ರೈತರಿಗೆ ಸಿಹಿಸುದ್ದಿ: ರಸಗೊಬ್ಬರ ಸಬ್ಸಿಡಿ ಏರಿಕೆ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಮತ್ತಷ್ಟು ಹೆಚ್ಚಿಸಿದೆ. ರೈತರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಿದರೆ ಪರಿಹಾರವಾಗಿ ರಸಗೊಬ್ಬರ ಕಂಪನಿಗಳಿಗೆ ಹೆಚ್ಚುವರಿ ₹ 28,655 ಕೋಟಿ ($ 3.8 ಶತಕೋಟಿ) ಹಣವನ್ನು ಒದಗಿಸಲಾಗುತ್ತದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ … Continued

ಆನ್‌ಲೈನ್‌ನಲ್ಲಿ ಬೈಕಾಟ್‌ ಫ್ಯಾಬ್‌ ಟ್ರೆಂಡ್‌ಗಳ ನಂತರ ಜಶ್ನ್-ಇ-ರಿವಾಜ್ ಹೆಸರಿನ ದೀಪಾವಳಿ ಜಾಹೀರಾತು ತೆಗೆದುಹಾಕಿದ ಫ್ಯಾಬಿಂಡಿಯಾ

ನವದೆಹಲಿ: ಬಟ್ಟೆ ಬ್ರಾಂಡ್ ಫ್ಯಾಬಿಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್ ಮಾಡಿದ ನಂತರ ದೀಪಾವಳಿಗೆ ತಮ್ಮ ಹೊಸ ಸಂಗ್ರಹವನ್ನು ಪ್ರಚಾರ ಮಾಡುವ ಟ್ವೀಟ್ ಅನ್ನು ತೆಗೆದುಹಾಕಿದೆ. ಈ ಬ್ರಾಂಡ್ ಹಿಂದೂ ಹಬ್ಬದ ದೀಪಾವಳಿಯನ್ನು “ಹಾಳುಮಾಡಿದೆ” ಮತ್ತು ಜಶ್ನ್-ಇ-ರಿವಾಜ್ ಎಂದು ಮಾಡಲು ಹೊರಟಿದೆ. ಹಿಂದು ಹಬ್ಬದಲ್ಲಿ ಜಾತ್ಯತೀತತೆ ಮತ್ತು ಮುಸ್ಲಿಂ ಸಿದ್ಧಾಂತಗಳನ್ನು ಅನಗತ್ಯವಾಗಿ ಎತ್ತಿಹಿಡಿದಿರುವುದಕ್ಕೆ ಅನೇಕರು ಬ್ರಾಂಡ್‌ … Continued

ಲಂಡನ್‌: ಕೇಂಬ್ರಿಯನ್ ಪೆಟ್ರೋಲ್ ತಾಲೀಮಿನಲ್ಲಿ ಭಾರತದ ಸೇನೆಗೆ ಚಿನ್ನದ ಪದಕ

ಲಂಡನ್‌: ಲಂಡನ್‌ ಭಾರತದ ಸೈನಿಕರು ಲಂಡನ್‌ನಲ್ಲಿ ಕೇಂಬ್ರಿಯನ್ ಪೆಟ್ರೋಲ್ ತಾಲೀಮಿನಲ್ಲಿ ವಿಶ್ವದ ನಾನಾ ಕಡೆಗಳಿಂದ ಬಂದ 96 ತಂಡಗಳ ವಿರುದ್ಧ ಸ್ಪರ್ಧಿಸಿ ಚಿನ್ನ ಗೆದ್ದಿದ್ದಾರೆ. ವಿವಿಧ ದೇಶಗಳಿಂದ ವಿಶೇಷ ಪಡೆಗಳು ಮತ್ತು ರೆಜಿಮೆಂಟ್‌ಗಳನ್ನು ಪ್ರತಿನಿಧಿಸುವ 96 ತಂಡಗಳು ಕೇಂಬ್ರಿಯನ್ ಪೆಟ್ರೋಲ್ ತಾಲೀಮಿನಲ್ಲಿ ಭಾಗವಹಿಸಲು ಬಂದಿದ್ದವು. ‌ಭಾರತದ 4/5 ಗೂರ್ಖಾ ರೈಫಲ್ಸ್ (frontier force) ಅಕ್ಟೋಬರ್ 13-15ರ … Continued

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಕ್ಕೆ 1 ಕೋಟಿ ರೂಪಾಯಿ ದಂಡ ವಿಧಿಸಿದ ಆರ್​ಬಿಐ

ಮುಂಬೈ: ಕೆಲವು ನಿರ್ದೇಶನಗಳನ್ನು ಪಾಲನೆ ಮಾಡದಿದ್ದಕ್ಕಾಗಿ ಅಕ್ಟೋಬರ್ 18ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಗೆ ಒಂದು ಕೋಟಿ ರೂ.ಗಳ ದಂಡ ವಿಧಿಸಿದೆ. ವಾಣಿಜ್ಯ ಬ್ಯಾಂಕ್​ಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳ ವಂಚನೆಗಳ ವರ್ಗೀಕರಣ ಮತ್ತು ವರದಿ ಮಾಡುವುದಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರ್‌ಬಿಐ ಹೇಳಿದೆ. ನಿಯಂತ್ರಕ … Continued

ಆಸಕ್ತಿದಾಯಕ: ಕೇರಳದಲ್ಲಿ ಪ್ರವಾಹದ ನಡುವೆ ದೊಡ್ಡ ಪಾತ್ರೆಯನ್ನೇ ದೋಣಿ ಮಾಡಿಕೊಂಡು ಮದುವೆ ಮಂಟಪಕ್ಕೆ ಬಂದ ವಧುವರರು…! ವೀಕ್ಷಿಸಿ

ತಿರುವನಂತಪುರಂ: ಪ್ರವಾಹದಸಿಲುಕಿ ನಲುಗುತ್ತಿರುವ ಕೇರಳದಲ್ಲಿ ವಧ-ವರರಿಬ್ಬರು ದೊಡ್ಡ ಅಡುಗೆ ಪಾತ್ರೆಯಲ್ಲಿ ಕುಳಿತು ಮದುವೆ ಮಂಟಪಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈಗ ದೊಡ್ಡ ಸುದ್ದಿಯಾಗಿದೆ. ಕೇರಳದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಯಾರಿಗೂ ಮದುವೆಗೆ ಬರಲು ಸಾಧ್ಯವಾಗಲಿಲ್ಲ. ವಧು-ವರರಿಗೂ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ಕಂಡುಕೊಂಡಿದ್ದು ಈ ಉಪಾಯ. ದೊಡ್ಡ ಅಡುಗೆ ಪಾತ್ರೆಯನ್ನೇ ದೋಣಿ ಮಾಡಿಕೊಂಡು ಅವರಿಬ್ಬರು ಮದುವೆ … Continued

ರಂಜಿತ್ ಸಿಂಗ್ ಕೊಲೆ ಪ್ರಕರಣ: ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಬಾಬಾ ಗುರ್ಮಿತ್ ರಾಮ್ ರಹೀಂ, ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ

ನವದೆಹಲಿ: ಧಾರ್ಮಿಕ ಕೇಂದ್ರದ ವ್ಯವಸ್ಥಾಪಕ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಹರಿಯಾಣದ ಪಂಚಕುಲ ವಿಶೇಷ ಸಿಬಿಐ ನ್ಯಾಯಾಲಯವು ಸೋಮವಾರ ಡೇರಾ ಸಚ್ಚಾ ಸೌಧದ ಬಾಬಾ ಗುರ್ಮೀತ್ ರಾಮ್ ರಹೀಂ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕಿಶನ್ ಲಾಲ್, ಜಸ್‌ಬೀರ್ ಸಿಂಗ್, ಅವತಾರ್ ಸಿಂಗ್ ಮತ್ತು ಸಬ್‌ದಿಲ್ ಹತ್ಯೆ ಅಪರಾಧಕ್ಕೆ ಶಿಕ್ಷೆಗೊಳಗಾದ ಇತರ ಆರೋಪಿಗಳಾಗಿದ್ದಾರೆ. … Continued

ಲಖಿಮಪುರ ಖೇನಿ ಘಟನೆ: ಕೇಂದ್ರ ಸಚಿವ ಅಜಯ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ರೈತರಿಂದ ರೈಲು ತಡೆ, 160 ರೈಲುಗಳ ಸಂಚಾರಕ್ಕೆ ತೊಂದರೆ, 43 ರೈಲುಗಳು ರದ್ದು

ನವದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರ ಕಾರನ್ನು ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ಓಡಿಸಿದ ಆರೋಪದ ಮೇಲೆ ಕೇಂದ್ರ ಸಚಿವರನ್ನು ವಜಾಗೊಳಿಸಿ ಬಂಧಿಸುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು (ಸೋಮವಾರ) ದೇಶಾದ್ಯಂತ ರೈಲು ತಡೆ ಪ್ರತಿಭಟನೆ ನಡೆಸಿದೆ. ರೈತರ ಹಲವಾರು ಗುಂಪುಗಳು ಈಗಾಗಲೇ ಪಂಜಾಬ್‌ನ ಕೆಲವು … Continued

ಪಶ್ಚಿಮ ಬಂಗಾಳ: ಬಿಜೆಪಿ ಯುವ ಮೋರ್ಚಾ ನಾಯಕನ ಗುಂಡಿಕ್ಕಿ ಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾದ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಪಶ್ಚಿಮಬಂಗಾಳದ ಉತ್ತರ ದಿನಾಜ್​ಪುರ ಜಿಲ್ಲೆಯ ಇಟಾಹಾರ್​​ನಮಿಥುನ್​ ಘೋಷ್​ ಮೃತ ಯುವ ನಾಯಕ.ಈ ಘಟನೆ ಭಾನುವಾರ ರಾತ್ರಿ 11 ಗಂಟೆ ಹೊತ್ತಿಗೆ ನಡೆದಿದೆ. ರಾಜ್​ಗ್ರಾಮ ಹಳ್ಳಿಯಲ್ಲಿರುವ ತಮ್ಮ ಮನೆ ಎದುರು ಮಿಥುನ್ ಘೋಷ್​​ ನಿಂತಿದ್ದರು. ಮೋಟಾರ್​ ಬೈಕ್​ನಲ್ಲಿ ಅಲ್ಲಗೆ ಬಂದ … Continued

ಸೂರತ್‌ನ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಇಬ್ಬರು ಸಾವು, 125ಕ್ಕೂ ಹೆಚ್ಚು ಜನರ ರಕ್ಷಣೆ

ಸೂರತ್: ಸೂರತ್‌ನ ಮಾಸ್ಕ್ ತಯಾರಿಕಾ ಕಾರ್ಖಾನೆಯಲ್ಲಿ ಇಂದು (ಸೋಮವಾರ) ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು 125ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಸೂರತ್‌ನ ಕಡೋದರದ ವರೇಲಿ ಎಂಬಲ್ಲಿರುವ ಕಾರ್ಖಾನೆಯಲ್ಲಿ ಇಂದು ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಆಗಮಿಸಿರುವ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದು, ಈ ವರೆಗು 125ಕ್ಕೂ ಹೆಚ್ಚು ಜನರನ್ನು … Continued

ಭಾರತದಲ್ಲಿ 13,596 ಕೋವಿಡ್ -19 ಹೊಸ ಪ್ರಕರಣಗಳು ದಾಖಲು, ಇದು 230 ದಿನಗಳಲ್ಲಿ ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 13,596 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದು 230 ದಿನಗಳಲ್ಲಿ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ಇತ್ತೀಚಿನ ಕೋವಿಡ್ -19 ಬುಲೆಟಿನ್ ತಿಳಿಸಿದೆ. ಇದು ಹಿಂದಿನ ದಿನ ದೇಶವು ಕಂಡಿದ್ದಕ್ಕಿಂತ ಶೇಕಡಾ 3.9 ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಒಟ್ಟು … Continued