣಿ ಎಂದು ಹೇಳಬೇಕಾಗಿಲ್ಲ. ಮನುಷ್ಯರನ್ನು ಮರೆತುಬಿಡಿ, ಯಾರಾದರೂ ತೊಂದರೆಯಲ್ಲಿದ್ದರೆ ನಾಯಿಗಳು ಸಹಾಯ ಮಾಡುತ್ತವೆ. ಅಂತಹ ಘಟನೆಯೊಂದರ ಉದಾಹರಣೆಯನ್ನು ತೋರಿಸುವ ಹೃದಯಸ್ಪರ್ಶಿ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೊದಲ್ಲಿ ನಾಯಿಯೊಂದು ನದಿಯಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದೆ. ಮಾಲೀಕರು ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ಹೀರೊ … Continued

ಸಿಧು ಅವರನ್ನು ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ಹೆಸರಿಸಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದ ಪಂಜಾಬ್ ಸಿಎಂ ಚನ್ನಿ

ಚಂಡೀಗಢ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಮುಖ್ಯಮಂತ್ರಿಯಾಗಿ ಬಿಂಬಿಸಲು ತಮ್ಮ ಪಕ್ಷದ ನಾಯಕತ್ವ ನಿರ್ಧರಿಸಿದರೆ ನನಗೆ ಯಾವುದೇ ತೊಂದರೆಯಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಶುಕ್ರವಾರ ಹೇಳಿದ್ದಾರೆ. ಟೈಮ್ಸ್ ನೌ ಜೊತೆ ಮಾತನಾಡಿದ ಚರಣ್‌ಜಿತ್ ಸಿಂಗ್ ಚನ್ನಿ, “ನಾನು ಬಹಳ ಹಿಂದಿನಿಂದಲೂ ಕಾಂಗ್ರೆಸ್‌ನ … Continued

ನೇತಾಜಿ ಸುಭಾಷ್ ಚಂದ್ರ ಬೋಸರಿಗೆ ಸರ್ಕಾರದ ಗೌರವ – ಇಂಡಿಯಾ ಗೇಟ್‌ನಲ್ಲಿ ಭವ್ಯವಾದ ಗ್ರಾನೈಟ್ ಪ್ರತಿಮೆ ಸ್ಥಾಪನೆ- ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ನೇತಾಜಿಯವರ ಭವ್ಯ ಪ್ರತಿಮೆ ಪೂರ್ಣಗೊಳ್ಳುವವರೆಗೆ, ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್ ಬಳಿ ಸುಭಾಷ್ ಚಂದ್ರ ಬೋಸ್ ಅವರ ಹೊಲೊಗ್ರಾಮ್ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನೇತಾಜಿಯವರ … Continued

ಯೆಮೆನ್: ಜೈಲಿನ ಮೇಲೆ ಸೌದಿ ವೈಮಾನಿಕ ದಾಳಿ, 100ಕ್ಕೂ ಹೆಚ್ಚು ಕೈದಿಗಳ ಸಾವು

ಶುಕ್ರವಾರ ಸೌದಿ ನೇತೃತ್ವದ ಒಕ್ಕೂಟವು ಉತ್ತರ ಯೆಮೆನ್‌ನಲ್ಲಿರುವ ಜೈಲು ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ರೆಡ್‌ಕ್ರಾಸ್ ದೃಢಪಡಿಸಿದೆ. ಹಲವಾರು ವರ್ಷಗಳಿಂದ ಸೌದಿ ಬೆಂಬಲಿತ ಸರ್ಕಾರದ ವಿರುದ್ಧ ಯುದ್ಧ ನಡೆಸುತ್ತಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಭದ್ರಕೋಟೆಯಾದ ಉತ್ತರದ ನಗರ ಸಾದಾದಲ್ಲಿ ಈ … Continued

ಭಾರತದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಪಾಕಿಸ್ತಾನ ಮೂಲದ 35 ಯೂಟ್ಯೂಬ್ ಚಾನೆಲ್‌ಗಳು, 2 ವೆಬ್‌ಸೈಟ್‌ಗಳಿಗೆ ನಿರ್ಬಂಧ

ನವದೆಹಲಿ: ಭಾರತದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಪಾಕಿಸ್ತಾನ ಮೂಲದ ಒಟ್ಟು 35 ಯೂ ಟ್ಯೂಬ್ ಚಾನೆಲ್‌ಗಳು, ಎರಡು ವೆಬ್‌ಸೈಟ್‌ಗಳು ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಭಾರತದ ಸರ್ಕಾರ ನಿರ್ಬಂಧಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ  ತಿಳಿಸಿದೆ. ಶುಕ್ರವಾರ. ಸಚಿವಾಲಯವು ನಿರ್ಬಂಧಿಸಿದ ಯೂಟ್ಯೂಬ್ ಖಾತೆಗಳು ಒಟ್ಟು 1.20 ಕೋಟಿಗೂ ಹೆಚ್ಚು … Continued

ದತ್ತು ಮಗಳ ಮೇಲೆ ಅತ್ಯಾಚಾರದ ಆರೋಪ: ಪದ್ಮಶ್ರೀ ಪುರಸ್ಕೃತಗೆ ನ್ಯಾಯಾಂಗ ಬಂಧನ​​

ಉತ್ತರ ಲಖಿಂಪುರ (ಅಸ್ಸಾಂ): ಅಸ್ಸಾಂನ ಲಖಿಂಪುರ ಜಿಲ್ಲೆಯ ನ್ಯಾಯಾಲಯವು ಶುಕ್ರವಾರ ಖ್ಯಾತ ನವೋದ್ಯಮಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉದ್ಧಬ್‌ಕುಮಾರ್ ಭಾರಾಲಿ ತಾವು ದತ್ತು ತೆಗೆದುಕೊಂಡಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಗುವಾಹತಿ ಹೈಕೋರ್ಟ್ ರದ್ದುಗೊಳಿಸಿದ ಒಂದು ದಿನದ ನಂತರ, ಉತ್ತರ … Continued

ಗೋವಾ ಚುನಾವಣೆ: ಸ್ವತಂತ್ರ ಅಭ್ಯರ್ಥಿಯಾಗಿ ಪಣಜಿಯಿಂದ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಸ್ಪರ್ಧೆ..!

ಪಣಜಿ: ಗೋವಾ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಮನೋಹರ್ ಪರಿಕ್ಕರ್ ಎರಡು ದಶಕಗಳಿಂದ ಪಣಜಿಯಿಂದ ಸ್ಪರ್ಧಿಸಿದ್ದರು. ಅವರು ಪಣಜಿಯೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡರು ಮತ್ತು ನಾನು ಕೂಡ ಅದನ್ನು ಮಾಡಿದ್ದೇನೆ. ನಾನು ಮೌಲ್ಯಗಳಿಗಾಗಿ … Continued