ಇಂದು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಬಹುಮಾನ ವಿತರಣೆ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಡಿ.ಆರ್.ಹೆಚ್ ಸಭಾಭವನದಲ್ಲಿ ನವೆಂಬರ್‌ ೧೨ರಂದು ಬೆಳಿಗ್ಗೆ ೧೦.೩೦ ಕ್ಕೆ ಧಾರವಾಡ ಶಹರ ಅಟೋ ಚಾಲಕರ/ಮಾಲಿಕರ ಸಂಘ (ರಿ) ಹಾಗೂ ಜನತಾ ಶಿಕ್ಷಣ ಸಮಿತಿ, ವಿದ್ಯಾಗಿರಿ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ. ಜೆ.ಎಸ್.ಎಸ್.ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ … Continued

ಎಲ್‌ಕೆಜಿ -ಯುಕೆಜಿ ಮಕ್ಕಳನ್ನು ಆರತಿ ಮಾಡಿ ಸಿಹಿ ಹಂಚುವ ಮೂಲಕ ಸ್ವಾಗತ

ಧಾರವಾಡ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳನ್ನು ಆರತಿ ಮಾಡಿ, ಸಿಹಿ ಹಂಚುವ ಮೂಲಕ ಸ್ವಾಗತಿಸಲಾಯಿತು. ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಹಾಗೂ ಪ್ರಾಚಾರ್ಯೆ ವಿದ್ಯಾ ಕೊಲ್ಹಾಪುರೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕನ್ನಡ ಕವಿಗಳ ಕಾವ್ಯ ಕೃತಿಗಳನ್ನು ಓದಿದರೆ ಬದುಕಿಗೆ ಹೊಸ ಅರ್ಥ

ಧಾರವಾಡ : ಕರ್ನಾಟಕ ರಾಜ್ಯೋತ್ಸವವನ್ನು ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಮತ್ತು ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ‘ಐಕ್ಯೂಎಸಿ’ ಮತ್ತು ಕರ್ನಾಟಕ ಸಂಘದ ಸಹಯೋಗದೊಂದಿಗೆ ಜೆ.ಎಸ್.ಎಸ್. ಡಿ.ಆರ್.ಎಚ್. ಸಭಾಭವನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟಕರಾದ ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತಪ್ರಸಾದ … Continued

ಉಪನ್ಯಾಸಕರ ಪಾಠವು ಪ್ರೇರಣೆಯಾದಾಗ ಮಾತ್ರ ವಿದ್ಯಾಥಿಗಳಲ್ಲಿ ಜ್ಞಾನದ ಮಟ್ಟ ಹೆಚ್ಚಿಸಲು ಸಾಧ್ಯ; ಪ್ರೊ..ನಿಟ್ಟೂರ್

ಕುಮಟಾ; ವಿಷಯಗಳ ಆಳ ಜ್ಞಾನದೊಂದಿಗೆ ಕಲಾತ್ಮಕ ಬೋಧನೆಯಿಂದ ಉಪನ್ಯಾಸಕರು ಪಾಠಮಾಡಬೇಕು .ಕಲಿಸುವಿಕೆಯು ಆಕರ್ಷಕವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಇದ್ದಾಗ ಫಲಿತಾಂಶ ಗುಣಮಟ್ಟವು ಹೆಚ್ಚುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಪ್ರೊ..ಹನುಮಂತಪ್ಪ ನಿಟ್ಟೂರ್ ಹೇಳಿದರು. ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ಲೆಕ್ಕ ಶಾಸ್ತ್ರದ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, … Continued

ಜೆಎಸ್‌ಎಸ್‌ ಅಂಗಸ್ಥೆಗಳ 28 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಡಾ.ವೀರೇಂದ್ರ ಹೆಗ್ಗಡೆ ಸನ್ಮಾನ

ಧಾರವಾಡ: ಜೆ.ಎಸ್.ಎಸ್ ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಸಂಸ್ಥೆ, ಇಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ, ಉತ್ತಮ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಲಾಗುತ್ತದೆ ಆದ್ದರಿಂದ ಇಲ್ಲಿ ಪ್ರತಿ ವಿದ್ಯಾರ್ಥಿಯ ಭವಿಷ್ಯ ಉಜ್ವಲಾವಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜೆ.ಎಸ್.ಎಸ್ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಜೆ.ಎಸ್.ಎಸ್ ಎಂಬಿಎ ಸಭಾಭವನದಲ್ಲಿ ಜೆ.ಎಸ್.ಎಸ್ … Continued

ಯಾವುದೇ ಕಾರಣಕ್ಕೂ ಕಣ್ಣಿನ ನಿರ್ಲಕ್ಷ್ಯ ಮಾಡಬೇಡಿ: ಡಾ. ಕಾತ್ಯಾಯಿನಿ

ಧಾರವಾಡ: ಕಣ್ಣು ಮಾನವನ ದೇಹದ ಅತಿ ಮುಖ್ಯ ಅಂಗ, ಪ್ರತಿ ದಿನ ನಮ್ಮ ಕಣ್ಣು ೨೫೦೦೦ ಬಾರಿ ಮಿಟುಕಿಸುತ್ತದೆ. ಕಣ್ಣಿನಿಂದಲೇ ನಾವು ಪ್ರಪಂಚದ ಆಗುಹೋಗುಗಳನ್ನು ನೋಡುತ್ತೇವೆ. ಕಣ್ಣಿಗೆ ಏನಾದರೂ ಸಮಸ್ಯೆ ಆದಲ್ಲಿ ನುರಿತ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಇಲ್ಲವಾದಲ್ಲಿ ಮುಂದೆ ಅಂಧಕಾರದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬರಬಹುದು ಎಂದು ಡಾ.ಕಾತ್ಯಾಯಿನಿ ಹೇಳಿದರು. ಜೆ.ಎಸ್.ಎಸ್ ಶ್ರೀ … Continued

ಕೊಡ್ಲಗದ್ದೆ: ಪೌಷ್ಟಿಕ ಆಹಾರ ಮೇಳ

ಅಂಕೋಲಾ: ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಗ್ರಾಮದ ಗ್ರಾಮ ಅರಣ್ಯ ಸಮಿತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೊಡ್ಲಗದ್ದೆ ಜ್ಞಾನೋದಯ ಜ್ಞಾನ ವಿಕಾಸ ಸಂಘದವರಿಂದ ಪೌಷ್ಟಿಕ ಆಹಾರ ಮೇಳ ಸೋಮವಾರ (ಅಕ್ಟೋಬರ್‌ 18) ನಡೆಯಿತು. ಸುಂಕಸಾಳದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರಗಳ ಕುರಿತು ಮಾಹಿತಿ … Continued

ಜೆಎಸ್ಎಸ್ ನೂತನ ಆಡಳಿತ ಮಂಡಳಿಯ ೪೮ ವರ್ಷಗಳ ಸಾರ್ಥಕ-ಪ್ರಾಮಾಣಿಕ ಸೇವೆಯಿಂದ ಸಂಸ್ಥೆಈಗ ಹೆಮ್ಮರ: ಡಾ. ನ. ವಜ್ರಕುಮಾರ

ಧಾರವಾಡ: ಉತ್ತರ ಕರ್ನಾಟಕದ ಶಿಕ್ಷಣದ ಹೆಬ್ಬಾಗಿಲಾಗಿರುವ ಧಾರವಾಡಕ್ಕೆ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜನತಾ ಶಿಕ್ಷಣ ಸಮಿತಿಯ ಸಾರಥ್ಯವನ್ನು ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು. ಅವರು ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ೪೮ ವರ್ಷಗಳನ್ನು ಪೂರೈಸಿ ೪೯ನೇ ವರ್ಷಕ್ಕೆ ಕಾಲಿಡುತ್ತಿರುವ … Continued

ಹಿರಿಯ ರಾಜಕಾರಣಿ ಡಾ.ಎಂ.ಪಿ.ಕರ್ಕಿ ನಿಧನ: ಜನತೆ ಕಂಬನಿ

ಕುಮಟಾ;ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಸಜ್ಜನ ರಾಜಕಾರಣಿ, ಶಿಕ್ಷಣ ಪ್ರೇಮಿ, ಖ್ಯಾತ ವೈದ್ಯರಾಗಿದ್ದ ಹೊನ್ನಾವರದ ಕರ್ಕಿಯ ಡಾ.ಎಂ.ಪಿ.ಕರ್ಕಿ(೮೭) ಸೋಮವಾರ ಸಂಜೆ ನಿಧನರಾದ ಸುದ್ದಿ ತಿಳಿಯುತ್ತಿರುವಂತೆ ಜನರು ಕಣ್ಣೀರು ಮಿಡಿದರು. ಜನಸಂಘದ ಮೂಲಕ ರಾಜಕೀಯಕ್ಕೆ ಬಂದ ಡಾ.ಎಂ.ಪಿ.ಕರ್ಕಿ ನಂತರ ಬಿಜೆಪಿಯಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ೧೯೮೩ ಮತ್ತು ೧೯೯೪ ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನೋಪಯೋಗಿ ಕಾರ್ಯದ … Continued

ಜೈನ್ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದ ಅಧ್ಯಕ್ಷರಾಗಿ ಭವರಲಾಲ್‌ ಜೈನ್‌ ಸತತ 3ನೇ ಬಾರಿಗೆ ಆಯ್ಕೆ

ಹುಬ್ಬಳ್ಳಿ: ಘಂಟಿಕೇರಿಯ ಶ್ರೀ ಜೈನ್ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಳದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಭವರಲಾಲ್‌ ಸಿ.ಜೈನ್‌ ಅವರು ಆಯ್ಕೆಯಾಗಿದ್ದಾರೆ. ಅವರನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಮಹೇಂದ್ರ.ಪಿ. ಪಾಲ್ಗೋತಾ, ಮುಖ್ಯ ಕಾರ್ಯದರ್ಶಿಯಾಗಿ ಭರತ್ ಭಂಡಾರಿ ಹಾಗೂ ಖಜಾಂಚಿಯಾಗಿ ಪೂರನ್‌ ನಹತ ಆಯ್ಕೆಯಾಗಿದ್ದಾರೆ. ಶ್ರೀ ಜೈನ್ ರಾಜಸ್ಥಾನಿ … Continued