ಕೇರಳ ಚುನಾವಣೆ; ‘ಮೆಟ್ರೋ ಮ್ಯಾನ್ ಶ್ರೀಧರನ್‌ ಬಿಜೆಪಿ ಸಿಎಂ ಅಭ್ಯರ್ಥಿ, ಬದಲಿಸುವರೇ ಸಮೀಕರಣ?

ತಿರುವನಂತಪುರಂ / ಕೊಚ್ಚಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ‘ಮೆಟ್ರೋ ಮ್ಯಾನ್’ ಇ ಶ್ರೀಧರನ್ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕೇರಳ ಬಿಜೆಪಿ ಮುಖ್ಯಸ್ಥರು ಗುರುವಾರ ಪ್ರಕಟಿಸಿದ್ದಾರೆ. ಏ.೬ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಇ. ಶ್ರೀಧರನ್ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಸುರೇಂದ್ರನ್ ಹೇಳಿದ್ದಾರೆ. ಇದು ಕೇರಳದಲ್ಲಿ ರಾಜಕೀಯ ಸಮೀಕರಣದ ಬದಲಾವಣೆಗೆ ಕಾರಣವಾಗಬಹುದು … Continued

ಚುನಾವಣಾ ರಾಜ್ಯಗಳಲ್ಲಿ ಮೋದಿ ಭಾವಚಿತ್ರದ ಹೋರ್ಡಿಂಗ್‌ ತೆಗೆಯಲು ಚುನಾವಣಾ ಆಯೋಗ ಆದೇಶ

ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಪೆಟ್ರೋಲ್‌ ಬಂಕ್‌ಗಳಲ್ಲಿ ಪ್ರಧಾನಿ ಭಾವಚಿತ್ರ ಇರುವ ಹೋರ್ಡಿಂಗ್‌ಗಳನ್ನು ತೆಗೆದುಹಾಕಲು ಚುನಾವನಾ ಆಯೋಗವು ಪೆಟ್ರೋಲ್‌ ಪಂಪ್‌ಗಳಿಗೆ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಗಳ ಹೋರ್ಡಿಂಗ್‌ಗಳನ್ನು ೭೨ ಗಂಟೆಗಳಲ್ಲಿ ತೆಗೆದುಹಾಕುವಂತೆ ಚುನಾವಣಾ ಆಯೋಗ (ಇಸಿ) ಎಲ್ಲಾ ಪೆಟ್ರೋಲ್ ಪಂಪ್ ವಿತರಕರು ಮತ್ತು ಇತರ ಸಂಸ್ಥೆಗಳಿಗೆ ಬುಧವಾರ … Continued

ಅಯೋಧ್ಯಾ ರಾಮಮಂದಿರ ಸಂಕೀರ್ಣ ವಿಸ್ತರಣೆಗೆ ಹೆಚ್ಚುವರಿ ಭೂಮಿ ಖರೀದಿ

ಅಯೋಧ್ಯೆ(ಉತ್ತರ ಪ್ರದೇಶ): ಪೂರ್ವ ಯೋಜನೆಯಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ದೇವಾಲಯ ಸಂಕೀರ್ಣ ವಿಸ್ತರಿಸುವ ಕಾರ್ಯ ಆರಂಭವಾಗಿದೆ. ಇದರ ಅಂಗವಾಇಗಿ ಪ್ರಥಮ ಹೆಜ್ಜೆಯಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮಜನ್ಮಭೂಮಿ ಪಕ್ಕದಲ್ಲಿರುವ 7,285 ಚದರ ಅಡಿಯಷ್ಟು ಭೂಮಿ ಖರೀದಿ ಮಾಡಿದೆ. ರಾಮಮಂದಿರ ದೇವಾಲಯ ಸಂಕೀರ್ಣವನ್ನು 70 ಎಕರೆ ಪ್ರದೇಶದಿಂದ 107 ಎಕರೆ ಪ್ರದೇಶಕ್ಕೆ ವಿಸ್ತರಿಸಬೇಕೆಂಬ ಯೋಜನೆಗೆ … Continued

ತಾಜ್ ಮಹಲ್‌ಗೆ ಬಾಂಬ್‌ ಬೆದರಿಕೆ ಕರೆ; ಪ್ರವಾಸಿಗರ ಹೊರಗೆ ಕಳುಹಿಸಿ ಭದ್ರತಾ ತಪಾಸಣೆ

ಆಗ್ರಾ/ನವದೆಹಲಿ: ಬಾಂಬ್‌ ಇರುವುದಾಗಿ ಕರೆ ಬಂದ ಬೆನ್ನಲ್ಲೇ ತಾಜ್‌ ಮಹಲ್‌ ಆವರಣದಲ್ಲಿದ್ದ ಪ್ರವಾಸಿಗರನ್ನು ಖಾಲಿ ಮಾಡಿಸಲಾಗಿದೆ. ಸುಮಾರು ಸಾವಿರ ಪ್ರವಾಸಿಗರನ್ನು ಸ್ಥಳದಿಂದ ಕಳುಹಿಸಿ, ಬಾಂಬ್‌ ಪತ್ತೆಗಾಗಿ ಹುಡುಕಾಟ ನಡೆಸಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಅನಾಮಧೇಯ ವ್ಯಕ್ತಿ ತಾಜ್‌ ಮಹಲ್‌ನಲ್ಲಿ ಬಾಂಬ್ ಇರುವುದಾಗಿ ಉತ್ತರ ಪ್ರದೇಶ ಪೊಲೀಸರ 112 ತುರ್ತು ಸ್ಪಂದಿಸುವ ಸಂಖ್ಯೆಗೆ ಬೆಳಿಗ್ಗೆ 9ಕ್ಕೆ … Continued

ಛತ್ತೀಸ್‌ಗಡ:೧೩ ಮಂಗಳಮುಖಿಯರು ಪೊಲೀಸ್‌ ಕಾನ್‌ಸ್ಲ್ಟೇಬಲ್‌‌ಗಳಾಗಿ ನೇಮಕ

ಸಮುದಾಯದ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರ ಬಗ್ಗೆ ಸಮಾಜದ ಗ್ರಹಿಕೆ ಬದಲಿಸುವ ಪ್ರಯತ್ನದಲ್ಲಿ ಛತ್ತೀಸ್‌ಗಡ ರಾಜ್ಯದಲ್ಲಿ ಪೊಲೀಸ್‌ ಇಲಾಖೆ 13  ಮಂಗಳಮುಖಿಯರು  (ತೃತೀಯಲಿಂಗಿಗಳು) ಕಾನ್‌ಸ್ಟೆಬಲ್‌ಗಳಾಗಿ ನೇಮಿಸಿಕೊಂಡಿದೆ. ಮಂಗಳಮುಖಿಯರನ್ನು ರಾಜ್ಯ ಪೊಲೀಸ್ ಪಡೆಗೆ ಸೇರಿಸಿಕೊಳ್ಳುವುದು ಇದೇ ಮೊದಲು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹದಿಮೂರು ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಕಾನ್‌ಸ್ಟೆಬಲ್‌ಗಳಾಗಿ ನೇಮಕ ಮಾಡಲಾಗಿದೆ. … Continued

ವಧು ದಕ್ಷಿಣೆಗೆ ೬೦ ಪುಸ್ತಕ ಕೇಳಿದ ಮದುಮಗಳು…!

ಮುಸ್ಲಿಂ ಸಂಪ್ರದಾಯದಲ್ಲಿ ವರನು ವಧುವಿಗೆ ವಧು ದಕ್ಷಿಣೆ ನೀಡುವ ಸಂಪ್ರದಾಯವಿದೆ. ಇದಕ್ಕೆ ಮೆಹರ್​ ಎಂದು ಕರೆಯುತ್ತಾರೆ.ಆದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಮುಸ್ಲಿಂ ವಿವಾಹವೊಂದರಲ್ಲಿ ವಧು ಮೆಹರ್​ ಅಸಾಮಾನ್ಯ ಬೇಡಿಕೆ ಇಟ್ಟಿದ್ದಾಳೆ. ಅವಳ ವಧು ದಕ್ಷಿಣೆ ರೂಪದಲ್ಲಿ 60 ಪುಸ್ತಕಗಳಿಗೆ ಬೇಡಿಕೆ ಇಡುವ ಮೂಲಕ ಗಮನಸೆಳೆದಿದ್ದಾಳೆ. 24 ವರ್ಷದ ಮೋಯ್ನಾ ಖಾತುನ್​ ಮುರ್ಷಿಬಾದ್​ನ ನಿವಾಸಿಯಾಗಿದ್ದಾಳೆ.ಈಕೆ ಕಲ್ಯಾಣಿ ವಿಶ್ವವಿದ್ಯಾಲಯದಲ್ಲಿ … Continued

ಅಜ್ಜಿಗೆ ಮೊಮ್ಮಗು ಜೊತೆ ವಿಶೇಷ ಬಾಂಧ್ಯವಿದ್ದರೂ ಪೋಷಕರಿಂದ ಬೇರೆ ಮಾಡುವಂತಿಲ್ಲ: ಮುಂಬೈ ಹೈಕೋರ್ಟ್‌

ಮುಂಬೈ: ಅಜ್ಜಿ ಮತ್ತು ಮೊಮ್ಮಗುವಿನ ನಡುವೆ ವಿಶೇಷ ಬಾಂಧವ್ಯವಿದೆಯಾದರೂ, ಮಗು ಮತ್ತು ಆತನ ಜೈವಿಕ ಪೋಷಕರ ನಡುವಿನ ಸಹಜ ಬಾಂಧವ್ಯವನ್ನು ಬೇರೆ ಮಾಡಲು ಸಾಧ್ಯವಿಲ್ಲ ಎಂದು ನಾಶಿಕ್ ನಿವಾಸಿಗೆ ಮುಂಬೈ ಹೈಕೋರ್ಟ್ ಬುಧವಾರ ತಿಳಿಸಿದೆ. ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಪೀಠ ಬುಧವಾರ ನಾಶಿಕ್ ನಿವಾಸಿಗೆ ತನ್ನ 12 ವರ್ಷದ ಮೊಮ್ಮಗನನ್ನು ಅವರ ಪೋಷಕರಿಗೆ ಹಸ್ತಾಂತರಿಸಲು … Continued

ಪುಸ್ತಕದಲ್ಲಿ ತಿದ್ದುಪಡಿಗೆ ಎನ್‌ಸಿಇಆರ್‌ಟಿಗೆ ಲೀಗಲ್‌ ನೋಟಿಸ್;ಯಾಕೆಂದರೆ ಮೊಘಲರು ದೇಗುಲ ದುರಸ್ತಿಗೆ ಅನುದಾನ ನೀಡಿದ ಬಗ್ಗೆ ಅದರ ಬಳಿ ಪುರಾವೆಯೇ ಇಲ್ಲ..!!

ಆರ್‌ಟಿಐ ಕಾರ್ಯಕರ್ತರೊಬ್ಬರು ಎನ್‌ಸಿಇಆರ್‌ಟಿಗೆ (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್) ಲೀಗಲ್‌ ನೋಟಿಸ್ ಕಳುಹಿಸಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಹಾಗೂ ಷಹಜಹಾನ್‌ ಹಿಂದೂ ದೇವಾಲಯಗಳ ದುರಸ್ತಿಗೆ ಅನುದಾನ ನೀಡಿದ 12 ನೇ ತರಗತಿ ಪುಸ್ತಕಗಳಲ್ಲಿನ ಪಾಠದ ಬಗ್ಗೆ ತಮ್ಮ ಬಳಿ ಯಾವುದೇ ಉಲ್ಲೇಖಗಳಿಲ್ಲ ಎಂದು ಎನ್‌ಸಿಇಆರ್‌ಟಿ ಹೇಳಿದ ನಂತರ ಪುಸ್ತಕದಲ್ಲಿ ತಿದ್ದುಪಡಿ ಮಾಡುವಂತೆ … Continued

ಮಹಾರಾಷ್ಟ್ರದಲ್ಲಿ ಮತ್ತೆ ೧೦ ಸಾವಿರದ ಸಮೀಪ ತಲುಪಿದ ಕೋವಿಡ್‌ ಪ್ರಕರಣಗಳ ಸಂಖ್ಯೆ

ಮಹಾರಾಷ್ಟ್ರದಲ್ಲಿ ಬುಧವಾರ 9,855 ಹೊಸ ಸಿಒವಿಐಡಿ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿನ ಪ್ರಮಾಣ 21,79,185 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹಳ ಸಮಯದ ನಂತರ ರಾಜ್ಯದಲ್ಲಿ 9,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೆ, 42 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 52,280 ಕ್ಕೆ ಏರಿದೆ. ಮಹಾರಾಷ್ಟ್ರದ ಕೊವಿಡ್‌-19 ಪ್ರಕರಣಗಳ ಚೇತರಿಕೆ … Continued

ತಮಿಳುನಾಡು: ಚಿನ್ನಮ್ಮ (ಶಶಿಕಲಾ) ದಿಢೀರ್‌ ರಾಜಕೀಯ ನಿವೃತ್ತಿ ಘೋಷಣೆ

ಎಐಎಡಿಎಂಕೆ ಮಾಜಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತರಾದ ವಿ.ಕೆ. ಶಶಿಕಲಾ ನಟರಾಜನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಜೈಲು ವಾಸದ ಬಳಿಕ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ಇತ್ತೀಚೆಗೆ ಬಿಡುಗಡೆಯಾಗಿದ್ದರು.ಬಿಡುಗಡೆಯಾದ ನಂತರ ಸಕ್ರಿಯವಾಗಿ ರಾಜಕೀಯಕ್ಕೆ ಬರುವುದಕ್ಕಾಗಿ ಘೋಷಿಸಿದ್ದ ಶಶಿಕಲಾ ಅವರು ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ. ವಿ,ಕೆ ಶಶಿಕಲಾ ನಟರಾಜನ್ … Continued