ಇಸ್ಲಾಮಿಕ್ ಸ್ಟೇಟ್ ಕರಪತ್ರ, ಬಾಂಬ್ ತಯಾರಿಕಾ ಕೈಪಿಡಿ ಸಾಗಿಸುತ್ತಿದ್ದವರ ಬಂಧನ

ಚೆನ್ನೈ: ಇಸ್ಲಾಮಿಕ್ ಸ್ಟೇಟ್ ಸಂಬಂಧಿತ ಕರಪತ್ರಗಳು ಮತ್ತು ಬಾಂಬ್ ತಯಾರಿಕೆ ಕೈಪಿಡಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಆತನ ಇಬ್ಬರು ಸಹಚರರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ನಾಗೂರ್ ಮೀರನ್ ಬಂಧಿತ ಆರೋಪಿ. ಈತ ಮತ್ತು ಈತನ ಇಬ್ಬರು ಸಹಚರರು ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಎಂಬ ಉಗ್ರಗಾಮಿ ಸಂಘಟನೆಯ … Continued

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವಮಾನ: ಸಚಿವ ಅಖಿಲ್ ಗಿರಿ ವಿರುದ್ಧ ವ್ಯಾಪಕ ಟೀಕೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ ಸಚಿವ ಅಖಿಲ್ ಗಿರಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತಾದ ಹೇಳಿಕೆಗಳಿಗೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಪಶ್ಚಿಮ ಬಂಗಾಳದ ಆಡಳಿತ ಸುಧಾರಣಾ ಸಚಿವರು ಗುರುವಾರ ನಂದಿಗ್ರಾಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು (ಸುವೆಂದು ಅಧಿಕಾರಿ) ನಾನು ಸುಂದರವಾಗಿಲ್ಲ ಎಂದು ಹೇಳಿದರು. ಅವರು ಎಷ್ಟು ಸುಂದರವಾಗಿದ್ದಾರೆ? ನಾವು … Continued

ದಕ್ಷಿಣ ಭಾರತದಾದ್ಯಂತ ಭಾರೀ ಮಳೆ: ಇಂದು ತಮಿಳುನಾಡು, ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ

ನವದೆಹಲಿ: ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾವೃತಗೊಂಡಿದ್ದು, ನವೆಂಬರ್ 12 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವರದಿಗಳ ಪ್ರಕಾರ, ಮಳೆಯಿಂದಾಗಿ ಚೆನ್ನೈ, ಕಾಂಚೀಪುರಂ, ರಾಣಿಪೇಟ್, ವೆಲ್ಲೂರು, ತಿರುವಳ್ಳೂರು, ವಿಲ್ಲುಪುರಂ, ತಿರುವರೂರು, ಮೈಲಾಡುತುರೈ, ನೀಲಗಿರಿ ಸೇರಿದಂತೆ 23 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಬಸ್ಸಿ ರಸ್ತೆ, ಲಾಸ್‌ಪೇಟ್ ಪೂರ್ವ ಕರಾವಳಿ ರಸ್ತೆ, ಕರುವಾಡಿಕುಪ್ಪಂ … Continued

ಏಕನಾಥ್ ಶಿಂಧೆ ಪಾಳಯಕ್ಕೆ ಸೇರಿದ ಉದ್ಧವ್ ಠಾಕ್ರೆ ಬಣದ ಮತ್ತೊಬ್ಬ ಸೇನಾ ಸಂಸದ

ಮುಂಬೈ: ಸಂಸದ ಗಜಾನನ ಕೀರ್ತಿಕರ ಅವರು ತಮ್ಮ ನಿಷ್ಠೆಯನ್ನು ಬದಲಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಪಾಳಯಕ್ಕೆ ಸೇರಿದ್ದಾರೆ. ಶಿವಸೇನೆ–ಉದ್ಧವ್ ಬಾಳಾಸಾಹೇಬ್ ಠಾಕ್ರೆ ಎಂದು ಕರೆಯಲ್ಪಡುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಕ್ಕೆ ಮತ್ತೊಂದು ಆಘಾತವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಇತರ ಹಲವಾರು ಸೇನಾ ನಾಯಕರ ಸಮ್ಮುಖದಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀರ್ತಿಕರ ಅವರು … Continued

ನ್ಯೂಜಿಲೆಂಡ್‌ಗೆ ಭಾರತದ ಪ್ರವಾಸ : ವಿಶ್ವಕಪ್‌ ಸೋಲಿನ ನಂತರ ರಾಹುಲ್ ದ್ರಾವಿಡ್‌ಗೆ ವಿಶ್ರಾಂತಿ, ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತದ ಮುಖ್ಯ ಕೋಚ್ ಆಗಿರುತ್ತಾರೆ, ಏಕೆಂದರೆ ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ಸಿಬ್ಬಂದಿಗೆ ಟಿ 20 ವಿಶ್ವಕಪ್‌ನಿಂದ ತಂಡವು ನಿರ್ಗಮಿಸಿದ ನಂತರ ವಿಶ್ರಾಂತಿ ನೀಡಲಾಗಿದೆ. ನವೆಂಬರ್ 18ರಿಂದ ವೆಲ್ಲಿಂಗ್ಟನ್‌ನಲ್ಲಿ ಪ್ರಾರಂಭವಾಗುವ ಮೂರು T20 ಪಂದ್ಯಗಳು ಮತ್ತು ಮೂರು ಏಕದಿನದ ಪಂದ್ಯಗಳನ್ನು … Continued

ಅಧಿಕೃತವಾಗಿ ವಿಚ್ಛೇದನ ಪಡೆಯಲಿರುವ ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ : ಆಪ್ತ ಸ್ನೇಹಿತ

ಭಾರತದ ಟೆನಿಸ್ ಪಟು ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅಧಿಕೃತವಾಗಿ ವಿಚ್ಛೇದನ ಪಡೆಯಲಿದ್ದಾರೆ ಎಂದು ದಂಪತಿಯ ಆಪ್ತರು ಖಚಿತಪಡಿಸಿದ್ದಾರೆ. ದಂಪತಿಗಳ ಹಳಸಿದ ಸಂಬಂಧದ ಬಗ್ಗೆ ಹೆಚ್ಚುತ್ತಿರುವ ವದಂತಿಗಳ ಮಧ್ಯೆ, ಸಾನಿಯಾ ಮತ್ತು ಶೋಯೆಬ್ ಈಗಾಗಲೇ ಬೇರೆಯಾಗಲು ನಿರ್ಧರಿಸಿದ್ದಾರೆ ಮತ್ತು ದಾಖಲೆಗಳ ಔಪಚಾರಿಕತೆಗಳು ಮಾತ್ರ ಉಳಿದಿವೆ ಎಂದು ಅವರ ಆಪ್ತರೊಬ್ಬರು ಬಹಿರಂಗಪಡಿಸಿದ್ದಾರೆ. ಝೀ … Continued

ಹಳಿ ದಾಟುತ್ತಿದ್ದಾಗ ಬಂದೇ ಬಿಡ್ತು ಗೂಡ್ಸ್​ ರೈಲು: ಮುಂದೇನಾಯ್ತು ? ಮೈ ಜುಂ ಎನ್ನುವ ಈ ವೀಡಿಯೊ ನೋಡಿ

ನವದೆಹಲಿ: ರೈಲ್ವೆ ನಿಲ್ದಾಣದಲ್ಲಿ ಇತರ ಪ್ಲಾಟ್ ಫಾರ್ಮ್ ಗಳಿಗೆ ಹೋಗಲು ಶಾರ್ಟ್ ಕಟ್ ಗಳನ್ನು ತೆಗೆದುಕೊಳ್ಳದಂತೆ ಭಾರತೀಯ ರೈಲ್ವೆ ಯಾವಾಗಲೂ ಜನರಿಗೆ ಎಚ್ಚರಿಕೆ ನೀಡುತ್ತಲೆ ಇರುತ್ತದೆ, ರೈಲ್ವೆಯ ಸಾಕಷ್ಟು ಮನವಿಯ ನಂತರವೂ, ಜನರು ಹಳಿಗಳನ್ನು ದಾಟಲು ಮತ್ತು ಮತ್ತೊಂದು ಪ್ಲಾಟ್ ಫಾರ್ಮ್ ಗೆ ಹೋಗಲು ಇಂಥ ಶಾರ್ಟ್‌ ಕಟ್‌ಗಳನ್ನು ಪ್ರಯತ್ನಿಸುತ್ತಾರೆ. ಇಂಥದ್ದೇ ಘಟನೆಯಲ್ಲಿ ಹಳಿ ದಾಟುತ್ತಿದ್ದಾಗ … Continued

ರಾಜೀವ್ ಗಾಂಧಿ ಹಂತಕರ ಬಿಡುಗಡೆ; ಸೋನಿಯಾ ಗಾಂಧಿ ಅಭಿಪ್ರಾಯಕ್ಕೆ ಸಹಮತವಿಲ್ಲ ಎಂದ ಕಾಂಗ್ರೆಸ್

ನವದೆಹಲಿ: ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ಸುಪ್ರೀಂ ಕೋರ್ಟ್ ನಿರ್ಧಾರವು “ರಾಷ್ಟ್ರದ ಆತ್ಮಸಾಕ್ಷಿಯನ್ನು ಆಘಾತಗೊಳಿಸಿದೆ” ಎಂದು ಹಿರಿಯ ವಕೀಲ ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ಇಂದು ಶುಕ್ರವಾರ, ನಮ್ಮ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಕ್ರೂರ, ಪೂರ್ವ-ಯೋಜಿತ ಮತ್ತು ಹೇಯ ಹತ್ಯೆಯನ್ನು ನಡೆಸಿದ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ … Continued

ಜಿಮ್‌ನಲ್ಲಿ ಕುಸಿದು ಬಿದ್ದು ಕಿರುತೆರೆ ನಟ ಸಿದ್ಧಾಂತ ವೀರ್ ಸೂರ್ಯವಂಶಿ ನಿಧನ

ಮುಂಬೈ: ಜನಪ್ರಿಯ ಟಿವಿ ನಟ ಸಿದ್ದಾಂತ ವೀರ್ ಸೂರ್ಯವಂಶಿ ಕೇವಲ 46 ವರ್ಷ ವಯಸ್ಸಿಗೆ ನಿಧನರಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ನಟ ಕುಸಿದು ಬಿದ್ದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜನಪ್ರಿಯ ಕಿರುತೆರೆ ನಟ ಸಿದ್ದಾಂತ್ ವೀರ್ ಸೂರ್ಯವಂಶಿ ನವೆಂಬರ್ 11 ರಂದು ಕೊನೆಯುಸಿರೆಳೆದರು. ಸಿದ್ದಾಂತ್ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಕುಸಿದುಬಿದ್ದು ಆಸ್ಪತ್ರೆಗೆ … Continued

ಜ್ಞಾನವಾಪಿ ಮಸೀದಿ ವಿವಾದ: ಶಿವಲಿಂಗ ಪತ್ತೆಯಾದ ಸ್ಥಳದ ರಕ್ಷಣೆ ವಿಸ್ತರಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗದ ಕುರಿತು ಯಥಾಸ್ಥಿತಿ ಕಾಪಾಡುವುದಾಗಿ ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರಿಬ್ಬರೂ ಒಪ್ಪಿಕೊಂಡ ಬಳಿಕ, ಈ ನಿರ್ದಿಷ್ಟ ಸ್ಥಳವನ್ನು ರಕ್ಷಿಸುವಂತೆ ಮೇ ತಿಂಗಳಲ್ಲಿ ನೀಡಿದ್ದ ತನ್ನ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಸ್ತರಿಸಿದೆ. ಶಿವಲಿಂಗ ಪತ್ತೆಯಾಗಿರುವ ಸ್ಥಳವನ್ನು ಕಾಪಾಡಬೇಕೆಂದು ಸುಪ್ರೀಂಕೋರ್ಟ್ ಮೇ ತಿಂಗಳಿನಲ್ಲಿ ನೀಡಿದ್ದ ಆದೇಶವು ನವೆಂಬರ್ 12ರಂದು ಅಂತ್ಯಗೊಳ್ಳಲಿದೆ … Continued