ಹರಿಯಾಣ: ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ ಸೋಲಿಸಿದ ಬಿಜೆಪಿ-ಜೆಜೆಪಿ ಮೈತ್ರಿಕೂಟ

ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯವನ್ನು ಬಿಜೆಪಿ-ಜೆಜೆಪಿ ಸರಕಾರ ಸೋಲಿಸಿದೆ. ಎಲ್ಲ ಕಾಂಗ್ರೆಸ್‌ ಶಾಸಕರು ಅವಿಶ್ವಾಸ ನಿರ್ಣಯ ಬೆಂಬಲಿಸಿದರೆ, ಬಿಜೆಪಿ-ಜೆಜೆಪಿ ಶಾಸಕರು ಇದರ ವಿರುದ್ಧ ಮತ ಚಲಾಯಿಸಿದರು. ಅವಿಶ್ವಾಸ ನಿರ್ಣಯವನ್ನು ೩೨ ಸದಸ್ಯರು ಬೆಂಬಲಿಸಿದರೆ, ೫೫ ಸದಸ್ಯರು ವಿರೋಧಿಸಿದರು. ಜೆಜೆಪಿ ಶಾಸಕರಾದ ರಾಮ್ ಕುಮಾರ್ ಗೌತಮ್ ಮತ್ತು ದೇವೇಂದರ್ ಬಬ್ಲಿ ಅವರು ಬಿಜೆಪಿಯಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ … Continued

ಅಮೆರಿಕದಿಂದ ೩೦ ಸಶಸ್ತ್ರ ಡ್ರೋನ್‌ ಖರೀದಿಗೆ ಭಾರತ ಚಿಂತನೆ

ಭಾರತ ತನ್ನ ಸಮುದ್ರ ಹಾಗೂ ಭೂ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ದಿಸೆಯಲ್ಲಿ ಅಮೆರಿಕದಿಂದ ೩೦ ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಲು ಮುಂದಾಗಿದೆ. ನೆರೆಯ ಪಾಕಿಸ್ತಾನ ಹಾಗೂ ಚೀನಾದಲ್ಲಿ ಉದ್ವಿಗ್ನತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಡ್ರೋನ್‌ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಯಾನ್‌ ಡಿಯಾಗೊ ಮೂಲದ ಜನರಲ್‌ ಅಟಾಮಿಕ್ಸ್‌ ತಯಾರಿಸಿದ ಎಂಕ್ಯು ೯-ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು ೩೦೦ … Continued

ಮಮತಾ ದೀದಿ “ಚುನಾವಣಾ ಹಿಂದೂʼ ಎಂದು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕ ರ್ಯಾಲಿಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ್ದನ್ನು ಟೀಕಿಸಿದ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ದೀದಿಯನ್ನು “ಚುನಾವಣಾ ಹಿಂದೂʼ ಎಂದು ಮೂದಲಿಸಿದ್ದಾರೆ. ಮಂಗಳವಾರ ನಂದಿಗ್ರಾಮದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಮತಾ ಸಂಸ್ಕೃತ ಶ್ಲೋಕಗಳನ್ನು ಪಠಿಸಿದ್ದರಲ್ಲದೇ ತಾವು ಕೂಡ ಹಿಂದೂ ಮಹಿಳೆ ಎಂದು ಹೇಳಿದ್ದರು. ಇದನ್ನು ಗಿರಿರಾಜ ಸಿಂಗ್‌ ಹಾಗೂ ಸುವೆಂದು … Continued

ಉತ್ತರಾಖಂಡ: ತೀರತ್‌ ಸಿಂಗ್‌ ನೂತನ ಮುಖ್ಯಮಂತ್ರಿ

ತೀರತ್‌ ಸೀಂಗ್‌ ರಾವತ್‌ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ತ್ರಿವೇಂದ್ರ ಸಿಂಗ್‌ ರಾವತ್‌ ರಾಜಿನಾಮೆ ನೀಡಿದ ನಂತರ ತೀರತ್‌ ಸಿಂಗ್‌ ಸಿಎಂ ಹುದ್ದೆಗೇರಲಿದ್ದಾರೆ. ಉತ್ತರಾಖಂಡದ ಮೊದಲ ಶಿಕ್ಷಣ ಸಚಿವರಾಗಿದ್ದ ತೀರತ್‌ ಸಿಂಗ್‌, ರಾಜ್ಯದ ಬಿಜೆಪಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತ್ರಿವೇಂದ್ರ ರಾವತ್ ಅವರ ಆಡಳಿತದ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ … Continued

ಉತ್ತರ ಪ್ರದೇಶ: ೧ರಿಂದ ೮ನೇ ತರಗತಿವರೆಗೆ ಪರೀಕ್ಷೆ ಇಲ್ಲದೇ ಎಲ್ಲ ವಿದ್ಯಾರ್ಥಿಗಳ ತೇರ್ಗಡೆ

ಲಕ್ನೋ: ಕೊರೊನಾ ಕಾರಣದಿಂದ ೧ ರಿಂದ ೮ನೇ ತರಗತಿವರೆಗಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. 9 ಮತ್ತು 11 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಬಡ್ತಿ ಪಡೆಯಲು ವಾರ್ಷಿಕ ಪರೀಕ್ಷೆಗಳಲ್ಲಿ ಹಾಜರಾಗಬೇಕಾಗುತ್ತದೆ. ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿಗಳಿಗೆ ಯುಪಿ ಬೋರ್ಡ್ … Continued

ತನ್ನ ಕದ್ದ ಎಮ್ಮೆ ಪತ್ತೆಗೆ ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸಿ ಪೊಲೀಸ್‌ ಠಾಣೆ ಮೆಟ್ಟಲೇರಿದ ಉತ್ತರ ಪ್ರದೇಶದ ವ್ಯಕ್ತಿ…!

ನವ ದೆಹಲಿ: ಉತ್ತರ ಪ್ರದೇಶದ ಶಾಮ್ಲಿ ಪೊಲೀಸರು ವಿಚಿತ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತೊಯೊಬ್ಬ ತನ್ನ ಎಮ್ಮೆ ಕದ್ದ ಬಗ್ಗೆ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದು, ಈ ವ್ಯಕ್ತಿಯು ತನ್ನನ್ನು ಮಾಲೀಕ ಎಂದು ಹೇಳಿಕೊಂಡಿದ್ದಾನೆ. ಅದರ ಮಾಲೀಕತ್ವದ ವಿವಾದ ಬಗೆಹರಿಸಲು ಎಮ್ಮೆಯ ಡಿಎನ್‌ಎ ಪರೀಕ್ಷೆಗೆ ಕೋರಿದ್ದಾನೆ…! ಝಿಂಝಾನಾದ ರೈತ ಚಂದ್ರಪಾಲ್ ಸಿಂಗ್ (40), 2020 ರ ಆಗಸ್ಟ್ … Continued

ಕೇರಳ ವಿಧಾನಸಭಾ ಚುನಾವಣೆ: ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಜನತಾದಳ (ಜಾತ್ಯತೀತ) ೨೦೨೧ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕೋವಲಂ, ಅಂಕಮಲಿ, ಚಿತ್ತೂರು ಮತ್ತು ತಿರುವಲ್ಲಾ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡ ಅನುಮೋದಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ … Continued

ಅಯೋಧ್ಯೆಯಲ್ಲಿ ಭಗವಾನ್‌ ರಾಮ್ ವಿವಿ ಸ್ಥಾಪನೆಗೆ ಉತ್ತರ ಪ್ರದೇಶ ಸರ್ಕಾರ ಚಿಂತನೆ

ಅಯೋಧ್ಯೆಯಲ್ಲಿ ಭಗವಾನ್ ರಾಮ್ ಹೆಸರಿನ ವಿಶ್ವವಿದ್ಯಾಲ ಸ್ಥಾಪಿಸಲು ಉತ್ತರ ಪ್ರದೇಶ ಸರ್ಕಾರ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಪ್ರಸ್ತಾವಿತ ವಾರ್ಸಿಟಿ ಅಧ್ಯಯನಗಳು ಮತ್ತು ನಂಬಿಕೆ, ಧರ್ಮಗ್ರಂಥಗಳು ಮತ್ತು ಭಗವಾನ್ ರಾಮನಿಗೆ ಸಂಬಂಧಿಸಿದ ಧಾರ್ಮಿಕ ಸಂಗತಿಗಳ ಬಗ್ಗೆ ಇದು ಸಂಶೋಧನೆ ನಡೆಸಲಿದ. ಉನ್ನತ ಶಿಕ್ಷಣ ಖಾತೆಯನ್ನೂ ಹೊಂದಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಡಾ.ದಿನೇಶ್ ಶರ್ಮಾ, ವಿಶ್ವವಿದ್ಯಾಲಯವು ಭಗವಾನ್ ರಾಮನ … Continued

ರಾಹುಲ್‌ ಗಾಂಧಿಯನ್ನು ಶಾಲೆಗೆ ಕಳಿಸಿ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಟೀಕೆ

ನವದೆಹಲಿ: ಕೇಂದ್ರ ಸರಕಾರದ ಅಡಿಯಲ್ಲಿ ಯಾವ ಸಚಿವಾಲಯಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಕಲಿಯಲು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯನ್ನು ಶಾಲೆಗೆ ಕಳಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಟೀಕೆ ಮಾಡಿದ್ದಾರೆ. ಪ್ರತ್ಯೇಕ ಮೀನುಗಾರಿಕೆ ಸಚಿವಾಲಯವನ್ನು ರಚನೆ ಮಾಡಬೇಕೆಂಬ ರಾಹುಲ್‌ ಗಾಂಧಿ ಹೇಳಿಕೆಯನ್ನು ಟೀಕೆ ಮಾಡಿದ ಕೇಂದ್ರ ಸಚಿವ ಸಿಂಗ್‌, ರಾಹುಲ್ ಗಾಂಧಿಯವರ ಹೇಳಿಕೆಗಳಿಂದಾಗಿ ನನಗೆ ನೋವಾಗಿದೆ. … Continued

ಜಮ್ಮು-ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಹತನಾದ ಅಲ್‌ ಬದ್ರ್‌ ಮುಖ್ಯಸ್ಥ ಗನಿ

ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ ಜಿಲ್ಲೆಯ ತುಜ್ಜಾರ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಅಲ್ ಬದ್ರ್ ಮುಖ್ಯಸ್ಥ ಗನಿ ಖ್ವಾಜಾ ಹತನಾಗಿದ್ದಾನೆ. ಎನ್‌ಕೌಂಟರ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಐಜಿಪಿ ಕಾಶ್ಮೀರ ವಿಜಯ್ ಕುಮಾರ್, ಅಲ್‌ ಬದ್ರ್‌ ಮುಖ್ಯಸ್ಥನನ್ನು ಕೊಂದಿರುವುದು ದೊಡ್ಡ ಯಶಸ್ಸು ಎಂದು ಹೇಳಿದ್ದಾರೆ. ತುಜ್ಜರ್ ಗ್ರಾಮದಲ್ಲಿ ಕೆಲವು ಉಗ್ರರು ತಲೆಮರೆಸಿಕೊಂಡಿದ್ದಾರೆ ಎಂದು … Continued