ಜೈವಿಕ ಶಸ್ತ್ರಾಸ್ತ್ರದಿಂದ ನೈಸರ್ಗಿಕ ವಿಕೋಪಗಳ ವರೆಗೆ..: ಬಾಬಾ ವಂಗಾ 2024ರ ಭಯಾನಕ ಭವಿಷ್ಯವಾಣಿಗಳು ನಿಜವಾಗುತ್ತಿವೆಯೇ…?

ಬಾಬಾ ವಂಗಾ ಎಂಬ ಕಣ್ಣು ಕಾಣದ ಬಲ್ಗೇರಿಯಾದ ಅತೀಂದ್ರಿಯ ಮಹಿಳೆ ತನ್ನ ಜೀವಿತಾವಧಿಯಲ್ಲಿ ಅನೇಕ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. ಅವರ ಹೆಸರು ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ , ಆದರೆ ಜನರು ಅವರನ್ನು ಬಾಬಾ ವಂಗಾ ಎಂದೇ ಕರೆಯುತ್ತಿದ್ದರು. ಅವರು ಸುಮಾರು 26 ವರ್ಷಗಳ ಹಿಂದೆ 84 ನೇ ವಯಸ್ಸಿನಲ್ಲಿ ನಿಧನರಾದರು, ಆದರೆ ಅವರ ಭವಿಷ್ಯವಾಣಿಗಳು … Continued

ರಷ್ಯಾದ ವಿಪಕ್ಷದ ನಾಯಕ-ಅಧ್ಯಕ್ಷ ಪುತಿನ್ ಕಟು ಟೀಕಾಕಾರ ಅಲೆಕ್ಸಿ ನವಲ್ನಿ ಆರ್ಕ್ಟಿಕ್ ಜೈಲಿನಲ್ಲಿ ನಿಧನ

ಮಾಸ್ಕೋ: 19 ವರ್ಷಗಳ ಅವಧಿಗೆ ಜೈಲುವಾಸ ಅನುಭವಿಸುತ್ತಿದ್ದ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ಆರ್ಕ್ಟಿಕ್ ಜೈಲು ಕಾಲೋನಿಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ ಎಂದು ರಷ್ಯಾದ ಫೆಡರಲ್ ಪೆನಿಟೆನ್ಷಿಯರಿ ಸರ್ವಿಸ್‌ ತಿಳಿಸಿದೆ. ನವಾಲ್ನಿ ಅವರು ವಾಕಿಂಗ್ ಹೋದ ನಂತರ ಪ್ರಜ್ಞೆ ಕಳೆದುಕೊಂಡರು ಮತ್ತು ವೈದ್ಯರಿಂದ ಅವರನ್ನು ಪುನಶ್ಚೇತನಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಜೈಲು ಸರ್ವಿಸ್‌ ತಿಳಿಸಿದೆ. … Continued

ಕ್ಯಾಲಿಫೋರ್ನಿಯಾದ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ ಭಾರತೀಯ ಕುಟುಂಬದ ನಾಲ್ವರು ಶವವಾಗಿ ಪತ್ತೆ : ದಂಪತಿಗೆ ಗುಂಡಿನ ಗಾಯ

ಭಾರತೀಯ ಮೂಲದ ಕುಟುಂಬದ ನಾಲ್ವರು ಅಮೆರಿಕದ ಸ್ಯಾನ್ ಮಾಟಿಯೊ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ, ಪೊಲೀಸರು ಇದನ್ನು ಕೊಲೆ-ಆತ್ಮಹತ್ಯೆಯ ಪ್ರಕರಣ ಎಂದು ತನಿಖೆ ಮಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಫಾಕ್ಸ್ ಕೆಟಿವಿಯು ವರದಿಯ ಪ್ರಕಾರ, ಮೆಟಾ ಕಂಪನಿಯ ಮಾಜಿ ಇಂಜಿನಿಯರ್ ಆನಂದ ಸುಜಿತ ಹೆನ್ರಿ (42) ತನ್ನ 4 ವರ್ಷದ ಅವಳಿ ಗಂಡು ಮಕ್ಕಳನ್ನು … Continued

ವೀಡಿಯೊ..| ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌(AI) ಸೃಷ್ಟಿಸಿದ ಹೊಲೊಗ್ರಾಮ್‌ ಅನ್ನು ಮದುವೆಯಾಗ್ತಿದ್ದಾರೆ ಈ ಸ್ಪ್ಯಾನಿಷ್ ಕಲಾವಿದೆ…!!

ಸ್ಪೇನ್ ಮೂಲದ ಪ್ರದರ್ಶನ ಕಲಾವಿದೆಯಾದ ಅಲಿಸಿಯಾ ಫ್ರಾಮಿಸ್ ಎಂಬವರು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ರಚಿತ ಹೊಲೊಗ್ರಾಮ್  (ಲೇಸರ್ ಅಥವಾ ಇತರ ಬೆಳಕಿನ ಕಿರಣಗಳಿಂದ ರೂಪುಗೊಂಡ ಮೂರು ಆಯಾಮದ ಚಿತ್ರ) ಅನ್ನು ಮದುವೆಯಾಗುತ್ತಿದ್ದಾರೆ, ಎಲ್ಲಾ ವೈಜ್ಞಾನಿಕ-ಕಾಲ್ಪನಿಕ ಡಿಸ್ಟೋಪಿಯನ್ ಚಲನಚಿತ್ರಗಳನ್ನು ವಾಸ್ತವವಾಗಿ ಪರಿವರ್ತಿಸುತ್ತಿದ್ದಾರೆ. ಫ್ರಾಮಿಸ್ ಅವರ ಭಾವಿ ಪತಿ ಹೊಲೊಗ್ರಾಫಿಕ್ ತಂತ್ರಜ್ಞಾನದಿಂದ ರಚಿತವಾದ ಡಿಜಿಟಲ್ ಘಟಕವಾಗಿದೆ. ಫ್ರಾಮಿಸ್ ಅವರು … Continued

ವೀಡಿಯೊ..| ಫ್ಲೋರಿಡಾದ ಹೆದ್ದಾರಿಯಲ್ಲಿ ಜೆಟ್‌ ವಿಮಾನ ಅಪಘಾತಕ್ಕೀಡಾದ ಕ್ಷಣವನ್ನು ನಿಖರವಾಗಿ ಸೆರೆ ಹಿಡಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ | ವೀಕ್ಷಿಸಿ

ಫೆಬ್ರವರಿ 10 ರಂದು ಫ್ಲೋರಿಡಾದ ನೇಪಲ್ಸ್ ಬಳಿ ಜನನಿಬಿಡ ಹೆದ್ದಾರಿಯಲ್ಲಿ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ಅಪಘಾತಕ್ಕೀಡಾದ ನಿಖರವಾದ ಕ್ಷಣವನ್ನು ತೋರಿಸುವ ಭಯಾನಕ ವೀಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕಳೆದ ಶುಕ್ರವಾರ ನೈಋತ್ಯ ಫ್ಲೋರಿಡಾದಲ್ಲಿ ಇಂಟರ್‌ಸ್ಟೇಟ್ 75 ರಲ್ಲಿ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ಇಬ್ಬರು ಸಾವಿಗೀಡಾದ ನಾಟಕೀಯ ಕ್ಷಣಗಳನ್ನು ಡ್ಯಾಶ್‌ಬೋರ್ಡ್ ಕ್ಯಾಮೆರಾ ಸೆರೆ ಹಿಡಿದಿದೆ. … Continued

ಪಾಕಿಸ್ತಾನದಲ್ಲಿ ಹೊಸ ಸರ್ಕಾರ ರಚನೆಗೆ ನವಾಜ್ ಷರೀಫ್, ಬಿಲಾವಲ್ ಭುಟ್ಟೋ ಪಕ್ಷಗಳ ಒಪ್ಪಿಗೆ

ಇಸ್ಲಾಮಾಬಾದ್‌ : ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಹೊರತು ಪಡಿಸಿ ಪಾಕಿಸ್ತಾನದ ಪ್ರಮುಖ ಪಕ್ಷಗಳು ಮಂಗಳವಾರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಪ್ರಯತ್ನಿಸುವುದಾಗಿ ಘೋಷಿಸಿತು ಹಾಗೂ ರಾಜಕೀಯ ಅನಿಶ್ಚಿತತೆಯ ಬಗ್ಗೆ ಬಗ್ಗೆ ಇರುವ ಊಹಾಪೋಹಗಳಿಗೆ ಅಂತ್ಯ ಹಾಡಿತು. ಪ್ರಧಾನ ಮಂತ್ರಿ ಯಾರು ಎಂದು ಸ್ಪಷ್ಟವಾಗಿ ಘೋಷಣೆಯಾಗಿಲ್ಲವಾದರೂ, ಪಿಎಂಎಲ್-ಎನ್ ಅಧ್ಯಕ್ಷ … Continued

ವೀಡಿಯೊ…| ವೇಗವಾಗಿ ಓಡುವುದರಲ್ಲಿ ತನ್ನದೇ ಹಿಂದಿನ ದಾಖಲೆ ಮುರಿದ ಚೀನಾದ ʼಮ್ಯಾಗ್ನೆಟಿಕ್ ರೈಲುʼ : ಇದರ ವೇಗ ವಿಮಾನದ ವೇಗಕ್ಕೆ ಸಮವಂತೆ…!

ನವದೆಹಲಿ: ತನ್ನ ಹೊಸ ಮ್ಯಾಗ್ನೆಟಿಕ್ ಲೆವಿಟೇಟೆಡ್ (ಹೆಚ್ಚಿನ ವೇಗದ ರೈಲು ತಂತ್ರಜ್ಞಾನ) ರೈಲು ಕಡಿಮೆ ನಿರ್ವಾತ ಟ್ಯೂಬ್‌ನಲ್ಲಿ ನಡೆದ ಪರೀಕ್ಷೆಯ ಸಮಯದಲ್ಲಿ ಗಂಟೆಗೆ 623 ಕಿಲೋಮೀಟರ್ (ಗಂಟೆಗೆ 387 ಮೈಲುಗಳು) ವೇಗದಲ್ಲಿ ಓಡುವ ಮೂಲಕ ತನ್ನ ಹಿಂದಿನ ದಾಖಲೆಯನ್ನು ಮುರಿದಿದೆ ಎಂದು ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಷನ್ (CASIC) ಸಂಸ್ಥೆ ಹೇಳಿಕೊಂಡಿದೆ. ಸೌತ್ … Continued

ವೀಡಿಯೊ..! ‘ಬಾಲ್ ಆಫ್ ದಿ ಸೆಂಚುರಿ’ ; ಚೆಂಡಿನ ಸ್ಪಿನ್ನಿಗೆ ಬ್ಯಾಟರ್ ಕಕ್ಕಾಬಿಕ್ಕಿ : ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಕುವೈತ್‌ನ ಕೆಸಿಸಿ (KCC) T20 ಚಾಲೆಂಜರ್ಸ್ ಕಪ್ 2024ರಲ್ಲಿ ಕುವೈತ್ ನ್ಯಾಷನಲ್ಸ್ ಮತ್ತು ಎಸ್‌ಬಿಎಸ್‌ ಸಿಸಿ (SBS CC) ನಡುವಿನ ಪಂದ್ಯದ ಸಮಯದಲ್ಲಿ ಸ್ಪಿನ್ನರ್‌ ಎಸೆದ ಎಸೆತವು ಅದ್ಭುತ ಎಸೆತವಾಗಿ ಪರಿಣಮಿಸಿದ್ದು, ಬ್ಯಾಟರ್‌ ಕಕ್ಕಾಬಿಕ್ಕಿಯಾಗಿದ್ದಾನೆ. ಈ ಎಸೆತ ವೈರಲ್ ಆಗಿದ್ದು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಹೊಸ ‘ಶತಮಾನದ ಚೆಂಡು’ ಎಂದು ಬಣ್ಣಿಸಿದ್ದಾರೆ. ಬೌಲರ್‌ … Continued

ವೀಡಿಯೊ..| ಆಘಾತಕಾರಿ ಘಟನೆ ; ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವು

ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಇಂಡೋನೇಷ್ಯಾದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಕ್ರೀಡಾಂಗಣದಲ್ಲೇ ಮೃತಪಟ್ಟಿದ್ದಾನೆ. ಇಂಡೋನೇಷ್ಯಾದ 2 FLO FC ಬಂಡಂಗ್ ಮತ್ತು FBI ಸುಬಾಂಗ್ ನಡುವಿನ ಫುಟ್ಬಾಲ್ ಪಂದ್ಯದ … Continued

39ನೇ ವರ್ಷಕ್ಕೆ 19 ಮಕ್ಕಳಿಗೆ ಜನ್ಮ ನೀಡಿದ ಈ ಮಹಾತಾಯಿ…! ಈಗ 20ನೇ ಮಗುವಿಗೆ ಗರ್ಭಿಣಿ ; ಈ ಮಕ್ಕಳನ್ನು ಸಾಕುವುದು ಸರ್ಕಾರವಂತೆ..!!

19 ಮಕ್ಕಳಿಗೆ ತಾಯಿಯಾಗಿರುವ 39 ವರ್ಷದ ಕೊಲಂಬಿಯಾದ ಮಹಿಳೆ ತನ್ನ 20 ನೇ ಮಗುವನ್ನು ಸ್ವಾಗತಿಸಲು ತಯಾರಿ ನಡೆಸುತ್ತಿದ್ದಾರೆ. ಇತ್ತೀಚಿನ ಮಾಧ್ಯಮ ಸಂದರ್ಶನವೊಂದರಲ್ಲಿ, ಮಾರ್ಥಾ ಎಂಬ ಮಹಿಳೆ ತನ್ನ ಕುಟುಂಬವನ್ನು ಇನ್ನೂ ವಿಸ್ತಾರವಾಗಬಕು ಎಂದು ತನ್ನ ಇಚ್ಛೆ ವ್ಯಕ್ತಪಡಿಸಿದ್ದಾಳೆ. ಅವಳು ತಾಯ್ತನ ಲಾಭದಾಯಕ ಉದ್ಯಮವಾಗಿ ನೋಡುತ್ತಾಳೆ. ಕೊಲಂಬಿಯಾದ ಮೆಡೆಲಿನ್‌ನ ನಿವಾಸಿ ಮಾರ್ಥಾ, ತನ್ನ ಪ್ರತಿಯೊಂದು ಮಕ್ಕಳಿಗೆ … Continued