ನೇರಪ್ರಸಾರದ ಟಿವಿ ಚರ್ಚೆ ವೇಳೆ ಪರಸ್ಪರ ಹೊಡೆದಾಡಿಕೊಂಡ ಪಾಕಿಸ್ತಾನದ ನಾಯಕರು | ವೀಕ್ಷಿಸಿ

ಇತ್ತೀಚೆಗೆ ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ, ಎದುರಾಳಿ ಪಕ್ಷಗಳ ಇಬ್ಬರು ಪ್ಯಾನೆಲಿಸ್ಟ್‌ಗಳ ನಡುವಿನ ಚರ್ಚೆಯು ಜಗಳಕ್ಕೆ ತಿರುಗಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಬೆಂಬಲಿಸುವ ವಕೀಲ ಶೇರ್ ಅಫ್ಜಲ್ ಮರ್ವಾತ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ – ನವಾಜ್ (ಪಿಎಂಎಲ್-ಎನ್) ಸೆನೆಟರ್ ಅಫ್ನಾನುಲ್ಲಾ ಖಾನ್ ಅವರು ಕಾರ್ಯಕ್ರಮದ ಚರ್ಚೆಯ ಸಮಯದಲ್ಲಿ ತಮ್ಮ … Continued

ಪಾಕಿಸ್ತಾನದ ಮಸೀದಿ ಬಳಿ ಬಾಂಬ್ ಸ್ಫೋಟ: 52  ಸಾವು, 130 ಮಂದಿಗೆ ಗಾಯ

ಕರಾಚಿ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಮಸೀದಿಯೊಂದರ ಬಳಿ ಶುಕ್ರವಾರ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಆಚರಣೆಗೆ ಸಮಾವೇಶಕ್ಕಾಗಿ ಜನರು ಸೇರುತ್ತಿದ್ದಾಗ ನಡೆದ ಆತ್ಮಹತ್ಯಾ ಸ್ಫೋಟದಲ್ಲಿ ಕನಿಷ್ಠಕನಿಷ್ಠ 52  ಜನರುಸಾವಿಗೀಡಾದ್ದಾರೆ ಮತ್ತು 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮಸ್ತುಂಗ್ ಜಿಲ್ಲೆಯ ಮದೀನಾ ಮಸೀದಿ ಬಳಿ ಸ್ಫೋಟ ಸಂಭವಿಸಿದೆ ಎಂದು … Continued

375 ವರ್ಷಗಳಿಂದ ಕಾಣೆಯಾಗಿದ್ದ ವಿಶ್ವದ 8ನೇ ‘ಖಂಡ’ ಪತ್ತೆ ಮಾಡಿದ ವಿಜ್ಞಾನಿಗಳು…!

ಸುಮಾರು 375 ವರ್ಷಗಳ ನಂತರ, ಭೂವಿಜ್ಞಾನಿಗಳು ಸಾಮಾನ್ಯ ದೃಷ್ಟಿಯಲ್ಲಿ ಅಡಗಿರುವ (ಕಾಣಿಸದ) ಪ್ರಾಚೀನ ಗೊಂಡ್ವಾನಾ ಭೂಮಿಯ ಭಾಗವಾಗಿದ್ದ ಚಿಕ್ಕದಾದ ಖಂಡವನ್ನು ಅಂತಿಮವಾಗಿ ಪತ್ತೆ ಮಾಡಿದ್ದಾರೆ. ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡವು ಹೊಸದಾಗಿ ಸಂಸ್ಕರಿಸಿದ ಝೀಲ್ಯಾಂಡಿಯಾ ಅಥವಾ ಟೆ ರಿಯು-ಎ-ಮೌಯಿ ನಕ್ಷೆಯನ್ನು ರಚಿಸಿದೆ ಎಂದು Phys.org ವರದಿ ಮಾಡಿದೆ. ಸಾಗರ ತಳದಿಂದ ಸಂಗ್ರಹಿಸಿದ ಡ್ರೆಡ್ಜ್ ಮಾಡಿದ … Continued

ಇದೆಂಥ ಐಫೋನ್‌ ಕ್ರೇಜ್‌..: ಮಾಸ್ಕ್‌ ಧರಿಸಿ ಆಪಲ್ ಸ್ಟೋರ್ ಗೆ ನುಗ್ಗಿ ಐಫೋನ್‌-ಐಪ್ಯಾಡ್‌ಗಳನ್ನು ಲೂಟಿ ಹೊಡೆದು ನೂರಾರು ಟೀನೇಜರ್ಸ್‌ | ವೀಕ್ಷಿಸಿ

ಐಫೋನ್ ಉನ್ಮಾದದ ಕಥೆಗಳಿಗೆ ಬಂದಾಗ, ಹದಿಹರೆಯದವರು ಎಂದು ನಂಬಲಾದ ಮಾಸ್ಕ್‌ ಹಾಕಿದ ವ್ಯಕ್ತಿಗಳ ಹಲವಾರು ಗುಂಪುಗಳು ಐಫೋನ್ ಗಳಿಗಾಗಿ ಫಿಲಡೆಲ್ಫಿಯಾದ ಸಿಟಿ ಸೆಂಟರ್‌ನಲ್ಲಿರುವ ವಿವಿಧ ಮಳಿಗೆಗಳನ್ನು ಲೂಟಿ ಮಾಡಿದವು. NBC10 ಫಿಲಡೆಲ್ಫಿಯಾ ಪ್ರಕಾರ, ಮಂಗಳವಾರ, ಸೆಪ್ಟೆಂಬರ್ 26, ರಾತ್ರಿಯ ನಂತರ ನೂರಾರು ಹದಿಹರೆಯದವರಿಂದ ಅಂಗಡಿಗಳನ್ನು ಲೂಟಿ ಮಾಡುವುದನ್ನು ಚಿತ್ರಿಸುವ ಹಲವಾರು ವೀಡಿಯೊಗಳು ನಗರದಾದ್ಯಂತ ಕಾಣಿಸಿಕೊಂಡಿವೆ. ಮಂಗಳವಾರ … Continued

ಡಜನ್ ಗಟ್ಟಲೆ ನಾಯಿಗಳ ಮೇಲೆ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡ ಖ್ಯಾತ ಮೊಸಳೆ ತಜ್ಞ

ಸಿಡ್ನಿ: ಬ್ರಿಟನ್‌ ಮೂಲದ ಖ್ಯಾತ ಮೊಸಳೆ ತಜ್ಞ ಆಡಮ್ ಬ್ರಿಟನ್ ಎಂಬಾತ ನಾಯಿಗಳ ಮೇಲೆ ಅತ್ಯಾಚಾರ ಎಸಗಿ ಅವುಗಳನ್ನು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಆಸ್ಟ್ರೇಲಿಯಾದಲ್ಲಿ 2022ರ ಏಪ್ರಿಲ್‌ನಲ್ಲಿ ಬಂಧಿತನಾಗಿದ್ದ ಬ್ರಿಟನ್, ತನ್ನ ವಿರುದ್ಧದ 60 ಆರೋಪಗಳಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಪ್ರಾಣಿಗಳ ನಿಂದನೆಗಾಗಿ ಏಪ್ರಿಲ್ 2022 ರಲ್ಲಿ ಬಂಧಿತನಾಗಿದ್ದ … Continued

ಇರಾಕ್‌ನ ಮದುವೆ ಹಾಲ್‌ನಲ್ಲಿ ಭೀಕರ ಅಗ್ನಿ ಅವಘಡ : 114 ಮಂದಿ ಸಾವು

ಮೋಸುಲ್: ಇರಾಕ್‌ ಉತ್ತರ ಭಾಗದಲ್ಲಿ ಕ್ರೈಸ್ತ ಧರ್ಮೀಯರ ಮದುವೆ ಸಮಾರಂಭದಲ್ಲಿ ಉಂಟಾದ ಅಗ್ನಿ ಅನಾಹುತದಲ್ಲಿ ಕನಿಷ್ಠ 114 ಮಂದಿ ಮೃತಪಟ್ಟಿದ್ದಾರೆ ಹಾಗೂ 150 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾಕಿನ ನಿನೆವಾಹ್ ಪ್ರಾಂತ್ಯದ ಹಂದಾನಿಯಾ ಪ್ರದೇಶದಲ್ಲಿನ ಸಭಾಂಗಣದಲ್ಲಿ ದುರ್ಘಟನೆ ಸಂಭವಿಸಿದೆ. ಮದುವೆ ಹಾಲ್‌ನಿಂದ ಭಾರಿ ದಟ್ಟನೆಯ … Continued

ನಾಜಿ ಹೋರಾಟಗಾರನ ಗೌರವಿಸಿದ್ದಕ್ಕೆ ವ್ಯಾಪಕ ಟೀಕೆ ನಂತರ ರಾಜೀನಾಮೆ ನೀಡಿದ ಕೆನಡಾದ ಹೌಸ್ ಆಫ್ ಕಾಮನ್ಸ್‌ ಸ್ಪೀಕರ್

ಒಟ್ಟಾವಾ: ಕೆನಡಾದ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್‌ ಸ್ಥಾನಕ್ಕೆ ಆಂಥೋನಿ ರೋಟಾ ಅವರು ರಾಜೀನಾಮೆ ನೀಡಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿ ಸೈನಿಕ ಘಟಕದಲ್ಲಿ ಹೋರಾಡಿದ ವ್ಯಕ್ತಿಗೆ ಹೌಸ್ ಆಫ್ ಕಾಮನ್ಸ್‌ ಗೌರವ ನೀಡಿದ್ದಕ್ಕೆ ವ್ಯಾಪಕವಾದ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ವಿಶ್ವದ ಎರಡನೇ ಮಹಾಯುದ್ಧ 2 ರ ಸಮಯದಲ್ಲಿ ನಾಜಿ ಘಟಕದಲ್ಲಿ … Continued

ಶೀಘ್ರವೇ ಅಪ್ಪಳಿಸಬಹುದಂತೆ ಕೋವಿಡ್‌ಗಿಂತ ಭೀಕರ ಮತ್ತೊಂದು ಸಾಂಕ್ರಾಮಿಕ ʼರೋಗ Xʼ ; ಇದು 5 ಕೋಟಿ ಜನರನ್ನು ಕೊಲ್ಲಬಹುದು ಎಂದು ತಜ್ಞರ ಎಚ್ಚರಿಕೆ…!

ಲಂಡನ್‌ : ಮಾರಣಾಂತಿಕ ಕೋವಿಡ್ -19 ಕ್ಕಿಂತ ಮಾರಕವಾದ ಮತ್ತೊಂದು ಸಾಂಕ್ರಾಮಿಕ ರೋಗ ಬರಬಹುದು ಎಂದು ಯುಕೆ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಡಿಸೀಸ್-X (Disease X) ಎಂಬ ಹೆಸರಿಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೇನಿಂದ ಡಿಸೆಂಬರ್ 2020 ರವರೆಗೆ ಯುಕೆ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾಗಿ ಸೇವೆ … Continued

ಕೆನಡಾದಲ್ಲಿ ಭಯೋತ್ಪಾದಕರು ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ: ಪ್ರಧಾನಿ ಟ್ರುಡೊ ವಿರುದ್ಧ ಶ್ರೀಲಂಕಾ ವಿದೇಶಾಂಗ ಸಚಿವರ ವಾಗ್ದಾಳಿ

ನ್ಯೂಯಾರ್ಕ್‌ : ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ-ಕೆನಡಾ ರಾಜತಾಂತ್ರಿಕ ವಿವಾದಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಕೆನಡಾದಲ್ಲಿ ಭಯೋತ್ಪಾದಕರು ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ ಮತ್ತು ಆ ದೇಶದ ಪ್ರಧಾನಿ ಜಸ್ಟಿನ್ ಟ್ರುಡೊ ಯಾವುದೇ ಪುರಾವೆಗಳಿಲ್ಲದೆ ಅತಿರೇಕದ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. … Continued

ತೀವ್ರ ಮುಜುಗರವಾಗಿದೆ ‘: ಕೆನಡಾದ ಸಂಸತ್ತಿನಲ್ಲಿ ನಾಝಿ ಹೋರಾಟಗಾರನ ಗೌರವಿಸಿದ್ದಕ್ಕೆ ಪ್ರಧಾನಿ ಟ್ರೂಡೊ ಹೇಳಿಕೆ

ಒಟ್ಟಾವಾ : ಕೆನಡಾದ ಸಂಸತ್ತಿನಲ್ಲಿ ಉಕ್ರೇನಿಯನ್ ನಾಜಿ ಹೋರಾಟಗಾರರನ್ನು ಗೌರವಿಸಿದ ನಂತರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮೊದಲ ಬಾರಿಗೆ ಮಾತನಾಡಿದ್ದಾರೆ ಮತ್ತು ಈ ಘಟನೆಯಿಂದ “ತೀವ್ರ ಮುಜುಗರ”ವಾಗಿದೆ ಎಂದು ಹೇಳಿದ್ದಾರೆ. “ಇದು ಕೆನಡಾದ ಸಂಸತ್ತಿಗೆ ಮತ್ತು ಎಲ್ಲಾ ಕೆನಡಿಯನ್ನರಿಗೆ ತೀವ್ರ ಮುಜುಗರವನ್ನುಂಟು ಮಾಡುತ್ತದೆ” ಎಂದು ಕೆನಡಾದ ಪ್ರಧಾನ ಮಂತ್ರಿ ಹೇಳಿದರು. ಈ ವಾರ ಕೆನಡಾಕ್ಕೆ … Continued