ಹೊನ್ನಾವರ : ಟಿಪ್ಪರ್ ಹಾಯ್ದು ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಹೊನ್ನಾವರ : ಟಿಪ್ಪರ್ ಹಾಯಿಸಿ ವ್ಯಕ್ತಿಯೊಬ್ಬನನ್ನು ಸಾಯಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೆಅಂಗಡಿಯ ಜನತಾ ಕಾಲೋನಿಯ ಬಳಿ ಮಂಗಳವಾರ ರಾತ್ರಿ ನಡೆದಿದೆ. ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರೆಅಂಗಡಿಯ ಓಲ್ವಿನ್ ರವಿ ಲೋಬೋ ಎಂಬವರು ಸಾವಿಗೀಡಾಗಿದ್ದಾರೆ. ಸಾಲ್ಕೋಡಿನಲ್ಲಿ ವಾಸವಿರುವ ಕುಮಟಾ ತಾಲೂಕಿನ ಕೋನಳ್ಳಿ ಮೂಲದ ಜನಾರ್ಧನ ನಾಯ್ಕ ಹಾಗೂ ಹೊಸಾಕುಳಿಯ … Continued

ಡಿಕೆ ಶಿವಕುಮಾರಗೆ ಸದ್ಯಕ್ಕಿಲ್ಲ ಆತಂಕ :ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರ್ಕಾರದ ಆದೇಶ ಪರಿಗಣಿಸಿ ಮೇಲ್ಮನವಿ ಇತ್ಯರ್ಥ

ಬೆಂಗಳೂರು :ಬೆಂಗಳೂರು : ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ನೀಡಿದ್ದ ಅನುಮೋದನೆ ಹಿಂಪಡೆದಿರುವ ರಾಜ್ಯ ಸರ್ಕಾರದ ಆದೇಶ ಸಲ್ಲಿಸಿರುವುದನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್‌ ಮೇಲ್ಮನವಿಯನ್ನು ಬುಧವಾರ ಇತ್ಯರ್ಥಪಡಿಸಿದೆಎಂದು ಬಾರ್‌ & ಬೆಂಚ್‌ ವರದಿ … Continued

ಬೈಲಹೊಂಗಲ ಎಸಿ ಕಚೇರಿಯ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

ಬೆಳಗಾವಿ: 60 ಸಾವಿರ ರೂ. ಲಂಚ ಪಡೆಯುತ್ತಿದ್ದ ಬೈಲಹೊಂಗಲ ಉಪವಿಭಾಗ ಕಚೇರಿಯ ಎಸ್‌ಡಿಸಿ ಮಂಜನಾಥ ಅಂಗಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ರಾಮದುರ್ಗ ತಾಲೂಕು ಚಿಕ್ಕೊಪ್ಪ ಎಸ್‌.ಕೆ. ಗ್ರಾಮದ ವ್ಯಕ್ತಿಯೊಬ್ಬರು ಪಹಣಿ ಪತ್ರ ತಿದ್ದುಪಡಿ ಅರ್ಜಿ ಸಲ್ಲಿಸಿದ್ದರು. ಪಹಣಿ ಪತ್ರ ತಿದ್ದುಪಡಿ ಮಾಡಲು ಮಂಜನಾಥ ಅಂಗಡಿ ಅವರು 60 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ … Continued

ಚೀನಾದಲ್ಲಿ ಹೊಸ ಮಾದರಿ ಸೋಂಕು ಉಲ್ಬಣ : ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಚೀನಾದಲ್ಲಿ ಸೋಂಕಿನಿಂದಾಗಿ ಮಕ್ಕಳಲ್ಲಿ ಉಸಿರಾಟದ ತೊಂದರೆ ಉಲ್ಬಣದ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಯ ಸನ್ನದ್ಧತೆಯ ಕ್ರಮಗಳನ್ನು ತಕ್ಷಣವೇ ಪರಿಶೀಲಿಸುವಂತೆ ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ ನಂತರ ರಾಜ್ಯ ಆರೋಗ್ಯ ಇಲಾಖೆಯಿಂದ ಈ ಕ್ರಮ … Continued

ಕುಮಟಾ: ಮಹಿಳೆ ಸಮುದ್ರಕ್ಕೆ ಹಾರಿದ್ದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ; ಮಹಿಳೆ ಪತ್ತೆ ಹಚ್ಚಿದ ಪೊಲೀಸರು, ಸಾವಿನ ನಾಟಕವಾಡಿದ್ದು ಬಯಲಾಯ್ತು…!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಕುಮಟಾದ ಹೆಡ್‌ಬಂದರಿನಲ್ಲಿ ಸಮುದ್ರಕ್ಕೆ ಹಾರಿದ್ದಳು ಎಂಬ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ತನ್ನ ಎರಡು ಮಕ್ಕಳನ್ನ ನಡು ರಸ್ತೆಯಲ್ಲಿ ಬಿಟ್ಟು ಸಮುದ್ರದಲ್ಲಿ ಮುಳುಗಿದ ನಾಟಕವಾಡಿದ್ದ ಸಾಂತಗಲ್ ಗ್ರಾಮದ ನಿವೇದಿತಾ ಭಂಡಾರಿ ಹೊನ್ನಾವರದ ಬಾಡಿಗೆ ಮನೆಯಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿ … Continued

ಮೊದಲ ಹಂತದಲ್ಲಿ ನಿಗಮ ಮಂಡಳಿಗೆ ಶಾಸಕರ ನೇಮಕ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ನಿಗಮ ಮಂಡಳಿಗೆ ಅಧ್ಯಕ್ಷರ ಹುದ್ದೆಗೆ ಮೊದಲ ಹಂತದಲ್ಲಿ ಶಾಸಕರನ್ನ ಮಾತ್ರ ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ಬೆಂಗಳೂರಿಗೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರ ಜೊತೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಸಂಬಂಧ ಚರ್ಚಿಸಿದ ನಂತರ … Continued

ಸಿಎಂಗೆ ಪತ್ರ ಬರೆದ ಶಾಸಕ ಬಿಆರ್ ಪಾಟೀಲ ; ಶಾಸಕ ಸ್ಥಾನಕ್ಕೆ ರಾಜೀನಾಮೆ ಎಚ್ಚರಿಕೆ

ಬೆಂಗಳೂರು : ಕೆಆರ್ ಐಡಿಎಲ್ ಕಾಮಗಾರಿ ಸಂಬಂಧ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದ್ದು, ಇದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಅದರಲ್ಲಿ ಅವರು ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಳೆದ ವಿಧಾನಸಭೆ ಅಧಿವೇಶನದ ವಿಷಯ ಪ್ರಸ್ತಾಪಿಸಿ ಬಿ.ಆರ್‌. ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ … Continued

ಡಿಕೆಶಿ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮೋದನೆ ವಾಪಸ್‌ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಶಾಸಕ ಯತ್ನಾಳ

ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ (D.K.Shivakumar) ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದ ಅನುಮೋದನೆಯನ್ನು ವಾಪಸ್ ಪಡೆದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ ಅವರನ್ನು ತನಿಖೆಯಿಂದ ರಕ್ಷಿಸಲು ಸಿಬಿಐ ತನಿಖೆಗೆ … Continued

ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ರೆ ಪಿಐಎಲ್‌ ಸಲ್ಲಿಕೆ : ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

ಬೆಳಗಾವಿ : ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡುವ ಸಂಪ್ರದಾಯ ನಿಲ್ಲಿಸಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆಯ … Continued

ನಾಳೆ ನಟಿ ಪೂಜಾ ಗಾಂಧಿ ಮದುವೆ

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ತಾನು ಪ್ರೀತಿಸಿದ ಯುವಕನ ಜೊತೆಗೆ ಹಸೆಮಣೆ ಏರಲು ಮುಂದಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನವೆಂಬರ್ 29ರಂದು ಬುಧವಾರ ಸಂಜೆ ತಾನು ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ವಿಜಯ ಘೋರ್ಪಡೆ ಅವರ ಜೊತೆ ಮದುವೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. ನನ್ನ ಮದುವೆಗೆ ಕುಟುಂಬ ಸಮೇತರಾಗಿ … Continued